Job News:ಕಾರವಾರ: ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಹಾಗೂ PM-ABHIM ಕಾರ್ಯಕ್ರಮದಡಿ ಆಯುಷ್ಮತಿ ಕ್ಲಿನಿಕ್, ನಮ್ಮ ಕ್ಲನಿಕ್ ಕುಮಟಾದಲ್ಲಿ ಖಾಲಿ ಇರುವ ಸ್ತ್ರಿ ರೋಗ ತಜ್ಞರು, ಮೂಳೆ ಮತ್ತು ಕೀಲು ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಕಿವಿ ,ಮೂಗು ಮತ್ತು ಗಂಟಲು ತಜ್ಞರ ಹುದ್ದೆಗಳಿಗೆ ಪ್ರಕರಣ/ಗಂಟೆ ಆಧಾರದಲ್ಲಿ ತಾತ್ಕಾಲಿಕವಾಗಿ ತಜ್ಞ ವೈದ್ಯರ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾಹರ್ತೆ: ಎಂ.ಬಿ.ಬಿ.ಎಸ್ ಉತ್ತೀರ್ಣರಾಗಿರಬೇಕು, ಸ್ನಾತಕೋತ್ತರ ಪದವಿ ಹೊಂದಿರಬೇಕು, ಕಡ್ಡಾಯವಾಗಿ ಇಂಟರ್ನ್ಶಿಫ್ ಪೂರೈಸಿರಬೇಕು ಹಾಗೂ ಕೆ.ಎಮ್.ಸಿ.ಯ ನೋಂದಣಿಯನ್ನು ಹೊಂದಿರತಕ್ಕದ್ದು . ಮಾನ್ಯತೆ ಪಡೆದ ವಿದ್ಯಾಲಯದಿಂದ ಕಾನ್ವಕೇಶನ್, ಪದವಿ ಪ್ರಮಾಣ ಪತ್ರ, ಪಿ.ಜಿ. ಪ್ರಮಾಣ ಪತ್ರ ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ಒಳಗೆ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳ ಕಚೇರಿ, ಉತ್ತರ ಕನ್ನಡ, ಕಾರವಾರ ಇಲ್ಲಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7019629664 ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!