ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಶಿರಸಿಗೆ ತೆರಳುತ್ತಿದ್ದಾರೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಬಳಿ ಸಮಯ ಕೇಳಿರೋ ಮಾಜಿ ಸಿಎಂ ಶೆಟ್ಟರ್ ಗೆ ಬೆಳಿಗ್ಗೆ 10.30 ಕ್ಕೆ ಬರುವಂತೆ ಕಾಗೇರಿ ತಿಳಿಸಿರೋ ಹಿನ್ನೆಲೆಯಲ್ಲಿ ಶಿರಸಿ ಕಡೆಗೆ ಪ್ರಯಾಣ ಬೆಳಿಸಿದ್ದಾರೆ. ಮಾಜಿ ಸಿಎಂ ಶೆಟ್ಟರ್ ಹೇಳಿದ್ದಿಷ್ಟು..! ಇದೇ ವೇಳೆ ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಸದ್ಯ ಶಿರಸಿಗೆ ತೆರಳ್ತಾ ಇದ್ದೇನೆ. ಕಾಗೇರಿ ಅವರ...
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
Category: ಹುಬ್ಬಳ್ಳಿ ಧಾರವಾಡ
ಗರಗದ ಮಡಿವಾಳೇಶ್ವರ ಮಠದ ಪೀಠಾಧಿಪತಿ ಲಿಂಗೈಕ್ಯ..!
ಧಾರವಾಡ: ಗರಗದ ಶ್ರೀ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಶ್ರೀ ಚನ್ನಬಸವ ಮಹಾಸ್ವಾಮೀಜಿ (89) ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದಾರೆ. ಧಾರವಾಡ ತಾಲೂಕಿನ ಗರಗದ ಪ್ರಸಿದ್ಧ ಮಠವಾಗಿರೋ ಮಡಿವಾಳೇಶ್ವರ ಮಠದಲ್ಲಿ ಕಳೆದ 55 ವರ್ಷಗಳಿಂದ ಶ್ರೀಗಳು ಮಠದಲ್ಲಿದ್ದರು. ಅನಾರೋಗ್ಯದ ಹಿನ್ನೆಲೆ ಇಂದು ನಿಧನರಾಗಿದ್ದಾರೆ. ಇನ್ನು, ಕಳೆದ ವಾರವಷ್ಟೇ ಗರಗದ ಮಡಿವಾಳೇಶ್ವರರ ಜಾತ್ರೆ ಅದ್ದೂರಿಯಾಗಿ ನಡೆದಿತ್ತು. ಲಕ್ಷಾಂತರ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಬ್ಬಿಗೆ FRP ದರ ನಿಗದಿಗೊಳಿಸುವಂತೆ ಆಗ್ರಹ, ಕಲಘಟಗಿ ಶಾಸಕರ ನಿವಾಸದೆದುರು ಕಬ್ಬುಬೆಳೆಗಾರರ ಪ್ರತಿಭಟನೆ..!
ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಬ್ಬು ಬೆಳೆಗಾರರು ಇವತ್ತು ಆಕ್ರೋಶಗೊಂಡಿದ್ರು. ಕಬ್ಬಿಗೆ ಎಫ್ಆರ್ಪಿ ಬೆಲೆಯನ್ನು ಹೆಚ್ಚುಗೊಳಿಸುವಂತೆ ಆಗ್ರಹಿಸಿ ಶಾಸಕರ ನಿವಾಸದ ಎದುರು ಧರಣಿ ಕುಳಿತಿದ್ರು. ಅಂದಹಾಗೆ, ಕಲಘಟಗಿ ತಾಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು. ಅಂದಹಾಗೆ, ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ರೈತರು ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ 14 ದಿನದಿಂದ ಅಹೋ ರಾತ್ರಿ ಧರಣಿ’ ಚಳುವಳಿ ನಡೆಸುತ್ತಿದ್ದರು ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸಿದೆ ಕಬ್ಬು ಬೆಳೆದ ರೈತರನ್ನ...
ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ
ಧಾರವಾಡ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುವಾಗ ಭಯಾನಕ ದುರ್ಘಟನೆ ನಡೆದಿದೆ. ರಸ್ತೆ ದಾಟಿ ಹೋಗುತ್ತಿದ್ದ ಬೈಕ್ ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಬ್ಲಾಕ್ ಕಲರ್ ಕಾರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಮಹಿಳೆ 10 ಅಡಿ ಹಾರಿ ಹೋಗಿ ಬಿದ್ದಿದ್ದಾಳೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾತ್ರಿಯ ಭಯಂಕರ ಮಳೆಗೆ ಯುವತಿ ಬಲಿ, ಮನೆಯಲ್ಲಿದ್ದ ಯುವತಿಗೆ ಸಿಡಿಲು ಬಡಿದು ಸಾವು..!
ಕಲಘಟಗಿ: ತಾಲೂಕಿನ ಅಸ್ತಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಓರ್ವ ಯುವತಿ ಬಲಿಯಾಗಿದ್ದಾಳೆ. ಕು.ಲಕ್ಷ್ಮೀ ವಿರೂಪಾಕ್ಷಪ್ಪ ಪಾಟೀಲ್(18) ಸಿಡಿಲಿಗೆ ಬಲಿಯಾದವಳಾಗಿದ್ದಾಳೆ. ನಿನ್ನೆ ರಾತ್ರಿ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಗೆ ಯುವತಿ ಬಲಿಯಾಗಿದ್ದು ದುರಂತ ಸಾವು ಕಂಡಿದ್ದಾಳೆ. ಅಂದಹಾಗೆ, ಮೃತ ಲಕ್ಷ್ಮೀ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದಳು. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯ ಒಳಗೆ ಇದ್ದಾಗ, ಏಕಾಏಕಿ ಲಕ್ಷ್ಮೀಯ ಎದೆಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಹೀಗಾಗಿ, ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾಳೆ. ಕಳೆದ ಮೂರು...
ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ, ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ..!
ಧಾರವಾಡ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಇಬ್ಬರ ಮೇಲೆ ಹಲ್ಲೆ ನಡೆದಿದೆ. ನಮ್ಮ ಹುಡುಗಿಗೆ ಕಾಡಿಸುತ್ತೀರಾ, ಲೈಂಗಿಕ ದೌರ್ಜನ್ಯ ಎಸಗಿದ್ದಿರಾ ಅಂತಾ ಧಿಡೀರ್ ಜಗಳ ತೆಗೆದ ಮೂವರು ಆರೋಪಿಗಳು ಮನೋಜ್ ಕರ್ಜಗಿ ಹಾಗೂ ಅಯಾನ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಮನೋಜ್ ಗುಡದೂರ್, ಆನಂದ ತಳವಾರ್, ಹಾಗೂ ಉದಯ್ ಕೆಲಗೇರಿ ಎನ್ನುವ ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಚಾಕುವಿನಿಂದ ಅಯಾನ್ ಮೇಲೆ ಹಲ್ಲೆ ಮಾಡಿದ್ದಾರೆ....
ಕಲಘಟಗಿ ದಾಸ್ತಿಕೊಪ್ಪ ಬಳಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!
ಕಲಘಟಗಿ: ಇಲ್ಲಿನ ದಾಸ್ತಿಕೊಪ್ಪ ಬಳಿ ಬೆಳ್ಳಂ ಬೆಳಿಗ್ಗೆ ಭೀಕರ ಸರಣಿ ಅಪಘಾತವಾಗಿದೆ. ಕ್ರೂಸರ್, ಖಾಸಗಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ನಡೆದಿರೊ ಅಪಘಾತದ ಇದಾಗಿದ್ದು ಸೀಬರ್ಡ್ ಬಸ್ ಲಾರಿ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತವಾಗಿದೆ. ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಎರಡು ಹೋಳಾಗಿದೆ. ಹೀಗಾಗಿ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಹುಬ್ಬಳ್ಳಿ ತಾರಿಹಾಳದಲ್ಲಿ ಭೀಕರ ಅಗ್ನಿ ದುರಂತ, ಮೂರಕ್ಕೇರಿದ ಮೃತರ ಸಂಖ್ಯೆ..!
ಹುಬ್ಬಳ್ಳಿ: ತಾರಿಹಾಳ ಕಾರ್ಖಾನೆಯಲ್ಲಿ ನಿನ್ನೆ ನಡೆದಿದ್ದ ಅಗ್ನಿ ದುರಂತದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಅಗ್ನಿ ಅವಘಡದಲ್ಲಿ ಗಾಯಗೊಂಡವರನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕಿಮ್ಸ್ ನಲ್ಲಿ ಚಿಕಿತ್ಸೆ ಫಲಿಸದೆ ಮತ್ತಿಬ್ಬರು ಸಾವು ಕಂಡಿದ್ದಾರೆ. ಗೌರಮ್ಮ ಹಾಗೂ ಮಾಲೇಶ್ ಮೃತ ದುರ್ದೈವಿಗಳಾಗಿದ್ದು, ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಒಟ್ಟು ಮೂವರು ಸಾವನ್ನಪ್ಪಿರೋದಾಗಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ. ಇನ್ನುಳಿದ ಐವರು ಗಾಯಾಳುಗಳಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ...
ಹುಬ್ಬಳ್ಳಿಯಲ್ಲಿ ಫ್ಯಾಕ್ಟರಿಗೆ ಬೆಂಕಿ, 8 ಜನರಿಗೆ ಗಂಭೀರ ಗಾಯ, ನಾಲ್ವರು ಸಜೀವ ದಹನವಾದ್ರಾ..?
ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಾರಿಹಾಳದ ಕೈಗಾರಿಕಾ ಪ್ರದೇಶದಲ್ಲಿರೋ ಸ್ಪಾರ್ಕಲ್ ಕ್ಯಾಂಡಲ್ ತಯಾರಿಸುವ ಫ್ಯಾಕ್ಟರಿಗೆ ಬೆಂಕಿ ಬಿದ್ದಿದ್ದು ಬರೋಬ್ಬರಿ 8 ಜನರಿಗೆ ಗಂಭೀರ ಗಾಯವಾಗಿದೆ. ಇನ್ನೂ ನಾಲ್ವರು ಫ್ಯಾಕ್ಟರಿ ಒಳಗಡೆ ಸಿಲುಕಿ ಸಜೀವ ದಹನವಾಗಿರೋ ಅನುಮಾನವಿದೆ. ಬರ್ಥ ಡೇ ಪಾರ್ಟಿಯಲ್ಲಿ ಬಳಸುವ ಸ್ಪಾರ್ಕಲ್ ಕ್ಯಾಂಡಲ್ ತಯಾರಿಸುವ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಕಳೆದ ಒಂದು ಗಂಟೆಯ ಹಿಂದೆ ಘಟನೆ ನಡೆದಿದ್ದು, ಪ್ರತೀಕ್ಷಣವೂ ಸ್ಪೋಟದ ಶಬ್ದ ಕೇಳಿಸುತ್ತಿದೆ. ಬೆಂಕಿಯ ಕಡಿಮೆ ನ್ನಾಲಿಗೆ ಹರಡುತ್ತಿದೆ. ಹೀಗಾಗಿ, ಅಗ್ನಿಶಾಮಕ...
ಭೀಕರ ಅಪಘಾತ, ನಿಡಸೋಸಿ ಮಠದ ಶ್ರೀಗಳು ಅದೃಷ್ಟವಶಾತ್ ಪಾರು..!
ಧಾರವಾಡ – ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರ ಅಂತ್ಯಕ್ರಿಯೆಗೆ ಬಂದಿದ್ದ ಶ್ರೀಗಳ ಕಾರು ಅಪಘಾತವಾಗಿದೆ. ಬೆಳಗಾವಿ ಹೊರವಲಯದ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದೆ. ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪ್ರಯಾಣಿಸುತ್ತಿದ್ದ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿದ್ದು, ಕಾರ್ ಪಲ್ಟಿಯಾಗಿ ಕಾರ ನುಜ್ಜುಗುಜ್ಜಾಗಿದೆ. ಆದ್ರೆ ಏರಬ್ಯಾಗ ಇದ್ದಿದ್ದರಿಂದ ಅದೃಷ್ಟವಶಾತ್ ಶ್ರೀಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶ್ರೀಗಳ ಕಾಲಿಗೆ ಚಿಕ್ಕಪುಟ್ಟ ಗಾಯವಾಗಿದೆ. ಸದ್ಯ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ....