Home Public First Newz

Author: Public First Newz (Public First Newz)

Post
ಭಾರೀ ಮಳೆ, ಹುಬ್ಬಳ್ಳಿ ರಸ್ತೆಯ ವಡಗಟ್ಟಾ, ಬಾಚಣಕಿ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು, ಸಂಚಾರ ಅಸ್ತವ್ಯಸ್ತ!

ಭಾರೀ ಮಳೆ, ಹುಬ್ಬಳ್ಳಿ ರಸ್ತೆಯ ವಡಗಟ್ಟಾ, ಬಾಚಣಕಿ ಬಳಿ ರಸ್ತೆ ಮೇಲೆ ಹರಿದ ಮಳೆ ನೀರು, ಸಂಚಾರ ಅಸ್ತವ್ಯಸ್ತ!

ಮುಂಡಗೋಡ ತಾಲೂಕಿನ ಬಾಚಣಕಿ, ಅರಶಿಣಗೇರಿ, ಹುನಗುಂದ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗಿದೆ. ಗುಡುಗು ಮಿಂಚು ಸಹಿತ ಮಳೆಗೆ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಕೆಲವು ಕಡೆ ರಸ್ತೆ ಸಂಚಾರಕ್ಕೂ ಅಡಚಣೆಯಾಗಿದೆ. ಶಿರಸಿ- ಹುಬ್ಬಳ್ಳಿ ರಸ್ತೆಯ ಬಾಚಣಕಿ ಡ್ಯಾಂ ಬಳಿ ರಸ್ತೆಯ ಮೇಲೆ ನೀರು ತುಂಬಿ ಜಲಾವೃತವಾಗಿದೆ. ಅಲ್ಲದೇ ವಡಗಟ್ಟಾ ಬಳಿಯೂ ರಸ್ತೆಯ ಮೇಲೆ ನೀರಿ ಹರಿದು ಸಂಚಾರಕ್ಕೆ ಅಡಚಣೆಯಾಗಿದೆ.  

Post
“ಹರ್ ಘರ್ ತಿರಂಗಾ” ಪ್ರಯುಕ್ತ ಕಾರವಾರದಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ..!

“ಹರ್ ಘರ್ ತಿರಂಗಾ” ಪ್ರಯುಕ್ತ ಕಾರವಾರದಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ..!

 ಕಾರವಾರ: ಉತ್ತರ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾರವಾರ ಬೈಸಿಕಲ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾರತದ 78ನೇ ಸ್ವಾತಂತ್ರ‍್ಯೋತ್ಸವದ ಅಂಗವಾಗಿ “ಹರ್ ಘರ್ ತಿರಂಗ” ಕಾರ್ಯಕ್ರಮದ ಅಡಿಯಲ್ಲಿ “ಸೈಕ್ಲೊತಾನ್” ಕಾರ್ಯಕ್ರಮ ಕಾರವಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ “ಸೈಕ್ಲೊತಾನ್” ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಚಾಲನೆ ನೀಡಿದ್ರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ...

Post
ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಬಸವನ ಹೊಂಡದಲ್ಲಿ ವ್ಯಕ್ತಿಯ ಶವ ಪತ್ತೆ, ಆತ್ಮಹತ್ಯೆ ಮಾಡಿಕೊಂಡನಾ ಕಂಬಾರಗಟ್ಟಿಯ ಶಿವಾಜಿ..?

ಮುಂಡಗೋಡ ಪಟ್ಟಣದ ಬಸವನ ಹೊಂಡದಲ್ಲಿ ವ್ಯಕ್ತಿಯೋರ್ವನ ಶವ ದೊರೆತಿದೆ. ಬೆಳ್ಳಂ ಬೆಳಿಗ್ಗೆ ಹೊಂಡದಲ್ಲಿ ಶವ ತೇಲುತ್ತಿರುವುದನ್ನು ಕಂಡ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪಿಎಸ್ಐ ಪರಶುರಾಮ್ ಟೀಂ ಸ್ಥಳಕ್ಕೆ ಧಾವಿಸಿ ಶವ ಹೊರತೆಗೆದಿದ್ದಾರೆ‌. ಇನ್ನು ಹೊಂಡದಲ್ಲಿ ಪತ್ತೆಯಾಗಿರೋ ಶವ ಮುಂಡಗೋಡ ಪಟ್ಟಣದ ಕಂಬಾರಗಟ್ಟಿಯ ಶಿವಾಜಿ ಬಿಸೆಟ್ಟಿ (60) ಅಂತಾ ಗುರುತಿಸಲಾಗಿದೆ. ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಶಂಕಿಸಲಾಗಿದೆ. ಸದ್ಯ ಶವ ಹೊರತೆಗೆಯಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

Post
ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!

ಟ್ರ್ಯಾಕ್ಟರ್ ಹಾಗೂ ಇಂಜೀನ್ ನಡುವೆ ಸಿಲುಕಿ ದಾರುಣ ಸಾವು ಕಂಡ ಚಾಲಕ, ಗುಡ್ಡ ಹತ್ತಿಸುವಾಗ ದುರಂತ..!

ಹಾನಗಲ್: ಟ್ಯ್ರಾಕ್ಟರ್ ಇಂಜಿನ್ ಮತ್ತು ಟ್ರೆಲರ್ ಮಧ್ಯ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಹಾನಗಲ್ ತಾಲೂಕಿನ ಆಡೂರ ಗ್ರಾಮದಲ್ಲಿ ನಡೆದಿದೆ‌. ಬಂಕಾಪೂರ ಗ್ರಾಮದ ಯಲ್ಲಪ್ಪ ಉಳಿವೆಪ್ಪ ವಳಗೇರಿ (40) ಮೃತ ದುರ್ದೈವಿಯಾಗಿದ್ದಾನೆ. ಈತ ಬಂಕಾಪೂರ ಗ್ರಾಮದಿಂದ ಆಡೂರ ಗ್ರಾಮಕ್ಕೆ ಟ್ರ್ಯಾಕ್ಟರ್ ನಲ್ಲಿ ಎಂ.ಸ್ಯಾಂಡ್ ಉಸುಕು ತಂದಿದ್ದ. ಗ್ರಾಮದಲ್ಲಿರುವ ಗುಡ್ಡವನ್ನ ಹತ್ತಿಸುವ ವೇಳೆ ಅವಘಡ ನಡೆದಿದೆ. ಏಕಾಏಕಿ ಟ್ರ್ಯಾಕ್ಟರ್ ಇಂಜಿನ್ ಮೆಲಕ್ಕೆ ಹಾರಿದ ಪರಿಣಾಮ ಇಂಜಿನ್ ಮತ್ತು ಟ್ರೆಲರ್ ನಡುವೆ ಟ್ರ್ಯಾಕ್ಟರ್ ಚಾಲಕ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ. ಆಡೂರ ಪೊಲೀಸ್...

Post
ಶಿರಸಿ ಸಮೀಪ ಸ್ಕೂಟಿ, ಕಾರು ಅಪಘಾತ, ನಂದಿಗಟ್ಟಾ ಮೂಲದ ಗ್ರಾಪಂ ಕಾರ್ಯದರ್ಶಿ ದಾರುಣ ಸಾವು..!

ಶಿರಸಿ ಸಮೀಪ ಸ್ಕೂಟಿ, ಕಾರು ಅಪಘಾತ, ನಂದಿಗಟ್ಟಾ ಮೂಲದ ಗ್ರಾಪಂ ಕಾರ್ಯದರ್ಶಿ ದಾರುಣ ಸಾವು..!

ಮುಂಡಗೋಡ: ತಾಲೂಕಿನ ನಂದಿಗಟ್ಟಾದ ಮಾರುತಿ ರಾಧಾಪುರ ಅಪಘಾತದಲ್ಲಿ ಮೃತಪಟ್ಟಿದ್ದಾರೆ‌. ಶಿರಸಿ ಸಮೀಪದ ಕೋಳಿಗಾರ್ ಬಳಿ ನಡೆದ ಸ್ಕೂಟಿ ಹಾಗೂ ಕಾರ್ ನಡುವಿನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಶಿರಸಿ ತಾಲೂಕಿನ ಸಾಲ್ಕಣಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾರುತಿ ರಾದಾಪುರ, ಗುರುವಾರ ಬೆಳಿಗ್ಗೆ ಕರ್ತವ್ಯಕ್ಕಾಗಿ ಆಫೀಸಿಗೆ ತೆರಳುತ್ತಿದ್ದ ವೇಳೆ, ಕೋಳಿಗಾರ ಸಮೀಪ ಸ್ಕೂಟಿ ಹಾಗು ಕಾರು ಮುಖಾಮುಕಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲು ರವಾನಿಸುವ ಸಂದರ್ಭದಲ್ಲೇ ದಾರಿ...

Post
ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!

ಗ್ರಾಮಕ್ಕೆ ಬಾರದ ಬಸ್, ಹುನಗುಂದ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ..!

ಕಳೆದ ಒಂದು ವಾರದಿಂದ ಮುಂಡಗೋಡ ತಾಲೂಕಿನ ಹುನಗುಂದಕ್ಕೆ ಸಾರಿಗೆ ಬಸ್ ಸಂಚಾರ ಬಹುತೇಕ ಸ್ಥಗಿತವಾಗಿದೆ. KSRTC ಬಸ್ ಚಾಲಕ ಹಾಗೂ ನಿರ್ವಾಹಕರ ಬೇಜವಾಬ್ದಾರಿಗಳಿಂದ ನಿತ್ಯವೂ ವಿದ್ಯಾಭ್ಯಾಸಕ್ಕಾಗಿ ಮುಂಡಗೋಡ ಸೇರಿದಂತೆ ವಿವಿದೆಡೆ ಪ್ರಯಾಣಿಸುವ ನೂರಾರು ವಿದ್ಯಾರ್ಥಿಗಳ ಜೀವನ ಅತಂತ್ರವಾಗಿದೆ. ಹೀಗಾಗಿ, ಗುರುವಾರ ಬೆಳಿಗ್ಗೆ ವಿದ್ಯಾರ್ಥಿಗಳು ಬಸ್ ಗಾಗಿ ಪ್ರತಿಭಟನೆ ನಡೆಸಿದ್ರು. ಹುನಗುಂದ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ವಿದ್ಯಾರ್ಥಿಗಳು ಬೆಳಗ್ಗಿನಿಂದಲೂ ಕಾಯ್ದು ಕುಳಿತಿದ್ದರು. ಆದ್ರೆ, ಬಸ್ ಬರಲೇ ಇಲ್ಲ. ಹೀಗಾಗಿ, ವಿದ್ಯಾರ್ಥಿಗಳಿಗೆ ಬಸ್ ಬರದೇ ಇರುವ ಕಾರಣಕ್ಕೆ...

Post
ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು

ಪಂಪಸೆಟ್ ದುರಸ್ತಿ ವೇಳೆ ವಿದ್ಯುತ್ ತಗುಲಿ ತಂದೆ ಮಗ ದಾರುಣ ಸಾವು

ಹಾವೇರಿ: ಪಂಪ್‌ಸೆಟ್ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ತಂದೆ-ಮಗ ಸಾವನ್ನಪ್ಪಿರುವ ಘಟನೆ ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಕರಬಸಪ್ಪ ಕಡೇನಾಯಕನಹಳ್ಳಿ (50) ಹಾಗೂ ಅವರ ಪುತ್ರ ದರ್ಶನ ಕಡೇನಾಯಕನಹಳ್ಳಿ (26) ಎಂದು ಗುರುತಿಸಲಾಗಿದೆ. ಕರಬಸಪ್ಪ ಮತ್ತು ದರ್ಶನ ಇಬ್ಬರೂ ಸೇರಿಕೊಂಡು ಪಂಪ್ ಸೆಟ್ ದುರಸ್ತಿ ಮಾಡಲು ಮುಂದಾಗಿದ್ದರು. ಭತ್ತದ ಬೆಳೆಗೆ ನೀರು ಹಾಯಿಸಲು ಮೋಟಾರ್‌ ಆನ್ ಮಾಡಲು ಹೋದಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಕ್ಕೆ ಪಂಪ್ ಸೆಟ್ ಮೇಲೆಯೇ ಬಿದ್ದು ಇಬ್ಬರೂ ಸ್ಥಳದಲ್ಲೇ...

Post
ಕಾಳಿನದಿ ಸೇತುವೆ ಕುಸಿತ: ಉತ್ತರ ಕನ್ನಡ ಡಿಸಿಯಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ

ಕಾಳಿನದಿ ಸೇತುವೆ ಕುಸಿತ: ಉತ್ತರ ಕನ್ನಡ ಡಿಸಿಯಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೋವಾ ಮತ್ತು ಕಾರವಾರವನ್ನು ಸಂಪರ್ಕಿಸುವ ಕಾಳಿ ನದಿ ಸೇತುವೆ ಕುಸಿದು ಬಿದ್ದಿರುವ ಕುರಿತು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡರು. ಜಿಲ್ಲೆಯಲ್ಲಿ ಎಲ್ಲ ಸೇತುವೆಗಳು, ರಸ್ತೆಗಳ ಸುರಕ್ಷತೆಯ ಕುರಿತು ಖಾತರಿಪಡಿಸುವಂತೆ ಹಾಗೂ ಯಾವುದೇ ಜೀವಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಘಟನೆಯ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಸೇತುವೆ ಕುಸಿದ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ....

Post
ಕಾರವಾರ ಕೋಡಿಭಾಗದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ..!

ಕಾರವಾರ ಕೋಡಿಭಾಗದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ..!

ಕಾರವಾರದ ಕೋಡಿಭಾಗನಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರೋ ಸೇತುವೆ ಕುಸಿದು ಬಿದ್ದಿದೆ‌. ಪರಿಣಾಮ ಅದೇ ವೇಳೆ ಸಂಚರಿಸುತ್ತಿದ್ದ ಲಾರಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಹೀಗಾಗಿ, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರಿಂದ ಲಾರಿ ಚಾಲಕನ ರಕ್ಷಣೆ ಮಾಡಲಾಗಿದೆ. ಅಂದಹಾಗೆ, ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಿರ್ಮಿಸಿದ್ದ ಸುಮಾರು 50 ವರ್ಷ ಹಳೆಯದಾದ ಸೇತುವೆ ಏಕಾ ಏಕಿ ಕುಸಿದು ಬಿದ್ದಿದೆ. ಸದ್ಯ ನದಿಗೆ ನಿರ್ಮಿಸಿರುವ ಹೊಸ ಸೇತುವೆಯಲ್ಲಿ...

Post
ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ- ಅಪಾರ ಹಾನಿ, ಒಟ್ಟೂ ಹಾನಿಯ ವಿವರ ಇಲ್ಲಿದೆ ನೋಡಿ..!

ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆ- ಅಪಾರ ಹಾನಿ, ಒಟ್ಟೂ ಹಾನಿಯ ವಿವರ ಇಲ್ಲಿದೆ ನೋಡಿ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಜುಲೈ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಶೇ. 81 ರಷ್ಟು ಅತ್ಯಧಿಕ ಮಳೆಯಾಗಿದ್ದು, ಜಿಲ್ಲೆಯಲ್ಲಿ ಜೂನ್ ನಿಂದ ಇದುವರೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಜುಲೈ ಮಾಹೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 993. 4 ಮಿಮಿ ಆಗಿದ್ದು, ಈ ಬಾರಿ 1798.2 ಮಿಮೀ ಮಳೆ ಬೀಳುವ ಮೂಲಕ ಶೇ.81 ರಷ್ಟು ಅತ್ಯಧಿಕ ಮಳೆ ದಾಖಲಾಗಿದ್ದು, ಜನವರಿ 2024 ರಿಂದ ಇಲ್ಲಿಯವರೆಗೆ 1882.3 ಮಿಮಿ ವಾಡಿಕೆ ಮಳೆ ಇದ್ದು, 2745.7 ಮಿಮೀ...

error: Content is protected !!