Home Public First Newz

Author: Public First Newz (Public First Newz)

Post
ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿರೋ ಇಂದೂರಿನ ಬಡ ಕುಟುಂಬಕ್ಕೆ ದಿನಸಿ ವಿತರಿಸಿದ ಸಹೃದಯಿಗಳು..!

ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿರೋ ಇಂದೂರಿನ ಬಡ ಕುಟುಂಬಕ್ಕೆ ದಿನಸಿ ವಿತರಿಸಿದ ಸಹೃದಯಿಗಳು..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ನಿನ್ನೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿ‌ಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆ ನಡೆದಿದ್ದು, ಸಧ್ಯ ಇಡೀ ಕುಟುಂಬವೇ ಸಂಕಷ್ಟದಲ್ಲಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ದವಸ ಧಾನ್ಯಗಳೂ ಸುಟ್ಟು ಕರಕಲಾಗಿದ್ದು ಕುಟುಂಬಕ್ಕೆ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂದೂರಿನ ಗಂಗಾಧರ ಬಡಿಗೇರ ಹಾಗೂ ಮಂಜುನಾಥ್ ನಡಗೇರಿ ಸಂಕಷ್ಟದಲ್ಲಿರೋ ಕುಟುಂಬಕ್ಕೆ ದಿನಸಿ ವಿತರಿಸಿದ್ದಾರೆ. ಮನೆ ಸುಟ್ಟು ಕರಕಲಾದ ಹಿನ್ನೆಲೆಯಲ್ಲಿ ನೊಂದಿರೋ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ************************************** ಬೆಂಕಿಯ...

Post
ಪಾಲಕರೇ ನಿಮ್ಮ ಮಕ್ಕಳ ಮೇಲೆ ಇರಲಿ ಹೆಚ್ಚಿನ ಕಾಳಜಿ, ಬಂದಿದೆ ಮತ್ತೊಂದು ಮಹಾಮಾರಿ..!

ಪಾಲಕರೇ ನಿಮ್ಮ ಮಕ್ಕಳ ಮೇಲೆ ಇರಲಿ ಹೆಚ್ಚಿನ ಕಾಳಜಿ, ಬಂದಿದೆ ಮತ್ತೊಂದು ಮಹಾಮಾರಿ..!

ಬಾಗಲಕೋಟೆ: ಕೊರೊನಾ ಮೂರನೇ ಅಲೆ ಮಕ್ಕಳ‌ ಮೇಲೆ‌ ತೀವ್ರ ಪರಿಣಾಮ ಬೀರುತ್ತೆ ಎನ್ನುವ ತಜ್ಞರ ವರದಿಯ ಬೆನ್ನಲ್ಲೇ, ಎರಡನೇ ಅಲೆಯೇ ಮಕ್ಕಳನ್ನ ಬಾಧಿಸುತ್ತಿದೆ. ಇದೀಗ ಗಾಯದ ಮೇಲೆ ಬರೆ ಎನ್ನುವಂತೆ ಕೋವಿಡ್’ನಿಂದ ಗುಣಮುಖರಾದ ಮಕ್ಕಳಲ್ಲಿ ಈಗ ಹೊಸದಾಗಿ ಕಾಯಿಲೆಯೊಂದು ಶುರುವಾಗಿದ್ದು ಪೊಷಕರನ್ನ ಬೆಚ್ವಿಬೀಳಿಸಿದೆ. ಬಹುಅಂಗಾಂಗ ವೈಫಲ್ಯ ಉಂಟುಮಾಡುವ ಆ ರೋಗ ಯಾವುದು? ಅಷ್ಟಕ್ಕೂ ಆ ಹೊಸ ರೋಗ ಬಾಧಿಸಿದ್ದು ಯಾವ ಜಿಲ್ಲೆಯಲ್ಲಿ..? ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್. ಯಸ್, ನಿತ್ಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ನೂರಾರು‌...

Post
ಹಿರಿಯ ಬಿಜೆಪಿ ಶಾಸಕ ಸಿ.ಎಂ.ಉದಾಸಿ ವಿಧಿವಶ..!

ಹಿರಿಯ ಬಿಜೆಪಿ ಶಾಸಕ ಸಿ.ಎಂ.ಉದಾಸಿ ವಿಧಿವಶ..!

ಹಾನಗಲ್- ಹಿರಿಯ ಬಿಜೆಪಿ ಶಾಸಕ ಮಾಜಿ ಸಚಿವ ಸಿ.ಎಂ.ಉದಾಸಿ(86) ವಿಧಿವಶವಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಉದಾಸಿಯವರನ್ನು ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಅಂತಲೇ ಖ್ಯಾತಿ ಪಡೆದಿದ್ದ ಸಿ.ಎಂ.ಉದಾಸಿಯ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5 ನ್ಯೂಸ್ ವೀಕ್ಷಿಸಲು ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. https://youtu.be/712rEAKhVeE

Post

ಇಂದೂರಿನಲ್ಲಿ‌ ಮನೆಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಮನೆ, ಲಕ್ಷಾಂತರ ಹಾನಿ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾ‌ಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮನೆಯೇ ಭಸ್ಮವಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇಂದೂರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದ ಹಿಂದುಗಡೆ ಇರುವ ಗೂಡುಮನಿ ಅತ್ತಾರ್ ಎಂಬುವ ಮಹಿಳೆಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಾಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಕೆಲವೇ ಹೊತ್ತಲ್ಲಿ ಇಡೀ ಮನೆಗೆ ಆವರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5...

Post
ದೇವರಹಿಪ್ಪರಗಿ ತಾಲೂಕಿನಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆಯಿಲ್ಲ: ಶಾಸಕ ಸೋಮನಗೌಡ ಪಾಟೀಲ್

ದೇವರಹಿಪ್ಪರಗಿ ತಾಲೂಕಿನಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆಯಿಲ್ಲ: ಶಾಸಕ ಸೋಮನಗೌಡ ಪಾಟೀಲ್

ದೇವರಹಿಪ್ಪರಗಿ: ತಾಲೂಕಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಿರುವುದಾಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ ಹೇಳಿದ್ರು. ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇವರಹಿಪ್ಪರಗಿ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ದಾಸ್ತಾನು ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ರೈತರು ಬಿತ್ತನೆ ಬೀಜಗಳು ದೊರಕುವ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸಮಯಕ್ಕೆ...

Post

“ನಮ್ಮ ಊರಾಗ್ ಇನ್ ಸೆರೇ ಮಾರಂಗಿಲ್ಲ” ಕಾಳಗಿನಕೊಪ್ಪ ಮಹಿಳೆಯರ ಖಡಕ್ ಎಚ್ಚರಿಕೆ..!

ಮುಂಡಗೋಡ: ತಾಲೂಕಿನ ಕಾಳಗಿನಕೊಪ್ಪದ ಮಹಿಳೆಯರು ಸಿಡಿದು ನಿಂತಿದ್ದಾರೆ. ತಮ್ಮ ಗ್ರಾಮದಲ್ಲಿ ಯುವಕರನ್ನ ದಾರಿ ತಪ್ಪಿಸ್ತಿರೋ ಸರಾಯಿ, ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಹೌದು, ಮುಂಡಗೋಡ ತಾಲೂಕಿನ ಕಾಳಗಿನ ಕೊಪ್ಪದ ಮಹಿಳೆಯರಿಗೆ ಇವತ್ತು ಆಕ್ರೋಶದ ಕಟ್ಟೆಯೊಡೆದಿದೆ. ನಿತ್ಯವೂ ಕುಡಿದು ನಶೆಯಲ್ಲಿ ತೇಲಾಡುವ, ಗುಟ್ಕಾ ತಿಂದು ಕಂಡ ಕಂಡಲ್ಲೆ ಗಲೀಜು ಮಾಡುವ, ಸಿಗರೇಟು ಸೇದುತ್ತು ಮಸ್ತಿ ಮಾಡುವ ಯುವಕರನ್ನು ಹಾಗೂ ತಮ್ಮ ಮನೆ ಯುವ ಹುಡುಗರನ್ನು ಹೇಗಾದ್ರೂ ಸರಿ ದಾರಿಗೆ ತರಲೇ ಬೇಕು ಅಂತಾ...

Post
KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!

KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!

ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ. ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ....

Post
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!

ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!

ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ...

Post
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!

ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!

ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.

error: Content is protected !!