ಇಂದೂರಿನ ಜ್ಞಾನ ಜ್ಯೋತಿ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಉಚಿತ ಹೊಲಿಗೆ ತರಬೇತಿ ಹಾಗೂ ಮಹಿಳಾ ಜಾಗೃತಿ ಕಾರ್ಯ..!

ಇಂದೂರು: ಬೆಥೇಸ್ಥಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಇಂದೂರಿನ ಜ್ಞಾನ ಜ್ಯೋತಿ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ಉಚಿತ ಹೊಲಿಗೆ ತರಬೇತಿ ಪಡೆದ ವಿದ್ಯಾರ್ಥಿನಿಯರ ಮಹಿಳಾ ಜಾಗೃತಿ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಸುಮಾರು 130 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮುಂಡಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಸಾಮಾಜಿಕ ಜಾಗೃತಿ ಹಾಗೂ ಸಾರ್ವಜನಿಕ ಸುರಕ್ಷತೆ ಕುರಿತು ಮಾಹಿತಿ ನೀಡಿದರು. ಟ್ರಸ್ಟ್ ಸಂಯೋಜಕ ಜೇಮ್ಸ್ ಮ್ಯಾಥ್ಯೂ, ಖಜಾಂಜಿ ಜಿಜಿ ಥಾಮಸ್ ಪಾರೆಲ್ ಸೇರಿದಂತೆ ವಿವಿಧ ಪಾಸ್ಟರ್‌ಗಳು, ಹೊಲಿಗೆ ತರಬೇತಿ ಶಿಕ್ಷಕಿ ರಾಧಾ ವಿಜಯ್ ಹಾಗೂ ಶಾಲಾ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಭೋಜನ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿನಿಯರಿಗೆ ವಿವಿಧ ಕ್ರೀಡೆ ಹಾಗೂ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಸಂಭ್ರಮದ ವಾತಾವರಣದಲ್ಲಿ ಸಮಾರಂಭ ಸಂಪನ್ನಗೊಂಡಿತು.