Home Tibetan calony

Tag: Tibetan calony

Post
ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್  ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

ದಲೈ ಲಾಮಾರ ಹುಟ್ಟು ಹಬ್ಬ, ಟಿಬೇಟಿಯನ್ ಕಾಲೋನಿಗಳಲ್ಲಿ ಸಂಭ್ರಮವೋ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ಟಿಬೇಟಿಯನ್ ಧರ್ಮಗುರು ದಲೈ ಲಾಮಾರವರ 88 ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸಲಾಯಿತು. ಇಲ್ಲಿನ ಕ್ಯಾಂಪ್ ನಂಬರ್ ಒಂದರ ಬೌದ್ದ ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು. ಅಂದಹಾಗೆ, ಇಲ್ಲಿನ ಟಿಬೇಟಿಯನ್ ಕಾಲೋನಿಯಲ್ಲಿ ಟಿಬೇಟಿಗರು ದಲೈ ಲಾಮಾರ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪ್ರತೀ ಮನೆ ಮನೆಗಳಲ್ಲೂ ದಲೈ ಲಾಮಾರವರ ಹುಟ್ಟುಹಬ್ಬದ ವಿಶೇಷ ಸಂಭ್ರಮಗಳು ನಡೆಯುತ್ತಿವೆ. ದೀರ್ಘಾಯುಷ್ಯ ಕೋರಿ ಪ್ರಾರ್ಥನೆಗಳು ನಡೆಯುತ್ತಿವೆ. ಅಲ್ಲದೇ, ಹಲವು ಸಾಮಾಜಿಕ, ಸಾಂಸ್ಕೃತಿಕ, ದಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

Post
ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ‌. ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ...

Post
ಟಿಬೇಟಿಯನ್ ಕಾಲೋನಿಯಲ್ಲಿ ದಲೈ ಲಾಮಾರ 87 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..!

ಟಿಬೇಟಿಯನ್ ಕಾಲೋನಿಯಲ್ಲಿ ದಲೈ ಲಾಮಾರ 87 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಇಂದು ನೊಬೆಲ್ ಪ್ರಶಸ್ತಿ ಪುರಸ್ಕೃತ, ಟಿಬೇಟಿಗರ ಧರ್ಮಗುರು ದಲೈ ಲಾಮಾರವರ 87 ನೇ ಜನ್ಮ ದಿನದ ಸಂಭ್ರಮ ಕಳೆ ಕಟ್ಟಿದೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂ.3 ರ ಕಮ್ಯುನಿಟಿ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ದಲೈ ಲಾಮಾರವರ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಅಪರ ಜಿಲ್ಲಾಧಿಕಾರಿ ರಾಜೂ ಮೊಗವೀರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಇನ್ನು, ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಟಿಬೇಟಿಗರು, ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ್ರು....

Post
ಟಿಬೇಟಿಯನ್ ಕಾಲೋನಿಯಲ್ಲಿ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಉದ್ಘಾಟನೆ..!

ಟಿಬೇಟಿಯನ್ ಕಾಲೋನಿಯಲ್ಲಿ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನ ಉದ್ಘಾಟನೆ..!

 ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಗಾಂದೇನ್ ಬೌದ್ಧ ಮಠದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದೆ. ಹೀಗಾಗಿ ಇಂದು ಸಮ್ಮೇಲನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಸೈಕಾಲಜಿ ಮತ್ತು ಚಿಂತನಶೀಲ ಅಭ್ಯಾಸಗಳ ಕುರಿತು ಎರಡನೇ ಇಂಡೋ-ಟಿಬೆಟಿಯನ್ ವಿದ್ವಾಂಸರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದಲ್ಲಿ ಅನೇಕ ಗಣ್ಯ ಭಾಷಣಕಾರರು ಮತ್ತು ವಿದ್ವಾಂಸರು ಭಾಗಿಯಾಗಲಿದ್ದಾರೆ. ಭಾರತದ 15 ರಾಜ್ಯಗಳಿಂದ ಬಂದಿರೋ ಬೌದ್ಧ ಬಿಕ್ಕುಗಳು, ಮಠಾಧೀಶರು, ಧಾರ್ಮಿಕ ಮುಖಂಡರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ....

Post
ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!

ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!

ಮುಂಡಗೋಡ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರೋ ಟಿಬೇಟಿಯನ್ ಕಾಲೋನಿಗಳಲ್ಲಿ ಕೋವಿಡ್ ಸದ್ಯ ಮತ್ತೆ ತನ್ನ ಅಟ್ಟಹಾಸ ಶುರು ಮಾಡಿದೆ.. ಹೀಗಾಗಿ, ಸದ್ಯ ಕಾಲೋನಿಯಲ್ಲಿ ಬಹುತೇಕ ಸ್ತಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ವಾರದ ಹಿಂದೆ ಮೊದಲೇಲ್ಲ ವಾರಕ್ಕೆ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದ್ರೆ ಸದ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿ ಈಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅರ್ಧಶತಕ ದಾಟಿದೆ. ಅದ್ರಲ್ಲೂ ಟಿಬೇಟಿಯನ್ ಕಾಲೋನಿಯ STS ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿರೋದು...

error: Content is protected !!