Home mundgod news

Tag: mundgod news

Post
ಪಾಳಾದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ..!

ಪಾಳಾದಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ..!

ಮುಂಡಗೋಡ: ತಾಲೂಕಿನ ಪಾಳಾ ಗ್ರಾಮದಲ್ಲಿ ಮಾನಸಿಕ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಳಾ ಗ್ರಾಮದ ಗಂಗವ್ವ ಕೋಂ ಇಂದ್ರಪ್ಪ ಇಂಗಳೆ (60), ಎಂಬುವವಳೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾಳೆ ಇವಳು ಕಳೆದ 17 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದವಳು, ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜ. 19 ರಂದು ಬೆಳಿಗ್ಗೆ, ಮನೆಯಲ್ಲಿ ತಂದಿಟ್ಟಿದ್ದ ಅಡಿಕೆ ಗಿಡಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ಸೇವಿಸಿ ಅಸ್ವಸ್ಥಳಾಗಿದ್ದಳು. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ...

Post
ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!

ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಭೀತಿ, ಬಿಕೋ ಅಂತಿವೆ ರಸ್ತೆಗಳು..!

ಮುಂಡಗೋಡ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರೋ ಟಿಬೇಟಿಯನ್ ಕಾಲೋನಿಗಳಲ್ಲಿ ಕೋವಿಡ್ ಸದ್ಯ ಮತ್ತೆ ತನ್ನ ಅಟ್ಟಹಾಸ ಶುರು ಮಾಡಿದೆ.. ಹೀಗಾಗಿ, ಸದ್ಯ ಕಾಲೋನಿಯಲ್ಲಿ ಬಹುತೇಕ ಸ್ತಬ್ದ ವಾತಾವರಣ ನಿರ್ಮಾಣವಾಗಿದೆ. ಕಳೆದ ಕೆಲ ವಾರದ ಹಿಂದೆ ಮೊದಲೇಲ್ಲ ವಾರಕ್ಕೆ ಕಡಿಮೆ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದವು. ಆದ್ರೆ ಸದ್ಯ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ. ಇಲ್ಲಿ ಈಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅರ್ಧಶತಕ ದಾಟಿದೆ. ಅದ್ರಲ್ಲೂ ಟಿಬೇಟಿಯನ್ ಕಾಲೋನಿಯ STS ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಪಾಸಿಟಿವ್ ದೃಢಪಟ್ಟಿರೋದು...

Post
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹನುಮಾಪುರ ಗ್ರಾ. ಪಂಚಾಯತಿ..!

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಹನುಮಾಪುರ ಗ್ರಾ. ಪಂಚಾಯತಿ..!

ಮುಂಡಗೋಡ: ತಾಲೂಕಿನ ಹನುಮಾಪುರ ಗ್ರಾಮ ಪಂಚಾಯತಿಯಲ್ಲಿ ಶನಿವಾರ ರಾತ್ರಿ ಎಂಟು ಗಂಟೆ ಯಾದ್ರೂ ಗ್ರಾಮ ಪಂಚಾಯತದ ಎದುರಿಗೆ ಏರಿಸಿದ್ದ ರಾಷ್ಟ್ರಧ್ವಜವನ್ನು ಇಳಿಸದೇ, ಗ್ರಾ.ಪಂ. ಸಿಬ್ಬಂದಿ ಅಗೌರವ ತೋರಿದ ಘಟನೆ ನಡೆದಿದೆ. ಪ್ರತಿ ದಿನದ ಬೆಳಿಗ್ಗೆ ರಾಷ್ಟ್ರಧ್ವಜವನ್ನು ಏರಿಸಿ, ಸೂರ್ಯಾಸ್ತದ ವೇಳೆಗೆ ಇಳಿಸಬೇಕೆಂಬ ನಿಯಮವಿದೆ. ಆದರೆ, ರಾಷ್ಟ್ರಧ್ವಜವನ್ನು ಪ್ರತಿದಿನ ಇಳಿಸುವ ಬದಲು, ಕೆಲವು ಸಿಬ್ಬಂದಿಗಳು ಬೆಳಿಗ್ಗೆ ಏರಿಸಿ ಹಾಗೆ ಬಿಡುತ್ತಾರಂತೆ. ಹನುಮಾಪುರ ಗ್ರಾ.ಪಂ.ದಲ್ಲಿಯೂ ಶನಿವಾರ ರಾತ್ರಿ ಎಂಟು ಗಂಟೆಯಾದರೂ, ರಾಷ್ಟ್ರಧ್ವಜವನ್ನು ಇಳಿಸಿಲ್ಲ. ಈ ಬಗ್ಗೆ ಗ್ರಾಮಸ್ಥರು ಮೊಬೈಲ್‌ ನಲ್ಲಿ...

Post
ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..!

ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..!

ಮುಂಡಗೋಡಿನಲ್ಲಿ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ..! ಮುಂಡಗೋಡ: ಪಟ್ಟಣದ ಲೊಯೊಲಾ ವಿಕಾಸ ಕೇಂದ್ರದ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ ಬಂಜಾರಾ ಕಲಾ ಪ್ರತಿಭಾನ್ವೇಷಣಾ ಕಾರ್ಯಕ್ರಮ‌ ನಡೆಯಿತು‌‌. ಕಾರ್ಯಕ್ರಮದಲ್ಲಿ ಮುಂಡಗೋಡ ಮತ್ತು ಹಳಿಯಾಳ ಭಾಗದ ಬಂಜಾರಾ ಕಲಾವಿದರು ತಮ್ಮ ಕಲೆ ಪ್ರದರ್ಶಿಸಿದ್ರು. ವಿಶೇಷ ಜನಪದ ಗೀತೆಗಳನ್ನು ವಾದ್ಯ ಸಮೇತ ಹಾಡಿ ರಂಜಿಸಿದ್ರು, ಪಾರಂಪರಿಕ ಸೊಗಡಿನ ಗೀತ ನೃತ್ಯಗಳನ್ನು ಪ್ರದರ್ಶಿಸಿದ್ರು. ಈ ವೇಳೆ ತೀರ್ಪುಗಾರರಾಗಿ ಖ್ಯಾತ ಬಂಜಾರಾ ಕಲಾವಿದರು ಆಗಮಿಸಿದ್ದರು‌. ಸ್ಥಳೀಯ ಬಂಜಾರಾ ಸಮಾಜದ ಮುಖಂಡರುಗಳು, ಕಲಾಭಿಮಾನಿಗಳು ಹಾಜರಿದ್ದರು.

error: Content is protected !!