ಯಲ್ಲಾಪುರ: ಕನ್ನಡ ಚಿತ್ರ ನಟ ಚೇತನ್, ಸಾಮಾಜಿಕ ಜಾಲತಾಣಗಳಲ್ಲಿ ಬ್ರಾಹ್ಮಣರ ವಿರುದ್ಧವಾಗಿ ಅವಹೇಳನಕಾರಿಯಾಗಿ, ಪ್ರಚೋದನಕಾರಿಯಾಗಿ ಮಾತಾಡಿರುವುದು ತೀವ್ರ ಖಂಡನಾರ್ಹ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರೋ ಸಚಿವ್ರು, ಚೇತನ್ ಹೇಳಿಕೆ ಗಮನಕ್ಕೆ ಬಂದಿದ್ದು. ಮೊದಲಿಗೆ, ಆತನ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ. ಇನ್ನು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಪ್ರತಿಯೊಂದು ಧರ್ಮ, ಜಾತಿಗಳಿಗೆ ಸ್ಥಾನಮಾನ ನೀಡಿದ್ದಾರೆ. ಈ ವ್ಯಕ್ತಿಯ ಹೇಳಿಕೆ ಸಂವಿಧಾನಕ್ಕೆ ವಿರೋಧವಾದುದು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವಂತಹದು ಅಂತಾ ಹೆಬ್ಬಾರ್ ಕಿಡಿ ಕಾರಿದ್ದಾರೆ. ಸಮಾಜದಲ್ಲಿ ತಾನು ಗುರುತಿಸಿಕೊಳ್ಳಬೇಕು ಅಂತಲೋ, ಗಂಜೀ ಕಾಸಿನ ಆಸೆಗೋ ಹೇಳಿಕೆ ಕೊಡೋ ಇಂತಹ ಸಮಾಜ ಕಂಟಕರನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆ ಅಂತಾ ಇದೇ ವೇಳೆ ಹೆಬ್ಬಾರ್ ತಿಳಿಸಿದ್ದಾರೆ.
Top Stories
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಹಾರೈಕೆ ಫಲಿಸಲಿಲ್ಲ, ಬದುಕಿ ಬರಲಿಲ್ಲ ಆ ಪುಟ್ಟ ಕಂದಮ್ಮ..! ಮತ್ತದೇ ಪ್ರಶ್ನೆ..! ಯಾರು ಹೊಣೆ..???
ಮುಂಡಗೋಡ: ನಿನ್ನೆ ರಾತ್ರಿಯಷ್ಟೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ತಾಲೂಕಿನ ಬಾಲಕಿಯೊಬ್ಬಳ ಸಾವು ಬದುಕಿನ ಮದ್ಯೆ ಹೋರಾಡ್ತಿರೋ ಘಟನೆಯ ಸಂಪೂರ್ಣ ಸುದ್ದಿ ನಿಮ್ಮ ಮುಂದಿಟ್ಟಿತ್ತು. ಬಹುಶಃ ತಾವೇಲ್ಲರೂ ಆ ಪುಟ್ಟ ಕಂದಮ್ಮ ಬದುಕಿ ಬರಲಿ ಅಂತಾ ಅದೇಷ್ಟು ಪ್ರಾರ್ಥಿಸಿದ್ದಿರೋ ಗೊತ್ತಿಲ್ಲ. ಆದ್ರೆ ಆ ಎಲ್ಲ ಹಾರೈಕೆಗಳು ಫಲಿಸಲೇ ಇಲ್ಲ. ಹುಬ್ಬಳ್ಳಿಯ ಕಿಮ್ಸ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಕಂದಮ್ಮ ಬದುಕಿ ಬರಲೇ ಇಲ್ಲ. ನಿನ್ನೆ ತಡರಾತ್ರಿ ಕಂದಮ್ಮನ ಪ್ರಾಣ ಪಕ್ಷಿ ಹಾರಿಹೋಗಿದೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮದ ಐದೂವರೇ ವರ್ಷದ ಬಾಲಕಿ ದೀಕ್ಷಾ ಲಕ್ಷ್ಮಣ ಕೋಣನಕೇರಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾಳೆ. ಆಗಿದ್ದಾದ್ರೂ ಏನು..? ಕಳೆದ ಸೋಮವಾರ ಅಂದ್ರೆ, ಜೂನ್ 7 ರಂದು ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ಜ್ಯೂಸ್ ಅಂತಾ ಅರಿಯದೇ ಸೇವಿಸಿದ್ದಳು ಬಾಲಕಿ. ಹೀಗಾಗಿ, ಹಡೆದ ತಂದೆ ತಾಯಿ ಹಾಗೂ ಕುಟುಂಬಸ್ಥರು, ಆ ಬಾಲಕಿಯನ್ನು ಉಳಿಸಿಕೊಳ್ಳಲು ಪಡಬಾರದ ಕಷ್ಟ ಪಟ್ಟಿದ್ದರು. ಆದ್ರೆ...
ಮುಂಡಗೋಡಿನಲ್ಲಿ ಸರ್ಕಾರಿ ವೈದ್ಯನ ಖಾಸಗಿ ದರ್ಬಾರ್..? ಆಗಿರೋ ಅವಾಂತರಕ್ಕೆ ಹೊಣೆ ಯಾರು..?
ಮುಂಡಗೋಡ: ವೈದ್ಯ ನಾರಾಯಣೋ ಹರಿಃ ಅಂತಾರೆ, ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸದ ನಡುವೆ ತಮ್ಮ ಜೀವ ಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಸೋಂಕಿತರ ಸೇವೆಯಲ್ಲಿ ಬಹುತೇಕ ವೈದ್ಯರುಗಳು ನಿರತರಾಗಿದ್ದಾರೆ. ಇನ್ನು ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಹಾಗೂ ಮತ್ತವರ ತಂಡ, ತಾಲೂಕಿನಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ಇನ್ನಿಲ್ಲದ ಪರಿಶ್ರಮ ಪಟ್ಟಿದ್ದಾರೆ, ಪಡುತ್ತಿದ್ದಾರೆ.. ಮಹಾಮಾರಿಯನ್ನು ಕಟ್ಟಿ ಹಾಕುವಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. ಆ ಕಾರಣಕ್ಕಾಗಿ ಪಬ್ಲಿಕ್ ಫಸ್ಟ್ ನ್ಯೂಸ್ ಟೀಂ ವತಿಯಿಂದ ತಾಲೂಕಿನ ವೈದ್ಯ ದೇವರುಗಳಿಗೆ ಹ್ಯಾಟ್ಸ್ ಅಪ್.. ಆದ್ರೆ ಈ ನಡುವೆಯೇ ತಾಲೂಕಿನಲ್ಲೊಂದು ಯಡವಟ್ಟಿನ ಘಟನೆ ನಡೆದಿದೆ. ಅದನ್ನ ನಾವಿಲ್ಲಿ ಹೇಳಲೇ ಬೇಕಿದೆ. ಯಾಕಂದ್ರೆ ಖುದ್ದು ನೊಂದವರೇ ಪಬ್ಲಿಕ್ ಫಸ್ಟ್ ನ್ಯೂಸ್ ಎದುರು ನೋವು ತೋಡಿಕೊಂಡಿದ್ದಾರೆ. ಹಾಗಾದ್ರೆ ಏನದು..? ಅವನೊಬ್ಬ ಗುತ್ತಿಗೆ ವೈದ್ಯ..! ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸ್ತಿರೋ ವೈದ್ಯರೊಬ್ಬರು ಯಡವಟ್ಟು ಮಾಡಿ, ಒಂದು ಬಡ ಕುಟುಂಬ ಕಣ್ಣೀರಲ್ಲಿ ಕೈದೊಳೆಯುವಂತೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ....
ಮುಂಡಗೋಡ: ತಾಲೂಕಿನಲ್ಲಿಂದು 21 ಪಾಸಿಟಿವ್ ದೃಢ, 206 ಸಕ್ರೀಯ ಕೇಸ್..!
ಮುಂಡಗೋಡ-ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ತಾಲೂಕಿನಲ್ಲಿ ಒಟ್ಟೂ 206 ಸಕ್ರೀಯ ಪ್ರಕರಣಗಳಾಂದಂತಾಗಿದೆ. ಇನ್ನು 62 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 164 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ********************** ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ..
ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಪೊಲೀಸರ ವಶಕ್ಕೆ..!
ಭಟ್ಕಳ: ಭಟ್ಕಳದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸರಿಂದ ಮಹಿಳೆ ಬಂಧನವಾಗಿದೆ. ಖತೀಜಾ ಮೆಹರಿನ್ ಬಂಧಿತ ಪಾಕಿಸ್ತಾನಿ ಮಹಿಳೆಯಾಗಿದ್ದು ಭಟ್ಕಳ ಮೂಲದ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬುವನನ್ನು 8 ವರ್ಷದ ಹಿಂದೆ ದುಬೈನಲ್ಲಿವಿವಾಹವಾಗಿದ್ದ ಮಹಿಳೆ, 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆನಂತರ, 2015ರಲ್ಲಿ ಕಳ್ಳಮಾರ್ಗದ ಮೂಲಕ ಯಾವುದೇ ದಾಖಲೆ ನೀಡದೇ ಅಕ್ರಮವಾಗಿ ಭಾರತದೊಳಕ್ಕೆ ಪ್ರವೇಶ ಮಾಡಿದ್ದಳು. ಭಟ್ಕಳದ ನವಾಯತ ಕಾಲೋನಿಯಲ್ಲಿ 2014 ರಿಂದ ಅಂದರೆ, ಕಳೆದ 8 ವರ್ಷಗಳಿಂದ 3 ಮಕ್ಕಳೊಂದಿಗೆ ವಾಸ್ತವ್ಯ ಹೂಡಿದ್ದಳು. ಇನ್ನು, ಈ ಪಾಕಿಸ್ತಾನಿ ಮಹಿಳೆ ಸುಳ್ಳು ದಾಖಲೆ ನೀಡಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿದ್ದಾಳೆ. ಹೀಗಾಗಿ, ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಘಟನೆ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದೇನು..? ವೀಕ್ಷಿಸಲು...
ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿದ್ದ ಇಂದೂರಿನ ಬಡ ಕುಟುಂಬಕ್ಕೆ ಗ್ರಾಪಂ. ವತಿಯಿಂದ 5 ಸಾವಿರ ರೂ. ಧನಸಹಾಯ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆಗೆ ಸಂಬಂಧಿಸಿದಂತೆ, ಸಂಕಷ್ಟಕ್ಕೊಳಗಾಗಿರೋ ಕುಟುಂಬಕ್ಕೆ ಇಂದೂರು ಗ್ರಾಮ ಪಂಚಾಯತಿ ವತಿಯಿಂದ 5 ಸಾವಿರ ರೂ. ಧನಸಹಾಯ ಮಾಡಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸಂತ್ರಸ್ತ ಕುಟುಂಬಕ್ಕೆ ಖುದ್ದಾಗಿ ತೆರಳಿ ಹಣ ನೀಡಿ, ಸಾಂತ್ವನ ಹೇಳಿದ್ರು. ಅಲ್ದೆ, ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸಲು ಹಾಗೂ ಗ್ರಾಮ ಪಂಚಾಯತಿಯಿಂದ ಇನ್ನುಳಿದ ಸೌಲಭ್ಯಗಳನ್ನು ನೀಡುವುದಾಗಿ ಈ ವೇಳೆ ಸಾಂಘಿಕ ಭರವಸೆ ನೀಡಲಾಯಿತು. ******************** ಬೆಂಕಿ ಕೆನ್ನಾಲಿಗೆಗೆ ಇಡೀ ಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ನೋಡಲು, ಇಲ್ಲಿ ಕ್ಲಿಕ್ ಮಾಡಿ.
ಉದಾಸಿ ಅಂತಿಮ ದರ್ಶನದ ವೇಳೆ ಮೊಬೈಲ್ ಕಳ್ಳರ ಕೈಚಳಕ: ಸಿಕ್ಕಿಬಿದ್ದು ಒದೆ ತಿಂದ ಯುವಕ.!
ಹಾನಗಲ್: ಬಿಜೆಪಿ ಹಿರಿಯ ಶಾಸಕ ಸಿ.ಎಂ. ಉದಾಸಿ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬಂದಿದೆ. ಈ ವೇಳೆ ಜೇಬುಗಳ್ಳರು ಕೈ ಚಳಕ ತೋರಿದ್ದಾರೆ. ಎಷ್ಟೊ ಜನರ ಮೊಬೈಲ್ ಎಗರಿಸಿದ್ದಾರೆ. ಇನ್ನು ಹೀಗೆ ಜೇಬಿಗೆ ಕತ್ತರಿ ಹಾಕುತ್ತಿರುವಾಗಲೇ, ರೆಡ್ ಹ್ಯಾಂಡ್ ಆಗಿ ಓರ್ವ ಖತರ್ನಾಕ ಜೇಬುಗಳ್ಳ ತಗಲಾಕ್ಕೊಂಡಿದ್ದ. ಜೇಬು ಕತ್ತರಿಸುವಾಗಲೆ ಕಳ್ಳನನ್ನು ಹಿಡಿದು ಸಾರ್ವಜನಿಕರು ಛಳಿ ಬಿಡಿಸಿದ್ದಾರೆ. ನಂತರ ಪೊಲೀಸರಿಗೆ ಕಳ್ಳನನ್ನು ಒಪ್ಪಿಸಿದ್ದಾರೆ. ಹಾನಗಲ್ ಪೊಲೀಸ್ರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಜನಸಂದಣಿಯಲ್ಲಿ ಜೇಬಿಗೆ ಕತ್ತರಿ ಹಾಕಿಸಿಕೊಂಡವರ ಗೋಳು ಯಾರಿಗೂ ಬೇಡ. ಕೆಲವೊಬ್ರು ಹಣ ಕಳೆದುಕೊಂಡಿದ್ರೆ, ಇನ್ನೂ ಕೆವ್ರು ಮೊಬೈಲ್ ಕಳೆದುಕೊಂಡು ಬೆಪ್ಪು ಮೋರೆ ಹಾಕಿಕೊಂಡು ಮನೆ ಕಡೆ ನಡೆದಿದ್ದಾರೆ. ******************* ಪಬ್ಲಿಕ್ ಫಸ್ಟ್ ನ್ಯೂಸ್ ನ ಯೂಟ್ಯೂಬ್ ಸುದ್ದಿ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.. SUBSCRIBE ಆಗಿ ಬೆಂಬಲಿಸಿ..
ಸಿ.ಎಂ.ಉದಾಸಿ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಅಪಾರ ಅಭಿಮಾನಿಗಳು..!
ಹಾನಗಲ್: ಮಾಜಿ ಸಚಿವ, ಬಿಜೆಪಿ ಹಿರಿಯವಹಾಲಿ ಶಾಸಕ ಸಿ.ಎಂ.ಉದಾಸಿ ನಿಧನರಾದ ಹಿನ್ನೆಲೆ ಅವ್ರ ಪಾರ್ಥೀವ ಶರೀರದ ದರ್ಶನಕ್ಕೆ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಹಾನಗಲ್ ಕುಮಾರೇಶ್ವರ ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅಪಾರ ಅಭಿಮಾನಿಗಳು ತನ್ನ ನೆಚ್ಚಿನ ನಾಯಕನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹೂಮಾಲೆ ಹಿಡಿದು ಸಾಲು ಸಾಲಾಗಿ ಬರುತ್ತಿರೋ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಸಿ.ಎಂ.ಉದಾಸಿ ಪುತ್ರ ಸಂಸದ ಶಿವಕುಮಾರ್ ಉದಾಸಿ, ತಂದೆಯ ಪಾರ್ಥೀವ ಶರೀರದ ಪಕ್ಕದಲ್ಲೇ ನಿಂತು ಕಂಬನಿ ಮಿಡಿಯುತ್ತಿದ್ದಾರೆ.
ಛತ್ರಪತಿ ಶಿವಾಜಿ ಬ್ಯಾಂಕ್ ವತಿಯಿಂದ ವೈದ್ಯಕೀಯ ಸಲಕರಣೆ ಕೊಡುಗೆ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಆರೋಗ್ಯ ವಿಸ್ತರಣಾ ಕೇಂದ್ರಕ್ಕೆ ಮುಂಡಗೋಡಿನ ಛತ್ರಪತಿ ಶಿವಾಜಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವತಿಯಿಂದ ಇಂದು ಬಿಪಿ ಮಷೀನ್, ಶುಗರ್ ಮಷೀನ್ ಪಲ್ಸ ಆಕ್ಸಿ ಮೀಟರ್ ಗಳನ್ನು ಕೊಡುಗೆ ನೀಡಲಾಯಿತು. ಗ್ರಾಮೀಣ ಭಾಗದ ಜನರಿಗೆ ಸಹಕಾರ ವಾಗಲಿ ಅಂತಾ ವೈದ್ಯಕೀಯ ಸಲಕರಣೆ ನೀಡಿರೋ ಸೊಸೈಟಿ ಆಡಳಿತ ಮಂಡಳಿ, ನಂದಿಕಟ್ಟಾ ಗ್ರಾಮ ಪಂಚಾಯತ ಮೂಲಕ ಹಸ್ತಾಂತರಿಸಿದ್ರು. ಬೆಳೆಸಾಲಕ್ಕಾಗಿ ರೈತರ ಪರದಾಟ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.. https://youtu.be/b6XTNoYGJdM
ಹಾವೇರಿಗೆ ಆಗಮಿಸಿದ ಉದಾಸಿ ಪಾರ್ಥೀವ ಶರೀರ, ಅಭಿಮಾನಿಗಳಿಂದ ಅಂತಿಮ ದರ್ಶನ..!
ಹಾವೇರಿ: ಮಾಜಿ ಸಚಿವ ಹಾಗೂ ಹಾಲಿ ಶಾಸಕ ಸಿ. ಎಂ. ಉದಾಸಿ ನಿಧನ ಹಿನ್ನಲೆ, ಹಾವೇರಿ ನಗರಕ್ಕೆ ಪಾರ್ಥೀವ ಶರೀರ ಆಗಮಿಸಿದೆ. ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಸರ್ಕಲ್ ಬಳಿ ಶಾಸಕರು ಹಾಗೂ ಕಾರ್ಯಕರ್ತರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ್ರು. ಹಾವೇರಿಯಲ್ಲಿ ನೂರಾರು ಆಭಿಮಾನಿಗಳ ಅಂತಿಮ ದರ್ಶನದ ಬಳಿಕ ಹಾನಗಲ್ ಕಡೆಗೆ ಪಾರ್ಥೀವ ಶರೀರ ಸಾಗಿಸಲಾಗುತ್ತಿದೆ.