ಬೆಂಕಿಯಿಂದ ಮನೆ ಸುಟ್ಟು ಸಂಕಷ್ಟದಲ್ಲಿದ್ದ ಇಂದೂರಿನ ಬಡ ಕುಟುಂಬಕ್ಕೆ ಗ್ರಾಪಂ. ವತಿಯಿಂದ 5 ಸಾವಿರ ರೂ. ಧನಸಹಾಯ..!

ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ಸೋಮವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿ‌ಂದ ಮನೆಗೆ ಬೆಂಕಿ ತಗುಲಿ ಮನೆ ಸುಟ್ಟ ಕರಕಲಾದ ಘಟನೆಗೆ ಸಂಬಂಧಿಸಿದಂತೆ, ಸಂಕಷ್ಟಕ್ಕೊಳಗಾಗಿರೋ ಕುಟುಂಬಕ್ಕೆ ಇಂದೂರು ಗ್ರಾಮ ಪಂಚಾಯತಿ ವತಿಯಿಂದ 5 ಸಾವಿರ ರೂ. ಧನಸಹಾಯ ಮಾಡಲಾಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿದಂತೆ ಸದಸ್ಯರು ಸಂತ್ರಸ್ತ ಕುಟುಂಬಕ್ಕೆ ಖುದ್ದಾಗಿ ತೆರಳಿ ಹಣ ನೀಡಿ, ಸಾಂತ್ವನ ಹೇಳಿದ್ರು. ಅಲ್ದೆ, ಘಟನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸಲು ಹಾಗೂ ಗ್ರಾಮ ಪಂಚಾಯತಿಯಿಂದ ಇನ್ನುಳಿದ ಸೌಲಭ್ಯಗಳನ್ನು ನೀಡುವುದಾಗಿ ಈ ವೇಳೆ ಸಾಂಘಿಕ ಭರವಸೆ ನೀಡಲಾಯಿತು.

********************

ಬೆಂಕಿ ಕೆನ್ನಾಲಿಗೆಗೆ ಇಡೀ ಕುಟುಂಬವೇ ಬೀದಿಗೆ.. ಪಬ್ಲಿಕ್ ಫಸ್ಟ್ ನ್ಯೂಸ್ ಪ್ರಮುಖ ಸುದ್ದಿ ನೋಡಲು, ಇಲ್ಲಿ ಕ್ಲಿಕ್ ಮಾಡಿ.

error: Content is protected !!