ಹಾರೈಕೆ ಫಲಿಸಲಿಲ್ಲ, ಬದುಕಿ ಬರಲಿಲ್ಲ ಆ ಪುಟ್ಟ ಕಂದಮ್ಮ..! ಮತ್ತದೇ ಪ್ರಶ್ನೆ..!  ಯಾರು ಹೊಣೆ..???

ಮುಂಡಗೋಡ: ನಿನ್ನೆ ರಾತ್ರಿಯಷ್ಟೇ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ತಾಲೂಕಿನ ಬಾಲಕಿಯೊಬ್ಬಳ ಸಾವು ಬದುಕಿನ ಮದ್ಯೆ ಹೋರಾಡ್ತಿರೋ ಘಟನೆಯ ಸಂಪೂರ್ಣ ಸುದ್ದಿ ನಿಮ್ಮ ಮುಂದಿಟ್ಟಿತ್ತು.

ಬಹುಶಃ ತಾವೇಲ್ಲರೂ ಆ ಪುಟ್ಟ ಕಂದಮ್ಮ ಬದುಕಿ ಬರಲಿ ಅಂತಾ ಅದೇಷ್ಟು ಪ್ರಾರ್ಥಿಸಿದ್ದಿರೋ ಗೊತ್ತಿಲ್ಲ. ಆದ್ರೆ ಆ ಎಲ್ಲ ಹಾರೈಕೆಗಳು ಫಲಿಸಲೇ ಇಲ್ಲ. ಹುಬ್ಬಳ್ಳಿಯ ಕಿಮ್ಸ್ ನ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಕಂದಮ್ಮ ಬದುಕಿ ಬರಲೇ ಇಲ್ಲ. ನಿನ್ನೆ ತಡರಾತ್ರಿ ಕಂದಮ್ಮನ ಪ್ರಾಣ ಪಕ್ಷಿ ಹಾರಿಹೋಗಿದೆ. ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ ಗ್ರಾಮದ ಐದೂವರೇ ವರ್ಷದ ಬಾಲಕಿ ದೀಕ್ಷಾ ಲಕ್ಷ್ಮಣ ಕೋಣನಕೇರಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದಾಳೆ.

ಆಗಿದ್ದಾದ್ರೂ ಏನು..?

ಕಳೆದ ಸೋಮವಾರ ಅಂದ್ರೆ, ಜೂನ್ 7 ರಂದು ಮನೆಯಲ್ಲಿಟ್ಟಿದ್ದ ಕಳೆನಾಶಕವನ್ನು ಜ್ಯೂಸ್ ಅಂತಾ ಅರಿಯದೇ ಸೇವಿಸಿದ್ದಳು ಬಾಲಕಿ. ಹೀಗಾಗಿ, ಹಡೆದ ತಂದೆ ತಾಯಿ ಹಾಗೂ ಕುಟುಂಬಸ್ಥರು, ಆ ಬಾಲಕಿಯನ್ನು ಉಳಿಸಿಕೊಳ್ಳಲು ಪಡಬಾರದ ಕಷ್ಟ ಪಟ್ಟಿದ್ದರು.

ಆದ್ರೆ ಸತತ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿದರೂ ಬಾಲಕಿಯನ್ನು ಬದುಕಿಸಿಕೊಳ್ಳಲು ಆಗಲೇ ಇಲ್ಲ.

ಬಹುಶಃ ಘಟನೆ ನಡೆದ ತಕ್ಷಣವೇ ಸೂಕ್ತ ಚಿಕಿತ್ಸೆ ದೊರಕಿದ್ದರೆ ಬಾಲಕಿ ಬದುಕಿ ಬರುತ್ತಿದ್ದಳೋ ಏನೋ..? ಆದ್ರೆ ಅದು, ಹಾಗಾಗಲೇ ಇಲ್ಲ.

ಈ ಕಾರಣಕ್ಕಾಗೇ ಮತ್ತದೇ ಪ್ರಶ್ನೆ, ಮತ್ತೆ ಮತ್ತೆ ಕೇಳಬೆಕಾಗಿದೆ..

ಹಾಗಾದ್ರೆ ಇದಕ್ಕೆಲ್ಲ ಯಾರು ಹೊಣೆ..?

ಮತ್ತೆ ಹುಟ್ಟಿ ಬಾ ಕಂದಾ..

error: Content is protected !!