ಮುಂಡಗೋಡ: ತಾಲೂಕಿನಲ್ಲಿ ಪದ್ಮಾಂಬಾ ಪುಟ್ಟಣ್ಣ ಅಂತಾನೇ ಖ್ಯಾತಿ ಪಡೆದಿದ್ದ ವೃಷಭರಾಜ್ ಅಂಗಡಿ(54) ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪುಟ್ಟಣ್ಣ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಕೊನೆಯುಸಿರೆಳೆದಿದ್ದಾರೆ. ಮುಂಡಗೋಡಿನ ಹುಬ್ಬಳ್ಳಿ ರಸ್ತೆಯಲ್ಲಿರೋ ಪದ್ಮಾಂಬಾ ಬುಕ್ ಸ್ಟಾಲ್ ಮಾಲೀಕರಾಗಿದ್ದ ಪುಟ್ಟಣ್ಣ, ತಾಲೂಕಾ ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು. ಮುಂಡಗೋಡಿನ ಪ್ರತಿಷ್ಟಿತ ನವಚೇತನ ಯುವಕ ಮಂಡಳದಲ್ಲಿ ಸಕ್ರೀಯರಾಗಿದ್ದ ಪುಟ್ಟಣ್ಣ ಹಲವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ಇನ್ನು ಪುಟ್ಟಣ್ಣ ಅಂಗಡಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
Top Stories
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
ಕೌಶಲ್ಯಾಧಾರಿತ ಉಚಿತ ತರಬೇತಿಗೆ ಅರ್ಜಿ ಆಹ್ವಾನ..!
ಗೃಹ ಬಳಕೆಯ ಅನಿಲ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯಿರಿ: ಡಿಸಿ ಲಕ್ಷ್ಮೀ ಪ್ರಿಯ…!
ಉಸ್ತುವಾರಿ ಸಚಿವ ಮಂಕಾಳು ವೈದ್ಯರಿಂದ ಮುರುಡೇಶ್ವರ ಗೃಹಕಚೇರಿಯಲ್ಲಿ ಜನತಾ ದರ್ಶನ..!
ಬಿಜೆಪಿ ಮುಖಂಡ, ಶಾಸಕ, ಜನಾರ್ದನರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷ ಪ್ರಕಟ..! ಓಬಳಾಪುರಂ ಮೈನಿಂಗ್ ಕೇಸಲ್ಲಿ ರೆಡ್ಡಿ ಅಪರಾಧಿ..!
ಮೇ. 7 ಮಾಕ್ ಡ್ರಿಲ್, ಅಷ್ಟಕ್ಕೂ ಈ ಮಾಕ್ ಡ್ರಿಲ್ ಅಂದರೇನು..? ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಪರಿಸರ ರಕ್ಷಣೆಗೆ ವಿದ್ಯಾರ್ಥಿಗಳೇ ಯೋಧರು : ಉಪ ರಾಷ್ಟ್ರಪತಿ ಜಗದೀಪ್ ಧನಕರ್
ಶಿರಸಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ತಾಯಿ ಹೆಸ್ರಲ್ಲಿ ಗಿಡ ನೆಟ್ಟರು..!
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ಠಾಣೆಗೆ ವಿನೋದ್ ರೆಡ್ಡಿ ನೂತನ ಕ್ರೈಂ PSI, ನಿರೀಕ್ಷೆಗಳು ಒಂದಾ, ಎರಡಾ..?
ಬಿಜೆಪಿಗೆ ಪಾಕಿಸ್ತಾನದ ಹೆಸ್ರು ಹೇಳದಿದ್ರೆ ರಾಜಕಾರಣ ಮಾಡಲು ಆಗಲ್ಲ: ಬಿ.ಕೆ.ಹರಿಪ್ರಸಾದ್ ಟೀಕೆ..!
ಕಾರವಾರ:ಬಿಜೆಪಿಗೆ ಪಾಕಿಸ್ತಾನದ ಹೆಸರು ಹೇಳದಿದ್ದರೆ ಒಂದು ದಿನವೂ ರಾಜಕಾರಣ ಮಾಡಲಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ. ಕೆ. ಹರಿಪ್ರಸಾದ್ ಟೀಕಿಸಿದ್ದಾರೆ. ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿಯ ಆರೋಪಗಳಿಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ನ ಪ್ರಮುಖರಾದ ಮಾಜಿ ಸಿಎಂ ಸಿದ್ದರಾಮಯ್ಯ, ದಿಗ್ವಿಜಯ ಸಿಂಗ್, ಜಮೀರ್ ಇವರು ಯಾರೂ ಕೂಡ ಪಾಕಿಸ್ತಾನಕ್ಕೆ ಹೋಗಿಲ್ಲ. ಅಲ್ಲದೇ ಅಲ್ಲಿ ಹೋಗೋ ಮನಸ್ಸೂ ಕೂಡ ಅವರಿಗಿಲ್ಲ. ಆದರೆ ಪಾಕಿಸ್ತಾನದ ಆಮಂತ್ರಣವೇ ಇಲ್ಲದೇ ಅಲ್ಲಿ ಹೋಗಿ ಬಿರಿಯಾನಿ ತಿಂದು ಬಂದವರು ಪ್ರಧಾನಿ ಮೋದಿ. ಇದಕ್ಕಿಂತ ಹೆಚ್ಚಿನ ಅವಮಾನ ದೇಶಕ್ಕಿಲ್ಲ ಎಂದರು. ಬಿಜೆಪಿಯವರು ಮನಮೋಹನ್ ಸಿಂಗ್ ಅವರನ್ನು ದುರ್ಬಲ ಪ್ರಧಾನಿ ಎಂದರು. ಆದರೆ ಎಲ್ಲಿಯವರೆಗೆ ಉಗ್ರವಾದ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲ ಎಂದು ಖಡಾ ಖಂಡಿತವಾಗಿ ಹೇಳಿದವರು ಮನಮೋಹನ್ ಸಿಂಗ್. ಆದರೆ 56 ಇಂಚಿನ ಎದೆ ಇರುವವರು ಮುಷರಫ್ ಮೊಮ್ಮಗಳ ಜನ್ಮ ದಿನಾಚರಣೆಗೆ ಹೋಗಿದ್ದರು ಎಂದು ಟೀಕಿಸಿದರು. ಇನ್ನು ಇದುವರೆಗೆ...
ಹೆಂಡ್ತಿ ಬೇಕು ಹೆಂಡ್ತಿ ಅಂತಾ ಟವರ್ ಏರಿದ ಯುವಕ..! ಕೆಳಗಿಳಿಸುವಲ್ಲಿ ಪೊಲೀಸರು ಸುಸ್ತೋ ಸುಸ್ತು..!!
ಹೆಂಡ್ತಿ ಬೇಕು ಹೆಂಡ್ತಿ ಅಂತಾ ಯುವಕನೋರ್ವ ಟವರ್ ಏರಿ ಕುಳಿತ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿ (23) ಎಂಬುವ ಯುವಕನೇ ಬೇಗ ಮದುವೆ ಮಾಡಿ ಅಂತ ಟವರ್ ಏರಿ ಕುಳಿತಿದ್ದವ. ಅಂದಹಾಗೆ ಈತನಿಗೆ ಈಗ ಹುಡುಗಿ ಫಿಕ್ಸ್ ಆಗಿದೆ. ಆದ್ರೆ ಲಾಕ್ ಡೌನ್ ಹಿನ್ನೆಲೆ ಮನೆಯಲ್ಲಿ ಬೇಗ ಮದುವೆ ಮಾಡಿಲ್ಲ. ಹೀಗಾಗಿ ತಾಳ್ಮೆ ಕಳೆದುಕೊಂಡ ಯುವಕ ನಂಗೆ ಈಗಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಮನೆಯವರ ವಿರುದ್ಧ ಆಕ್ರೋಶಗೊಂಡಿದ್ದ. ಹೀಗಾಗಿ ಟವರ್ ಕಂಬದ ಮೇಲೆ ಹತ್ತಿದ್ದಾನೆ. ಅಲ್ಲಿಂದಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಕೂಗಿ ಕೂಗಿ ಹೆಳಿದ್ದಾನೆ. ಈಗಾಗಲೇ ಮದುವೆಗೆಂದು ಹುಡುಗಿ ಫೀಕ್ಸ್ ಮಾಡಿ ಮಾತುಕತೆ ಮಾಡಿರೋ ಪೋಷಕರು, ಇಬ್ಬರು ಗಂಡು ಮಕ್ಕಳಿರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುನ ಮದುವೆ ಆಗಲಿ ಆಮೇಲೆ ನಿನ್ನ ಮದುವೆ ಮಾಡ್ತಿವಿ ಅಂದಿದ್ರಂತೆ, ಆದ್ರೆ ಹಾಗೆ ಹೇಳಿದ್ದ ಕಾರಣ ಟವರ್ ಏರಿರೋ ಸುಪುತ್ರನಿಗೆ ಈಗ ಮದುವೆ ಮಾಡಲು ರೆಡಿಯಾಗಿದ್ದಾರಂತೆ...
ಮುಂಡಗೋಡ ತಾಲೂಕಿನಲ್ಲಿ ಅರಣ್ಯಾಧಿಕಾರಿಗಳ ಕಣ್ಗಾವಲಲ್ಲೇ ನಡೆಯತ್ತಂತೆ ಅರಣ್ಯ ಲೂಟಿ: ಪರಿಸರ ಪ್ರೇಮಿಯೊಬ್ಬರ ಏಕಾಂಗಿ ಧರಣಿ..!
ಮುಂಡಗೋಡ: ತಾಲೂಕಿನ ಅರಣ್ಯ ಲೂಟಿ ಆಗ್ತಿದೆ. ಔಷಧಿ ಸಸ್ಯಗಳೂ ಸೇರಿ ಇಲ್ಲಿನ ಅರಣ್ಯದಲ್ಲಿ ಹೇರಳವಾಗಿರೋ ಅರಣ್ಯ ಸಂಪತ್ತು ಕಳ್ಳರ ಪಾಲಾಗ್ತಿದೆ. ಹೀಗಿದ್ರೂ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ಕುರುಡು ತೋರಿಸ್ತಿದಾರೆ ಅಂತಾ ಆರೋಪಿಸಿ, ಮುಂಡಗೋಡ ವಲಯ ಅರಣ್ಯಾಧಿಕಾರಿ ಕಚೇರಿ ಎದುರು ಪರಿಸರ ಪ್ರೇಮಿಯೊಬ್ರು ಏಕಾಂಗಿಯಾಗಿ ಧರಣಿಗೆ ಕುಳಿತಿರೋ ಅಪರೂಪದ ಘಟನೆ ನಡೆದಿದೆ. ಕರ್ನಾಟಕ ವೈಲ್ಡ್ ಲೈಫ್ ಗ್ರೂಪ್ ನ ಅಧ್ಯಕ್ಷ ಶಂಶುದ್ಧೀನ್ ಮಾರ್ಕರ್ ಎನ್ನುವವರೇ ಏಕಾಂಗಿಯಾಗಿ ಮುಂಡಗೋಡ ವಲಯ ಅರಣ್ಯಾಧಿಕಾರಿಗಳ ಕಛೇರಿ ಎದುರು ಧರಣಿ ಕುಳಿತಿದ್ದಾರೆ. ಅಂದಹಾಗೆ, ಇವ್ರು ಆರೋಪಿಸೋ ಪ್ರಕಾರ ಗುಂಜಾವತಿ ಸೇರಿದಂತೆ ತಾಲೂಕಿನ ಬಹುತೇಕ ಅರಣ್ಯ ಪ್ರದೇಶದಲ್ಲಿ ಹೇರಳವಾಗಿರೋ ಬೆಲೆ ಬಾಳುವ ಸಾಗವಾನಿ, ಸೀಸಂ ಶ್ರೀಗಂಧ ಸೇರಿ ಹಲವು ಬಗೆಯ ಅರಣ್ಯ ಸಂಪತ್ತು ಕಳ್ಳರ ಪಾಲಾಗುತ್ತಿದೆ. ನಿತ್ಯವೂ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ. ಇದೇಲ್ಲ ಇಲ್ಲಿನ ಅರಣ್ಯ ಅಧಿಕಾರಿಗಳ ಕಣ್ಣೇದುರೇ ನಡೆಯುತ್ತಿದ್ರೂ ಯಾರೂ ಅದನ್ನ ತಡೆಯುವ ಸಾಹಸ ಮಾಡುತ್ತಿಲ್ಲ.. ಇಲ್ಲಿನ ಅರಣ್ಯ ಅಧಿಕಾರಿಗಳೇಲ್ಲ ರಾಜಕೀಯ ಕೈಗೊಂಬೆಯಾಗಿ...
ದ್ವಿತೀಯ PUC ಪರೀಕ್ಷೆ ರದ್ದಾಗಿದ್ದಕ್ಕೆ ಈ ವಿದ್ಯಾರ್ಥಿನಿಯದ್ದು ಎಂಥ ದುರಂತ ನೋಡಿ..!
ಶಿರಸಿ: ಸಾಮಾನ್ಯವಾಗಿ ಪರೀಕ್ಷೆಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅದ್ರಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಹತೆ ಈಗಿನ ಉದ್ಯೋಗ ಕ್ಷೇತ್ರದಲ್ಲಿ ಬೇಸ್ ಅಂತಾನೆ ಪರಿಗಣಿಸಲ್ಪಟ್ಟಿದೆ. ಹಲವಾರು ವಿದ್ಯಾರ್ಥಿಗಳು ಪರೀಕ್ಷೆ ರದ್ದಾದ ಖುಷಿಯಲ್ಲಿರುತ್ತಾರೆ. ಆದ್ರೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಅಂತಾನೆ ಊಟ, ನಿದ್ದೆ ಬಿಟ್ಟು ಓದೋ ಉದಾಹರಣೆಗಳು ಕೂಡ ಇವೆ. ಅದ್ರಲ್ಲೂ ಈ ಕೋವಿಡ್ ಅನ್ನೋದು ಬಂದಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಧೋಗತಿಯಾಗಿದೆ. ಸರ್ಕಾರಗಳೂ ಕೂಡ ಪದೇ ಪದೇ ನಿರ್ಣಯಗಳನ್ನ ಬದಲಿಸುತ್ತಿರೋದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವು ವಿದ್ಯಾರ್ಥಿಗಳು ಸರ್ಕಾರದ ಈಗಿನ ನಿರ್ಧಾರಕ್ಕೆ ತಲೆಕೆಡಿಸಿಕೊಂಡಿದ್ದಂತೂ ಹೌದು. ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆ ಒಂದು ತಾಜಾ ಉದಾಹರಣೆಯಾಗಿದೆ. ಹೌದು.. ದ್ವಿತಿಯ ಪಿಯುಸಿ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊರ್ವಳು ತಾನು ವರ್ಷ ಪೂರ್ತಿ ಓದಿರೋದು ವ್ಯರ್ಥವಾಯಿತು ಅನ್ನೋದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿರಸಿ ತಾಲೂಕಿನ ಸಹಸ್ರಳ್ಳಿಯಲ್ಲಿ ನಡೆದಿದೆ. ತಾಲೂಕಿನ ಯಡಳ್ಳಿ...
ನಾಳೆಯಿಂದ ಪರಿಷ್ಕೃತ ಲಾಕ್ ಡೌನ್ ಜಾರಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏನಿರತ್ತೆ..? ಏನಿರಲ್ಲ..? ಇಲ್ಲಿದೆ ಸಂಪೂರ್ಣ ಡೀಟೇಲ್ಸ್..!
ಕಾರವಾರ: ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಪರಿಷ್ಕ್ರತ ಆದೇಶದನ್ವಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾರ್ಗಸೂಚಿ ಬಿಡುಗಡೆಯಾಗಿದೆ. ನಾಳೆ ಸೋಮವಾರದಿಂದ ಜೂನ್ 21 ರವರೆಗೆ ಸಾರ್ವಜನಿಕರ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಆದೇಶ ಹೊರಡಿಸಿದ್ದಾರೆ. ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಮಾರ್ಗಸೂಚಿಯ ಪಾಲನೆಯೊಂದಿಗೆ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್ಗಳು ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ಆಪ್ಟಿಕಲ್ ಅಂಗಡಿಗಳು, ರಸ್ತೆ ಬದಿ ಮಾರಾಟಗಾರರಿಗೆ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಕಾರರಿಗೆ ಹಾಗೂ ಮದ್ಯದಂಗಡಿ ಮತ್ತು ಮಳಿಗೆಗಳಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅನುಮತಿಸಿದೆ ಎಂದರು. ಎಲ್ಲಾ...
ಮೂಕಪ್ರಾಣಿಗಳ ಮೂಕರೋಧನೆಗೆ ಮಿಡಿದ ಮನಗಳು: ಬಿಡಾಡಿ ದನಗಳಿಗೆ, ಶ್ವಾನಗಳಿಗೆ ಆಹಾರ..!
ಮುಂಡಗೋಡ: ಪಟ್ಟಣದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಮೂಕ ಪ್ರಾಣಿಗಳೂ ಕೂಡ ಇನ್ನಿಲ್ಲದಂತೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಕೋ ಎನ್ನುತ್ತಿರೋ ಪಟ್ಟಣದ ಬೀದಿಗಳಲ್ಲಿ ಕರೆದು ಆಹಾರ ನೀಡುವವರಿಲ್ಲದೇ ಬಿಡಾಡಿ ದನಗಳು ಹಸಿವಿನಿಂದ ನರಳುತ್ತಿವೆ. ಶ್ವಾನಗಳು ತುತ್ತು ಕೂಳಿಗಾಗಿ ಅಲೆದಾಡುತ್ತಿವೆ. ಹೀಗಾಗಿ ಇದನ್ನೇಲ್ಲ ನೋಡಿದ ಕೆಲ ಯುವಕರ ಟೀಂ ಮುಂಡಗೋಡದಲ್ಲಿ ಮೂಕ ಪ್ರಾಣಿಗಳ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ನಿಮಗೆ ನೆನಪಿರಲಿ, ಈಗ್ಗೆ ಕೆಲವೇ ದಿನಗಳ ಹಿಂದೆ ನಿಮ್ಮ ಪಬ್ಲಿಕ್ ಫಸ್ಟ್ ನ್ಯೂಸ್ ಮೂಕಪ್ರಣಿಗಳ ಮೂಕ ರೋಧನದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಪಬ್ಲಿಕ್ ಫಸ್ಟ್ ನ್ಯೂಸ್ ಸುದ್ದಿಗೆ ಸ್ಪಂಧಿಸಿರೋ ನಂದಿಕಟ್ಟಾ ಗ್ರಾಮದ ಮಹಾರಾಜ್ ಹೋರಿ ಮಾಲೀಕರು ಹಾಗೂ ಅಭಿಮಾನಿಗಳು ಮುಂಡಗೋಡ ಪಟ್ಟಣದಲ್ಲಿ ಈ ಕಾರ್ಯ ಮಾಡುತ್ತಿದ್ದಾರೆ. ಶ್ವಾನಗಳಿಗೆ ಹಾಗೂ ಬಿಡಾಡಿ ದನಗಳಿಗೆ ಮೇವು, ಆಹಾರ ನೀಡುವ ಮೂಲಕ ಮಾನವೀಯತೆ ಕಾರ್ಯ ತೋರಿದ್ದಾರೆ.
ತನಗೆ ಕಚ್ಚಿದ ಹಾವಿನ ಜೊತೆ ಆಸ್ಪತ್ರೆಗೆ ಬಂದ ಯುವಕ..! ಬೆಚ್ಚಿಬಿದ್ದ ಜನ..!!
ಬಳ್ಳಾರಿ: ತನಗೆ ಕಚ್ಚಿದ ಹಾವನ್ನ ಹಿಡಿದುಕೊಂಡು ಆಸ್ಪತ್ರೆಗೆ ಬಂದಿದ್ದಾನೆ ಇಲ್ಲೊಬ್ಬ ಬೂಪ. ಅಂದಹಾಗೆ ಇದು ನಡೆದಿರೋದು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಉಪ್ಪಾರಹಳ್ಳಿ ಗ್ರಾಮದಲ್ಲಿ. ಉಪ್ಪಾರಹಳ್ಳಿ ಗ್ರಾಮದ ಕಾಡಪ್ಪ ಎಂಬ ಯುವಕನಿಗೆ ಇಂದು ಬೆಳಿಗ್ಗೆ ಹಾವು ಕಚ್ಚಿದೆ.ನನಗೆ ನೀನು ಕಚ್ಚಿದಿಯಾ, ನಿನ್ನ ಬಿಡೋದಿಲ್ಲ ಅಂತಾ ಹಾವು ಹಿಡಿದು ಆ ಹಾವಿನ ಜೊತೆಗೇ ಆಸ್ಪತ್ರೆಗೆ ಬಂದಿದ್ದಾನೆ. ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಹಾವು ಹಿಡಿದು ತಂದಿದ್ದ ಯುವಕನನ್ನು ನೋಡಿ ಭಯಗೊಂಡಿದ್ದಾರೆ. ಜನ ಹೌಹಾರಿದ್ದಾರೆ.
ಪೆಟ್ರೊಲ್ ದರ ಏರಿಕೆಗೆ ಖಂಡನೆ: ಅಳ್ನಾವರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ..!
ಧಾರವಾಡ: ಕಲಘಟಗಿ ವಿಧಾನಸಭಾ ಕ್ಷೇತ್ರದ ಅಳ್ನಾವರದಲ್ಲಿ ನಾಗರಾಜ ಛಬ್ಬಿ ಬೆಂಬಲಿಗರಿಂದ ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಾಯಿತು. ಪೆಟ್ರೋಲ್ ದರ ಏರಿಕೆ ಕುರಿತು, ಪೆಟ್ರೊಲ್ ಹಾಕಿಸಿಕೊಳ್ಳಲು ಬಂದ ಜನರ ಅಭಿಪ್ರಾಯ ಕೇಳಲಾಯಿತು. ಸಕಷ್ಟು ಜನರು ಪೆಟ್ರೊಲ್ ದರ ಏರಿಕೆಗೆ ಖಂಡನೆ ವ್ಯಕ್ತ ಪಡಿಸಿದ್ರು. ಈ ಸಂಧರ್ಭದಲ್ಲಿ ಪ.ಪಂ.ಸದಸ್ಯ ತಮೀಮ್ ತೆರಗಾಂವ, ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮುಗಳಿ, ಮಾಜಿ ಗ್ರಾ.ಪಂ ಅಧ್ಯಕ್ಷ ರಾಮೂ ಕೋಲೇಕರ, ಅಬೂಬಕರ ನದಾಫ, ಶಾಮಸುಂಧರ ಗಾಯಕವಾಡ, ಶಶಿಕುಮಾರ ಗಾಣಿಗೇರ, ಶಂಕರ ಗಿರಿಯಾಲ, ಸದ್ದಾಂ ಬೋಗೂರ, ಅಶೋಕ ತಿರಕನ್ನವರ, ಇಸ್ಮಾಯಿಲ್ ಪಠಾಣ, ಇಸ್ಮಾಯಿಲ್ ಮಲೀಕಬಾರ, ರಾಹುಲ್ ಶಿಂಧೆ ಸೇರೊದಂತೆ ಅನೇಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯಾಸರ್ಗಿಯಲ್ಲಿ ಇಸ್ಪೀಟು ಅಡ್ಡೆ ಮೇಲೆ ಪೊಲೀಸರ ದಾಳಿ: ನಾಲ್ವರ ವಿರುದ್ಧ ಕೇಸ್..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿಯಲ್ಲಿ ಇಸ್ಪೀಟು ಆಟದಲ್ಲಿ ತೊಡಗಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ಮಾಡಿ 4 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೈಲಾರಿ ಮಹದೇವಪ್ಪ ಸಾಗರ, ಮಂಜುನಾಥ್ ಹನ್ಮಂತಪ್ಪ ಉಪಾದ್ಯಾಯ, ಬಸವಂತಪ್ಪ ಲಕ್ಷ್ಮಣ ಮಡ್ಡಿ ಹಾಗೂ ಮಂಜುನಾಥ ನಾಗಪ್ಪ ಧರ್ಮೋಜಿ ಎಂಬುವ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇನ್ನು ದಾಳಿ ವೇಳೆ 2,200 ರೂ.ನಗದು ಹಾಗೂ ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ