ಹೆಂಡ್ತಿ ಬೇಕು ಹೆಂಡ್ತಿ ಅಂತಾ ಯುವಕನೋರ್ವ ಟವರ್ ಏರಿ ಕುಳಿತ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ.
ಹೀಗಾಗಿ ತಾಳ್ಮೆ ಕಳೆದುಕೊಂಡ ಯುವಕ ನಂಗೆ ಈಗಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಮನೆಯವರ ವಿರುದ್ಧ ಆಕ್ರೋಶಗೊಂಡಿದ್ದ. ಹೀಗಾಗಿ ಟವರ್ ಕಂಬದ ಮೇಲೆ ಹತ್ತಿದ್ದಾನೆ. ಅಲ್ಲಿಂದಲೇ ಹೆಂಡ್ತಿ ಬೇಕು ಹೆಂಡ್ತಿ ಅಂತಾ ಕೂಗಿ ಕೂಗಿ ಹೆಳಿದ್ದಾನೆ.
ಈಗಾಗಲೇ ಮದುವೆಗೆಂದು ಹುಡುಗಿ ಫೀಕ್ಸ್ ಮಾಡಿ ಮಾತುಕತೆ ಮಾಡಿರೋ ಪೋಷಕರು, ಇಬ್ಬರು ಗಂಡು ಮಕ್ಕಳಿರೋ ಕಾರಣಕ್ಕೆ ಚಿರಂಜೀವಿಗಿಂತ ದೊಡ್ಡ ಹುಡುನ ಮದುವೆ ಆಗಲಿ ಆಮೇಲೆ ನಿನ್ನ ಮದುವೆ ಮಾಡ್ತಿವಿ ಅಂದಿದ್ರಂತೆ, ಆದ್ರೆ ಹಾಗೆ ಹೇಳಿದ್ದ ಕಾರಣ ಟವರ್ ಏರಿರೋ ಸುಪುತ್ರನಿಗೆ ಈಗ ಮದುವೆ ಮಾಡಲು ರೆಡಿಯಾಗಿದ್ದಾರಂತೆ ಪೋಷಕರು..
ಇನ್ನು ಘಟನಾ ಸ್ಥಳಕ್ಕೆ ಬಂದ ಪೊಲೀಸರ ಮೂಲಕ ಮದುವೆ ಮಾಡುವ ಭರವಸೆ ನೀಡಿದ ಮೇಲೆ ಯುವಕ ಸರಸರನೆ ಟವರ್ ನಿಂದ ಇಳಿದು ಬಂದಿದ್ದಾನೆ.