ಮುಂಡಗೋಡಿನ ನವಚೇತನ “ಪದ್ಮಾಂಬಾ ಪುಟ್ಟಣ್ಣ” ಇನ್ನಿಲ್ಲ..!

ಮುಂಡಗೋಡ: ತಾಲೂಕಿನಲ್ಲಿ ಪದ್ಮಾಂಬಾ ಪುಟ್ಟಣ್ಣ ಅಂತಾನೇ ಖ್ಯಾತಿ ಪಡೆದಿದ್ದ ವೃಷಭರಾಜ್ ಅಂಗಡಿ(54) ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪುಟ್ಟಣ್ಣ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಕೊನೆಯುಸಿರೆಳೆದಿದ್ದಾರೆ.

ಮುಂಡಗೋಡಿನ ಹುಬ್ಬಳ್ಳಿ ರಸ್ತೆಯಲ್ಲಿರೋ ಪದ್ಮಾಂಬಾ ಬುಕ್ ಸ್ಟಾಲ್ ಮಾಲೀಕರಾಗಿದ್ದ ಪುಟ್ಟಣ್ಣ, ತಾಲೂಕಾ ಬಿಜೆಪಿಯಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು.

ಮುಂಡಗೋಡಿನ ಪ್ರತಿಷ್ಟಿತ ನವಚೇತನ ಯುವಕ ಮಂಡಳದಲ್ಲಿ ಸಕ್ರೀಯರಾಗಿದ್ದ ಪುಟ್ಟಣ್ಣ ಹಲವು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು.

ಇನ್ನು ಪುಟ್ಟಣ್ಣ ಅಂಗಡಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.