ಮುಂಡಗೋಡ: ಇದು ನಿಜಕ್ಕೂ ಮುಂಡಗೋಡಿಗರಿಗೆ ಹೆಮ್ಮೆಯ ಸಂಗತಿ. ಪಟ್ಟಣದಲ್ಲೇ ಹುಟ್ಟಿ ಬೆಳೆದ ಯುವಕನೊಬ್ಬ ನಮ್ಮ ಭಾರತೀಯ ಸೇನಾಧಿಕಾರಿ ಹುದ್ದೆ ಅಲಂಕರಿಸಿದ್ದಾನೆ. ಸತತ ಛಲ.. ಭಾರತೀಯ ಸೇನಾಧಿಕಾರಿ ಹುದ್ದೆ ಪಡೆಯಲೇಬೇಕು ಎಂಬ ಗುರಿಯೊಂದಿಗೆ ಪರೀಕ್ಷೆ ಎದುರಿಸಿ, ಸತತ ಎಂಟನೇ ಪ್ರಯತ್ನದಲ್ಲಿ ಲೆಫ್ಟಿನೆಂಟ್ ಹುದ್ದೆ ಪಡೆಯುವಲ್ಲಿ ಪಟ್ಟಣದ ಹಳೂರಿನ ಯುವಕ ಅಭಯ ಪಂಡಿತ್ ಯಶಸ್ವಿಯಾಗಿದ್ದಾರೆ. ಕರ್ನಾಟಕದಿಂದ ಒಟ್ಟು ಆರು ಜನರು ಈ ಹುದ್ದೆಗೆ ಆಯ್ಕೆಯಾಗಿದ್ದು, ಉತ್ತರಕನ್ನಡ ಜಿಲ್ಲೆಯಿಂದ ಇವರೊಬ್ಬರೇ ಆಯ್ಕೆಯಾಗಿರುವುದು ವಿಶೇಷ. ಚೆನ್ನೈನ ಭಾರತೀಯ ಸೇನಾಧಿಕಾರಿಗಳ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ, ನ.21ರಂದು ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡು ಪಟ್ಟಣಕ್ಕೆ ಬಂದಿದ್ದಾರೆ. ರಾಜಸ್ಥಾನದ ವೆಸ್ಟರ್ನ್ ಸೆಕ್ಟರ್ನಲ್ಲಿ ಸೇವೆ ಸಲ್ಲಿಸಲು ಡಿ.10ರಂದು ತೆರಳಲಿದ್ದಾರೆ. ನೇರವಾಗಿ ಸೇನಾಧಿಕಾರಿ ಹುದ್ದೆಗೆ ಆಯ್ಕೆಯಾಗಿರುವವರಲ್ಲಿ ಅಭಯ ಪಂಡಿತ್ ತಾಲ್ಲೂಕಿನಲ್ಲಿಯೇ ಮೊದಲಿಗರು. ಈ ಹಿಂದೆ ಪಟ್ಟಣದ ಸುಜಾತಾ ಬೈಲೂರು ಎಂಬುವರು ವಾಯುಸೇನೆಯಲ್ಲಿ ವೈದ್ಯರಾಗಿ ಸೇರಿದ್ದಾರೆ.
Top Stories
FIRE MISHAP News: ಹೈದರಾಬಾದ್ ಬೆಂಕಿ ಅವಘಡ, ಒಂದೇ ಕುಟುಂಬದ 17 ಜನರ ಸಾವು..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ರಾಜ್ಯದ 200 ಪೊಲೀಸ್ರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ಪುರಸ್ಕಾರ ಘೋಷಣೆ..!
ಸೇನೆ ಬರ್ಲಿ ನೋಡ್ಕೊಳ್ತೇನೆ; ಎನ್ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್..!
ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಇರಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ..!
ಈಗ ಯೂ ಟರ್ನ್ ; ಪಾಕಿಸ್ತಾನ ಸೇನೆ ವಾಯುನೆಲೆಗಳ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್..!
ಪಾಕಿಸ್ತಾನ ಪರ ಬೇಹುಗಾರಿಕೆ, ಹರಿಯಾಣ ಮೂಲದ ಯೂಟ್ಯೂಬರ್ ಸೇರಿ 6 ಜನರ ಬಂಧನ..!
ಸಿಗರೇಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಸಾಫ್ಟ್ವೇರ್ ಉದ್ಯೋಗಿಯ ಮೇಲೆ ಕಾರು ಹರಿಸಿದ ಬೆಂಗಳೂರಿನ ವ್ಯಕ್ತಿ..!
ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು..!
ಜಿಲ್ಲಾ ಮಟ್ಟದ ಜನ ಸ್ಪಂದನ ಕಾರ್ಯಕ್ರಮದಲ್ಲಿ 104 ಅರ್ಜಿಗಳ ವಿಚಾರಣೆ, ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥಪಡಿಸಿ: ಸಚಿವ ಮಂಕಾಳ ವೈದ್ಯ
ಜಿಲ್ಲೆಯ ಕಟ್ಟ ಕಡೆಯ ವ್ಯಕ್ತಿಯ ಪರವಾಗಿ ನಾನಿದ್ದೇನೆ; ಸಚಿವ ಮಂಕಾಳ ವೈದ್ಯ ಹೇಳಿಕೆ..!
ತಾಳಿ ಕಟ್ಟಿದ ಮರುಕ್ಷಣವೇ ಮದುಮಗನೇ ಹೆಣವಾದ, ಜಮಖಂಡಿಯಲ್ಲಿ ಹೃದಯ ವಿದ್ರಾವಕ ಘಟನೆ..!
ಭೀಮಾತೀರದ ಸಾಹುಕಾರನ ಮೇಲೆ ಫೈರಿಂಗ್ ಕೇಸ್; ಕಿಂಗ್ ಪಿನ್ ಮಡುಸ್ವಾಮಿ ಆರೆಸ್ಟ್
ವಿಜಯಪುರ- ಭೀಮಾತೀರದ ಸಾಹುಕಾರ್ ಮಹದೇವ್ ಬೈರಗೊಂಡ ಮೇಲೆ ನಡೆದ ಫೈರಿಂಗ್ ಕೇಸ್ ನ ಪ್ರಮುಖ ಆರೋಪಿ ಅಂದರ್ ಆಗಿದ್ದಾನೆ.. ಕಳೆದ ಒಂದು ತಿಂಗಳಿಂದ ಫೈರಿಂಗ್ ಕೇಸ್ ಬೆನ್ನತ್ತಿದ್ದ ವಿಜಯಪುರ ಪೊಲೀಸ್ರಿಗೆ ಅಸಲೀ ಆರೋಪಿಯ ಜಾಡು ಬೇಧಿಸೋದು ಅಷ್ಟು ಸುಲಭದ ಮಾತಾಗಿರಲಿಲ್ಲ.. ಹಾಗಾದ್ರೆ ಮಹದೇವ್ ಸಾಹುಕಾರನ ಮೇಲೆ ಸಾವಿನ ಗುರಿಯಿಟ್ಟ ಆ ಹಂತಕರ ನಾಯಕ ಯಾರು..? ಅವತ್ತು ನವೆಂಬರ್ 2 ಮಟ ಮಟ ಮದ್ಯಾಹ್ನ ಭೀಮಾತೀರದ ಮಹದೇವ ಸಾಹುಕಾರನ ಮೇಲೆ ಡೆಡ್ಲಿ ಅಟ್ಯಾಕ್ ಒಂದು ನಡೆದಿತ್ತು.. ಥೇಟು ಸಿನಿಮಾ ಸ್ಟೈಲ್ ನಲ್ಲೇ ನಡೆದಿದ್ದ ಆ ಅಟ್ಯಾಕ್ ನಲ್ಲಿ ಇಬ್ರು ಪ್ರಣ ಬಿಟ್ಟಿದ್ರು.. ಮಹದೇವ ಸಾಹುಕಾರನ ಮೇಲೆ ಹಾರಿದ್ದ ಗುಂಡುಗಳು ಮಹದೇವ ಸಾಹುಕಾರನ ಬದಲಿಗೆ ಇಬ್ಬರ ಜೀವ ತೆಗೆದಿದ್ವು.. ಆದ್ರೆ ಮಹದೇವ ಸಾಹುಕಾರ್ ಮಾತ್ರ ಗುಂಡು ತಾಗಿದ್ರು ಬಚಾವ್ ಆಗಿದ್ದ.. ಸದ್ಯ ಚಿಕಿತ್ಸೆ ಪಡಿತಿರೋ ಸಾಹುಕಾರ ಕೆಲವೇ ದಿನದಲ್ಲಿ ಡಿಶ್ಚಾರ್ಜ್ ಕೂಡ ಆಗ್ತಿದಾನೆ.. ಆದ್ರೆ ಅವತ್ತು ಅಂತಹದ್ದೊಂದು ಡೆಡ್ಲಿಯಸ್ಟ್ ಅಟ್ಯಾಕ್ ಹಿಂದೆ ಇದ್ದಿದ್ದ ಒಳಸುಳಿಯನ್ನ...
ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಶ್ಲಾಘನೀಯ ಕಾರ್ಯ; ಮಾಜಿ ಸಚಿವ ಪಟ್ಟಣಶೆಟ್ಟಿ
ವಿಜಯಪುರ-ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಮಾಡಿದ ನಿರ್ಣಯ ನಾವು ಸ್ವಾಗತಿಸಲೇ ಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದ್ದಾರೆ.. ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಮರಾಠಾ ಸಮಾಜದ ಸಲುವಾಗಿ ಮಾಡಿದ ಪ್ರಾಧಿಕಾರವದು, ಅವರು ಕೂಡಾ ಹಿಂದುಗಳಲ್ಲಿ ಇರುವ ವಿಶೇಷ ಜನಾಂಗ. ಅವರಲ್ಲೂ ಸಹಿಹ ಸಾಕಷ್ಟು ಕಡು ಬಡವರು, ನಿರುದ್ಯೋಗಿಗಳಿದ್ದಾರೆ, ಅವರಿಗೆ ಸರ್ಕಾರದಿಂದ ಸೌಲತ್ತು ಸಿಗುತ್ತಿಲ್ಲ. ಇದು ಮರಾಠಿ ಭಾಷೆಗರಿಗೆ ನೀಡಿದ ಅನುದಾನಲವಲ್ಲ. ಕನ್ನಡಪರ ಸಂಘಟನೆಗಳು ಇದನ್ನು ತಪ್ಪಾಗಿ ಭಾವಿಸಿವೆ. ಗಡಿ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ, ಕಲಬುರಗಿಯಲ್ಲಿ ಆ ಜನಾಂಗ ಹೆಚ್ಚಾಗಿ ವಾಸಿಸುತ್ತಾರೆ. ಅವರೆಲ್ಲ ಕನ್ನಡಿಗರೇ, ಅವರಿಗಾಗಿ ಮುಖ್ಯಮಂತ್ರಿಗಳು ತೆಗೆದುಕೊಂಡ ನಿರ್ಣಯ ಸ್ವಾಗತಾರ್ಹ ಎಂದರು. ಇನ್ನೂ ಕನ್ನಡ ಪರ ಸಂಘಟನೆಗಳು ಇದನ್ನು ತಪ್ಪಾಗಿ ಭಾವಿಸಿ, ಬಂದ್ ಕರೆ ನೀಡಿವೆ, ಬೇರೆ ಬೇರೆ ಸಮುದಾಯಕ್ಕೆ ಸಾಕಷ್ಟು ಅಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ಮಾಡಿದೆ. ಲಿಂಗಾಯತರಿಗಾಗಿಯೇ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ, ಇನ್ನೂ ಮರಾಠಾ ಸಮುದಾಯಕ್ಕೆ ಮಾಡಿದ್ದು ತಪ್ಪೇನು. ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಕರೆಯನ್ನು...
ನನಗೆ ಧರ್ಮ ಒಡೆದವನು ಅಂತಾ ಪಟ್ಟ ಕಟ್ಟಿದ್ರು; ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿ
ವಿಜಯಪುರ- ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ನಿಗಮ ಸ್ಥಾಪನೆಗಳಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ. ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಆಯಾ ಸಮಾಜಗಳು ಮುಂದೆ ಬರುತ್ತವೆ ಎಂದು ಸಲಹೆ ನೀಡಿದ್ದಾರೆ. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಸ್ಥಾಪನೆಯಿಂದ ಸಹಾಯ ವಾಗಬಹುದು, ಆದ್ರೆ ದೊಡ್ಡ ಸಮುದಾಯಗಳಿಗೆ ನಿಗಮದಿಂದ ಯಾವುದೇ ಲಾಭವಿಲ್ಲ ಎಂದಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಲಿಂಗಾಯತ ಸಮುದಾಯ 1.8 ಕೋಟಿ ಜನಸಂಖ್ಯೆ ಇದೆ, ಒಟ್ಟು ರಾಜ್ಯದ ಜನ ಸಂಖ್ಯೆಯಲ್ಲಿ, ಶೇಕಡಾ 16 ರಿಂದ 18 ರಷ್ಟು ಜನ ಲಿಂಗಾಯತರಿದ್ದಾರೆ , ಈ ನಿಗಮಕ್ಕೆ 100 ಅಥವಾ 200 ಕೋಟಿ ರೂಪಾಯಿ ಅನುದಾನ ನೀಡಿದರೆ ಯಾವುದೇ ಉಪಯೋಗವಿಲ್ಲ, ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದರೂ ಸಾಲದು ಎಂದು ತಿಳಿಸಿದ್ದಾರೆ. 1000 ಕೋಟಿ ಅನುದಾನ...
ಮುಂಡಗೋಡ ತಾಲೂಕಿನಲ್ಲಿ ಗಜಪಡೆಯ ಅರ್ಭಟ
ಮುಂಡಗೋಡ- ತಾಲೂಕಿನಲ್ಲಿ ಗಜಪಡೆಯ ಅರ್ಭಟ ಜೋರಾಗಿದೆ.. ಗಜಪಡೆಯ ದಾಳಿಯಿಂದ ಇಲ್ಲಿನ ಅನ್ನದಾತ ಕಂಗಾಲಾಗಿದ್ದಾನೆ. ತಾನು ಬೆವರು ಹರಿಸಿ ಬೆಳೆದಿದ್ದ ಬೆಳೆಯನ್ನು ಆನೆಗಳ ಹಿಂಡು ನಾಶಗೊಳಿಸುತ್ತಿವೆ.. ಮುಂಡಗೋಡ ತಾಲೂಕಿನ ಅರಷಿಣಗೇರಿ, ಮಜ್ಜಿಗೇರಿ, ಅತ್ತಿವೇರಿ, ಹುನಗುಂದ ಭಾಗದ ರೈತರು ಆನೆದಾಳಿಯಿಂದ ತಮ್ಮ ಬೆಳೆ ನಾಶವಾಗುವ ಭೀತಿಯಲ್ಲಿದ್ದಾರೆ.. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಆನೆಗಳ ಹಾವಳಿಯಿಂದ ರೈತರ ಬದುಕನ್ನ ರಕ್ಷಿಸಬೇಕಾಗಿದೆ.
ಮುಂಡಗೋಡ- ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಟಿ.ಆಸ್ತಕಟ್ಟಿ ವಿಧಿವಶ- ಗಣ್ಯರ ಸಂತಾಪ
ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಹನ್ಮಂತಪ್ಪ ಆಸ್ತಕಟ್ಟಿ ಇಂದು ವಿಧಿವಶರಾಗಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಯವರ ಕಟ್ಟಾ ಬೆಂಬಲಿಗರಾಗಿದ್ದ ಹನ್ಮಂತಪ್ಪ ಆಸ್ತಕಟ್ಟಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಹನ್ಮಂತಪ್ಪ ಆಸ್ತಕಟ್ಟಿಯವರ ನಿಧನಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ
ಮುಂಡಗೋಡ; ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮನೆಪಾಠ; ಹುನಗುಂದ ಶಾಲೆ ಶಿಕ್ಷಕರ ಅವಿರತ ಪ್ರಯತ್ನ
ಮುಂಡಗೋಡ- ಕೊರೋನಾ ಸಂಕಷ್ಟದ ಮದ್ಯೆ ಸದ್ಯ ಮನೆಯಲ್ಲಿರೋ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮೂಲಕವೇ ಶಿಕ್ಷಣ ನೀಡಲಾಗ್ತಿದೆ. ತಾಲೂಕಿನ ಹುನಗುಂದ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ವಾಟ್ಸ್ ಅಪ್ ಮೂಲಕವೇ ಮನೆ ಪಾಠ ನೀಡುತ್ತಿದ್ದು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆಯಿಂದ ರಾತ್ರಿಯವರೆಗೂ ವಾಟ್ಸ್ ಅಪ್ ಮೂಲಕವೇ ಪಾಠ ಮಾಡ್ತಿರೋ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳ ಜೊತೆ ವಾಟ್ಸ್ ಅಪ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದು ಪಾಠ ಮಾಡ್ತಿದಾರೆ. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ವಾಟ್ಸ್ ಅಪ್ ಮೂಲಕವೇ ಉತ್ತರಿಸುತ್ತಿದ್ದಾರೆ. ಒಟ್ನಲ್ಲಿ, ಕೊರೋನಾದಿಂದ ನಿಂತು ಹೋಗಿದ್ದ ಶಿಕ್ಷಣ ಸದ್ಯ ವಾಟ್ಸ್ ಅಪ್ ಮೂಲಕ ಮತ್ತೆ ಚೇತರಿಕೆ ಕಂಡುಕೊಂಡಿದೆ
ಮುಂಡಗೋಡ- ಹುನಗುಂದದಲ್ಲಿ ಒಂದು ಪಾಸಿಟಿವ್: ಸೋಂಕಿತನ ಮನೆ ಸುತ್ತ ಸೀಲ್ ಡೌನ್
ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದಲ್ಲಿ ಇಂದು ಕೊರೋನಾ ಮೊದಲ ಪಾಸಿಟಿವ್ ಪ್ರಕರಣ ದೃಡವಾಗಿದ್ದು, ಸೋಂಕಿತನ ಮನೆ ಸುತ್ತ ಸೀಲ್ ಡೌನ್ ಮಾಡಲಾಗಿದೆ. ಇಂದು ಪ್ರಕರಣ ದೃಢವಾಗುತ್ತಿದ್ದಂತೆ ಹುನಗುಂದ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸೀಲ್ ಡೌನ್ ಮಾಡಿದ್ರು. ಹುನಗುಂದ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಸೋಂಕಿತನ ಮನೆ ಸುತ್ತ ಮುತ್ತ ಫಾಗಿಂಗ್ ಮಾಡಿದ್ರು.
ಮುಂಡಗೋಡ; ಹುನಗುಂದ ಗ್ರಾಮಕ್ಕೂ ವಕ್ಕರಿಸಿದ ಕೊರೋನಾ..?
ಮುಂಡಗೋಡ- ಮಹಾರಾಷ್ಟ್ರದ ಪೂನಾದಿಂದ ಸ್ವಗ್ರಾಮ ಹುನಗುಂದಕ್ಕೆ ವಾಪಸ್ ಆಗಿದ್ದ ಇಬ್ಬರು ಯುವಕರ ಪೈಕಿ ಓರ್ವ ಯುವಕನಿಗೆ ಕೊರೋನಾ ಸೋಂಕು ದೃಢವಾಗಿದ್ದು ಮದ್ಯಾಹ್ನದ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ. ಹೀಗಾಗಿ ಹುನಗುಂದ ಗ್ರಾಮದಲ್ಲಿ ಮೊದಲ ಪ್ರಕರಣ ಇದಾಗಿದ್ದು ಆತಂಕ ಶುರುವಾಗಿದೆ.
ಉತ್ತರ ಕನ್ನಡದಲ್ಲಿ ಮುಂದುವರೆದ ಮಳೆ, ನಾಳೆ ಸಚಿವ ಆರ್.ಅಶೋಕ್ ಜಿಲ್ಲೆಗೆ ಭೇಟಿ
ಕಾರವಾರ- ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ ಮತ್ತೆ ಮುಂದುವರೆದಿದೆ.. ಬೆಳಿಗ್ಗೆಯಿಂದ ಸ್ವಲ್ಪ ಬಿಡುವು ಕೊಟ್ಟಿದ್ದ ಮಳೆ ಸಂಜೆಗೆ ಮಲೆನಾಡು ತಾಲೂಕುಗಳಾದ ಸಿದ್ದಾಪುರ, ಶಿರಸಿ, ಯಲ್ಲಾಪುರ, ಮುಂಡಗೋಡು, ಹಳಿಯಾಳ ಗಳಲ್ಲಿ ಮತ್ತೆ ವರುಣನ ಅಬ್ಬರ ಪ್ರಾರಂಭವಾಗಿದೆ.. ಪಶ್ಚಿಮ ಘಟ್ಟಗಳಲ್ಲಿ ಉತ್ತಮ ಮಳೆಯಾಗುತ್ತಿರೋ ಹಿನ್ನೆಲೆ ಶರಾವತಿ, ಅಘನಾಶಿನಿ ನದಿಗಳ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಪ್ರವಾಹ ಪರಿಸ್ಥಿತಿ ಅವಲೋಕನಕ್ಕಾಗಿ ನಾಳೆ ಹೊನ್ನಾವರಕ್ಕೆ ಕಂದಾಯ ಆರ್.ಅಶೋಕ್ ಭೇಟಿ ನೀಡಲಿದ್ದಾರೆ. ಶರಾವತಿ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಲಿರೋ ಸಚಿವ ಅಶೋಕ, ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.