ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಅನಾರೋಗ್ಯದ ಆತ್ಮಹತ್ಯೆಯಾ..?

ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ, ಅನಾರೋಗ್ಯದ ಆತ್ಮಹತ್ಯೆಯಾ..?

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಸುಮಾರು 40-45ವರ್ಷ ವಯಸ್ಸಿನ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಂದು ಶವ ತೇಲುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ದುರ್ನಾತ..! ಇನ್ನು, ಮಹಿಳೆ ಮೂರ್ನಾಲ್ಕು ದಿನದ ಹಿಂದೆಯೇ ಸಾವು ಕಂಡಿರೋ ಬಗ್ಗೆ ಅನುಮಾನ ವ್ಯಕ್ತವಾಗಿದ್ದು. ಸದ್ಯ ಶವ ಕೊಳೆತು ದುರ್ನಾತ ಬೀರುತ್ತಿದೆ. ಹೀಗಾಗಿ, ಸ್ಥಳಕ್ಕೆ ಬಂದ ಪೊಲೀಸರು ಶವ ಹೊರ ತೆಗೆಯಲು ಹರಸಾಹಸ ಪಡುವಂತಾಗಿದೆ. ಆತ್ಮಹತ್ಯೆಯಾ..? ಅಂದಹಾಗೆ, ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ಯಾಂ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರಾ..? ಅಥವಾ ಇನ್ಯಾವುದೋ ಬೇರೆ ಕಾರಣವಿದೆಯಾ ತಿಳಿದು ಬರಬೇಕಿದೆ. ಡ್ಯಾಂ ಅಂಗಳದಲ್ಲಿ ಮಹಿಳೆಯ ಪರ್ಸ ಪತ್ತೆಯಾಗಿದ್ದು ಅದ್ರಲ್ಲಿ ವಿವಿಧ ಬಗೆಯ ಮೆಡಿಸಿನ್, ಆಯಿಟ್ಮೆಂಟ್ ಗಳು, ಮಾತ್ರೆಗಳು ಸಿಕ್ಕಿವೆ. ಹೀಗಾಗಿ, ಈ ಮಹಿಳೆ ಅನಾರೋಗ್ಯದಿಂದ ಬಳಲಿ ಆತ್ಮಹತ್ಯೆ ಕೈಗೊಂಡ್ರಾ ಅನ್ನೋ ಅನುಮಾನ ಶುರುವಾಗಿದೆ. ಅದ್ರ, ಜೊತೆ ಹುಬ್ಬಳ್ಳಿಯ ಜ್ಯವೇಲ್ಲರಿಯೊಂದರ ಅಡ್ರೆಸ್ ಇರೋ ಆಭರಣದ...

ಭೀಕರ ರಸ್ತೆ ಅಪಘಾತ ಸಿಪಿಐ ದಂಪತಿ ಸ್ಥಳದಲ್ಲೇ ಸಾವು..!

ಭೀಕರ ರಸ್ತೆ ಅಪಘಾತ ಸಿಪಿಐ ದಂಪತಿ ಸ್ಥಳದಲ್ಲೇ ಸಾವು..!

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತವಾಗಿದೆ. ನಿಂತಿದ್ದ ಕಂಟೇನರ್‌ಗೆ ಮಾರುತಿ ಸ್ವೀಫ್ಟ್ ಡಿಸೈರ್ ಕಾರು ಡಿಕ್ಕಿಯಾಗಿ ವಿಜಯಪುರ ಜಿಲ್ಲೆ ಸಿಂದಗಿ ಸಿಪಿಐ ಹಾಗೂ ಪತ್ನಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ‌. ರವಿ ಉಕ್ಕುಂದ (43) ಹಾಗೂ ಪತ್ನಿ ಮಧು (40) ಸ್ಥಳದಲ್ಲೆ ದುರ್ಮರಣವಾಗಿದ್ದಾರೆ. ಸಿಂದಗಿಯಿಂದ ಕಲಬುರಗಿ ನಗರಕ್ಕೆ ಆಗಮಿಸುತ್ತಿದ್ದ ಸಿಪಿಐ ದಂಪತಿಯ ಕಾರು ಕಂಟೇನರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನೇಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬ್ಬಿಗೆ FRP ದರ ನಿಗದಿಗೊಳಿಸುವಂತೆ ಆಗ್ರಹ, ಕಲಘಟಗಿ ಶಾಸಕರ ನಿವಾಸದೆದುರು  ಕಬ್ಬುಬೆಳೆಗಾರರ ಪ್ರತಿಭಟನೆ..!

ಕಬ್ಬಿಗೆ FRP ದರ ನಿಗದಿಗೊಳಿಸುವಂತೆ ಆಗ್ರಹ, ಕಲಘಟಗಿ ಶಾಸಕರ ನಿವಾಸದೆದುರು ಕಬ್ಬುಬೆಳೆಗಾರರ ಪ್ರತಿಭಟನೆ..!

ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಬ್ಬು ಬೆಳೆಗಾರರು ಇವತ್ತು ಆಕ್ರೋಶಗೊಂಡಿದ್ರು. ಕಬ್ಬಿಗೆ ಎಫ್ಆರ್ಪಿ ಬೆಲೆಯನ್ನು ಹೆಚ್ಚುಗೊಳಿಸುವಂತೆ ಆಗ್ರಹಿಸಿ ಶಾಸಕರ ನಿವಾಸದ ಎದುರು ಧರಣಿ ಕುಳಿತಿದ್ರು. ಅಂದಹಾಗೆ, ಕಲಘಟಗಿ ತಾಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು. ಅಂದಹಾಗೆ, ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ರೈತರು ಬೆಂಗಳೂರಿನ ಫ್ರೀಡಂ ಪಾರ್ಕಲ್ಲಿ 14 ದಿನದಿಂದ ಅಹೋ ರಾತ್ರಿ ಧರಣಿ’ ಚಳುವಳಿ ನಡೆಸುತ್ತಿದ್ದರು ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸಿದೆ ಕಬ್ಬು ಬೆಳೆದ ರೈತರನ್ನ ನಿರ್ಲಕ್ಷ್ಯ ಮಾಡಿದೆ, ತಾವು ಅಡಳಿತ ಪಕ್ಷದ ಶಾಸಕರಾಗಿ ನಮ್ಮೆಲ್ಲರ ಪ್ರತಿನಿಧಿಯಾಗಿರುವ ಕಾರಣ, ನಮ್ಮ ಒತ್ತಾಯಗಳ ಬಗ್ಗೆ ಕೂಡಲೇ ಸರ್ಕಾರದ ಗಮನ ಸೆಳೆದು ನ್ಯಾಯ ಕೊಡಿಸಬೇಕು ಅಂತಾ ಕಲಘಟಗಿ ಬಿಜೆಪಿ ಶಾಸಕ ಸಿ.ಎಂ. ನಿಂಬಣ್ಣವರ್ ರಿಗೆ ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗೆ ಎಫ್ ಅರ್ ಪಿ ದರ ನಿಗದಿ ಮಾಡಿದ ಕೇಂದ್ರ ಸರ್ಕಾರ, ರೈತರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರ ನಿಗದಿ ಮಾಡಿದೆ. ಹಾಗೂ ಸಕ್ಕರೆ...

ಹಾವೇರಿಯ ಚಾಮುಂಡಿ ಎಕ್ಸ್ ಪ್ರೆಸ್ ಪೀಪೀ ಹೋರಿ ಅಸ್ತಂಗತ, ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!

ಹಾವೇರಿಯ ಚಾಮುಂಡಿ ಎಕ್ಸ್ ಪ್ರೆಸ್ ಪೀಪೀ ಹೋರಿ ಅಸ್ತಂಗತ, ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು..!

ಮಹಾರುದ್ರನಂತೆ ಭಯಂಕರವಾಗಿತ್ತು ಆತನ ಕೋಪಾಗ್ನಿ..! ಕಾಲುಕೆದರಿ ನಿಂತರೆ ಸಾಕು ಎದುರಿಗಿದ್ದವರ ಎದೆಯಲ್ಲೇ ಬಡಿದಂತೆ ನಗಾರಿ..!! ಆದ್ರೆ ಸದ್ಯ ಮೌನಿಯಾಗಿ ಮಲಗಿಬಿಟ್ಟಿದ್ದಾನೆ ಆತ..! ಇನ್ನೆಂದೂ ಆತನ ರೌದ್ರತೆ ಕಾಣಸಿಗೋದೇ ಇಲ್ಲ..! ಯಾಕಂದ್ರೆ ಆತ ಮರಳಿ ಬಾರದೂರಿಗೆ ಪಯಣ ಬೆಳಿಸಿದ್ದಾನೆ..! ಆದ್ರೆ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಮಾತ್ರ ಮಹಾರಾಜನಾಗೇ ಉಳಿದಿದ್ದಾನೆ..! ಯಸ್, ಅವನು ಹಾವೇರಿ ಜಿಲ್ಲೆಯ ಪಾಲಿನ ಮಹಾದಂಡನಾಯಕ.. ಆತನಿಗೆ ಹಾವೇರಿ ಅಷ್ಟೇ ಅಲ್ಲ ಹೊರ ಜಿಲ್ಲೆಗಳಲ್ಲೂ ಸಾವಿರ ಸಾವಿರ ಸಂಖ್ಯೆಯ ಅಭಿಮಾನಿ ಬಳಗವಿದೆ.. ಹುಚ್ಚರಂತೆ ಆರಾಧಿಸೋ ಯುವ ಪಡೆಯಿದೆ.. ಅಂತಹ ಮಹಾದಂಡನಾಯಕ ಈಗ ಅಕ್ಷರಶಃ ಮೌನಿಯಾಗಿದ್ದಾನೆ.. ಸದಾ ಘರ್ಜನೆಯಲ್ಲಿದ್ದ ಆತ ಈಗ ನಿರ್ಲಿಪ್ತವಾಗಿದ್ದಾನೆ.. ಅಂದಹಾಗೆ, ನಾವಿಲ್ಲಿ ಹೇಳಹೊರಟಿರೋದು ಯಾವುದೇ ರಾಜಕಾರಣಿಯ ಕತೆಯನ್ನಲ್ಲ.. ಯಾವುದೇ ಸಿನಿಮಾ ನಟನ ಸ್ಟೋರಿನೂ ಅಲ್ಲ.. ಬದಲಾಗಿ ಮುಗ್ದ ಮನಸ್ಸಿನ, ಮೂಕ ಭಾವಗಳಲ್ಲೇ ಅಭಿಮಾನಿಗಳನ್ನ ತನ್ನತ್ತ ಸೆಳೆದ ಭಯಂಕರ ಚತುರ, ಮುಟ್ಟಿದರೆ ಮುನಿದು ಚಿಮ್ಮುವ ತಾಕತ್ತಿನ ಸರದಾರ, ಮಾಸೂರಿನ ಮಹಾದಂಡನಾಯಕ ಚಾಮುಂಡಿ ಮೂಕಾಂಬಿಕಾ ಎಕ್ಸಪ್ರೆಸ್ ಪೀ ಪೀ ಸ್ಪರ್ಧಾ ಹೋರಿಯ...

ಫೇಸ್ ಬುಕ್ ಡಿಪಿ ನೋಡಿ ಮರುಳಾದ ಆ ಹುಡುಗ, ಆಂಟಿಯ ಮೋಸದಾಟಕ್ಕೆ ಕಳೆದುಕೊಂಡಿದ್ದು ಬರೋಬ್ಬರಿ 40 ಲಕ್ಷ..!

ಫೇಸ್ ಬುಕ್ ಡಿಪಿ ನೋಡಿ ಮರುಳಾದ ಆ ಹುಡುಗ, ಆಂಟಿಯ ಮೋಸದಾಟಕ್ಕೆ ಕಳೆದುಕೊಂಡಿದ್ದು ಬರೋಬ್ಬರಿ 40 ಲಕ್ಷ..!

ವಿಜಯಪುರ: ಇದು ಅಕ್ಷರಶಃ ಆನಲೈನ್ ನಲ್ಲೇ ಹುಟ್ಟಿ ಆನಲೈನ್ ನಲ್ಲೇ ಮುಗಿದು ಹೋದ ಮೋಸದ ಪ್ರೀತಿ. ಜೊತೆ ಉಂಡೂ ಹೋಗಿ ಕೊಂಡೂ ಹೋದ ಮಹಾಮೋಸದ ಸ್ಟೋರಿ. ಅಂದಹಾಗೆ ಇದು ನಡೆದದ್ದು ವಿಜಯಪುರ ಜಿಲ್ಲೆಯಲ್ಲಿ. ಅವಳು ಆತನಿಗೆ‌ ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಮಾಯಾಂಗನೆ..! ಮೋಸ ಮಾಡಲೇಂದೇ ಫೇಸ್ ಬುಕ್ ಆರಿಸಿಕೊಂಡಿದ್ದ ಐನಾತಿ ಮಹಿಳೆ. ಡಿಪಿ ಲುಕ್ಕು..! ಅಸಲು, ಅವಳ ಫೇಸ್ ಬುಕ್ ಪೊಟೋ ನೋಡಿದ್ರೆ ಎಂತವರಿಗೂ ಒಂದು‌ಕ್ಷಣ ದಿಗಿಲಾಗತ್ತೆ. ಅಂತಹ‌ ಮಾದಕತೆಯ ನೋಟ. ಹೀಗಾಗಿ, ಆ ಅಕೌಂಟಿನಿಂದ ಪ್ರೆಂಡ್ ರಿಕ್ವೆಸ್ಟ್ ಬಂದ್ರೆ ಸಾಕು ಕ್ಷಣಮಾತ್ರದಲ್ಲೇ ಅಕ್ಸೆಪ್ಟು ಮಾಡಿಕೊಳ್ಳುವ ಆಸೆ ಹುಟ್ಟೇ ಬಿಟ್ಟಿರತ್ತೆ. ಅಂತಹದ್ದೊಂದು ಮಾಯಾಜಾಲ ಹೆಣೆದಿದ್ದ ಆ ಲೇಡಿ ಅನಾಮತ್ತಾಗಿ ಲಕ್ಷ ಲಕ್ಷ ಹಣ ಎಗರಿಸಿದ್ದಾಳೆ. ಹಾಗೆ ಆತನ ಬಲೆಗೆ ಬಿದ್ದಿದ್ದ ಅಬನೊಬ್ಬ ಆಕೆಯ ಡಿಪಿ ಪೋಟೊ ನೋಡಿ ಕ್ಲೀನ್ ಬೋಲ್ಡ್ ಆಗಿದ್ದ. ಪ್ರೆಂಡ್ ರಿಕ್ವೆಸ್ಟ್ ಕಳಿಸಿದ ತಕ್ಷಣವೇ ಅಕ್ಸೆಪ್ಟು ಮಾಡಿಕೊಙಡಿದ್ದ. ಅವಳೊಂದಿಗೆ ಮುಂದೆ ಚಾಟಿಂಗ್ ಮಾಡಲೂ ಆರಂಭಿಸಿದ್ದ.. ಸ್ನೇಹ, ಪ್ರೀತಿ...

ಪಾಳಾದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಕೇಸ್, ಅಪರಾಧಿಗೆ 20 ವರ್ಷ ಜೈಲು, 1 ಲಕ್ಷ ದಂಡ, ಕೋರ್ಟ್ ತೀರ್ಪು

ಪಾಳಾದ ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಕೇಸ್, ಅಪರಾಧಿಗೆ 20 ವರ್ಷ ಜೈಲು, 1 ಲಕ್ಷ ದಂಡ, ಕೋರ್ಟ್ ತೀರ್ಪು

ಮುಂಡಗೋಡ ತಾಲೂಕಿನ ಪಾಳಾದಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿದೆ. ಜಿಲ್ಲಾ ಫೋಕ್ಸೋ ನ್ಯಾಯಾಲಯ ಅಪರಾಧಿಗೆ ಕಠಿಣ ಶಿಕ್ಷೆ ನೀಡಿದೆ. 20 ವರ್ಷ ಜೈಲಿನ ಜೊತೆಗೆ 1 ಲಕ್ಷ ರೂ. ದಂಡ ಹಾಗೂ ಸಂತ್ರಸ್ಥೆಗೆ 3 ಲಕ್ಷ ರೂ. ಪರಿಹಾರ ನೀಡಬೇಕು ಅಂತಾ ಪೋಕ್ಸೋ ನ್ಯಾಯಾಲಯ ತೀರ್ಪು ನೀಡಿದೆ. ಅಂದಹಾಗೆ, ಪಾಳಾ ಗ್ರಾಮದ ದೇವರಾಜ್ ಶಿವಪುರ ಎಂಬುವ ವ್ಯಕ್ತಿ ಕಳೆದ ವರ್ಷ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಮುಂಡಗೋಡ ಪೊಲೀಸರು ಫೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದರು. ಫೋಕ್ಸೋ ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ಬಲಿಷ್ಟ ಆರೋಪ ಪಟ್ಟಿ ಸಲ್ಲಿಸಿದ್ದರು‌. ಇನ್ನು ಈ ಪ್ರಕರಣದಲ್ಲಿ ಶುಭಾ ಗಾಂವಕರ್ ವಾದ ಮಂಡಿಸಿದ್ದರು.

ಯಲ್ಲಾಪುರದ ಅರಬೈಲು ಘಾಟಿನಲ್ಲಿ ನಡೆದಿದ್ದ ಭಯಾನಕ “ರಾಬರಿ” ಹಿಂದೆ ಕೇರಳದ ಕ್ರಿಮಿಗಳು, ಅಷ್ಟಕ್ಕೂ, ಸವಾಲಾಗಿದ್ದ ಕೇಸು ಬೇಧಿಸಿದ್ದು ಹೇಗೆ ಗೊತ್ತಾ..?

ಯಲ್ಲಾಪುರದ ಅರಬೈಲು ಘಾಟಿನಲ್ಲಿ ನಡೆದಿದ್ದ ಭಯಾನಕ “ರಾಬರಿ” ಹಿಂದೆ ಕೇರಳದ ಕ್ರಿಮಿಗಳು, ಅಷ್ಟಕ್ಕೂ, ಸವಾಲಾಗಿದ್ದ ಕೇಸು ಬೇಧಿಸಿದ್ದು ಹೇಗೆ ಗೊತ್ತಾ..?

ಯಲ್ಲಾಪುರ ಪೊಲೀಸರು ಕಡೆಗೂ ತಮ್ಮ ಜಿದ್ದು ಸಾಧಿಸಿದ್ದಾರೆ. ಅರಬೈಲು ಘಟ್ಟದಲ್ಲಿ ಕೋಟಿ ಕೋಟಿ ಹಣ ರಾಬರಿ ಮಾಡಿದ್ದ ಖತರ್ನಾಕ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ಬರೋಬ್ಬರಿ ಒಂದು ತಿಂಗಳು,ಇಪ್ಪತ್ತು ದಿನಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ‌. ಥೇಟು ಸಿನಿಮಾ ಸ್ಟೈಲಿನಲ್ಲೇ ನಡೆದಿದ್ಧ ಭಯಾನಕ ರಾಬರಿಯನ್ನು ಅಂತದ್ದೇ ಸಿನಿಮಿಯ ರೀತಿಯಲ್ಲೇ ಟ್ರೇಸ್ ಮಾಡಿದ್ದಾರೆ ನಮ್ಮ‌ ಪೊಲೀಸ್ರು.. ಅಂದಹಾಗೆ, ದರೋಡೆ ನಡೆದ ದಿನವೇ ಪಬ್ಲಿಕ್ ಫಸ್ಟ್ ನ್ಯೂಸ್ ಘಟನೆಯ ಸಂಪೂರ್ಣ ಹಕೀಕತ್ತು ತಮ್ಮ‌ಮುಂದೆ ಇಟ್ಟಿತ್ತು. ಅವತ್ತು ಅಕ್ಟೋಬರ್ 1… ನಿಮಗೆ ನೆನಪಿರಲಿ, ಅವತ್ತು ಅಕ್ಟೋಬರ್ ಒಂದನೇ ತಾರೀಖಿನ ಶನಿವಾರ ರಾತ್ರಿ ನಡೆದ ಘಟನೆ ಇದು. ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅನಾಮತ್ತಾಗಿ ರಾಬರಿ ಮಾಡಲಾಗಿತ್ತು. ಚಿನ್ನ ಖರೀದಿಗಾಗಿ ಸ್ವಿಪ್ಟ್ ಕಾರಲ್ಲಿ ತೆರಳುತ್ತಿದ್ದ ಬೆಳಗಾವಿಯ ಆ ಇಬ್ಬರೂ ಯಲ್ಲಾಪುರದ ಅರಬೈಲ್ ಘಾಟಿನಲ್ಲಿ ಬರುತ್ತಿದ್ದಂತೆ, ಥೇಟು ಸಿನಿಮಾ ಸ್ಟೈಲಿನಲ್ಲೇ ಎರಡು ಕಾರುಗಳಲ್ಲಿ ಬಂದು ಅಡ್ಡ ಹಾಕಿದ್ದರು ಖದೀಮರು. ತಕ್ಷಣವೇ ಆರೇಳು ಜನ ದರೋಡೆಕೋರರ...

ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು. ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ, ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ ಕೂಡ ಪರದಾಡುತ್ತಿದ್ದ ಬಾಲಕರಿಗೆ ಪೊಲೀಸ್ ಇಲಾಖೆಯಿಂದ ನೆರವು ನೀಡಲಾಗಿದೆ. ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ ಐ ಬಸವರಾಜ್ ಮಬನೂರು ಸೇರಿ ಇಡೀ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಬಡ ಬಾಲಕರ ನೆರವಿಗೆ ಬಂದಿದ್ದಾರೆ.

ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!

ಹುನಗುಂದದಲ್ಲಿ ಬೋರವೆಲ್ ನಿಂದ ವಿದ್ಯುತ್ ಪ್ರವಹಿಸಿ ಯುವಕನ ದಾರುಣ ಸಾವು..! ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗದ್ದೆಯಲ್ಲಿ ನೀರು ಹಾಯಿಸಲು ಹೋಗಿದ್ದ ಯುವಕನೋರ್ವ ವಿದ್ಯುತ್ ಸ್ಪರ್ಶಿಸಿ ದಾರುಣ ಸಾವು ಕಂಡಿದ್ದಾನೆ. ಜೊತೆಗೆ ತನ್ನ ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಈ ಮೂಲಕ ತಾಲೂಕಿನ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನೇತ್ರದಾನ ಮಾಡಿದ ಯುವಕನಾಗಿ ಪ್ರೇರಕ ಶಕ್ತಿಯಾಗಿದ್ದಾನೆ. ಜಿನೇಂದ್ರ ಪಾರ್ಶ್ವನಾಥ್ ಬಸ್ತವಾಡ್ (18) ಎಂಬುವ ಯುವಕನೇ ದಾರುಣ ಸಾವು ಕಂಡಿದ್ದು, ಇಂದು ಬುಧವಾರ ತನ್ನ ಗದ್ದೆಯಲ್ಲಿ ಬೋರವೆಲ್ ಶುರು ಮಾಡಲು ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಹಿಡಿದು ವಿದ್ಯುತ್ ಪ್ರವಹಿಸಿದೆ. ಹೀಗಾಗಿ, ಗಂಭೀರ ಗಾಯಗೊಂಡು ಬಿದ್ದಿದ್ದ ಯುವಕನಿಗೆ ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ‌ ಮೃತಪಟ್ಟಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಸಾವಿನಲ್ಲೂ ಸಾರ್ಥಕತೆ..! ಇನ್ನು, ಯುವಕ ವಿದ್ಯುತ್ ಅವಘಡದಲ್ಲಿ ಸಾವನ್ನಪ್ಪಿದ ನಂತರ ಆತನ ನೇತ್ರದಾನ ಮಾಡಲು ಶಿರಸಿಯ ಲಯನ್ಸ್ ನಯನ ನೇತ್ರ ಭಂಡಾರಕ್ಕೆ ಸಂಪರ್ಕಿಸಿದ್ದಾರೆ....

ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ‌. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಿನ್ನೆಯಿಂದಲೂ..! ಅವ್ರು ಅಕ್ಷರಶಃ ಅನಾಥ ಸ್ಥಿತಿಯಲ್ಲಿರೋ ಬಾಲಕರು, ತಾಯಿ ಕಳೆದ ವರ್ಷವಷ್ಟೇ ಹೃದಯಾಘಾತದಿಂದ ತೀರಿಕೊಂಡಿದ್ದಾರೆ. ಅಪ್ಪ ಅನ್ನಿಸಿಕೊಂಡ ವ್ಯಕ್ತಿ ಮಕ್ಕಳ ಬಗ್ಗೆ ಕಣ್ಣೆತ್ತಿಯೂ ನೋಡಲ್ಲ. ಹೀಗಾಗಿ, ಇದೇ ವೇಳೆ ನಾಯಿಗಳ ದಾಳಿಗೆ ತುತ್ತಾದ ಏಳು ವರ್ಷದ ಕಂದಮ್ಮನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲೂ ದುಡ್ಡಿಲ್ಲ. ಬಾಲಕನ ಅಣ್ಣ 17 ವರ್ಷದ ನಾಗರಾಜ ತನ್ನ ತಮ್ಮನ ಚಿಕಿತ್ಸೆಗಾಗಿ ಅಲೆಯುತ್ತಿದ್ದ. ಇದೇ ವೇಳೆ ಪೊಲೀಸಪ್ಪನ...

error: Content is protected !!