ಬೆಂಗಳೂರು : ರಾಜ್ಯ ಸರ್ಕಾರದಿಂದ ಕೊರೋನಾ ನಿಯಂತ್ರಣಕ್ಕಾಗಿ ಟಫ್ ರೂಲ್ಸ್ ಜಾರಿಗೊಳಿಸಲಾಗಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕೊರೋನಾ ಹೆಚ್ಚಳದ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿದೆ. ವಿದ್ಯಾಗಮವೂ ಸೇರಿದಂತೆ 6 ರಿಂದ 9ನೇ ತರಗತಿ ಸ್ಥಗಿತಗೊಳಿಸಲಾಗಿದೆ. 10, 11 ಹಾಗೂ 12ನೇ ತರಗತಿಗಳು ಪ್ರಸ್ತುತ ಇರುವಂತೆಯೇ ಮುಂದುವರೆಯುತ್ತವೆ. ಆದಾಗ್ಯೂ ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳ ತರಗತಿಗಳಲ್ಲಿ ಮಂಡಳಿಯು, ವಿವಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳ್ನು ಹೊರತು ಪಡಿಸಿ, ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ. ವಸತಿ ಶಾಲೆಗಳು, ಬೋರ್ಡಿಂಗ್ ಇರುವ ಶಾಲೆಗಳಲ್ಲಿ 10, 11 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಹೊರತಾಗಿ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿರುತ್ತದೆ. ಆದ್ರೇ ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿರುವುದಿಲ್ಲ. ಅಪಾರ್ಮೆಂಟ್ ಕಾಂಪ್ಲೆಕ್ಸ್ ಗಳಲ್ಲಿ, ಸಾಮಾನ್ಯವಾಗಿ ನಿವಾಸಿಗಳು, ಜನರು ಸೇರುವ ಸ್ಥಳಗಳಾದ ಜಿಮ್, ಪಾರ್ಟಿ ಹಾಲ್...
Top Stories
ಮತ್ತೆ ಕೋಡಿ ಮಠದ ಶ್ರೀಗಳು ನುಡಿದ್ರು ಸ್ಪೋಟಕ ಭವಿಷ್ಯ..!
ವಾಡಿಕೆಗಿಂತ ಒಂದು ವಾರ ಮೊದಲೇ ಕೇರಳಕ್ಕೆ ಆಗಮಿಸಿದ ನೈಋತ್ಯ ಮುಂಗಾರು ಮಳೆ..!
ದೇಶದಲ್ಲಿ ಮತ್ತೆ ಕೋವಿಡ್ ಆತಂಕ : ರಾಜ್ಯದಲ್ಲಿ 38 ಕೇಸ್, ಬೆಂಗಳೂರಲ್ಲೇ 32 ಸೋಂಕಿತರು..!
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಜಿಲ್ಲೆ ಸೇರಿ, ರಾಜ್ಯದಲ್ಲಿ ಒಂದು ವಾರ ಭಾರಿ ಮಳೆ ಮುನ್ಸೂಚನೆ, 6 ಜಿಲ್ಲೆಗಳಿಗೆ ರೆಡ್ ಅಲರ್ಟ್..!
ಮುಂಡಗೋಡಲ್ಲಿ ಮೊಳಗಿದ ದೇಶ ಭಕ್ತಿಯ ಘೋಷವಾಕ್ಯ..! “ಆಪರೇಷನ್ ಸಿಂಧೂರ” ವೀರ ಸೈನಿಕರಿಗೆ ಗೌರವದ ಬೆಂಬಲ..!
ಕಾರವಾರ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ : ಪದಾಧಿಕಾರಿಗಳ ಅವಿರೋಧ ಆಯ್ಕೆ
RCB ಕನಸು ಭಗ್ನಗೊಳಿಸಿದ ಸನ್ ರೈಸರ್ಸ್, ಇನ್ನೇನಿದ್ರೂ ಪಂಜಾಬ್ ಮೇಲೆ ಬೆಂಗಳೂರಿಗರ ಕಣ್ಣು..!
ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆಯಿಂದ, ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ..!
ದೆಹಲಿಯಲ್ಲಿ 23 ಕೋರೊನಾ ಕೇಸ್ ಗಳು ವರದಿ; ಭಯ ಬೇಡ, ಸಜ್ಜಾಗಿರಲು ಆಸ್ಪತ್ರೆಗಳಿಗೆ ಸರ್ಕಾರದ ಸೂಚನೆ
ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆ ವಾಹನ ಸಂಚಾರ ಸಂಪೂರ್ಣ ಬಂದ್, ಡೀಸಿ ಆದೇಶ..!
ಜಿಲ್ಲೆಯಲ್ಲಿನ ಸೇತುವೆಗಳ ದೃಡತೆ ಬಗ್ಗೆ ವರದಿ ನೀಡಿ, ಅನಾಹುತವಾದಲ್ಲಿ ಅಧಿಕಾರಿಗಳೇ ಹೊಣೆ-ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಎಚ್ಚರಿಕೆ..!
ಜಿಲ್ಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ರ ಅವಧಿ ವಿಸ್ತರಣೆ..!
ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಮಸ್ಯೆಗಳಿಗೆ ತುರ್ತು ಸ್ಪಂದನೆ, ಮಳೆಯಿಂದ ನಿಮಗೂ ಸಮಸ್ಯೆ ಆದಲ್ಲಿ ತಕ್ಷಣವೇ ಇಲ್ಲಿ ಕರೆ ಮಾಡಿ..!
ಪಬ್ಲಿಕ್ ಫಸ್ಟ್ ನ್ಯೂಸ್: ಉತ್ತರ ಕನ್ನಡದ ಇಂದಿನ ಸಂಕ್ಷಿಪ್ತ ಸುದ್ದಿಗಳು
ಮುಂಡಗೋಡ ಸೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ..!
ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ನೇಮಕ..!
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವಂತಿಲ್ಲ, ನದಿಗೆ ಇಳಿಯುವಂತಿಲ್ಲ ಪ್ರತಿಬಂಧಕಾಜ್ಞೆ ಹೊರಡಿಸಿದ ಡಿಸಿ..!
ಮಳೆಗಾಲದಲ್ಲಿ ಜೀವಹಾನಿಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಸಚಿವ ಮಂಕಾಳ ವೈದ್ಯ
ಕೊರೋನಾ ಎರಡನೇ ಅಲೆ ಭೀತಿ, ಮತ್ತೆ ಟಫ್ ರೂಲ್ಸ್… 6 ರಿಂದ 9 ನೇ ತರಗತಿಗಳು ಬಂದ್.
ನಂದಿಕಟ್ಟಾ ಗ್ರಾಮದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ
ಮುಂಡಗೋಡ- ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋರೊನಾ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.. ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಹೊಂಡ, ಬಸಾಪುರ, ರಾಮಾಪುರ, ಕೆಂದಲಗೇರಿ ಯರೇಬೈಲ್ ಗ್ರಾಮಗಳಲ್ಲಿರೋ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕಲಾಯಿತು.. ಈ ಲಸಿಕೆ ಹಾಕುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅದ್ಯಕ್ಷೆ ಮಾರೆಕ್ಕ ದುರ್ಗ ಮುರ್ಗಿ, ಉಪಾಧ್ಯಕ್ಷ ಬಸವರಾಜ್ ನಡುವಿನಮನಿ, ಸದಸ್ಯರಾದ ಸಂತೋಷ ಬೋಸ್ಲೆ, ಬರಮು ಅಲೂರು, ರಮೇಶ್ ನೇಮಣ್ಣವರ್, ರೇಷ್ಮಾ ಕಲಘಟಗಿ, ವಿದ್ಯಾ ಕವಟೆ, ಮಹ್ಮದ್ ಕವಲವಾಡ್ ಪರಶು ಕಬ್ಬೇರ್ ಸೇರಿದಂತೆ ಹಲವರು ಭಾಗವಹಿಸಿದ್ದರು..
ಇಂದೂರಿನಲ್ಲಿ ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಸಚಿವ ಹೆಬ್ಬಾರ್ ಚಾಲನೆ
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾ 5 ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಉದ್ಗಾಟಿಸಿದ್ರು.. ಇಂದೂರು ಗ್ರಾಮದ ಶ್ರೀ ಗುರು ಗೋವಿಂದ ಸಂತ ಶಿಶುನಾಳ ಶರೀಫರ ಮಠದ ಆವರಣದಲ್ಲಿ ಆಯೋಜನೆಗೊಂಡಿರೋ ಸಮ್ಮೇಳನದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಸಹದೇವಪ್ಪ ನಡಗೇರ್ ಅವರನ್ನು ಸಚಿವರು ಸನ್ಮಾನಿಸಿ ಅಭಿನಂದಿಸಿದರು ಹಾಗೂ ಸಮ್ಮೇಳನಾಧ್ಯಕ್ಷರ ಹಿತ ನುಡಿಯನ್ನು ಲೋಕಾರ್ಪಣೆಗೊಳಿಸಿದರು. ಸಮ್ಮೇಳನದಲ್ಲಿ, ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಜಿಲ್ಲಾಪಂಚಾಯತ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ಚುಸಾಪ ಜಿಲ್ಲಾಧ್ಯಕ್ಷ ಜೆ.ಯು.ನಾಯಕ, ತಾಲೂಕಾ ಘಟಕದ ಅಧ್ಯಕ್ಷ ಶ್ರೀ ರಮೇಶ ಅಂಬಿಗೇರ ಹಾಗೂ ಪ್ರಮುಖರು, ಸಾಹಿತಿಗಳು ಹಾಜರಿದ್ದರು..
ಮಹಾರಾಷ್ಟ್ರದಲ್ಲಿ ಮತ್ತೆ ಕೊರೊನಾ ಹಾವಳಿ: ಸವದತ್ತಿ ಎಲ್ಲಮ್ಮನ ದೇಗುಲ ಬಂದ್, ಇನ್ಮುಂದೆ ಭಕ್ತರಿಗಿಲ್ಲ ದರ್ಶನ ಭಾಗ್ಯ
ಬೆಳಗಾವಿ- ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾದ ಹಿನ್ನೆಲೆ ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕ ದೇವಿ ದೇವಸ್ಥಾನಗಳ ಸಾರ್ವಜನಿಕರ ದರ್ಶನಕ್ಕೆ ನಿರ್ಬಂಧಿಸಲಾಗಿದೆ.. ನಿರ್ಬಂಧ ಹೇರಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.. ಬರೋಬ್ಬರಿ 11ತಿಂಗಳ ನಂತರ, ಕಳೆದ ಫೆ.1 ರಂದು ಮತ್ತೆ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.. ಸದ್ಯ ಪಕ್ಕದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ, ಭಕ್ತಾದಿಗಳ ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ..
ಫೆ. 1 ರಿಂದ ಸವದತ್ತಿ ಯಲ್ಲಮ್ಮದೇವಸ್ಥಾನ ಓಪನ್- 11ತಿಂಗಳ ನಂತ್ರ ಮತ್ತೆ ಏಳುಕೊಳ್ಳದಲ್ಲಿ ಮೊಳಗಲಿದೆ ಉದೋ..ಉದೋ..
ನಿತ್ಯವೂ ಪ್ರತಿಧ್ವನಿಸುತ್ತಿದ್ದ ಉದೋ.. ಉದೋ..ಯಲ್ಲಮ್ಮ.. ನಾಮಸ್ಮರಣೆ ಕೇಳಿ ಬರೋಬ್ಬರಿ 11ತಿಂಗಳೇ ಗತಿಸಿದೆ..ರಾಜ್ಯ ಹೊರ ರಾಜ್ಯಗಳ ಲಕ್ಷಾಂತರ ಭಕ್ತರಿಗೆ ಸವದತ್ತಿಯ ಯಲ್ಲಮ್ಮದೇವಿಯ ದರ್ಶನವೇ ಸಿಗದೇ ನಿತ್ಯವೂ ಚಡಪಡಿಸುತ್ತಿದ್ದಾರೆ..ಯಾವಾಗ ದೇವಿ ದರ್ಶನ ಸಿಗುತ್ತೆ ಅಂತ ಭಕ್ತರು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದರು.. ಕೊನೆಗೂ ಭಕ್ತರ ನಿರೀಕ್ಷೆ ಕೈಗೂಡಿದೆ. ಇದೇ ಫೆಬ್ರವರಿ 1ರಿಂದ ಪ್ರಸಿದ್ಧ ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಭಕ್ತರಿಗೆ ತೆರೆದುಕೊಳ್ಳುತ್ತಿದೆ. ಇದಕ್ಕಾಗಿ ದೇವಸ್ಥಾನದ ಆವರಣದಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸವದತ್ತಿ ಯಲ್ಲಮ್ಮ..ಕರ್ನಾಟಕ- ಮಹಾರಾಷ್ಟ್ರ, ತಮಿಳುನಾಡಿನ ಕೋಟ್ಯಾಂತರ ಭಕ್ತರ ಆರಾದ್ಯ ದೇವತೆ..ವರ್ಷದ 9ತಿಂಗಳು ಇಲ್ಲಿ ಜಾತ್ರೆ ನಡೆಯುತ್ತೆ… ಜಾತ್ರೆ ಸಂದರ್ಭದಲ್ಲಿ ಭಂಡಾರದ ಜೊತೆಗೆ ಉದೋ.. ಉದೋ.. ಯಲ್ಲಮ್ಮ ಎಂಬ ನಾಮ ಸ್ಮರಣೆ ಗುಡ್ಡದ ತುಂಬ ಪ್ರತಿಧ್ವನಿಸುತ್ತದೆ… ಇಂತಹ ವೈಭವದ ಜಾತ್ರೆ ಸಂಭ್ರಮಕ್ಕೆ ಕೊರೊನಾ ಮಹಾಮಾರಿ ಕಡಿವಾಣ ಹಾಕಿತ್ತು… ಕಳೆದ 11ತಿಂಗಳಿಂದ ಬಂದ್ ಆಗಿದ್ದ ದೇವಸ್ಥಾನವನ್ನು ನಾಳೆ ಅಂದರೆ ಫೆಬ್ರುವರಿ 1ರಂದು ರೀ ಓಪನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆಡಳಿತ...
ಹುನಗುಂದದಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
ಮುಂಡಗೋಡ- ತಾಲೂಕಿನ ಹುನಗುಂದದಲ್ಲಿ ಇಂದು ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ನಡೆಯಿತು.. ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ, ಹತ್ತಾರು ಯುವಕರು ಮನೆ ಮನೆಗೆ ತೆರಳಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದರು.. ಈ ವೇಳೆ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು..
ಪುಟ್ಟ ಮಗು ಬಿಟ್ಟು ಹೋದ್ರಾ ಪೋಷಕರು..? ಹೆತ್ತಮ್ಮನಿಗಾಗಿ ಹಂಬಲಿಸುತ್ತಿದೆ ಕಂದಮ್ಮ.. ಅಕ್ಕಿ ಆಲೂರಿನಲ್ಲಿ ಮನಕಲಕುವ ಘಟನೆ
ಹಾನಗಲ್- ಅದೇನು ನಿಷ್ಕರುಣೆಯೋ ಗೊತ್ತಿಲ್ಲ, ಅಥವಾ ಪೋಷಕರ ನಿರ್ಲಕ್ಷವೋ ಗೊತ್ತಿಲ್ಲ.. ಹಾಲುಗಲ್ಲದ ಹಸುಗೂಸನ್ನು ಪೋಷಕರು ಬಿಟ್ಟು ಹೋಗಿದ್ದಾರೆ.. ಇದು ನಡೆದದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರಿನ ನಾಲ್ಕರ ಕ್ರಾಸ್ ಬಳಿ.. ಮುದ್ದು ಕಂದನನ್ನು ಒಬ್ಬಂಟಿಯಾಗಿ ಹಡೆದ ತಾಯಿಯೊಬ್ಬಳು ಬಿಟ್ಟು ಹೋದ ಮನಕಲುಕುವ ಘಟನೆ ಇದು.. ಸುಮಾರು 8-10 ತಿಂಗಳ ಮುದ್ದಾದ ಗಂಡು ಮಗುವನ್ನು ಇಲ್ಲಿನ ಡಾಬಾ ವೊಂದರಲ್ಲಿ ಯಾರೋ ಅಪರಿಚಿತರು ಮಗುವನ್ನು ತಂದು ಆಟವಾಡಿಸುವ ನೆಪದಲ್ಲಿ ಬಿಟ್ಟು ಹೋಗಿದ್ದಾರೆ.. ಮುದ್ದಾದ ಗಂಡು ಮಗು ಕಂಡು ಸ್ಥಳೀಯರು ಮಮ್ಮಲು ಮರುಗಿದ್ದಾರೆ..ಇದನ್ನು ಗಮನಿಸಿದ ಸ್ಥಳೀಯರು ಹಾನಗಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.. ಮಗು ಪೋಷಕರ ಬಳಿ ಇದ್ದುದರ ವಿಡಿಯೋ ಲಭ್ಯವಾಗಿದೆ… ಆದರೆ ಇದು ಅವಳ ಮಗುನಾ ಅಥವಾ ಕದ್ದಿರುವ ಮಗುನಾ ಎಂಬ ವಿಚಾರ ತಿಳಿಯುವುದಕ್ಕೂ ಮುನ್ನ ಆ ಮಹಿಳೆ ನಾಪತ್ತೆಯಾಗಿದ್ದಾಳೆ.. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹಾನಗಲ್ ಪೊಲೀಸ್ ರು ಹಾಗೂ ಹಾನಗಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಂತೋಷಕುಮಾರ್, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಇದೀಗ...
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ ಅಪಘಾತದಲ್ಲಿ ದುರ್ಮರಣ- ಸಚಿವ ಹೆಬ್ಬಾರ್ ಸಂತಾಪ
ಯಲ್ಲಾಪುರ- ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಅವರ ಧರ್ಮಪತ್ನಿ ವಿಜಯಾ ಶ್ರೀಪಾದ ನಾಯ್ಕ್ ರವರ ದುರ್ಮರಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.. ಇಂದು ಮುಂಜಾನೆ ಶ್ರೀಪಾದ ನಾಯ್ಕ ಹಾಗೂ ಅವರ ಧರ್ಮಪತ್ನಿ ವಿಜಯಾ ನಾಯ್ಕ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೆಬ್ಬಾರ್ ತಮ್ಮ ಸಂತಾಪ ಸೂಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರೋ ಶಿವರಾಮ್ ಹೆಬ್ಬಾರ್, ಶ್ರಿಪಾದ ನಾಯ್ಕರು ಶೀಘ್ರ ಗಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ..
ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದುರ್ಮರಣ
ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿ, ಸಚಿವರ ಧರ್ಮಪತ್ನಿ ವಿಜಯಾ ಸಾವಿಗೀಡಾಗಿದ್ದಾರೆ.. ಅಲ್ದೆ, ಸಚಿವರ ಆಪ್ತ ಕಾರ್ಯದರ್ಶಿ ಕೂಡ ಮೃತಪಟ್ಟಿದ್ದಾರೆ.. ಇನ್ನು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಸ್ಥಿತಿ ಗಂಭೀರವಾಗಿದೆ ಅಂತಾ ತಿಳಿದು ಬಂದಿದೆ..
ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಸಚಿವರೂ ಸೇರಿ ನಾಲ್ವರಿಗೆ ಗಾಯ
ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದೆ.. ಕೇಂದ್ರ ಆಯುಷ್ ಇಲಾಖೆ ಸಚಿವರಾಗಿರೋ ಶ್ರೀಪಾದ್ ನಾಯಕ್, ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಘಟನೆ ನಡೆದಿದೆ..ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿಗೆ ಗಂಭೀರ ಗಾಯವಾಗಿರೋ ಮಾಹಿತಿ ಕೆನರಾ ನ್ಯೂಸ್ ಹಂಟ್ ಗೆ ಲಭ್ಯವಾಗಿದೆ.. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆಮಾಡಲಾಗಿದೆ..ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..