ಹೈದರಾಬಾದ್ : ಐತಿಹಾಸಿಕ ಸ್ಮಾರಕ ಚಾರ್ಮಿನಾರ್ ಬಳಿಯ ಪ್ರದೇಶವಾದ ಹೈದರಾಬಾದ್ ಓಲ್ಡ್ ಸಿಟಿಯಲ್ಲಿರುವ ಗುಲ್ಜಾರ್ ಹೌಸ್ ಬಳಿ ಶನಿವಾರ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಎಂಟು ಮಕ್ಕಳು ಸೇರಿದಂತೆ ಹದಿನೇಳು ಜನರು ಮೃತಪಟ್ಟಿದ್ದಾರೆ. ತೆಲಂಗಾಣ ಸಚಿವ ಪೊನ್ನಮ್ ಪ್ರಭಾಕರ್ ಅವರ ಪ್ರಕಾರ, ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು. ಮೃತರನ್ನು ಪ್ರಹ್ಲಾದ (70), ಮುನ್ನಿ (70), ರಾಜೇಂದರ (65), ಸುಮಿತ್ರಾ (60), ಹಮ್ಯೆ (7), ಅಭಿಷೇಕ್ (31), ಶೀತಲ್ (35), ಪ್ರಿಯನ್ಸ್ (4), ಇರಾಜ್ (2), ಆರುಷಿ (3), ರಿಷಭ್ (4), ಪ್ರಥಮ್ (1), ಅನುಯನ್ (3), ವರ್ಷ (35), ಪಂಕಜ (36), ರಜ್ಜಿನಿ (32), ಇಡ್ಡು (4) ಸೇರಿದ್ದಾರೆ. Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..! ತೆಲಂಗಾಣ ಅಗ್ನಿಶಾಮಕ ಸೇವೆಗಳ ಮಹಾನಿರ್ದೇಶಕ ವೈ ನಾಗಿ ರೆಡ್ಡಿ ಅವರ ಪ್ರಕಾರ, ಬೆಂಕಿ ಕೃಷ್ಣ ಪರ್ಲ್ಸ್ನಲ್ಲಿ ಪ್ರಾರಂಭವಾಯಿತು ಮತ್ತು...
Top Stories
ಜಿಲ್ಲೆಯಲ್ಲಿ ಮೇ.27 ರ ವರೆಗೆ ರೆಡ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025 ರ ಅವಧಿ ವಿಸ್ತರಣೆ..!
ಜಿಲ್ಲಾ ತುರ್ತು ಕಾರ್ಯಚರಣಾ ಕೇಂದ್ರದ ಮೂಲಕ ಸಮಸ್ಯೆಗಳಿಗೆ ತುರ್ತು ಸ್ಪಂದನೆ, ಮಳೆಯಿಂದ ನಿಮಗೂ ಸಮಸ್ಯೆ ಆದಲ್ಲಿ ತಕ್ಷಣವೇ ಇಲ್ಲಿ ಕರೆ ಮಾಡಿ..!
ಪಬ್ಲಿಕ್ ಫಸ್ಟ್ ನ್ಯೂಸ್: ಉತ್ತರ ಕನ್ನಡದ ಇಂದಿನ ಸಂಕ್ಷಿಪ್ತ ಸುದ್ದಿಗಳು
ಮುಂಡಗೋಡ ಸೇರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ, ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ..!
ಮೈಸೂರು ಸ್ಯಾಂಡಲ್ ಸೋಪ್ ಗೆ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ನೇಮಕ..!
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವಂತಿಲ್ಲ, ನದಿಗೆ ಇಳಿಯುವಂತಿಲ್ಲ ಪ್ರತಿಬಂಧಕಾಜ್ಞೆ ಹೊರಡಿಸಿದ ಡಿಸಿ..!
ಮಳೆಗಾಲದಲ್ಲಿ ಜೀವಹಾನಿಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಸಚಿವ ಮಂಕಾಳ ವೈದ್ಯ
ಕಡಿಮೆ CIBIL ಸ್ಕೋರ್ ಇದ್ದರೂ ₹3 ಲಕ್ಷದವರೆಗೆ ಸಾಲ ಪಡೆಯಬಹುದು; ಹೇಗೆ ಗೊತ್ತಾ..? ಮಾಹಿತಿ ಇಲ್ಲಿದೆ..!
ಕಿರುತೆರೆ ನಟಿ ಮೇಲೆ ಅತ್ಯಾಚಾರ ಆರೋಪ; ನಟ ಮಡೆನೂರು ಮನು ಬಂಧನ..!
ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಐಎಸ್ಐ ಗೂಢಚಾರದ ಜಾಲ ಭೇದಿಸಿದ ಗುಪ್ತಚರ ಸಂಸ್ಥೆಗಳು ; ಇಬ್ಬರ ಬಂಧನ..!
ಸತತ 2ನೇ ದಿನವೂ ಚಿನ್ನದ ಬೆಲೆ ಏರಿಕೆ, ಬೆಳ್ಳಿ ₹4000 ಹೆಚ್ಚಳ, ಅಷ್ಟಕ್ಕೂ ಇವತ್ತಿನ ಚಿನ್ನದ ಬೆಲೆ ಎಷ್ಟು..?
ಕೊಲೆ ಮಾಡಿ ಶವಗಳನ್ನು ಮೊಸಳೆಗೆ ಹಾಕುತ್ತಿದ್ದ ಸರಣಿ ಹಂತಕ ವೈದ್ಯನ ಬಂಧನ ; ಈತನ ಮೇಲಿದೆ 27 ಕೊಲೆ ಪ್ರಕರಣ..!
ಮುಂಡಗೋಡ ತಾಲೂಕಿನಲ್ಲಿ ಮಳೆಯ ಅರ್ಭಟ, ಇದು, ತಹಶೀಲ್ದಾರ ಕಚೇರಿಯಿಂದ ಸಾರ್ವಜನಿಕರಿಗೆ ಎಚ್ಚರಿಕೆಯ ಪ್ರಕಟಣೆ..!
ಉಕ್ಕಿ ಹರಿಯುತ್ತಿದೆ ಉಣಕಲ್ ಕೆರೆ: ವರುಣನ ಅಬ್ಬರಕ್ಕೆ ಮೈತುಂಬಿದ ಪ್ರತಿಷ್ಠಿತ ತಾಣ..!
ಬಿರುಗಾಳಿ-ಆಲಿಕಲ್ಲು ಮಳೆಯ ಹೊಡೆತಕ್ಕೆ ಇಂಡಿಗೋ ವಿಮಾನಕ್ಕೆ ಹಾನಿ ; ಕಿರುಚಿಕೊಂಡ ಪ್ರಯಾಣಿಕರು..!
ಪಾಕ್ ಹೈಕಮಿಷನ್ ನ ಮತ್ತೊಬ್ಬ ಅಧಿಕಾರಿಗೆ 24 ಗಂಟೆಯೊಳಗೆ ಭಾರತ ತೊರೆಯಲು ಆದೇಶ..!
CDPO ಆಫೀಸಲ್ಲಿ ಬ್ರಷ್ಟಾಚಾರ, ಲಂಚ ಪಡೆಯುವಾಗಲೇ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಇಬ್ಬರು ಬಲೆಗೆ..!
ಕೊನೆಗೂ ಈಡೇರಲೇ ಇಲ್ಲ RCB ಫ್ಯಾನ್ಸ್ಗಳ ಆ ಕನಸು; ಎಲ್ಲೆಡೆ ಬೇಸರ..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
ಇಸ್ಲಾಮಾಬಾದ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ (ಎಲ್ಇಟಿ) ನ ಉನ್ನತ ಕಮಾಂಡರ್ ಸೈಫುಲ್ಲಾನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅಪರಿಚಿತ ದಾಳಿಕೋರರು ಕೊಂದಿದ್ದಾರೆ ಎಂದು ವರದಿಯಾಗಿದೆ. ಈತ ಪಾಕಿಸ್ತಾನದ ಸಿಂಧ್ನ ಬಾಡಿನ್ ಜಿಲ್ಲೆಯಲ್ಲಿ ಕೊಲ್ಲಲ್ಪಟ್ಟ. ಮೂಲಗಳ ಪ್ರಕಾರ, ಭಾನುವಾರ ಸಿಂಧ್ನ ಬಾಡಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಸೈಫುಲ್ಲಾ ಕೊಲ್ಲಲ್ಪಟ್ಟ. ಈತನ ಸಾವು ಈ ಪ್ರದೇಶದಲ್ಲಿ ಎಲ್ಇಟಿಯ ಕಾರ್ಯಾಚರಣೆಗಳಿಗೆ ಗಮನಾರ್ಹ ಹೊಡೆತ ಎಂದು ಹೇಳಲಾಗಿದೆ. Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..! ಮೊಹಮ್ಮದ್ ಸಲೀಮ್, ವಿನೋದಕುಮಾರ, ಖಾಲಿದ್, ವನಿಯಾಲ್, ವಾಜಿದ್ ಮತ್ತು ಸಲೀಂ ಭಾಯ್ ಸೇರಿದಂತೆ ಬಹು ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಸೈಫುಲ್ಲಾ, ಎಲ್ಇಟಿಯ ಕಾರ್ಯಾಚರಣೆಗಳು, ನೇಮಕಾತಿ, ನಿಧಿಸಂಗ್ರಹಣೆ ಮತ್ತು ಗಡಿಯಾಚೆಗಿನ ಒಳನುಸುಳುವಿಕೆಯಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದ. Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ? ಸೈಫುಲ್ಲಾ ಭಾರತದಲ್ಲಿ ಹಲವಾರು...
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
ನವದೆಹಲಿ: ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್ನೊಳಗೂ ದೊಡ್ಡ ಆಕ್ರೋಶಕ್ಕೆ ನಾಂದಿ ಹಾಡಿದೆ. ತಾನು ತರೂರ್ ಹೆಸರು ಶಿಫಾರಸು ಮಾಡದೇ ಇದ್ದರೂ ಅವರನ್ನು ಆಯ್ಕೆ ಮಾಡಿದ ಕೇಂದ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಮೋದಿ ಸರ್ಕಾರ ರಾಜಕೀಯದ ಆಟ ಆಡುತ್ತಿದೆ’ ಎಂದಿದೆ. ಆದರೆ ‘ಇದು ನನಗೆ ಗೌರವದ ಸಂಗತಿ. ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ನನ್ನ ಸೇವೆ ಅಗತ್ಯವಿದ್ದಾಗ, ನಾನು ಅದಕ್ಕೆ ಅರ್ಹನಾಗಿದ್ದೇನೆ. ನನ್ನ ಆಯ್ಕೆಯಲ್ಲಿ ರಾಜಕೀಯ ಏನೂ ಇಲ್ಲ ಎನ್ನುವ ಮೂಲಕ ಕಾಂಗ್ರೆಸ್ ತರೂರ್ ತಿರುಗೇಟು ನೀಡಿದ್ದಾರೆ. Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ? ಕಾಂಗ್ರೆಸ್ಗೆ ಶಾಕ್: ವಿದೇಶಕ್ಕೆ ಕಳುಹಿಸುವ ನಿಯೋಗಕ್ಕೆ ನಿಮ್ಮ ನಿಮ್ಮ...
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Gold Rate Today: ಕಳೆದ ವಾರ ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. ಆದರೆ, ನಿನ್ನೆ ಶನಿವಾರ ಸ್ವಲ್ಪ ಏರಿಕೆ ದಾಖಲಿಸಿತ್ತು. ಆದರೆ, ಇಂದು ಭಾನುವಾರ ಬಂಗಾರದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮೇ 18 ರಂದು ಬೆಂಗಳೂರಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ವಾರದಲ್ಲಿ ಚಿನ್ನದ ಬೆಲೆ ಸಾವಿರಾರು ರೂಪಾಯಿ ಕುಸಿತ ಕಂಡಿತ್ತು. ಆದರೆ,ನಿನ್ನೆ ಶನಿವಾರದಂದು ಬಂಗಾರದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿತ್ತು. ಆದರೆ, ಇಂದು ಮೇ 18 ರಂದು ಚಿನ್ನದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿವೆ. ಬೆಂಗಳೂರಲ್ಲಿ ಇಂದು ಭಾನುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಇಂದು ಸ್ವಲ್ಪ ಹೆಚ್ಚಿದ್ದರೂ, ಗರಿಷ್ಠ ಮಟ್ಟದಿಂದ ನೋಡಿದಾಗ ಇನ್ನೂ ತುಂಬಾ ಕಡಿಮೆಯಾಗಿದೆ. ಸ್ಪಾಟ್ ಚಿನ್ನದ ದರ ಪ್ರಸ್ತುತ ಔನ್ಸ್ಗೆ $3203 ನಲ್ಲಿ ವಹಿವಾಟು...
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಮೇ 20 ಹಾಗೂ ಕರಾವಳಿ ಜಿಲ್ಲೆಗಳಿಗೆ ಮೇ 21ರವರೆಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಮೇ 19ರಂದು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಊಡುಪಿ ಹಾಗೂ ದಕ್ಷಿಣ ಕನ್ನಡ ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬೀದರ, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..! ಮೇ...
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
ಸಿಂಗಾಪುರದಲ್ಲಿ ಮೇ 3ಕ್ಕೆ ಅಂತ್ಯವಾದ ವಾರದಲ್ಲಿ 14200 ಕೋವಿಡ್ ಪ್ರಕರಣ ದಾಖಲಾಗಿದೆ. ಇದು ಹಿಂದಿನ ವಾರಕ್ಕೆ ಹೋಲಿಸಿದರೆ ಶೇ.28ರಷ್ಟು ಹೆಚ್ಚಾಗಿದೆ. ಕಳೆದ ವಾರ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣದಲ್ಲೂ ಶೇ.30ರಷ್ಟು ಏರಿಕೆ ಕಂಡುಬಂದಿದೆ. ಜನರಲ್ಲಿ ಕೋವಿಡ್ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿರಬಹುದು. ಆದರೆ ಪ್ರಸಕ್ತ ಕಾಣಿಸಿಕೊಂಡಿರುವ ಕೋವಿಡ್ ತಳಿ ಹೆಚ್ಚು ಪ್ರಸರಣಕಾರಿ ಎಂಬುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇನ್ನೊಂದೆಡೆ ಹಾಂಕಾಂಗ್ನಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಈ ವರ್ಷದ ಗರಿಷ್ಠಕ್ಕೆ ತಲುಪಿದೆ. ಅಂತೆಯೇ, ಸಾವಿನ ಪ್ರಕರಣಗಳೂ ಹೆಚ್ಚಾಗುತ್ತಿವೆ. ನೀರಿನಲ್ಲಿ ಕಂಡುಬರುತ್ತಿರುವ ವೈರಾಣು, ಹೆಚ್ಚುತ್ತಿರುವ ಕೋವಿಡ್ ಪರೀಕ್ಷೆ ಮತ್ತು ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯಿಂದ ಮತ್ತೆ ಕೊರೋನಾ ಸ್ಫೋಟವಾಗುವ ಭಯ ಉದ್ಭವವಾಗಿದೆ. IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್ ಕೊರೋನಾ ಮೊದಲ ಬಾರಿ 2019ರ ನವೆಂಬರ್ನಲ್ಲಿ ಪತ್ತೆಯಾಗಿದ್ದು, 704,753,890 ಜನರಲ್ಲಿ...
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
Gold Price Today : ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಏರಿಕೆಗೆ ಸಾಕ್ಷಿಯಾಗಿದ್ದ ಚಿನ್ನದ ಬೆಲೆಯು ವೀಕೆಂಡ್ನಲ್ಲಿ ಸ್ಥಿರವಾಗಿದೆ. ಸತತ ಎರಡು ದಿನ ಇಳಿಕೆ ಬಳಿಕ ಮೇ 16ರಂದು ಹಳದಿ ಲೋಹದ ಬೆಲೆ ಏರಿಕೆಯಾಗಿತ್ತು. ಆದ್ರೆ ಇಂದು ಅಂದ್ರೆ ಮೇ 17ರಂದು ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯು ಕೂಡ ಸ್ಥಿರವಾಗಿದೆ. ಹಾಗಿದ್ರೆ ಶನಿವಾರ 24 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆ ಕೆಜಿಗೆ ಎಷ್ಟು? ಎಂಬುದನ್ನು ಇಲ್ಲಿ ತಿಳಿಯಿರಿ. ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 87,350 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 95,280 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 97,000 ರೂಪಾಯಿನಷ್ಟೇ ಉಳಿದಿದೆ. ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಸತತ ಎರಡು ದಿನಗಳ ಇಳಿಕೆ ಬಳಿಕ ಶುಕ್ರವಾರ ದಿಢೀರ್ ಚಿನ್ನದ ಬೆಲೆ ಹೆಚ್ಚಾಗಿತ್ತು. ಆದ್ರೆ...
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
RCB-KKR IPL T20 News: ಬೆಂಗಳೂರು: ಆರ್ಸಿಬಿ ಹಾಗೂ ಕೆಕೆಆರ್ ವಿರುದ್ಧ ಪಂದ್ಯ ಒಂದೇ ಒಂದು ಬಾಲ್ ಆಡದೆ ಮಳೆಯಿಂದಾಗಿ ರದ್ದಾಯಿತು. ಆ ಮೂಲಕ ಆರ್ಸಿಬಿ ಹಾಗೂ ಕೆಕೆಆರ್ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಆದ್ರೆ ಇಂದಿನ ಪಂದ್ಯ ರದ್ದಾಗಿದ್ದರಿಂದ ಕೆಕೆಆರ್ ಟೂರ್ನಿಯಿಂದ ಹೊರಬಿದ್ದಿತು. ಭಾರತ- ಪಾಕಿಸ್ತಾನ (India Pakistan) ಸಂಘರ್ಷದ ಹಿನ್ನೆಲೆ ಮೇ 8ರಂದು ದಿಢೀರನೆ ರದ್ದಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳು ಬರೋಬ್ಬರಿ 10 ದಿನಗಳ ಬಳಿಕ ಪುನರ್ ಆರಂಭಗೊಂಡಿವೆ. ಆದ್ರೆ, ದುರಾದೃಷ್ಟ ಎಂಬಂತೆ ಚಿನ್ನಸ್ವಾಮಿಯಲ್ಲಿ ಆಯೋಜನೆಗೊಂಡಿದ್ದ ಇಂದಿನ ಪಂದ್ಯ ಒಂದೇ ಒಂದು ಬಾಲ್ ಆಡದೆ ಮಳೆಯಿಂದಾಗಿ ರದ್ದಾಯಿತು. ಆ ಮೂಲಕ ಆರ್ಸಿಬಿ ಹಾಗೂ ಕೆಕೆಆರ್ (RCB vs KKR) ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಆದ್ರೆ, ಇಂದಿನ ಪಂದ್ಯ ರದ್ದಾಗಿದ್ದರಿಂದ ಕೆಕೆಆರ್ ಟೂರ್ನಿಯಿಂದ ಹೊರಬಿದ್ದರೆ, ಆರ್ಸಿಬಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಖಚಿತಪಡಿಸಿಕೊಂಡಿತು. ಅಗ್ರಸ್ಥಾನಕ್ಕೇರಿದ ಆರ್ಸಿಬಿ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ...
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ನವದೆಹಲಿ: ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಅಂಕಿತ ಹಾಕಲು ಗಡುವು ವಿಧಿಸಿ ಸುಪ್ರೀಂ ಕೋರ್ಟ್ ಇತ್ತೀಚಿಗೆ ನೀಡಿದ್ದ ತೀರ್ಪಿನ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 143 (1)ನೇ ವಿಧಿಯಡಿ ಸುಪ್ರೀಂ ಕೋರ್ಟ್ಗೆ ಪತ್ರ ಬರೆದಿದ್ದು, ಅದರಲ್ಲಿ 14 ಪ್ರಶ್ನೆಗಳನ್ನು ಕೇಳಿದ್ದಾರೆ. ಪತ್ರಕ್ಕೆ ಉತ್ತರ ನೀಡಲು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ರಚಿಸಬೇಕಿದೆ. ಸಂವಿಧಾನದ 143(1) ನೇ ವಿಧಿಯು ಕಾನೂನು ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್ನ ಅಭಿಪ್ರಾಯ ಪಡೆಯಲು ಅವಕಾಶ ನೀಡುತ್ತದೆ. ಮಸೂದೆಗಳಿಗೆ ಒಪ್ಪಿಗೆ ನೀಡಲು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವು ಪಾಲಿಸದೆ ಹೋದರೆ ಆಗ ಅದನ್ನು ಅವರಿಂದ ಸಮ್ಮತಿ ದೊರೆತಿದೆ ಎಂದು ಭಾವಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನವನ್ನು ರಾಷ್ಟ್ರಪತಿ ಮುರ್ಮು ಅವರು ನಿರ್ದಿಷ್ಟವಾಗಿ ಪ್ರಶ್ನಿಸಿದ್ದಾರೆ. ಸಂವಿಧಾನದಲ್ಲಿ ಅಂತಹ ಯಾವುದೇ ಗಡುವು/ಷರತ್ತು ಇಲ್ಲದಿರುವಾಗ ಸುಪ್ರೀಂಕೋರ್ಟ್ ಅಂತಹ ತೀರ್ಪು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು...
ರಾಜ್ಯದ 200 ಪೊಲೀಸ್ರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ಪುರಸ್ಕಾರ ಘೋಷಣೆ..!
ಕರ್ನಾಟಕದಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪೊಲೀಸ್ ಇಲಾಖೆಯಲ್ಲಿ ಸಾಧಕರಿಗೆ ಬೆನ್ನು ತಟ್ಟುವ ಕಾರ್ಯ ನಡೀತಿದೆ. ಮೊದಲ ಬಾರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ರ ಅಡಿ ಪುರಸ್ಕಾರಕ್ಕೆ ರಾಜ್ಯದ 200 ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅದ್ರಲ್ಲಿ ಉತ್ತರ ಕನ್ನಡದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಪುರಸ್ಕಾರ ಘೋಷಣೆಯಾಗಿದೆ. ಉತ್ತರ ಕನ್ನಡ ಎಸ್ಪಿ ನಾರಾಯಣ ಎಂ. ರವರಿಗೆ ಹಾಗೂ ರಾಮನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿ, ಸದ್ಯ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಿರೋ ಪಿಎಸ್ಐ ಬಸವರಾಜ್ ಮಬನೂರರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅಂದಹಾಗೆ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ಪರವಾದ ನಿಷ್ಟೆ, ಸಾಧನೆಗಳನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗ್ತಿದೆ. ಹೀಗಾಗಿ, ಉತ್ತರ ಕನ್ನಡದ ಎಸ್ಪಿ ನಾರಾಯಣ್ ಎಂ. ಹಾಗೂ ಹಳಿಯಾಳ ಪಿಎಸ್ಐ ಬಸವರಾಜ್ ಮಬನೂರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.