ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಗೆ ಕೃಷ್ಣ ಹಿರೇಹಳ್ಳಿ ನೂತನ ಅಧ್ಯಕ್ಷ..! ಜ್ಞಾನದೇವ ಗುಡಿಹಾಳ್ ರಿಗೆ ಕೋಕ್..!

ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಗೆ ಕೃಷ್ಣ ಹಿರೇಹಳ್ಳಿ ನೂತನ ಅಧ್ಯಕ್ಷ..! ಜ್ಞಾನದೇವ ಗುಡಿಹಾಳ್ ರಿಗೆ ಕೋಕ್..!

ಮುಂಡಗೋಡ ಬ್ಲಾಕ್ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆಯಾಗಿದೆ. ತಾಲೂಕಾ ಕಾಂಗ್ರೆಸ್ ನ ಹಿರಿಯ ಮುಖಂಡ ಕೃಷ್ಣ ಹಿರೇಹಳ್ಳಿಯವರನ್ನು ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಸೆಪ್ಟೆಂಬರ್ 20 ರಂದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಆದ್ರೆ, ಅದು ಒಂದು ವಾರದ ನಂತರ ಬಹಿರಂಗವಾಗಿದೆ. ದಿಟ್ಟ ಹೆಜ್ಜೆ..! ಅಸಲು, ಮುಂಡಗೋಡ ಕಾಂಗ್ರೆಸ್ ಗೆ ಇಂತಹದ್ದೊಂದು ಬದಲಾವಣೆಯ ಅವಶ್ಯಕತೆ ಇತ್ತು. ಹಾಗಂತಾ ಕಳೆದ ವಿಧಾನಸಭಾ ಚುನಾವಣೆ ಹೊತ್ತಿನಲ್ಲೇ ತಾಲೂಕಾ ಕಾಂಗ್ರೆಸ್ ನಲ್ಲಿ ಬಹಿರಂಗವಾಗೇ ಅಧ್ಯಕ್ಷರ ಬದಲಾವಣೆಗೆ ಆಗ್ರಹ, ಆಕ್ರೋಶಗಳು ಭುಗಿಲೆದ್ದಿದ್ದವು ಹೀಗಾಗಿ, ನಿರ್ಗಮಿತ ಅಧ್ಯಕ್ಷ ಜ್ಞಾನದೇವ ಗುಡಿಹಾಳರ ವಿರುದ್ಧ ರಾಜ್ಯ ನಾಯಕರ ಎದುರು ಸಾಕಷ್ಟು ಆರೋಪಗಳೂ ಸ್ಫೋಟಗೊಂಡಿದ್ದವು ಹೀಗಾಗಿ, ರಾಜ್ಯ ಕಾಂಗ್ರೆಸ್ ಮಹತ್ವದ ತೀರ್ಮಾನ ಮಾಡಿದೆ. ಕೃಷ್ಣ ಹಿರೇಹಳ್ಳಿಯವರನ್ನ ಅಧ್ಯಕ್ಷರನ್ನಾಗಿ ನೇಮಿಸಿದೆ.

ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..!  ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಆಸ್ತಿ ಕೊಟ್ಟವರ ಬಾರಾ ಬಾನಗಡಿಗೆ ಬಲಿಯಾಯ್ತು ಜೀವ..! ಮುಂಡಗೋಡಿನಲ್ಲಿ ಬಂಗಾರದಂಗಡಿ ಮಾಲೀಕನ ಆತ್ಮಹತ್ಯೆ..!

ಮುಂಡಗೋಡ ಪಟ್ಟಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಗೋಲ್ಡ್ ಸ್ಮಿತ್ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಭೂ ವ್ಯವಹಾರದಲ್ಲಿ ಆಗಿರೋ ದಗಲ್ಬಾಜಿಗೆ ಮನನೊಂದು ಸುಸೈಡ್ ಮಾಡಿಕೊಂಡಿದ್ದಾರೆ ಅಂತಾ ಮೃತನ ಪತ್ನಿ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ‌. ಪರಿಣಾಮ ಹುಬ್ಬಳ್ಳಿಯ 6 ಜನರ ವಿರುದ್ಧ ಕೇಸು ದಾಖಲಾಗಿದೆ. ಜ್ಯುವೇಲ್ಲರಿ ಶಾಪ್ ಮಾಲೀಕ..! ಅಂದಹಾಗೆ, ಮುಂಡಗೋಡ ಪಟ್ಟಣದಲ್ಲಿ ಜ್ಯುವೇಲ್ಲರಿ ಶಾಪ್ ನಡೆಸುತ್ತಿದ್ದ ಆಶ್ರಿತ್ ಮೋಹನ್ ವೇರ್ಣೇಕರ್(45) ಎಂಬುವವನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೂ ವ್ಯವಹಾರದಲ್ಲಿ ಮೋಸ..! ಅಸಲು, ಮುಂಡಗೋಡಿನಲ್ಲಿ ಬಸ್ ನಿಲ್ದಾಣದ ಎದುರುಗಡೆಯೇ ಮನೆ ಹಾಗೂ ಜ್ಯವೇಲ್ಲರಿ ಅಂಗಡಿ ನಡೆಸುತ್ತಿದ್ದ ಆಶ್ರಿತ್ ಹುಬ್ಬಳ್ಳಿಯಲ್ಲೊಂದು ಜಾಗ ಖರೀದಿಸಿದ್ದ. ಈತನಿಗೆ ಹುಬ್ಬಳ್ಳಿಯ ಶಮಶುದ್ದೀನ ಅಬ್ದುಲ ಲತೀಫ್ ಪಟವೇಗರ, ಕುಶಾಲಚಂದ್ರ ಬಾಬುಲಾಲ ಜೈನ್, ಉಪಾದೇವಿ ಕೋಂ ಕುಶಾಲಚಂದ್ರ ಜೈನ್, ಸಾಧಿಕ ಜಕಾಡಿ, ಮುನಾಫ್ ಪಟವೇಗರ ಹಾಗೂ ಜಾವೀದ್ ಅಹ್ಮದ ಬ್ಯಾಳಿ ಇವರೆಲ್ಲರೂ ಸೇರಿ ಹುಬ್ಬಳ್ಳಿಯ ಗಾರ್ಡನಪೇಟದಲ್ಲಿರೊ ಆಸ್ತಿ ಮಾರಾಟ ಮಾಡಿರ್ತಾರೆ. ಧಮ್ಕಿ ಹಾಕಿದ್ರು..! ಮಾರಾಟ...

ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ್ ಶೇರಖಾನೆ ನೇಮಕ..!

ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ್ ಶೇರಖಾನೆ ನೇಮಕ..!

ಮುಂಡಗೋಡ : ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಸಲ್ಮಾ ಕಿರಣ ಶೇರಖಾನೆ ಅವರನ್ನು ನೇಮಕ ಮಾಡಲಾಗಿದೆ. ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅಲ್ಕಾ ಲಂಬಾ ಅವರು ಹಾಗೂ ಡಾ.ಬಿ.ಪುಷ್ಪ ಅಮರನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಇವರ ಆದೇಶದ ಮೇರೆಗೆ ಸಲ್ಮಾ ಕಿರಣ ಶೇರಖಾನೆ ಅವರನ್ನು ಉತ್ತರ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಾತಿ ಮಾಡಲಾಗಿದೆ. ಅಖಿಲ ಭಾರತದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ಹಾಗೂ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾ‌ರ್ ಹಾಗೂ ಪಕ್ಷದ ಹಿರಿಯ ನಾಯಕ ಆ‌ರ್.ವಿ.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ಮಹಿಳೆಯರನ್ನು ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ದೇಶದ ಆಡಳಿತ ಮುಖ್ಯವಾಹಿನಿಗೆ ತರುವ ಹಾಗೂ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ದುಡಿಯುತ್ತಿರೆಂದು ನಂಬಿ ತಮಗೆ ಈ ಜವಾಬ್ದಾರಿಯನ್ನು ವಹಿಸಿದ್ದೇವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸುಜಾತಾ ರ್ ಅವರು ಸಲ್ಮಾ...

ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ವಿಧಿವಶ..!

ಮಾಜಿ ವಿಧಾನ ಪರಿಷತ್ ಸದಸ್ಯೆ ಶುಭಲತಾ ಅಸ್ನೋಟಿಕರ್ ವಿಧಿವಶ..!

ಕಾರವಾರ:ಮಾಜಿ ವಿಧಾನ ಪರಿಷತ್‌ ಸದಸ್ಯೆ ಶುಭಲತಾ ಅನ್ನೋಟಿಕರ್ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭಲತಾ ಅನ್ನೋಟಿಕರ್ ಕೆಲ ತಿಂಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು, ಫಲಕಾರಿಯಾಗದೆ ಇಂದು ಸಂಜೆ 5 ಘಂಟೆ 8 ನಿಮಿಷಕ್ಕೆ ವೇಳೆಗೆ ಶುಭಲತಾ ಅವರು ಮೃತಪಟ್ಟಿದ್ದಾರೆ. ಪತಿ ಶಾಸಕರಾಗಿದ್ದ ವಸಂತ್ ಅನ್ನೋಟಿಕರ್ ಹತ್ಯೆಯ ನಂತರ ಶುಭಲತಾ ಇಡೀ ಕುಟುಂಬದ ಜವಬ್ದಾರಿ ಹೊತ್ತಿದ್ದರು. ಕ್ಷೇತ್ರದಲ್ಲಿ ಅನ್ನೋಟಿಕರ್ ಅಭಿಮಾನಿಗಳ ಜೊತೆ ನಿಂತಿದ್ದ ಶುಭಲತಾರನ್ನ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿತ್ತು. ಮಗ ಮಾಜಿ ಸಚಿವ ಆನಂದ್‌ ಅನ್ನೋಟಿಕರ್ ರಾಜಕೀಯಕ್ಕೆ ಬಂದ ನಂತರ ಶುಭಲತಾ ರಾಜಕೀಯದಿಂದ ದೂರ ಉಳಿದಿದ್ದರು. ಮೃತರು ಒರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನ ಅಗಲಿದ್ದು ನಾಳೆ ಕಾರವಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎನ್ನಲಾಗಿದೆ.

ಶಿರಸಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್..!

ಶಿರಸಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆಗೆ ಜೈಲು ಶಿಕ್ಷೆ ಪ್ರಕಟಿಸಿದ ಕೋರ್ಟ್..!

ಶಿರಸಿ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಷಾ ಹೆಗಡೆಯವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ ಲೋಕಾಯುಕ್ತ ನ್ಯಾಯಾಲಯ ಒಂದು ವರ್ಷಗಳ ಕಠಿಣ ಸಜೆ ಹಾಗೂ ಐದು ಸಾವಿರ ರೂ ದಂಡ ವಿಧಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಉಷಾ ಹೆಗಡೆಯವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೊದಲು ಅಂಗನವಾಡಿ ಕಾರ್ಯಕರ್ತೆ ಯಾಗಿ ಕೆಲಸ ಮಾಡುತ್ತಿದ್ದರು. ಜಿಪಂ ಸದಸ್ಯರಾದ ನಂತರ ಜನವರಿ 2011 ರಿಂದ ನವಂಬರ್ 2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ ರೂ. 88,630 ಸ್ವೀಕರಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು. ಉಷಾ ಅವರು ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಜಿಲ್ಲಾ ಪಂಚಾಯತ್ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೆ ಹಾಗೂ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ...

ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮೂಡಸಾಲಿಯಲ್ಲಿ ರೈತನ‌ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡಸಿ ಗಾಯಗೊಳಿಸಿದ ಘಟನೆ ತಾಲೂಕಿನ ಮುಡಸಾಲಿ ಗ್ರಾಮದಲ್ಲಿ ನಡೆದಿದೆ. ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45)ಎಂಬವನೆ ಗಾಯಗೊಂಡ ರೈತನಾಗಿದ್ದಾನೆ. ಗದ್ದೆಯಲ್ಲಿ ಕೆಲಸ ಮಾಡುತ್ತಿರುವಾಗ ಹಿಂದಿನಿಂದ ಬಂದ ಕರಡಿಯೊಂದು ದಾಳಿ ನಡೆಸಿ ಹಿಂಬದಿ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ರೈತ ತೀವ್ರ ಚೀರಾಟ ನಡೆಸಿದಾಗ ಕರಡಿ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ರೈತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮುಂಡಗೋಡ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ..!

ಮುಂಡಗೋಡ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಅಧಿಕೃತ ಅಹ್ವಾನ..!

ಮುಂಡಗೋಡಿನಲ್ಲಿ ಅಕ್ಟೊಬರ್ 16 ರಂದು ನಡೆಯುತ್ತಿರೋ ಮುಂಡಗೋಡ ತಾಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಎಸ್. ಪಕ್ಕೀರಪ್ಪ ಆಯ್ಕೆಯಾಗಿದ್ದಾರೆ. ಹೀಗಾಗಿ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಕಾರ್ಯಕಾರಿ ಸಮಿತಿಯಿಂದ ಅಧಿಕೃತ ಅಹ್ವಾನ ನೀಡಲಾಯಿತು. ತಾಲೂಕಾ ಕಸಾಪ ಅಧ್ಯಕ್ಷ ವಸಂತ ಕೋಣಸಾಲಿ ತಮ್ಮ ಸದಸ್ಯರುಗಳೊಂದಿಗೆ ಸೇರಿ ಎಸ್. ಪಕ್ಕೀರಪ್ಪ ರವರಿಗೆ ಸನ್ಮಾನಿಸಿ ಆಮಂತ್ರಣ ಕೋರಿದ್ರು. ಈ ವೇಳೆ ಎಸ್.ಬಿ.ಹೂಗಾರ, ಸುಭಾಸ್ ವಡ್ಡರ್, ಸಂಗಪ್ಪ ಕೋಳೂರು, ಶ್ರೀಮತಿ ಶಾರದಾ ರಾಠೋಡ, ಎಸ್. ಕೆ. ಬೋರಕರ, ಮಾಜಿ ಸಮ್ಮೇಳನ ಸರ್ವಾಧ್ಯಕ್ಷರು ಹಾಗೂ ಪತ್ರಕರ್ತರಾದ ರಾಜಶೇಖರ ನಾಯ್ಕ, ಶಿವಾನಂದ ವಾಲಿಶೆಟ್ಟರ, ನಾಗರಾಜ ಅರ್ಕಸಾಲಿ, ಮಲ್ಲಮ್ಮ ನೀರಲಗಿ, ಆನಂದ ಹೊಸೂರು,ಕು. ಸ್ನೇಹಾ ಹೊಸಮನಿ, ಸಾನಿಯಾ ಹೊಸಮನಿ ಹಾಗೂ ಪಕ್ಕೀರಪ್ಪರವರ ಧರ್ಮ ಪತ್ನಿ ಗಂಗಾ ಹೊಸಮನಿ, ಶೀಲಾ ರಾಠೋಡ ಮುಂತಾದವರು ಹಾಜರಿದ್ದರು. ಗೌರವ ಕಾರ್ಯದರ್ಶಿ ವಿನಾಯಕ. ಶೇಟ್ ಸ್ವಾಗತಿಸಿದರು, ಎಸ್ ಡಿ. ಮುಡೆಣ್ಣವರ ವಂದಿಸಿದರು.

ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡದ ವಿವಿಧೆಡೆ ಭಾರೀ ಮಳೆ: ಸಿಡಿಲಿಗೆ ಓರ್ವ ರೈತ ಬಲಿ..!

ಧಾರವಾಡ ತಾಲೂಕಿನ ಹಲವೆಡೆ ಭಾನುವಾರ ಭರ್ಜರಿ ಮಳೆಯಾಗಿದ್ದು, ಸಿಡಿಲಿಗೆ ಓರ್ವ ರೈತ ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹನುಮನಹಾಳ ಗ್ರಾಮದಲ್ಲಿ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎಂಬುವವರೇ ಸಿಡಿಲಿಗೆ ಬಲಿಯಾದವರು. ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ವಿಪರೀತ ಮಳೆಯಾಗಲು ಆರಂಭಿಸಿದ್ದರಿಂದ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ಮರಳಿ ಮನೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ ಠಾಣೆ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ. ನಂತರ ಭೀಮನಗೌಡ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರದಲ್ಲಿ ಉದ್ಯಮಿಯ ಭೀಕರ ಹತ್ಯೆ, ಹೆಂಡತಿ ಬಚಾವ್, ಗಂಡ ಫಿನಿಶ್..!

ಕಾರವಾರ : ಮನೆಯಲ್ಲಿದ್ದ ಪತಿ ಹಾಗೂ ಪತ್ನಿಯ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ‌ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಣಕೋಣ ಸಾಂತೇರಿ ದೇವಸ್ಥಾನದ ಸಮೀಪದ ಮನೆಯೊಂದರಲ್ಲಿ ನಡೆದಿದೆ‌. ಘಟನೆಯಲ್ಲಿ ವಿನಾಯಕ ನಾಯ್ಕ(58) ಮೃತಪಟ್ಟಿರುವ ವ್ಯಕ್ತಿಯಾಗಿದ್ದಾನೆ‌ ಇನ್ನೂ ಆತನ ಪತ್ನಿ ವಿಶಾಲಿ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದಾಳೆ. ಇವರಿಬ್ಬರೂ ಪುಣೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಇತ್ತಿಚೇಗೆ ಹಣಕೋಣದ ಸಾಂತೇರಿ ದೇವರ ಜಾತ್ರೆಗಾಗಿ ಊರಿಗೆ ಬಂದಿದ್ದು, ಕೆಲ ದಿನಗಳಿಂದ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ‌. ಇಂದು ಬೆಳಿಗ್ಗಿನ ಜಾವ 5ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದಾಗಿ ವಿನಾಯಕ ನಾಯ್ಕ ಮನೆಯ ಕೋಣೆಯಲ್ಲೇ ಪ್ರಾಣಬಿಟ್ಟಿದ್ದಾನೆ‌‌‌. ಇನ್ನೂ ಆತನ ಪತ್ನಿ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ‌ ಸ್ಥಳಕ್ಕೆ ಚಿತ್ತಾಕುಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ‌

ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಊಟ ಮಾಡಿ ರಸ್ತೆ ಬದಿ ಮಲಗಿದ್ದ ಕಾರ್ಮಿಕರ ಮೇಲೆ ಹರಿದ ರೂಲರ್.! ಇಬ್ಬರು ದಾರುಣ ಸಾವು

ಹಾವೇರಿ; ಊಟ ಮಾಡಿ ರಸ್ತೆಯ ಪಕ್ಕದಲ್ಲಿ ಮಲಗಿದವರ ಮೇಲೆ ರೋಡ್ ರೂಲರ್ ಹರಿದು ಇಬ್ಬರು ಕಾರ್ಮಿಕರ ಸಾವು ಕಂಡ ದಾರುಣ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ನಡೆದಿದೆ. ಸಿದ್ದು(24), ಪ್ರೀತಮ್ ( 25) ರೂಲರ್ ಅಡಿಗೆ ಸಿಲುಕಿ ಸಾವು ಕಂಡ ದುರ್ಧೈವಿಗಳು. ಮೊಟೇಬೆನ್ನೂರಿನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರು, ಮಾಧ್ಯಾಹ್ನದ ವೇಳೆ ಊಟ ಮಾಡಿ ರೂಲರ್ ಪಕ್ಕದಲ್ಲಿ ಮಲಗಿದ್ದರು. ಈ ವೇಳೆ ದುರಂತ ಸಂಭವಿಸಿದೆ. ಸ್ಥಳಕ್ಕೆ ಬ್ಯಾಡಗಿ ಪೊಲೀಸರು ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

error: Content is protected !!