Rain Problem News: ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಬಿರುಸಾಗಿದ್ದು, ಧಾರಾಕಾರ ಮಳೆಗೆ ಮಲೆನಾಡು ಭಾಗದ ವಿವಿದೆಡೆ ಗುಡ್ಡ ಕುಸಿತ ಮುಂದುವರಿದಿದೆ.ಉತ್ತರ ಕನ್ನಡ ಜಿಲ್ಲೆ ಶಿರಸಿ ಸಮೀಪದ ದೇವಿಮನೆ, ಶೃಂಗೇರಿ ತಾಲೂಕಿನ ನೆಮ್ಮಾರ್, ಮಂಗಳೂರಿನ ಕದ್ರಿ, ಕಂಕನಾಡಿಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಕರಾವಳಿ ಭಾಗದಲ್ಲೂ ಮಳೆ ಅಬ್ಬರಿಸುತ್ತಿದ್ದು, ಭಟ್ಕಳದಲ್ಲಿ 50 ವರ್ಷದ ವೃದ್ಧ ಹಾಗೂ 2 ವರ್ಷದ ಚಿಕ್ಕ ಮಗು ನೀರಲ್ಲಿ ಕೊಚ್ಚಿಹೋಗಿದ್ದಾರೆ. ಬೆಳ್ತಂಗಡಿ ಸಮೀಪ ಮರ ಬಿದ್ದು, ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಇದೇ ವೇಳೆ, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲೆಯ 6, ಮಂಗಳೂರಿನ 5, ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳ ವ್ಯಾಪ್ತಿಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ 8 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಂಗಳವಾರ ಜೂನ್ 17 ರಂದು ರಜೆ ಘೋಷಣೆ ಮಾಡಲಾಗಿದೆ. ಅಂಕೋಲಾ ತಾಲೂಕಿನ ಸುಂಕಸಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ಲಗದ್ದೆ ಗ್ರಾಮದ ರಾಮಾನಗುಳಿ ಮಜರೆಯ ಕಾರವಾರ –...
Top Stories
ನಿರಂತರ ಮಳೆ; ಜಿಲ್ಲೆಯ 8 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!
ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಕೆ ಬಗ್ಗೆ ಪರಿಶೀಲಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ
ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಕಂಬ್ಯಾಕ್: ಸೆನ್ಸೆಕ್ಸ್ 677 ಪಾಯಿಂಟ್ಸ್ ಏರಿಕೆ! 5 ಪ್ರಮುಖ ಕಾರಣಗಳು..!
ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ..!
ಭಾರೀ ಏರಿಕೆಯ ನಂತರ ಸ್ವಲ್ಪ ಇಳಿದ ಚಿನ್ನದ ಬೆಲೆ; 10 ಗ್ರಾಂಗೆ ₹170 ಕುಸಿತ, ಈಗ ಎಷ್ಟಿದೆ ಗೋಲ್ಡ್ ರೇಟ್..!
ಕಾಲುವೆಗೆ ಬಿದ್ದು 2 ವರ್ಷದ ಪುಟ್ಟ ಕಂದಮ್ಮ ಸಾವು..!
ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ, ಮಗು ಸೇರಿ 7 ಜನರ ದುರ್ಮರಣ..!
ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!
60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು..!
ಜೂನ್ 17ರವರೆಗೂ ಭಾರಿ ಮಳೆ ಮುನ್ಸೂಚನೆ: ಉತ್ತರ ಕನ್ನಡ ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!
ಸ್ಕೂಟಿಯಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ..!
ಇಸ್ರೇಲ್-ಇರಾನ್ ಉದ್ವಿಗ್ನ, ಚಿನ್ನದ ಬೆಲೆ ₹1 ಲಕ್ಷ ಗಡಿ ದಾಟಿದೆ : ಶುಕ್ರವಾರ 10 ಗ್ರಾಂ ಬಂಗಾರದ ಬೆಲೆ ₹2,120 ಏರಿಕೆ..!
ಪಡಿತರ ಚೀಟಿಯಲ್ಲಿನ ಸದಸ್ಯರ ಇಕೆವೈಸಿ ಪೂರ್ಣಗೊಳಿಸುವ ಅಂತಿಮ ಅವಕಾಶ..!
ಯೋಗೇಶ ಗೌಡ ಕೊಲೆ ಪ್ರಕರಣ : ಕೋರ್ಟಿಗೆ ಹಾಜರಾದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಶಕ್ಕೆ ಪಡೆದ ಸಿಬಿಐ..!
ವಿದ್ಯಾರ್ಥಿ ಬಸ್ ಪಾಸ್ ಬಗ್ಗೆ ವಿಳಂಬದ ಗೊಂದಲ, ಈ ದಾಖಲೆ ತೋರಿಸಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದು..!
ಅರ್ಹತೆ ಇಲ್ಲದಿದ್ದರೂ ಮುಂಡಗೋಡಿನ ಆ ಖಾಸಗಿ ವೈದ್ಯ ಆಪರೇಶನ್ ಮಾಡ್ತಾರಂತೆ..! ಅವ್ರ ವಿರುದ್ಧ ಕ್ರಮಕ್ಕಾಗಿ ಪಪಂ ಸಭೆಯಲ್ಲಿ ಆಗ್ರಹ, ಗಂಭೀರ ಚರ್ಚೆ..!
ಭಾರೀ ಮಳೆ; ಜಿಲ್ಲೆಯ ಈ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!
ಶಕ್ತಿ ಯೋಜನೆ: 7.41 ಕೋಟಿ ಮಹಿಳೆಯರ ಉಚಿತ ಪ್ರಯಾಣ..!
ನಿರಂತರ ಮಳೆ; ಜಿಲ್ಲೆಯ 8 ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ನಾಳೆಯೂ ರಜೆ..!
School Holiday News; ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ನಾಳೆ ಜೂನ್ 17 ರಂದು ಉತ್ತರ ಕನ್ನಡ ಜಿಲ್ಲೆಯ 8 ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮುಂಡಗೋಡ ತಾಲೂಕಿನಲ್ಲೂ ನಿರಂತರ ಮಳೆಯಾಗುತ್ತಿದ್ದು, ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಗಳಿಗೆ ರಜೆ ಕೊಡಬಹುದು ಅನ್ನೋ ನಿರಿಕ್ಷೆ ಇತ್ತು. ಆದ್ರೆ, ಮುಂಡಗೋಡ ತಾಲೂಕಾಡಳಿತ ಅದ್ಯಾಕೋ ಏನೋ ಇಲ್ಲಿ ರಜೆಯ ಶಿಫಾರಸು ಮಾಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.
ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಕೆ ಬಗ್ಗೆ ಪರಿಶೀಲಿಸಿ: ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಸೂಚನೆ
Sugar Factory News; ಕಾರವಾರ: ಜಿಲ್ಲೆಯ ಕಬ್ಬು ಬೆಳಗಾರರ ಪ್ರಮುಖ ಬೇಡಿಕೆಯಾದ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವ ಕುರಿತಂತೆ, ಸದ್ರಿ ಸ್ಥಳದ ಪರಿಶೀಲನೆ ನಡೆಸುವಂತೆ ಕಂದಾಯ, ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಜಿಲ್ಲೆಯ ಕಬ್ಬು ಬೆಳಗಾರರ ಮತ್ತು ಸಕ್ಕರೆ ಕಾರ್ಖಾನೆಯ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಳಿಯಾಳದ ಐ.ಇ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಒಳಭಾಗದಲ್ಲಿ ಕಬ್ಬು ತೂಕ ಮಾಡುವ ಯಂತ್ರವನ್ನು ಅಳವಡಿಸಿದ್ದು ಇದರಿಂದಾಗಿ ಕಬ್ಬಿನ ತೂಕದ ಪ್ರಮಾಣದ ಪ್ರತಿ ಬಾರಿ ಗೊಂದಲವಾಗುತ್ತಿದೆ, ಇದನ್ನು ಬಗೆಹರಿಸುವ ದೃಷ್ಠಿಯಿಂದ ಕಾರ್ಖಾನೆಯ ಮುಂಭಾಗದಲ್ಲಿ ತೂಕದ ಯಂತ್ರ ಅಳವಡಿಸುವ ಬಗ್ಗೆ ಕಬ್ಬು ಬೆಳೆಗಾರರ ಪ್ರತಿನಿಧಿಗಳು ಕೋರಿದ್ದು, ಈ ಕುರಿತಂತೆ ಕಾರ್ಖಾನೆಯ ಮುಂಭಾಗದಲ್ಲಿ ಸೂಕ್ತ ಸ್ಥಳ ಇಲ್ಲವೆಂದು ಕಾರ್ಖಾನೆಯ ಪ್ರತಿನಿಧಿಗಳು ತಿಳಿಸಿದರು. ಈ ಬಗ್ಗೆ ಕಂದಾಯ, ಪೊಲೀಸ್ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ...
ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಕಂಬ್ಯಾಕ್: ಸೆನ್ಸೆಕ್ಸ್ 677 ಪಾಯಿಂಟ್ಸ್ ಏರಿಕೆ! 5 ಪ್ರಮುಖ ಕಾರಣಗಳು..!
Stock Market Highlights : ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ನಡುವೆ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಸತತ ನಷ್ಟದಿಂದ ಚೇತರಿಸಿಕೊಂಡಿದೆ. ಕಳೆದ ಕೆಲವು ಸೆಷನ್ಗಳಲ್ಲಿ ಇಳಿಕೆಗೆ ಸಾಕ್ಷಿಯಾಗಿದ್ದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕವು ಸೋಮವಾರ ಜಿಗಿತ ಸಾಧಿಸಿದೆ. ಎರಡು ಪ್ರಮುಖ ಸೂಚ್ಯಂಕಗಳು ಸುಮಾರು 1% ನಷ್ಟು ಹೆಚ್ಚಾಗಿವೆ. ಸೆನ್ಸೆಕ್ಸ್ ಮಾರುಕಟ್ಟೆ ಮುಕ್ತಾಯಕ್ಕೆ 677 ಪಾಯಿಂಟ್ಸ್ ಅಥವಾ 0.84% ಏರಿಕೆಗೊಂಡು 81,796 ಮಾರ್ಕ್ನಲ್ಲಿ ಕೊನೆಗೊಂಡಿದೆ. ಇದೇ ವೇಳೆಯಲ್ಲಿ ನಿಫ್ಟಿ 50 ಸೂಚ್ಯಂಕವು 227.90 ಪಾಯಿಂಟ್ಸ್ ಅಥವಾ 0.90% ಹೆಚ್ಚಾಗಿ 24,946.50 ಮಾರ್ಕ್ನಲ್ಲಿ ಮುಚ್ಚಿದೆ. ನಿಫ್ಟಿ ಮಿಡ್ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್ಕ್ಯಾಪ್ 100 ಸೂಚ್ಯಂಕವು ಶೇಕಡಾ 1ರಷ್ಟು ಇಂದು ಏರಿಕೆಯಾಗಿದೆ. ಭಾರತದ ಷೇರುಪೇಟೆ ಏರಿಕೆಗೆ ಪ್ರಮುಖ ಕಾರಣವೇನು? ಇಸ್ರೇಲ್ ಹಾಗೂ ಇರಾನ್ ದೇಶದ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಕಚ್ಚಾ ತೈಲ ಬೆಲೆ ಏರಿಕೆಯಾಗತೊಡಗಿದೆ. ಹೀಗಿರುವಾಗ ಭಾರತದ ಷೇರು ಮಾರುಕಟ್ಟೆ ಸೋಮವಾರ ಜಿಗಿಯಲು ಐದು ಪ್ರಮುಖ ಕಾರಣಗಳನ್ನು ಕಾರಣಬಹುದಾಗಿದೆ. ಷೇರು...
ವಿಶ್ವ ಯೋಗ ದಿನಾಚರಣೆಗೆ ಸಿದ್ದತೆ ಕೈಗೊಳ್ಳಿ: ಅಪರ ಜಿಲ್ಲಾಧಿಕಾರಿ..!
Yoga Day News;ಕಾರವಾರ: ಜೂನ್ 21 ರಂದು ನಡೆಯುವ ಅಂತರಾಷ್ರ್ಟೀಯ ಯೋಗ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಕಾರವಾರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ, ಅಂತರಾಷ್ರ್ಟೀಯ ಯೋಗ ದಿಚಾರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಮುನ್ಸೂಚನೆಯಂತೆ ಕೋವಿಡ್ 19 ಮುನ್ನೆಚ್ಚರಿಕೆ ನಿಯಮಗಳನ್ನು ಅನುಸರಿಸಿ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ಆಚರಿಸಬೇಕು, ಜಿಲ್ಲೆಯ ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಸಿ.ಸಿ. ರೋಟರಿ ಕ್ಲಬ್, ಯೋಗ ತರಬೇತಿ ನೀಡುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಿಗಧಿತ ಸಂಖ್ಯೆಯ ಸಾರ್ವಜನಿಕರನ್ನು ಒಳಗೊಂಡು ಕಾರ್ಯಕ್ರಮ ಆಯೋಜಿಸುವಂತೆ ಮತ್ತು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಯೋಗಾಭ್ಯಾಸ ಮಾಡಲು ಅಗತ್ಯ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಹಾಗೂ ತರಬೇತಿ ನೀಡಲು ಯೋಗ ಶಿಕ್ಷಕರನ್ನು ನಿಯೋಜಿಸುವಂತೆ ತಿಳಿಸಿದರು. Yoga Day News; ಕೆಮ್ಮು ನೆಗಡಿ, ಶೀತಜ್ವರದಿಂದ ಬಳಲುತ್ತಿರುವವರು...
ಭಾರೀ ಏರಿಕೆಯ ನಂತರ ಸ್ವಲ್ಪ ಇಳಿದ ಚಿನ್ನದ ಬೆಲೆ; 10 ಗ್ರಾಂಗೆ ₹170 ಕುಸಿತ, ಈಗ ಎಷ್ಟಿದೆ ಗೋಲ್ಡ್ ರೇಟ್..!
Gold Price Today: ಇರಾನ್-ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಈ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆಗಳನ್ನು ಗಗನಕ್ಕೇರಿಸುತ್ತಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಎದುರಾಗಿದ್ದು, ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ತಮ್ಮ ಹಣಕ್ಕೆ ಭದ್ರತೆಯನ್ನು ಬಯಸುತ್ತಾರೆ.ಈ ಸಮಯದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಯಾವುದೇ ಅಪಾಯವಿಲ್ಲದ ಹೂಡಿಕೆ ಸಾಧನವಾಗಿರುವ ಚಿನ್ನದ ಮೇಲೆ ಹೂಡಿಕೆ ಹೆಚ್ಚುತ್ತಿದೆ. ಇದರಿಂದ ಸಹಜವಾಗಿಯೇ ಚಿನ್ನದ ದರಗಳು ವಿಪರೀತವಾಗಿ ಹೆಚ್ಚಾಗುತ್ತವೆ. ಆದರೆ, ಜೂನ್ 16ರಂದು ಸೋಮವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಪ್ರಸ್ತುತ ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕಳೆದ ವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಭಾರೀ ಏರಿಕೆಯಾಗಿತ್ತು. ಆದರೆ, ಈ ವಾರ ಮೊದಲ ದಿನವೇ ಅಂದರೆ, ಸೋಮವಾರ ಬಂಗಾರದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ. ಬೆಂಗಳೂರಲ್ಲಿ ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ 170 ರೂಪಾಯಿ ಇಳಿಕೆಯಾಗಿದ್ದು, ₹101510ರಲ್ಲಿ ವಹಿವಾಟು ನಾಡೆಸುತ್ತಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ...
ಕಾಲುವೆಗೆ ಬಿದ್ದು 2 ವರ್ಷದ ಪುಟ್ಟ ಕಂದಮ್ಮ ಸಾವು..!
Bhatkal Crime; ಭಟ್ಕಳ: ಪೋಷಕರ ನಿರ್ಲಕ್ಷದಿಂದಾಗಿ ಎರಡು ವರ್ಷದ ಮಗು ಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ನಗರದ ಆಝಾದ ನಗರದಲ್ಲಿ ನಡೆದಿದೆ. ತೌಸೀಫ್ ಮತ್ತು ಅರ್ಜು ದಂಪತಿಯ ಎರಡು ವರ್ಷದ ಪುಟ್ಟ ಮಗು ಮೃತ ಪಟ್ಟವಳಾಗಿದ್ದಾಳೆ. ಆಕೆ ಮನೆ ಎದುರು ಆಟವಾಡುತ್ತಾ ಮನೆ ಎದುರಿಗೆ ಇದ್ದ ಕಾಲುವೆ ಬಳಿ ಹೋಗಿದ್ದಾಳೆ. ಈ ವೇಳೆ ಆಕಸ್ಮಿಕವಾಗಿ ಕಾಲುಜಾರಿ ಕಾಲುವೆಯಲ್ಲಿ ಬಿದ್ದು ಮಗು ಮೃತಪಟ್ಟಿದ್ದಾಳೆ. ಪುಟ್ಟ ಮಗು ಕಾಲುವೆಗೆ ಬಿಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪೋಷಕರ ನಿರ್ಲಕ್ಷದಿಂದಾ ಮಗು ಸಾವನ್ನಪಿದೆ.
ಕೇದಾರನಾಥ ಬಳಿ ಹೆಲಿಕಾಪ್ಟರ್ ಪತನ, ಮಗು ಸೇರಿ 7 ಜನರ ದುರ್ಮರಣ..!
Helicopter Crash; ಕೇದಾರನಾಥ ದೇವಸ್ಥಾನದಿಂದ ಉತ್ತರಾಖಂಡದ ಗುಪ್ತಕಾಶಿಗೆ ಹಾರುತ್ತಿದ್ದ ಹೆಲಿಕಾಪ್ಟರ್ ಕಾಡಿನಲ್ಲಿ ಪತನಗೊಂಡು ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಆರ್ಯನ್ ಏವಿಯೇಷನ್ ಹೆಲಿಕಾಪ್ಟರ್ 10 ನಿಮಿಷಗಳ ಪ್ರಯಾಣದ ಸಮಯದಲ್ಲಿ ಗೌರಿಕುಂಡ ಮತ್ತು ಸೋನ್ಪ್ರಯಾಗ್ ನಡುವೆ ಪತನಗೊಂಡಿತು. ಅಪಘಾತದಲ್ಲಿ ಪೈಲಟ್ ಸೇರಿದಂತೆ ಏಳು ಜನರು ಸಾವಿಗೀಡಾಗಿದ್ದಾರೆ. ಈ ಘಟನೆ ಬೆಳಿಗ್ಗೆ 5:20 ಕ್ಕೆ ಸಂಭವಿಸಿದ್ದು,ಆರು ಯಾತ್ರಿಕರು (ಐದು ವಯಸ್ಕರು ಮತ್ತು 23 ತಿಂಗಳ ಮಗು) ಮತ್ತು ಒಬ್ಬ ಪೈಲಟ್ ಇದ್ದರು ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. Helicopter Crash; ಕೇದಾರನಾಥ ಧಾಮ್ ಭೇಟಿಯ ನಂತರ ಹೆಲಿಕಾಪ್ಟರ್ ಹಿಂತಿರುಗುತ್ತಿದ್ದಾಗ, ಹವಾಮಾನ ಹದಗೆಟ್ಟಿತ್ತು. ಪೈಲಟ್ ಕಣಿವೆಯಿಂದ ಚಾಪರ್ ಅನ್ನು ಹೊರತರಲು ಪ್ರಯತ್ನಿಸಿದರು ಆದರೆ ಅದು ಅಪಘಾತಕ್ಕೀಡಾಯಿತು ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಯ ರಾಹುಲ್ ಚೌಬೆ ಹೇಳಿದ್ದಾರೆ. ಇದನ್ನೂ ಓದಿ👉 ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!...
ಮನೆವರೆಗೇ ಬಂದು ಯುವಕನ ಮೇಲೆ ದಾಳಿ ಮಾಡಿದ ಚಿರತೆ, ಅಪಾಯದಿಂದ ಪಾರಾದ ಯುವಕ..!
Leopard Attack; ಕಾರವಾರ: ನಿರ್ಮಾಣ ಹಂತದ ಹೊಸ ಮನೆ ಸೇರಿಕೊಂಡಿದ್ದ ಚಿರತೆಯೊಂದು ಯುವಕನ ಮೇಲೆ ದಾಳಿ ಮಾಡಿದ ಘಟನೆ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾ.ಪಂ.ವ್ಯಾಪ್ತಿಯ ಉಳಗದ್ದೆ ಗ್ರಾಮದಲ್ಲಿ ನಡೆದಿದೆ. ಸಂತೋಷ್ ಹೂವಣ್ಣ ಗೌಡ (24) ಎಂಬುವರು ಗಾಯಗೊಂಡಿದ್ದಾರೆ. ಮನೆಯ ಪಕ್ಕದ ಹೊಸ ಮನೆಯಲ್ಲಿ ಚಿರತೆ ಅವಿತುಕೊಂಡಿತ್ತು. ಅಲ್ಲಿ ಒಣ ಹಾಕಿದ್ದ ಬಟ್ಟೆ ತರಲು ಹೋದ ಯುವತಿ ಚಿರತೆಯನ್ನು ಕಂಡು ಕಿರುಚುತ್ತಾ ಓಡಿ ಹೊರಬಂದಿದ್ದು, ಚಿರತೆಯೂ ಹೊರಗೆ ಬಂದಿದೆ. ಅದೇ ಕ್ಷಣದಲ್ಲಿ ಸಂತೋಷ್ ಗೌಡ ಕೂಡ ಮನೆಯಿಂದ ಹೊರಬಂದಿದ್ದು, ಚಿರತೆ ದಾಳಿ ಮಾಡಿ ಓಡಿ ಹೆದರಿ ಓಡಿ ಹೋಗಿದೆ. ಸಂತೋಷ್ ಅವರ ಎರಡೂ ಕೈಗಳಿಗೆ ಪರಚಿದ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕೋಲಾ ಪಿಐ ಚಂದ್ರಶೇಖರ್ ಮಠಪತಿ ಮತ್ತು ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ👉ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!
ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು, ಶಿರಸಿ-ಕುಮಟಾ ರಸ್ತೆ ಬಂದ್..!
Heavy rain Land Slide: ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಿವೆ. ಕುಮಟಾ ತಾಲೂಕಿನಲ್ಲಿ ಸುರಿದ ಮಳೆಗೆ ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಇಂದು ಬೆಳಿಗ್ಗೆ ಮತ್ತೆ ಗುಡ್ಡ ಕುಸಿದಿದೆ. ಪರಿಣಾಮ ರಸ್ತೆ ಮೇಲೆ ಮಣ್ಣು, ಕಲ್ಲುಗಳು ಬಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 766E ನಲ್ಲಿ ಕಲ್ಲು ಮಣ್ಣು ಬಿದ್ದ ಪರಿಣಾಮ, ಕುಮಟಾ-ಶಿರಸಿ ಹೆದ್ದಾರಿಯ ರಸ್ತೆ ಸಂಚಾರ ಬಂದ್ ಆಗಿದೆ. ಮೊದಲೇ ರಸ್ತೆ ಕಾಮಗಾರಿ ಪ್ರಗತಿಯಲ್ಲಿ ಇರೋದ್ರಿಂದ ಸಂಚಾರಕ್ಕೆ ಕಿರಿಕಿರಿ ಆಗಿದೆ. ಇನ್ನು, ಗುಡ್ಡ ಕುಸಿತವಾಗಿ ರಸ್ತೆ ಮೇಲೆ ಬಿದ್ದಿರೊ ಮಣ್ಣು, ಕಲ್ಲು ತೆರವು ಕಾರ್ಯ ನಡೆದಿದೆ. ಆದ್ರೆ, ಶಿರಸಿ ತಾಲೂಕಿನ ಭಾಗದಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ ಅಂತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ☝ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತದ ತೆರವು ಕಾರ್ಯ ಇದನ್ನೂ ಓದಿ👉 60 ವರ್ಷದ ಅಂಗವಿಕಲ ವೃದ್ಧೆಯ ಮೇಲೆ ಅತ್ಯಾಚಾರ, ಕಾಡಿನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ...