Home BIG BREAKING

Category: BIG BREAKING

Post
ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!

ಇಂದೂರು ಕೊಪ್ಪದ ವ್ಯಕ್ತಿಯ ಶವ ಅಮರಗೋಳದಲ್ಲಿ ಪತ್ತೆ..! ರೈಲ್ವೆ ಹಳಿಯ ಪಕ್ಕದಲ್ಲೇ ಸತ್ತುಬಿದ್ದವನ ಸುತ್ತ ಅನುಮಾನದ ಹುತ್ತ..!

ಮುಂಡಗೋಡ: ತಾಲೂಕಿನ ಕೊಪ್ಪ (ಇಂದೂರು) ಗ್ರಾಮದ ವ್ಯಕ್ತಿಯೋರ್ವನ ಶವ ಹುಬ್ಬಳ್ಳಿ ಸಮೀಪದ ಅಮರಗೋಳ ಬಳಿ ರೈಲ್ವೆ ಹಳಿಯ ಪಕ್ಕದಲ್ಲಿ ದೊರೆತಿದೆ‌. ಮಂಜುನಾಥ್ ಬಸಪ್ಪ ಬೆಲವಂತರ(35) ಎಂಬುವವನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಅಮರಗೋಳ ಈತನ ಪತ್ನಿಯ ತವರೂರು, ಪತ್ನಿ ತವರು ಮನೆಯಲ್ಲೇ ಇದ್ದ ಕಾರಣಕ್ಕೆ,, ಕಳೆದ ಹತ್ತು ದಿನಗಳ ಹಿಂದೆ ಅಮರಗೋಳಕ್ಕೆ ಹೋಗಿದ್ದ ಮಂಜುನಾಥ್, ನಿನ್ನೆ ರಾತ್ರಿಯೇ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಸಧ್ಯ ಸ್ಥಳಕ್ಕೆ ಭೇಟಿ ನೀಡಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ‌.

Post
ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!

ಮತ್ತೋರ್ವ ಅಪ್ಪು ಅಭಿಮಾನಿಯ ಆತ್ಮಹತ್ಯೆ..! ಪುಟ್ಟ ಮಗುವನ್ನೇ ಮರೆತ ಅಭಿಮಾನಿ..!!

ಚಿಕ್ಕಮಗಳೂರು: ನಟ ಪುನೀತ್ ಸಾವಿನಿಂದ ಮನನೊಂದು ಮತ್ತೋರ್ವ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ರಾಂಪುರದಲ್ಲಿ ನಡೆದಿದೆ. ಶರತ್ (30) ಆತ್ಮಹತ್ಯೆ‌ಮಾಡಿಕೊಂಡ ಅಭಿಮಾನಿಯಾಗಿದ್ದಾ‌ನೆ. ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಪುನೀತ್ ರಾಜಕುಮಾರ್ ವಿಧಿವಶರಾದ ಸುದ್ದಿ ತಿಲಕಿಯುತ್ತಿದ್ದಂತೆ ನಿನ್ನೆಯಿಂದಲೂ ಅಳುತ್ತಿದ್ದ ಶರತ್‍ಗೆ ಮನೆಯವರಿಂದ ಸಮಾಧಾನ ಹೇಳಿದ್ರೂ ನೋವು ಕಡೆ ನೆಯಾಗಿರಲಿಲ್ಲ‌ ಟಿವಿ ನೋಡುತ್ತಿದ್ದವನು ಏಕಾಏಕಿ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು, ಹೋಟೆಲ್‍ಗಳಿಗೆ ಮರದ ಹೊಟ್ಟು ತುಂಬುವು ಕೆಲಸ ಮಾಡುತ್ತಿದ್ದ ಶರತ್ ಗೆ ಒಂದು...

Post
ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!

ಆಹಾರ ಇಲಾಖೆಯ ಕಚೇರಿ ಮೇಲೆ ಎಸಿಬಿ ದಾಳಿ.! ಅಧಿಕಾರಿಯನ್ನು ವಶಕ್ಕೆ ಪಡೆದ ಎಸಿಬಿ..!

ಧಾರವಾಡದಲ್ಲಿ ಎಸಿಬಿ ದಾಳಿಯಾಗಿದೆ. ಆಹಾರ ನಾಗರಿಕ ಸರಬರಾಜು ಇಲಾಖೆಯ ಮೇಲೆ ದಾಳಿಯಾಗಿದ್ದು, ಸಾರ್ವಜನಿಕರಿಂದ ಹೆಚ್ಚು ಹಣ ತಗೆದುಕೊಳ್ಳುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಆಹಾರ ಇಲಾಖೆಯ ಶಿರಸ್ತೇದಾರ ಶಿವಶಂಕರ ಹಿರೇಮಠ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಪತ್ತೆಯಾಗಿದೆ. ಹೀಗಾಗಿ, ಶಿರಸ್ತೇದಾರ ಶಿವಶಂಕರ್ ಹಿರೇಮಠರನ್ನು ವಶಕ್ಕೆ ಪಡೆದಿರೋ ಎಸಿಬಿ ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.

Post
ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ..! ಡಾ.ಸುಮನ್ ಡಿ. ಪನ್ನೇಕರ್ ನೂತನ ಎಸ್ಪಿ..!!

ಉತ್ತರ ಕನ್ನಡ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ..! ಡಾ.ಸುಮನ್ ಡಿ. ಪನ್ನೇಕರ್ ನೂತನ ಎಸ್ಪಿ..!!

ಉತ್ತರ ಕನ್ನಡ ಜಿಲ್ಲಾ ಎಸ್ಪಿ ಶಿವ ಪ್ರಕಾಶ್ ದೇವರಾಜು ವರ್ಗಾವಣೆ. ನೂತನ ಎಸ್ಪಿಯಾಗಿ ಡಾ.ಸುಮನ್ ಡಿ. ಪನ್ನೇಕರ್ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ‌. ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದ್ದು, ಶಿವ ಪ್ರಕಾಶ್ ದೇವರಾಜು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ.

Post
ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಗೆ ಆಗಮಿಸಿದ ಪುನೀತ್ ಪುತ್ರಿ..!

ದೇವನಹಳ್ಳಿ ವಿಮಾನ ನಿಲ್ದಾಣದಿಂದ ಕಂಠೀರವ ಸ್ಟೇಡಿಯಂ ಗೆ ಆಗಮಿಸಿದ ಪುನೀತ್ ಪುತ್ರಿ..!

ನಟ ಪುನೀತ್ ರಾಜಕುಮಾರ್ ಮಗಳು ಧೃತಿ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣದಿಂದ, ಕಂಠೀರವ ಸ್ಟೇಡಿಯಂನತ್ತ ಹೊರಟಿದ್ದಾರೆ. ದೇವನಹಳ್ಳಿ ಕೆಐಎ ಯಿಂದ ಅರೈವಲ್ ಬದಲಿಗೆ ಡಿಪಾರ್ಚರ್ ಮೂಲಕ ತೆರಳಿದ ಪುನೀತ್ ಮಗಳು ಧೃತಿ. ಈಗಾಗಲೇ ಕಂಠೀರವ ಸ್ಟೇಡಿಯಂ ತಲುಪಿದ್ದಾರೆ.

Post
ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!

ಬೆಂಗಳೂರಿಗೆ ಬಂದಿಳಿದ ನಟ ಪುನೀತ್ ಪುತ್ರಿ ಧೃತಿ..!

ನಟ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಪುನೀತ್ ಪುತ್ರಿ ಧೃತಿ, ಬೆಂಗಳೂರಿಗೆ ಬಂದಿಳಿದಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪುನೀತ್ ಪುತ್ರಿ ಆಗಮನವಾಗಿದ್ದು, ಧೃತಿಯಿದ್ದ ಏರ್ ಇಂಡಿಯಾ 502 ವಿಮಾನ ಲ್ಯಾಂಡಿಂಗ್ ಆಗಿದೆ. ವಿಮಾನ ನಿಲ್ದಾಣದಿಂದ ಧೃತಿಯನ್ನ ಕರೆದುಕೊಂಡು ಹೋಗಲು ಪೊಲೀಸ್ ಬೆಂಗಾವಲು ವಾಹನಗಳು ಬಂದಿವೆ., ಇನ್ನು ಕೆಲವೇ ಕ್ಷಣದಲ್ಲಿ ವಿಮಾನ ನಿಲ್ದಾಣದ ಒಳಗಿನಿಂದ ಹೊರಬರಲಿರುವ ಪುನೀತ್ ಪುತ್ರಿ, ನೇರವಾಗಿ ಕಂಠೀರವ ಸ್ಟೇಡಿಯಂಗೆ ತೆರಳಲಿದ್ದಾರೆ.

Post
ಮುಂಡಗೋಡಿನ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನ ದಳ ಪರಿಶೀಲನೆ, ಟಿಬೇಟಿಯನ್ ಕಾಲೋನಿಯಲ್ಲೂ ಕಟ್ಟೇಚ್ಚರ..!

ಮುಂಡಗೋಡಿನ ಸೂಕ್ಷ್ಮ ಸ್ಥಳಗಳಲ್ಲಿ ಶ್ವಾನ ದಳ ಪರಿಶೀಲನೆ, ಟಿಬೇಟಿಯನ್ ಕಾಲೋನಿಯಲ್ಲೂ ಕಟ್ಟೇಚ್ಚರ..!

ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದು ಶ್ವಾನ ದಳದಿಂದ ತೀವ್ರ ತಪಾಸಣೆ ನಡೆಸಲಾಗಿದೆ. ಹಾಗೇನೆ, ಟಿಬೇಟಿಯನ್ ಕಾಲೋನಿ ಸೇರಿದಂತೆ ತಾಲೂಕಿನ ಬಹುಮುಖ್ಯ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೇಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ಕಟ್ಟೇಚ್ಚರ ವಹಿಸಿದೆ. ಎಚ್ಚರಿಸಿದ್ದೇ ಕುಮಟಾ ಕೇಸ್..! ಅಂದಹಾಗೆ, ಇದು ಮುಂಡಗೋಡ ತಾಲೂಕಿಗಷ್ಟೇ ಅಲ್ಲ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಕಡೆ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಡೆಯೂ ಕಟ್ಟೇಚ್ಚರ ವಹಿಸಲಾಗಿದೆ. ಯಾಕಂದ್ರೆ, ಕುಮಟಾದ ಕಾಲೇಜು ಆವರಣದಲ್ಲಿ ಇತ್ತಿಚೆಗಷ್ಟೇ ಬಾಂಬ್ ಮಾದರಿಯ ವಸ್ತು ಸಿಕ್ಕು...

Post
ನಟ ಪುನೀತ್ ಅಂತ್ಯಕ್ರಿಯೆ ಇವತ್ತು ಅಲ್ಲ, ನಾಳೆ: ರಾಘವೇಂದ್ರ ರಾಜಕುಮಾರ್..!

ನಟ ಪುನೀತ್ ಅಂತ್ಯಕ್ರಿಯೆ ಇವತ್ತು ಅಲ್ಲ, ನಾಳೆ: ರಾಘವೇಂದ್ರ ರಾಜಕುಮಾರ್..!

ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಂತ್ಯಕ್ರಿಯೆ ನಾಳೆ ನಡೆಸಲು ತೀರ್ಮಾನಿಸಲಾಗಿದೆ. ಹಾಗಂತ, ಪುನೀತ್ ಸಹೋದರ ನಟ ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ. ಇನ್ನು ನಟ ಪುನೀತ್ ಪುತ್ರಿ ದೃತಿ, ನ್ಯೂಯಾರ್ಕ್ ನಿಂದ ದೆಹಲಿಗೆ ಆಗಮಿಸಿದ್ದಾರೆ. ಏರ್ ಇಂಡಿಯಾ 102 ವಿಮಾನದಲ್ಲಿ ದೆಹಲಿಗೆ ಆಗಮಿಸಿರೋ ದೃತಿ, ದೆಹಲಿಯಿಂದ 1.30 ರ ಏರ್ ಇಂಡಿಯಾ ವಿಮಾನ ಹತ್ತಿ, 502 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15 ಕ್ಕೆ‌ಆಗಮಿಸೋ ಸಾಧ್ಯತೆ...

Post
ಮತ್ತೊಬ್ಬ “ಅಪ್ಪು” ಅಭಿಮಾನಿ ನೇಣಿಗೆ ಶರಣು..! ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ..! ಇದೇಲ್ಲಾ ಬೇಕಾ..?

ಮತ್ತೊಬ್ಬ “ಅಪ್ಪು” ಅಭಿಮಾನಿ ನೇಣಿಗೆ ಶರಣು..! ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ..! ಇದೇಲ್ಲಾ ಬೇಕಾ..?

ಬೆಳಗಾವಿ: ನಟ ಪುನೀತ್ ರಾಜಕುಮಾರ್ ವಿಧಿವಶವಾದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಘಟನೆ ನಡೆದಿದ್ದು, ರಾಹುಲ್ ಗಾಡಿವಡ್ಡರ ಎಂಬ ಯುವಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯಾಗಿದ್ದಾನೆ. ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ನಟ ಪುನೀತ್ ಸಾವಿನ ಸುದ್ದಿಗೆ ಹೃದಯಾಘಾತ: ಮೃತಪಟ್ಟ ಅಪ್ಪು ಅಭಿಮಾನಿ..!!

ನಟ ಪುನೀತ್ ಸಾವಿನ ಸುದ್ದಿಗೆ ಹೃದಯಾಘಾತ: ಮೃತಪಟ್ಟ ಅಪ್ಪು ಅಭಿಮಾನಿ..!!

ಚಾಮರಾಜನಗರ: ಪುನೀತ್ ರಾಜಕುಮಾರ್ ನಿಧನ ವಿಷಯ ಕೇಳಿ ಹೃದಯಾಘಾತವಾಗಿ ಪುನೀತ್ ಅಭಿಮಾನಿ ಸಾವಿಗೀಡಾಗಿದ್ದಾನೆ‌. ಚಾಮರಾಜನಗರ ಜಿಲ್ಲೆ ಹನೂರು ತಾಲೋಕು ಪೊನ್ನಾಚಿ ಗ್ರಾಪಂ ವ್ಯಾಪ್ತಿಯ ಮರೂರು ಗ್ರಾಮದ, ಮುನಿಯಪ್ಪ(29) ಹೃದಯಾಘಾತದಿಂದ ಮೃತಪಟ್ಟ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದ ಮುನಿಯಪ್ಪ, ಪುನೀತ್ ಸಾವಿನ ವಿಷಯ ಕೇಳುತ್ತಲೇ ಕುಸಿದುಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ಕೊನೆಯುಸಿರು ಎಳೆದಿದ್ದಾನೆ ಪುನೀತ್ ಅಭಿಮಾನಿ. ಪುನೀತ್ ಅವರ ಪ್ರತಿಯೊಂದು ಚಿತ್ರವನ್ನು ತಪ್ಪದೆ ನೋಡುತ್ತಿದ್ದ ಮುನಿಯಪ್ಪ, ಆಗಾಗ್ಗೆ ಬೆಂಗಳೂರಿಗೆ ತೆರಳಿ...

error: Content is protected !!