Home ರಾಜಕೀಯ ಪಡಸಾಲೆ..

Category: ರಾಜಕೀಯ ಪಡಸಾಲೆ..

Post

ಮುಂಡಗೋಡ- ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಟಿ.ಆಸ್ತಕಟ್ಟಿ ವಿಧಿವಶ- ಗಣ್ಯರ ಸಂತಾಪ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಹನ್ಮಂತಪ್ಪ ಆಸ್ತಕಟ್ಟಿ ಇಂದು ವಿಧಿವಶರಾಗಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಯವರ ಕಟ್ಟಾ ಬೆಂಬಲಿಗರಾಗಿದ್ದ ಹನ್ಮಂತಪ್ಪ ಆಸ್ತಕಟ್ಟಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಹನ್ಮಂತಪ್ಪ ಆಸ್ತಕಟ್ಟಿಯವರ ನಿಧನಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ

Post
ಮನೆಯಲ್ಲಿ ಶ್ರೀ ರಾಮ ನಾಮ ಜಪ ಮಾಡಿದ ಸಚಿವ ಸಿಸಿ ಪಾಟೀಲ್….

ಮನೆಯಲ್ಲಿ ಶ್ರೀ ರಾಮ ನಾಮ ಜಪ ಮಾಡಿದ ಸಚಿವ ಸಿಸಿ ಪಾಟೀಲ್….

ಗದಗ ಆ್ಯಂಕರ್ : ಅಯ್ಯೋಧ್ಯಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪ್ರಭು ಶ್ರೀ ರಾಮಚಂದ್ರರ ಭವ್ಯ ಮಂದಿರ ನಿಮಾ೯ಣದ ಶೀಲಾನ್ಯಾಸ ಕಾಯ೯ದ ಪ್ರಯುಕ್ತ ಸಚಿವ ಸಿಸಿ ಪಾಟೀಲ್ ತಮ್ಮ ನಿವಾಸದಲ್ಲಿ ಶ್ರೀ ರಾಮ ನಾಮ ಜಪ ಮಾಡಿದರು. ಪತ್ನಿ ಮಕ್ಕಳು ಮತ್ತು ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಶ್ರೀರಾಮ ನಾಮ ಜಪಿಸಿದರು. ನರಗುಂದ ಪಟ್ಟಣದಲ್ಲಿ ಇರುವ ಮನೆಯಲ್ಲಿ ರಾಮನಾಮ ಜಪಿಸಿ ಸಂಭ್ರಮಿಸಿದರು

  • 1
  • 8
  • 9
error: Content is protected !!