Home Public First Newz

Author: Public First Newz (Public First Newz)

Post
ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗಳಲ್ಲಿ ಕೆಲಸಕ್ಕೆ ಹೋಗುವ ಸುತ್ತ ಮುತ್ತಲ ಹಳ್ಳಿಗಳ ಕೂಲಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ. ರವಿವಾರ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕಕ್ಕೇ ಕಾರಣವಾಗಿದೆ. ನಿತ್ಯವೂ ಇಲ್ಲಿನ ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ತೆರಳುವ ನೂರಾರು ಕಾರ್ಮಿಕರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿಗಳು ಸೂಚನೆ ನೀಡಿವೆ.

Post
ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಹುನಗುಂದಕ್ಕೆ ಮತ್ತೆ ವಕ್ಕರಿಸಿದ ಕೊರೋನಾ, ಓರ್ವ ಮಹಿಳೆಗೆ ಸೋಂಕು ದೃಢ..!

ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ...

Post
ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಆಚರಿಸಲಾಯಿತು.‌ ವಿವಿದ ಚಿತ್ರಗಳ ರೂಪದಲ್ಲಿ ದೀಪ ಬೆಳಗಿಸಿ ಭಕ್ತರು ಸಂಭ್ರಮಿಸಿದ್ರು.‌ ದೇವಸ್ಥಾನದ ಅಂಗಳದಲ್ಲಿ ರಂಗೋಲಿ ಬಿಡಿಸಿ ಅದರ ಪ್ರಕಾರವೇ ದೀಪಗಳನ್ನು ಬೆಳಗಿಸಿದ್ರು‌. ಕಾರ್ತಿಕ ದೀಪ ಬೆಳಗಿಸೋ ಮೊದಲು ದೇವಿಗೆ ವಿಶೇಷ ಪೂಜೆ ಮಾಡಲಾಯಿತು.. ಇನ್ನು ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

Post
ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!

ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!

ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿ ಇತ್ತಿಚೆಗೆ ಸಂಭವಿಸಿದ ಕಾರು ದುರಂತದಲ್ಲಿ ದಂಪತಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಹೀಗಾಗಿ, ಅಪಘಾತಗಳಿಗೆ ಆಮಂತ್ರಣ ನೀಡುತ್ತಿದ್ದ ಅಮ್ಮಾಜಿ ಕೆರೆಯ ದಂಡೆಯ ಮೇಲೆ ಬೇಲಿ ಹಾಕಲಾಗಿದೆ. ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಈಗಷ್ಟೆ ಎಚ್ಚೆತ್ತುಕೊಂಡಿದ್ದು ಕೆರೆಯ ದಂಡೆಯ ಮೇಲೆ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಸಣ್ಣ ಸಣ್ಣ ಚೀಲಗಳನ್ನು ತುಂಬಿ ಇಡಲಾಗಿದೆ.. ಇದ್ರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವುದನ್ನು ಕೊಂಚ ತಪ್ಪಿಸಲು ಕ್ರಮ ಕೈಗೊಂಡಿದೆ.

Post
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!

ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!

ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ‌.

Post
ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!

ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!

ಮುಂಡಗೋಡ: ತಾಲೂಕಿನ ಸಿದ್ದನಕೊಪ್ಪದಲ್ಲಿ ವಿಶೇಷ ಹುಟ್ಟುಹಬ್ಬ ಆಚರಿಸಲಾಗಿದೆ. ಸ್ಪರ್ಧಾ ಹೋರಿಗೆ ಜನ್ಮ ದಿನ ಆಚರಣೆ ಮಾಡಲಾಗಿದೆ.. ಹೋರಿಗೆ ವಿಶೇಷ ಅಲಂಕಾರ ಮಾಡಿ, ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ನೂರಾರು ಜನರು ಸೇರಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೋರಿಯ ಗುಣಗಾನ‌ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಹೋರಿಯ ಮಾಲೀಕರು ಕುಣಿದು ಕುಪ್ಪಳಿಸಿದ್ರು.. ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಮಳಗಿಯ ಬಿಜೆಪಿ ಮುಖಂಡ ಸಂತೋಷ ಶೇಟ್ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Post
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!

ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!

ಮುಂಡಗೋಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಬಿಜೆಪಿ ಯುವ ಧುರೀಣ ಸಂತೋಷ ರಾಯ್ಕರ ಅವರು ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಬಳಿಕ ಮಾತನಾಡಿದ ಸಂತೋಷ ರಾಯ್ಕರ, ಹಿಂದೂ ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಅವರ ಆದರ್ಶ, ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ವತಿಯಿಂದ ಸಂತೋಷ ರಾಯ್ಕರ ಅವರನ್ನು ಗೌರವಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಕಾಳೇಶ...

Post
ಮುಂಡಗೋಡಿನಲ್ಲಿ ಟಿಬೇಟಿಗನ ಪರ್ಸು, ಮೊಬೈಲು ಕಿತ್ತು ಎಸ್ಕೇಪ್ ಆದ ಯುವಕ..! ಬೆನ್ನತ್ತಿ ಹಿಡಿದ ಜನ..!

ಮುಂಡಗೋಡಿನಲ್ಲಿ ಟಿಬೇಟಿಗನ ಪರ್ಸು, ಮೊಬೈಲು ಕಿತ್ತು ಎಸ್ಕೇಪ್ ಆದ ಯುವಕ..! ಬೆನ್ನತ್ತಿ ಹಿಡಿದ ಜನ..!

ಮುಂಡಗೋಡ; ಪಟ್ಟಣದಲ್ಲಿ ಇಂದು ಯುವಕನೋರ್ವ ಟಿಬೇಟಿಯನ್ ವ್ಯಕ್ತಿಯ ಪರ್ಸ್ ಹಾಗೂ ಮೊಬೈಲ್ ಎಗರಿಸಿಕೊಂಡು ಹೋಗುತ್ತಿದ್ದ ವೇಳೆ ಸಾರ್ವಜನಿಕರ ಕೈಯಲ್ಲಿ ತಗಲಾಕ್ಕೊಂಡು ಪಜೀತಿ ಪಟ್ಟ ಘಟನೆ ನಡೆದಿದೆ. ಸೋಮವಾರ ಸಂತೆ ದಿನವಾದ ಕಾರಣ ಜನಜಂಗುಳಿ ಸೇರಿದ್ದು, ಇದೇ ವೇಳೆ ಪಟ್ಟಣದ ಅಕ್ಷಯ ಲಾಡ್ಜ್ ಬಳಿ, ಟಿಬೇಟಿಯನ್ ವ್ಯಕ್ತಿಯ ಪರ್ಸ್ ಮೇಲೆ ಕಣ್ಣಿಟ್ಟಿದ್ದ ಯುವಕ ಏಕಾಏಕಿ ಪರ್ಸ್ ಹಾಗೂ ಮೊಬೈಲ್ ಗೆ ಕೈ ಹಾಕಿ ಕಿತ್ತುಕೊಂಡಿದ್ದಾ‌ನೆ. ಹೀಗಾಗಿ, ತಕ್ಷಣವೇ ಎಚ್ಚೆತ್ತ ಟಿಬೇಟಿಗ ಚೀರಾಡಿದ್ದಾನೆ. ಹೀಗಾಗಿ, ಸಾರ್ವಜನಿಕರು ಪರ್ಸ್ ಕದ್ದೊಯ್ಯುತ್ತಿದ್ದ ಆರೋಪಿಯನ್ನು...

Post
ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ..!

ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ, ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ..!

ಮುಂಡಗೋಡ: ತಾಲೂಕಿನ ಅಗಡಿ ಬಳಿ ಕಬ್ಬು ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ, ಕೆಲಹೊತ್ತು ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಆದ್ರೆ, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಹಳಿಯಾಳ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್, ರಸ್ತೆಗಳ ಗುಂಡಿಗಳಲ್ಲಿ ನಿಯಂತ್ರಣ ತಪ್ಪಿ ಬಿದ್ದಿತ್ತು ಎನ್ನಲಾಗಿದೆ. ಹೀಗಾಗಿ, ರಸ್ತೆಗಳ ಅವ್ಯವಸ್ಥೆಗೆ ಜನರು ಹಿಡಿಶಾಪ ಹಾಕುವಂತಾಗಿದೆ. ಅಂದಹಾಗೆ, ಈ ರಸ್ತೆಯಲ್ಲಿ ನಿತ್ಯವೂ ನೂರಾರು ವಾಹನಗಳು ಕಬ್ಬು ಸಾಗಿಸುತ್ತಿವೆ. ಈ ವೇಳೆ ರಸ್ತೆಗಳ ಗುಂಡಿಗಳಿಂದ ಇನ್ನಿಲ್ಲದ ಕಿರಿಕಿರಿಯಾಗುತ್ತಿದೆ. ಸಂಬಂದಪಟ್ಟ ಇಲಾಖೆ ಈ ಕಡೆ...

Post
ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!

ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!

ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು. ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್...

error: Content is protected !!