ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮದ ಕೆರೆಯ ದಂಡೆಯ ನೀರಿನಲ್ಲಿ ಬಿದ್ದು ಜೋಗೇಶ್ವರ ಹಳ್ಳದ ವೃದ್ಧನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಜೋಗೇಶ್ವರಹಳ್ಳದ ನಿವಾಸಿ ಮುರುಗಯ್ಯ ಚನ್ನವೀರಯ್ಯ ಹಿರೇಮಠ (63) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.

ಮಗ ಹೇಳೋ ಪ್ರಕಾರ ಏನಾಯ್ತು..?
ಮೃತರ ಮಗನಾದ ನಾಗರಾಜ ಮುರುಗಯ್ಯ ಹಿರೇಮಠ (30) ಅವರು ಮುಂಡಗೋಡ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಅವರ ತಂದೆ ಮುರುಗಯ್ಯನವರು ದಿನಾಂಕ 04/07/2026 ರಂದು ರಾತ್ರಿ 09:00 ಗಂಟೆಗೆ ಮನೆಯ ಹಿತ್ತಲಿನಲ್ಲಿ ಮಲಗಿಕೊಂಡಿದ್ದರು. ಆದರೆ, ದಿನಾಂಕ 05/07/2026 ರ ಸಾಯಂಕಾಲ 06:00 ಗಂಟೆಯ ನಡುವಿನ ಸಮಯದಲ್ಲಿ ಅವರು ಸಾಲಗಾಂವ ಗ್ರಾಮದ ಸಾಲಗಾಂವ ಕೆರೆಯ ದಂಡೆಯ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರಂತೆ.
ಯಾವುದೇ ಸಂಶಯವಿಲ್ಲ ಎಂದ ಮಗ..!
ತಮ್ಮ ತಂದೆಯ ಮರಣದಲ್ಲಿ ಯಾವುದೇ ರೀತಿಯ ಸಂಶಯವಿರುವುದಿಲ್ಲ ಎಂದು ಮಗ ನಾಗರಾಜ ಅವರು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಮೃತರ ದೇಹವನ್ನು ಮುಂಡಗೋಡ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಮುಂದಿನ ತನಿಖೆಗಾಗಿ ಪೊಲೀಸರಿಗೆ ವಿನಂತಿ ಮಾಡಿಕೊಳ್ಳಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
