ಮುಂಡಗೋಡ: ತಾಲೂಕಿನಲ್ಲಿ ಇಂದು (ದಿನಾಂಕ: 06-07-2026) ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ತಾಲೂಕಿನ ನಿರ್ದಿಷ್ಟ ಶಾಲೆಗಳಿಗೆ ಮಾತ್ರ ರಜೆ ಘೋಷಿಸಿ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಆದೇಶ ಹೊರಡಿಸಿದ್ದಾರೆ.

ಹೆಚ್ಚಿನ ಮಳೆಯ ಕಾರಣದಿಂದಾಗಿ ತಾಲೂಕಿನ ಈ ಕೆಳಗಿನ ಮೂರು ಶಾಲೆಗಳಿಗೆ ಇಂದು ರಜೆ ನೀಡಲಾಗಿದೆ..
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಅಂಗನವಾಡಿ ಕೇಂದ್ರ ಉಮ್ಮಚಗಿ,
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹಾಗೂ ಅಂಗನವಾಡಿ ಕೇಂದ್ರ ಶಾನುವಳ್ಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಬೆಡಸಗಾಂವ್
ಇಡೀ ತಾಲೂಕಿನ ಶಾಲೆಗಳಿಗೆ ರಜೆ ಇಲ್ಲ..!
ಇಡೀ ತಾಲೂಕಿನ ಶಾಲೆಗಳಿಗೆ ರಜೆ ಇರುವುದಿಲ್ಲ, ಕೇವಲ ಈ ಮೂರು ಶಾಲೆಗಳಿಗೆ ಮಾತ್ರ ರಜೆ ಅನ್ವಯಿಸಲಿದೆ ಎಂದು ಬಿಇಒ (BEO) ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಮುನ್ನೆಚ್ಚರಿಕೆ ವಹಿಸುವಂತೆ ಕೋರಲಾಗಿದೆ.
