ಮುಂಡಗೋಡ: ಪಟ್ಟಣದ ಕಿಲ್ಲೇ ಓಣಿಯಲ್ಲಿನ ಯುವತಿಯೋರ್ವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿ ಕಾಣೆಯಾದ ಬಗ್ಗೆ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಪರವೀನಬಾನು ಫಕೀರ(20) ಎಂದು ತಿಳಿದು ಬಂದಿದ್ದು ಈಕೆಯು ಡಿ.4 ರಂದು ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಈ ವರೆಗೂ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ. ತಾಲೂಕಿನ ಅಗಡಿ ಗ್ರಾಮದ ಯುವಕ ಶಾರೂಖ್ ಪಠಾಣ ಎಂಬುವನು ಕಾಣುತ್ತಿಲ್ಲ ಆತನೊಂದಿಗೆ ಹೋಗಿರಬಹುದೆಂಬ ಸಂಶಯವಿದೆ ತಮ್ಮ ಸಹೋದರಿಯನ್ನು ಹುಡಿಕಿ ಕೊಡಬೇಕೆಂದು ಯುವತಿಯ ಸಹೋದರ ಮಹ್ಮದಕಾಸಿಫ್ ರಜಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
Top Stories
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಯುವತಿ ನಾಪತ್ತೆ ದೂರು; ಅಗಡಿ ಗ್ರಾಮದ ಯುವಕನೂ ನಾಪತ್ತೆ
ಗುಂಜಾವತಿ ಬಳಿ ಕಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಗಂಭೀರ
ಮುಂಡಗೋಡ: ಕಾರಿಗೆ ಮೋಟರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರನನ್ನು ಮೈನಳ್ಳಿ ಗ್ರಾಮದ ಸಣ್ಯಾ ಸಿದ್ದಿ ಎಂದು ತಿಳಿದು ಬಂದಿದೆ. ಈತನು ಮುಂಡಗೋಡ ಕಡೆಯಿಂದ ಹೋಗುತ್ತಿರುವಾಗ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಯಲ್ಲಾಪೂರದಿಂದ ಮುಂಡಗೋಡ ಕಡೆಗೆ ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದು ಸ್ವಯಂಕೃತ ಅಪಘಾತ ಪಡಿಸಿಕೊಂಡು ಹಣೆ, ತಲೆಗೆ, ಕಾಲು ಹಾಗೂ ಗದ್ದಕ್ಕೆ ಗಾಯಪಡಿಸಿಕೊಂಡಿದ್ದಾನೆಂದು ಮುಂಡಗೋಡ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಗೋ ಕಳ್ಳರಿಗೆ ನೆರವು; ಬಜರಂಗದಳ ಮಾಜಿ ಸಂಚಾಲಕ ಆರೆಸ್ಟ್
ಕಾರ್ಕಳ: ಗೋ ಕಳ್ಳರಿಗೆ ನೆರವಾಗುತ್ತಿದ್ದ ಕಾರ್ಕಳ ನಗರದ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭುನನ್ನ ಪೊಲೀಸರು ಬಂಧಿಸಿದ್ದಾರೆ. ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಎಂಬಾತನನ್ನು ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ದನಗಳನ್ನು ಕಳವು ಮಾಡಿ ವಧಿಸಿ ಮಾಂಸ ಮಾರಾಟ ಜಾಲದವರಿಗೆ ಅಭಯವಾಗಿದ್ದ ಅನಿಲ್ ಪ್ರಭು, ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು ತನಿಖೆಯ ವೇಳೆಗೆ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ. ಅದರನ್ವಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಅನಿಲ್ ಪ್ರಭುನನ್ನು ಬಂಧಿಸಿದ್ದಾರೆ. ನವಂಬರ್ 6ರಂದು ಕಾರ್ಕಳ ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದಾಗ ಹುಡ್ಕೋ ಕಾಲನಿಯ ಮೊಹಮ್ಮದ್ ಯಾಸೀನ್ ಎಂಬಾತನು ಬಂಗ್ಲೆಗುಡ್ಡೆಯಿಂದ ನಕ್ರೆ ಜಂಕ್ಷನ್ ಕಡೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸಂದರ್ಭ ಪೊಲೀಸರು ವಾಹನ ನಿಲ್ಲಿಸಲು...
ನಾಳೆಯೂ ಬಸ್ ಸಿಗಲ್ಲ.. ಮತ್ತೆ ಮುಂದುವರೆದ ಸಾರಿಗೆ ಮುಷ್ಕರ
ಕಾರವಾರ- ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಜಿದ್ದಾ ಜಿದ್ದು ಬಗೆ ಹರಿಯುವ ಲಕ್ಷಣಗಳೇ ಕಾಣ್ತಿಲ್ಲ.. ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರೋ ಸಾರಿಗೆ ಚಾಲಕ, ನಿರ್ವಾಹಕರು ನಾಳೆಯೂ ಮುಷ್ಕರ ಮುಂದುವರೆಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಂಧಾನ ಮತ್ತೆ ವಿಫಲವಾಗಿದೆ. ವಿಧಾನ ಸಭೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸರ್ಕಾರದ ಜೊತೆ ಸಂಧಾನ ಯಶಸ್ವಿ ಅಂತಾನೇ ಭಾವಿಸಲಾಗಿತ್ತು.. ಆದ್ರೆ, ಸಭೆಯ ಬಳಿಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಮುಷ್ಕರ ಮುಂದುವರಿಯೋ ಬಗ್ಗೆ ಪ್ರೀಡಂ ಪಾರ್ಕ್ ನಲ್ಲಿ ಘೋಷಿಸಿದ್ದಾರೆ.. ಪ್ರತಿಭಟನೆಗೆ ಬರೋರು ಬನ್ನಿ ಅಂತಾ ಹೇಳಿರೋ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೇ ಸೆಡ್ಡು ಹೊಡೆದಿದ್ದಾರೆ. ಹೀಗಾಗಿ, ಸಾರಿಗೆ ನೌಕರರ ಮುಷ್ಕರ ಮತ್ತೆ ಮುಂದುವರೆದಿದೆ.. ಎಸ್ಮಾ ಅಸ್ತ್ರ ಪ್ರಯೋಗಿಸತ್ತಾ ಸರ್ಕಾರ..? ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರೋ ಸಾರಿಗೆ ನೌಕರರ ವಿರುದ್ಧ ಎಸ್ಮಾ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಗಂಭೀರ ಚಿಂತನೆಯಲ್ಲಿದೆ ಸರ್ಕಾರ.. ಹೀಗಾಗಿ ಸುದೀರ್ಘ ಚರ್ಚೆ ನಡೆಸಿರೋ ಸಿಎಂ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ...
ಗ್ರಾ.ಪಂ ಚುನಾವಣೆ; ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣು: ಡಿಸಿ ಡಾ.ಹರೀಶ್ ಕುಮಾರ್
ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿನ ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಮುಗಿದಿದೆ. ಇನ್ನು, ಎರಡನೇ ಹಂತದಲ್ಲಿ ಸಿದ್ದಾಪುರ, ಸಿರಸಿ, ಮುಂಡಗೊಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾಗಳಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮವನ್ನು ಕೈಗೊಂಡಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಅವಿರೋಧ ಆಯ್ಕೆ; ಹದ್ದಿನ ಕಣ್ಣು ಇನ್ನು, ನಾಮಪತ್ರ ಪರಿಶೀಲನೆ ನಂತರ ಒಂದು ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದಲ್ಲಿ ಚುನಾವಣೆಯ ಎಲ್ಲ ಪ್ರಕ್ರಿಯೆಗಳ ಮುಗಿದ ನಂತರ ಅವಿರೋಧ ಆಯ್ಕೆ ಮಾಡಲಾಗುತ್ತದೆ. ಆದರೆ ಚುನಾವಣಾ ಆಯೋಗವು ರಾಜ್ಯದ ಕೆಲವು ಭಾಗಗಳಲ್ಲಿ ಅವಿರೋಧ ಆಯ್ಕೆ ಸಂಬಂಧ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳನ್ನು...
ಹುನಗುಂದ ಬಳಿ ಅಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಗಡಿ ಮಹಿಳೆ
ಮುಂಡಗೋಡ- ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಯೊಬ್ರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ಮುಂಡಗೋಡ ತಾಲೂಕಿನ ಅಗಡಿ ಗ್ರಾಮದ 22 ವರ್ಷ ವಯಸ್ಸಿನ ಲಕ್ಷ್ಮೀ ಸುನಿಲ್ ಲಮಾಣಿ ಎಂಬುವರಿಗೆ ಇವತ್ತು ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ 108 ಅಂಬುಲೆನ್ಸ್ ಮೂಲಕ ಮುಂಡಗೋಡ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮದ್ಯೆ ಹುನಗುಂದ ಕ್ರಾಸ್ ಬಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ಇದು ಇವ್ರಿಗೆ ಎರಡನೇಯ ಹೆರಿಗೆಯಾಗಿದ್ದು ಮಗು ಆರೋಗ್ಯವಾಗಿದೆ.. ಈ ವೇಳೆ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸೂಕ್ತ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿಕೊಂಡರು.. ಚಾಲಕ ಭೀಮಪ್ಪ ಬಾರಕೇರ್, ಆಶಾ ಕಾರ್ಯಕರ್ತೆ ನೀಲವ್ವ ಲಮಾಣಿ ಇದ್ದರು.
ಅನಾಥ ಬುದ್ದಿಮಾಂದ್ಯೆಯ ಮೇಲೆ ಅತ್ಯಾಚಾರ; ಅನ್ನ ಕೊಡುವ ನೆಪದಲ್ಲಿ ವಿಕೃತಿ ಮೆರೆದ ಯುವಕ ಆರೆಸ್ಟ್
ಹಾವೇರಿ- ಹಾವೇರಿಯಲ್ಲೊಂದು ಹೀನ ಕೃತ್ಯ ನಡೆದಿದೆ..ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಓರ್ವ ಪಾಪಿ ಯುವಕ ಅತ್ಯಾಚಾರ ಎಸಗಿದ್ದಾನೆ.. ಡಿಸೆಂಬರ್ 7 ರ ಮಧ್ಯರಾತ್ರಿ, ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಮಲಗಿದ್ದ ಸುಮಾರು 40-45 ವರ್ಷ ಪ್ರಾಯದ ಬುದ್ದಿಮಾಂದ್ಯೆಗೆ, 24 ವರ್ಷದ ತಸ್ಲೀಮ್ ಸೆರವಾಡ್ ಎಂಬ ಆರೋಪಿ ಊಟ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ.. ಈತನ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.. ಇನ್ನು, ಸಿಸಿಟಿವಿ ದೃಶ್ಯ ನೋಡಿದ ಕಟ್ಟಡದ ಮಾಲೀಕ ನವೀನ್ ಕುಮಾರ್ ತೋಟಣ್ಣನವರ್ ಪೋಲಿಸರಿಗೆ ದೂರು ನೀಡಿದ್ದರು.. ಹೀಗಾಗಿ ಕಾರ್ಯಾಚರಣೆಗಿಳಿದಿದ್ದ ಡಿವೈಎಸ್ಪಿ ವಿಜಯಕುಮಾರ್ ಮತ್ತು ಸಿಪಿಐ ಮಂಜಣ್ಣ ನೇತೃತ್ವದ ಕ್ರೈಂ ತಂಡ ಆರೋಪಿಯ ಹೆಡೆಮುರಿ ಕಟ್ಟಿದೆ.. ಅಂದಹಾಗೆ, ಮುಸುಕುದಾರಿಯಾಗಿ ಅತ್ಯಾಚಾರ ಎಸಗಿರೋ ಕಾಮುಕ ಆರೋಪಿ ತಸ್ಲೀಮ್ ಸೆರವಾಡ್, ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ ಎನ್ನಲಾಗಿದೆ.. ಹಾವೇರಿ ಸಿಟಿಯಲ್ಲಿ ಆಟೋ ಚಾಲಕನಾಗಿದ್ದ ಆರೋಪಿ ರಾತ್ರಿ ಸಮಯದಲ್ಲಿ ಆಟೋ ಚಾಲನೆ ಮಡುತ್ತಿದ್ದ.. ಈ ವೇಳೆ ಅನಾಥ ಬುದ್ದಿಮಾಂದ್ಯ ಮಹಿಳೆಯನ್ನ ಕಂಡು ಊಟ...
ನಾಳೆಯೂ ಬಸ್ ಗಳು ರಸ್ತೆಗಿಳಿಯಲ್ಲ; ಕುಟುಂಬಸ್ಥರೊಂದಿಗೆ ಪ್ರತಿಭಟನೆಗೆ ಸಜ್ಜಾದ ಸಾರಿಗೆ ನೌಕರರು
ಬೆಂಗಳೂರು- ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಜೋರಾಗುವ ಲಕ್ಷಣಗಳು ಕಾಣ್ತಿವೆ.. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸ್ತಿರೋ ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಎರಡು ದಿನದಿಂದ ಯಾವುದೇ ಸರ್ಕಾರಿ ಬಸ್ ಗಳನ್ನು ರಸ್ತೆಗಿಳಿಸಿಲ್ಲ.. ಪರಿಣಾಮ ನಿನ್ನೆಯಿಂದ ರಾಜ್ಯದಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.. ಇನ್ನು, ಸರ್ಕಾರ ಪ್ರತಿಭಟನಾನಿರತರ ಜೊತೆಗೆ ನಡೆಸುತ್ತಿರೊ ಸಂಧಾನಗಳು ಯಶಸ್ವಿಯಾಗಿಲ್ಲ.. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ ನೀಡಿದ ಮೇಲಂತೂ ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಪ್ರಬಲವಾಗಿದೆ.. ಇನ್ನು, ಸಾರಿಗೆ ಸಚಿವ ಲಕ್ಷ್ಮಣ ಸವದಿ ನಾಳೆಯೂ ಮುಷ್ಕರ ಮುಂದುವರೆದ್ರೆ ಖಾಸಗಿ ಚಾಲಕರನ್ನು ಕರೆತಂದು ಬಸ್ ಓಡಿಸುವುದಾಗಿ ತಿಳಿಸಿದ್ದಾರೆ.. ಹೀಗಾಗಿ, ಮತ್ತಷ್ಟು ಕೆರಳಿರೋ ಪ್ರತಿಭಟನಾಕಾರರು, ನಾಳೆ ತಮ್ಮ ಕುಟುಂಬಗಳೊಂದಿಗೆ ಪ್ರತಿಭಟನೆ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.. ಅಲ್ದೇ ನಾಳೆ ಬೆಳಿಗ್ಗೆ 10 ಗಂಟೆಗೆ ಮತ್ತೊಮ್ಮೆ ಸಭೆ ಕರೆದಿರೋ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮತ್ತೊಂದು ಸಂಧಾನದ ಸೂತ್ರ ಹೆಣೆದಿದ್ದಾರೆ.. ಸರ್ಕಾರಿ ನೌಕರಿ ಅಂತಾ ಪರಿಗಣಿಸೋ...
ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಮುಂಡಗೋಡ- ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ 108 ಅಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಘಟನೆ ಮಳಗಿ ಸಮೀಪ ಶಿರಸಿ ರಸ್ತೆಯಲ್ಲಿ ನಡೆದಿದೆ.. ಗೋಟಗೋಡಿಕೊಪ್ಪದ ರೂಪಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ಗೊಟಗೋಡಿಕೊಪ್ಪದಿಂದ ಶಿರಸಿ ಗೆ ಹೋಗುವ ಮಾರ್ಗ ಮದ್ಯೆ ಹೆರಿಗೆಯಾಗಿದ್ದು ತಾಯಿ ಮಗು ಆರೋಗ್ಯವಾಗಿದೆ..
ಕಾಡಾನೆ ದಾಳಿಯಿಂದ ಬೆಳೆನಾಶ; ಮನನೊಂದ ರೈತ ಆತ್ಮಹತ್ಯೆ
ಮುಂಡಗೋಡ: ಕಾಡಾನೆಗಳು ಭತ್ತದ ಕಾಳು ಬಣವೆಯನ್ನು ತಿಂದು ತುಳಿದು ಹಾನಿ ಮಾಡಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡು ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ತೊಗರಳ್ಳಿ ಗ್ರಾಮದ ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.. ಪ್ರಭಾಕರ್ ವಾಮನ ಕೊರ್ಸಿ(51) ಆತ್ಮಹತ್ಯೆ ಮಾಡಿಕೊಂಡ ರೈತ.. ಈತ ತನ್ನ ವ್ಯವಸಾಯಕ್ಕೆಂದು ವಿವಿಧ ಬ್ಯಾಂಕ ಹಾಗೂ ಸಂಘ ಸಂಸ್ಥೆಗಳಲ್ಲಿ ಸುಮಾರು 4ಲಕ್ಷ 20 ಸಾವಿರ ರೂಪಾಯಿ ಸಾಲ ಮಾಡಿ ಹೊಲದಲ್ಲಿ ಭತ್ತದ ಬೆಳೆಯನ್ನು ಬೆಳೆದು ಕೊಯ್ಲು ಮಾಡಿ ಕಾಳು ತುಂಬಿದ ಬಣವೆಯನ್ನು ಒಟ್ಟಲಾಗಿತ್ತು. ಕಳೆದ ಬುಧವಾರ ರಾತ್ರಿ ಸಮಯದಲ್ಲಿ ಕಾಡಾನೆಗಳು ದಾಳಿ ಮಾಡಿ ಕಾಳಿನ ಭತ್ತದ ಬಣವೆಯನ್ನು ಹಾಗೂ ಭತ್ತದ ರಾಶಿಯನ್ನು ತಿಂದು ತುಳಿದು ಹಾಳು ಮಾಡಿದ್ದನ್ನು ಕಂಡ ರೈತ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಹೊಲದ ಅಂಚಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಪತ್ನಿ ವಿಜಯಾ ಕೊರ್ಸಿ ಮುಂಡಗೋಡ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ....