ಶಿವರಾಮ್ ಹೆಬ್ವಾರ್, S.T. ಸೋಮಶೇಖರ್ ಬಿಜೆಪಿಯಿಂದ ಉಚ್ಚಾಟನೆ..!

Big Breaking News: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌  ಹಾಗೂ ಶಾಸಕ S.T. ಸೋಮಶೇಖರ್ ಅವರನ್ನು ಬಿಜೆಪಿ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನಿರ್ಧಾರ ಕೈಗೊಂಡಿದೆ.

ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದ ಮಾಜಿ ಸಚಿವ ಎಸ್.ಟಿ .ಸೋಮಶೇಖ‌ರ್ ಹಾಗೂ ಶಾಸಕ ಶಿವರಾಂ ಹೆಬ್ಬಾ‌ರ್ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ. ಇಬ್ಬರೂ ಸಹ ಹಲವು ದಿನಗಳಿಂದ ಕಾಂಗ್ರೆಸ್ ನಾಯಕರಿಗೆ ಬೆಂಬಲಿಸುವ ಹಾಗೂ ಬಿಜೆಪಿ ಪಕ್ಷವನ್ನು ನಿಂದಿಸುವ ಮೂಲಕ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು.

ಕಳೆದ ವಿಧಾನ ಸಭಾ ಪರಿಷತ್ ಸದಸ್ಯರ ಚುನಾವಣೆ ವೇಳೆಯೂ ಸಹ ಇಬ್ಬರೂ ವಿಪ್ ಉಲ್ಲಂಘಿಸಿ ಕಾಂಗ್ರೆಸ್‌ಗೆ ಮತ ಹಾಕಿದ್ದರು. ಹೀಗಾಗಿ ಇವರ ವಿರುದ್ದ ರಾಜ್ಯ ಬಿಜೆಪಿ ಹೈಕಮಾಂಡ್‌ಗೆ ದೂರು ನೀಡಿತ್ತು. ದೂರು ನೀಡಿದ ಒಂದು ವರ್ಷದ ನಂತರ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ನಿರ್ಧಾರ ಕೈಗೊಂಡಿದೆ.