ಮದುವೆ ಆಗಿ ದೇವರಿಗೆ ಹೊರಟಿದ್ದ ಮದುಮಗಳ ಬಾಳಲ್ಲಿ ವಿಧಿಯ ಕ್ರೌರ್ಯ..! ಹೆಣವಾದ ಮದುಮಗಳು..!!

ವಿಜಯಪುರ: ಟೆಂಫೋ ಹಾಗೂ ಕ್ರೂಜರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಗಷ್ಟೆ ಮದುವೆ ಮುಗಿಸಿಕೊಂಡು ದೇವರಿಗೆ ಹೊರಟಿದ್ದ ಮದುಮಗಳು ಸ್ಥಳದಲ್ಲಿಯೇ ಮೃತಪಟ್ಟ ಧಾರುಣ ಘಟನೆ ನಡೆದಿದೆ.

ಎಲ್ಲಿ..?
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ
ಬಿ.ಕೆ. ಯರಗಲ್ ಬಳಿ ಘಟನೆ ನಡೆದಿದ್ದು,
ರಾಣಿ ಗಣೇಶ ಚವ್ಹಾಣ ಮೃತ ಮದುಮಗಳು. ಅಲ್ಲದೇ, ಮದುಮಗ ಗಣೇಶ ಚವ್ಹಾಣ ಸೇರಿದಂತೆ ಏಳು ಜನರಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಸಿಂದಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮದುವೆ ಮನೆಯಿಂದ ಮಸಣಕ್ಕೆ..!
ಇನ್ನು ಮದುವೆ ನಂತರ ಶಂಕರವಾಡಿಯಿಂದ ಕೊಕಟನೂರ ದೇವಸ್ಥಾನಕ್ಕೆ ಹೋಗುವ ವೇಳೆಯಲ್ಲಿ ಟೆಂಫೋ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಸಿಂದಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಸಂಪೂರ್ಣ ಚಿತ್ರಣ ಇಲ್ಲಿದೆ ನೋಡಿ.. ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ..

error: Content is protected !!