Covid News: ನವದೆಹಲಿ: ಕಳೆದೆರಡು ವರ್ಷಗಳಲ್ಲಿ ತೆರೆಮರೆಗೆ ಸರಿದಿದ್ದ ಕೊರೋನಾ ಮಹಾಮಾರಿ ಮತ್ತೆ ಮುನ್ನೆಲೆಗೆ ಬಂದಿದೆ. ದೇಶದಲ್ಲಿ 1000ಕ್ಕೂ ಅಧಿಕ ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿ ಕೇರಳ, ಮಹಾರಾಷ್ಟ್ರ ಮತ್ತು ದೆಹಲಿ ಮುಂಚೂಣಿಯಲ್ಲಿವೆ. ವಿಶೇಷವೆಂದರೆ ಈ ಹಿಂದೆ ಕೋವಿಡ್ ದೇಶವನ್ನು ಆವರಿಸಿದ್ದ ವೇಳೆಯೂ ಈ ರಾಜ್ಯಗಳೇ ಸೋಂಕಿತರ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದ್ದವು.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ತನ್ನ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದ್ದು, ‘ದೇಶದಲ್ಲಿ ಒಟ್ಟು 1009 ಸಕ್ರಿಯ ಕೋವಿಡ್ ಸೋಂಕಿರತರಿದ್ದು, ಇದರಲ್ಲಿ 752 ಪ್ರಕರಣಗಳು ಇತ್ತೀಚಿನದ್ದಾಗಿವೆ. ಕೇರಳದಲ್ಲಿ ಅತಿಹೆಚ್ಚು 430 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ಮಹಾರಾಷ್ಟ್ರದಲ್ಲಿ 209, ದೆಹಲಿಯಲ್ಲಿ 104, ಕರ್ನಾಟಕದಲ್ಲಿ 47 ಸೋಂಕಿತರಿದ್ದಾರೆ.
ಇದನ್ನೂ ಓದಿ👉ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮೇ 26ರ ಮಾರುಕಟ್ಟೆ ಬೆಲೆ ಇಲ್ಲಿದೆ..!
ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರಗಳಲ್ಲಿ ಪ್ರಸ್ತುತ ಯಾವುದೇ ಸಕ್ರಿಯ ಪ್ರಕರಣಗಳು ವರದಿಯಾಗಿಲ್ಲ’ ಎಂದು ತಿಳಿಸಿದೆ.
ಇದನ್ನೂ ಓದಿ👉ನಿಮ್ಮ ಕ್ರೆಡಿಟ್ ಸ್ಕೋರ್ ಈಗಾಗಲೇ 700 ಮಾರ್ಕ್ ದಾಟಿದೆಯೇ? ಇನ್ನಷ್ಟು ಹೆಚ್ಚಿಸಲು 5 ಸಲಹೆಗಳು..!
ದೇಶಕ್ಕೆ 2020ರಲ್ಲಿ ಕೋವಿಡ್ ಪ್ರವೇಶ ಮಾಡಿ ಸುಮಾರು 2 ವರ್ಷ ಕಾಡಿದ್ದ ವೇಳೆ 4,45,11,545 ಜನರಲ್ಲಿ ಸೋಂಕು ಕಾಣಿಸಿಕೊಂಡು ಅವರು ಗುಣಮುಖರಾಗಿದ್ದರು. 5,33,673 ಜನ ಸಾವನ್ನಪ್ಪಿದ್ದರು