ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ ವಾಹನಗಳ ಬಗ್ಗೆ ಪೊಲಿಸ್ರು ಹದ್ದಿನ ಕಣ್ಣು ಇಟ್ಟಿದ್ರು..
Top Stories
ಭಟ್ಕಳ ಗ್ರಾಮೀಣ ಪೊಲೀಸರ ಕಾರ್ಯಾಚರಣೆ, ದರೋಡೆಗೆ ಹೊಂಚು ಹಾಕಿದ್ದ ಖತರ್ನಾಕ್ “ಗರುಡಾ ಗ್ಯಾಂಗ್” ನ ಮೂವರ ಬಂಧನ..!
ಮಹೀಂದ್ರಾ ಗ್ರೂಪ್ನ ಈ ಸ್ಟಾಕ್ನಲ್ಲಿ HDFC ಮ್ಯೂಚುವಲ್ ಫಂಡ್ನ ಪಾಲು ಇಳಿಕೆ : 7.34% ರಿಂದ 5.13% ಮಟ್ಕಕ್ಕೆ ತಗ್ಗಿದೆ..!
ಪರಿಶಿಷ್ಟ ಜಾತಿಗಳ ಸಮೀಕ್ಷೆ: ಉ.ಕ ಜಿಲ್ಲೆಯಲ್ಲಿ ಶೇ.100.32 ಸಾಧನೆ..!
ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ಗೆ ಪತ್ನಿಯಿಂದ ಕಪಾಳ ಮೋಕ್ಷ..?
ಮೊಬೈಲ್ ಕ್ಯಾಂಟೀನ್ ಖರೀದಿ: ಪ.ಜಾತಿ ಪಂಗಡದವರಿಂದ ಅರ್ಜಿ ಆಹ್ವಾನ..!
ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ : ನಾಗೇಶ್ ರಾಯ್ಕರ್..!
ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್..! ಯಾರು ಗೊತ್ತೆ..?
ಚಿನ್ನದ ಬೆಲೆ ಸತತ ಎರಡು ದಿನ ಇಳಿಕೆ ನಂತರ ಸ್ಥಿರ; ಈಗ ಬೆಂಗಳೂರಲ್ಲಿ ಬಂಗಾರದ ಬೆಲೆ ಎಷ್ಟಿದೆ..?
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ಗುರುವಾರ ರಜೆ ಘೋಷಣೆ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆವರೆಗೂ, ಮಳೆ ಪ್ರಮಾಣ ಮತ್ತು ಮಳೆ ಹಾನಿಯ ವಿವರ.!
ಬಂಟ್ವಾಳದಲ್ಲಿ ಯುವಕನ ಬರ್ಬರ ಹತ್ಯೆ ; ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕಿನಲ್ಲಿ ನಿಷೇಧಾಜ್ಞೆ ಜಾರಿ..!
ಚಿನ್ನದ ಬೆಲೆ 10 ಗ್ರಾಂಗೆ ₹490 ಏರಿಕೆ, ಬೆಳ್ಳಿ ದರ ಸ್ಥಿರ; ಈಗ ಗೋಲ್ಡ್ ರೇಟ್ ಎಷ್ಟಿದೆ ಚೆಕ್ ಮಾಡಿ..!
ಮಂಗಳವಾರ ಸೆನ್ಸೆಕ್ಸ್ 625 ಪಾಯಿಂಟ್ಸ್ ನಷ್ಟದಲ್ಲಿ ಕೊನೆ ; ಷೇರುಪೇಟೆಯ 10 ಕೀ ಹೈಲೈಟ್ಸ್ ಇಲ್ಲಿದೆ..!
ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಕಿಕ್-ಬಾಕ್ಸಿಂಗ್ ಪಂದ್ಯದಲ್ಲಿ ಸೆಣಸಾಡಿದ ಎರಡು ರೋಬೋಟ್ ಗಳು-ವೀಕ್ಷಿಸಿ..!
ಪೊಲೀಸರು ಮೂವರನ್ನು ರಸ್ತೆಯಲ್ಲಿ ಕೂರಿಸಿ ಲಾಠಿಯಿಂದ ಥಳಿಸುತ್ತಿರುವ ವೀಡಿಯೊ ವೈರಲ್ ; ಪೊಲೀಸ್ ಅಮಾನತು..!
ಕಾರಿನೊಳಗೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಕುಟುಂಬದ 7 ಮಂದಿ ; ಕಾರಣ..?
Q4 ಫಲಿತಾಂಶದ ಬಳಿಕ CEAT, MRF ಸೇರಿದಂತೆ 4 ಟೈರ್ ಕಂಪನಿಗಳ ಷೇರು 22% ವರೆಗೆ ಜಿಗಿತ! ಕಾರಣ ಹಾಗೂ ಬ್ರೋಕರೇಜ್ ರೇಟಿಂಗ್..!
ಆಯುಷ್ಮಾನ್ ವಯೋ ವಂದನಾ ಯೋಜನೆ, 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ, ಅಪ್ಲೈ ಮಾಡುವುದು ಹೇಗೆ..?
ಶಿವರಾಮ್ ಹೆಬ್ವಾರ್, S.T. ಸೋಮಶೇಖರ್ ಬಿಜೆಪಿಯಿಂದ ಉಚ್ಚಾಟನೆ..!
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!
ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ ಟಾಪ್ 5 ನ್ಯೂಸ್ ನೋಡಲು ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. Subscribe ಮಾಡಿ.. https://youtu.be/CJbeBeJyGuk
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ದ ಅಂತಾ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರು ಸಿಎಂ ರಾಜೀನಾಮೆ ಮಾತಿಗೆ ಹೇಳಿದ್ದಾದ್ರೂ ಏನು..? ತಿಳಿಬೇಕಾ ಈ ಕೆಳಗಿನ ಯೂಟ್ಯೂಬ್ ಲಿಂಕ್ ಗೆ ಕ್ಲಿಕ್ ಮಾಡಿ.. ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ಆಗ್ತಿದೆ, ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಈ ರೀತಿ ಹೇಳಿರಬಹುದು. ಕೋವಿಡ್ ಸಮಯದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ. ಹೈಕಮಾಂಡ್ ನಿಂದಲೂ ಯಾವುದೇ ರೀತಿಯ ಸೂಚನೆ ಅವರಿಗಿಲ್ಲ ಅಂತಾ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!
ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪೀಡಿತರ ಕುಟುಂಬಗಳಿಗೆ, ಗ್ರಾಮ ಪಂಚಾಯತಿ ಸದಸ್ಯರು ಆಹಾರದ ಕಿಟ್ ವಿತರಿಸಿದ್ರು. ಕೊರೋನಾ ಎರಡನೇ ಅಲೆಯ ಪರಿಣಾಮ ಲಾಕ್ ಡೌನ್ ಜಾರಿಯಾದ ಹಿನ್ನಲೆಯಲ್ಲಿ ನಂದಿಕಟ್ಟಾ ಗ್ರಾಮದ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಅದ್ರಲ್ಲೂ ಕೊರೋನಾ ಪಾಸಿಟಿವ್ ದೃಢಪಟ್ಟ ಕೆಲವು ಕುಟುಂಬಗಳ ಪಾಡು ಹೇಳತೀರದ್ದಾಗಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸ್ಲೆ ಸೇರಿದಂತೆ ಹಲವು ಸದಸ್ಯರು ಅಂತಹ ಬಡ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ, ಸಂತೋಷಿ ಮಾತಾ ಕಾಳಿಕಾ ಮಠದಿಂದ ಆಹಾರ ಪೊಟ್ಟಣ ವಿತರಣೆ..!
ಹಳಿಯಾಳ : ಜೊಯಿಡಾ ತಾಲೂಕಿನ ಕ್ಯಾಸರಲಾಕ್ ಸಮೀಪದ ಕುಣಗಿನಿಯಲ್ಲಿರುವ ಶ್ರೀ ಸಂತೋಷಿ ಮಾತಾ ಕಾಳಿಕಾ ಮಠದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹಾಗೂ ರೋಗಿಗಳಿಗೆ ಆಶ್ರಮದ ಶ್ರೀ ರಘುವೀರ ಗುರೂಜಿಯವರು ಒಂದು ದಿನದ ಊಟದ ಪೊಟ್ಟಣವನ್ನು ವಿತರಿಸಿದರು. 150 ಕ್ಕೂ ಹೆಚ್ಚು ಊಟದ ಪೊಟ್ಟಣವನ್ನು ವಿತರಿಸಲಾಯ್ತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಚವ್ವಾಣ, ಪ್ರಮುಖರಾದ ಮಾರುತಿ ನರಗುಂದಕರ, ಯಲ್ಲಪ್ಪಾ ಮಾಲವಣಕರ, ಯಶವಂತ ಪಟ್ಟೇಕರ, ಬಸವರಾಜ ಹಿರೆಮೊರಬ, ಆಶ್ರಮದ ರೂಪೇಶ ನಾಯ್ಕ, ಪಾಂಡುರಂಗ ಶೇಠ, ರಿಶ್ವಿತ್ ನಾಯ್ಕ, ಸಿದ್ದಾಂತ ಪರಬ ಮೊದಲಾದವರು ಇದ್ದರು.
ಮಳಗಿ: ಮೀನು ಹಿಡಿಯಲು ಹೋದ ಯುವಕ ಕೆರೆಯಲ್ಲಿ ಮುಳುಗಿ ಸಾವು..!
ಮುಂಡಗೋಡ: ತಾಲೂಕಿನ ಮಳಗಿಯಲ್ಲಿ, ಮೀನು ಹಿಡಿಯಲು ಹೋಗಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಉಮೇಶ್ ಶಿವಪ್ಪ ಬೋವಿ(25) ಮೃತಪಟ್ಟ ಯುವಕನಾಗಿದ್ದಾನೆ. ಮಳಗಿ ಗ್ರಾಮದ ಸಿದ್ದಾಪುರ ಓಣಿಯ ನಿವಾಸಿಯಾಗಿರೊ ಯುವಕ ಶನಿವಾರ ಮದ್ಯಾನ ಮೀನು ಹಿಡಿಯಲೆಂದು ಕೆರೆಗೆ ಹೋಗಿದ್ದ. ಈ ವೇಳೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಅಂತಾ ಸಂಬಂಧಿ ಜಯಮ್ಮ ಹನ್ಮಂತ ಬೋವಿ ಎಂಬುವವರು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬನವಾಸಿ ಭಾಗದ ಗ್ರಾಮಗಳಿಗೆ ಸಚಿವ ಹೆಬ್ಬಾರ್ ಭೇಟಿ: ಕೋವಿಡ್ ನಿರ್ವಹಣೆ ಕುರಿತು ಚರ್ಚೆ..!
ಶಿರಸಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಇಂದು ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ, ಬಿಸಲಕೊಪ್ಪ, ಅಂಡಗಿ ಹಾಗೂ ಸುಗಾವಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಚರ್ಚಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಬ್ಬಾರ್ ಕೋವಿಡ್ ಕೇರ್ ಕಿಟ್ ಅನ್ನು ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಆಶಾ ಕಾರ್ಯಕರ್ತೆರು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ಸಂಕಷ್ಟದಲ್ಲಿರೊ 21 ಬಡ ಕುಟುಂಬಗಳಿಗೆ ಧನಸಹಾಯ ಮಾಡಿದ ಟಿಬೇಟಿಯನ್ ಲಾಮಾ..!
ಮುಂಡಗೋಡ-ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿದ್ದ ಕುಟುಂಬಗಳಿಗೆ ಟಿಬೇಟಿಯನ್ ಸಕ್ಯಾ ಪಾರ್ಟಿಯ ಬೌದ್ದ ಸನ್ಯಾಸಿ ಒಬ್ಬರು ಸಹಾಯ ಮಾಡಿದ್ದಾರೆ. ಸಂಕಷ್ಟದಲ್ಲಿದ್ದ 21 ಬಡ ಕುಟುಂಬಗಳಿಗೆ ತಲಾ 500 ರೂಪಾಯಿ ಹಣ ಸಹಾಯ ಮಾಡಿದ್ದು , ಹಣವನ್ನು ಇಂದು ಗ್ರಾಮ ಪಂಚಾಯತಿ ಸದಸ್ಯರು ವಿತರಿಸಿದ್ರು. ಈ ವೇಳೆ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು..
ಯಲ್ಲಾಪುರ: ಬಾವಿಗೆ ಹಾರಿದ ಮಾನಸಿಕ ಅಸ್ವಸ್ಥೆಯನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ..!
ಯಲ್ಲಾಪುರ: ಬಾವಿಗೆ ಬಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಿದ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ನಡೆದಿದೆ. ಸುನಂದ ಪಟಗಾರ್(34) ಅನ್ನೋ ಮಹಿಳೆಯೇ ರಕ್ಷಣೆಗೊಳಗಾದವಳಾಗಿದ್ದಾಳೆ. ಇಂದು ಬೆಳಗ್ಗೆ ಮನೆಯಿಂದ ಹೊರಬಂದ ಮಹಿಳೆ ಏಕಾ ಏಕಿ ಸಾರ್ವಜನಿಕ ಬಾವಿಗೆ ಹಾರಿದ್ದಾಳೆ. ಈ ಸಂದರ್ಭದಲ್ಲಿ ಅದೃಷ್ಟವಶಾತ್ ಬಾವಿಯಲ್ಲಿ ಆಳವಿಲ್ಲದೇ ಇದ್ದಿದ್ದರಿಂದ ಆಕೆ ಬದುಕುಳಿದಿದ್ದು ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಬಾವಿಯಲ್ಲೇ ಚೀರಾಡಿದ್ದಾಳೆ. ಈ ವೇಳೆ ಮನೆಯಲ್ಲಿ ಈಕೆ ಇರದುದ್ದನ್ನು ಗಮನಿಸಿ ಹೊರಬಂದು ನೋಡಿದಾಗ, ಈಕೆ ಚೀರಾಡುವ ಧ್ವನಿ ಮನೆಯ ಜನರಿಗೆ ಕೇಳಿಸಿದೆ. ತಕ್ಷಣ ಬಾವಿ ಇಣುಕಿ ನೋಡಿದಾಗ ಈಕೆ ಬಾವಿಯಲ್ಲಿ ಬಿದ್ದಿರೋದು ಗಮನಕ್ಕೆ ಬಂದಿದೆ. ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ನೀರಿನಿಂದ ಹೊರಕ್ಕೆ ಕರೆತಂದಿದ್ದಾರೆ. ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ .ಭೀಮರಾವ್ ವಾಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತನಾಯ್ಕ , ಉಲ್ಲಾಸ್ ವೈ ನಾಗೇಕರ್,...