ಯಲ್ಲಾಪುರ: ಬಾವಿಗೆ ಬಿದ್ದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಿದ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಅದೃಷ್ಟವಶಾತ್ ಬಾವಿಯಲ್ಲಿ ಆಳವಿಲ್ಲದೇ ಇದ್ದಿದ್ದರಿಂದ ಆಕೆ ಬದುಕುಳಿದಿದ್ದು ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಬಾವಿಯಲ್ಲೇ ಚೀರಾಡಿದ್ದಾಳೆ. ಈ ವೇಳೆ ಮನೆಯಲ್ಲಿ ಈಕೆ ಇರದುದ್ದನ್ನು ಗಮನಿಸಿ ಹೊರಬಂದು ನೋಡಿದಾಗ, ಈಕೆ ಚೀರಾಡುವ ಧ್ವನಿ ಮನೆಯ ಜನರಿಗೆ ಕೇಳಿಸಿದೆ. ತಕ್ಷಣ ಬಾವಿ ಇಣುಕಿ ನೋಡಿದಾಗ ಈಕೆ ಬಾವಿಯಲ್ಲಿ ಬಿದ್ದಿರೋದು ಗಮನಕ್ಕೆ ಬಂದಿದೆ.
ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ತಕ್ಷಣದಲ್ಲಿ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ನೀರಿನಿಂದ ಹೊರಕ್ಕೆ ಕರೆತಂದಿದ್ದಾರೆ.
ಕಾರ್ಯಾಚರಣೆಯಲ್ಲಿ ಯಲ್ಲಾಪುರ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ .ಭೀಮರಾವ್ ವಾಯು ಉಪ್ಪಾರ್, ಸಿಬ್ಬಂದಿಗಳಾದ ಹನುಮಂತನಾಯ್ಕ , ಉಲ್ಲಾಸ್ ವೈ ನಾಗೇಕರ್, ನಾಗೇಶ್ ದೇವಾಡಿಗ, ಪ್ರಶಾಂತ್ ಬಾರ್ಕಿ, ಲಗುಮಣ್ಣ ಎಂಬುವವರು ಭಾಗವಹಿಸಿ ರಕ್ಷಣೆ ಮಾಡಿದ್ದಾರೆ. ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.