Home ಅಪಘಾತ

Category: ಅಪಘಾತ

Post
ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

 ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ‌. ಪರಿಣಾಮ ಟ್ರಾಕ್ಟರಿನಲ್ಲಿದ್ದ ಸುಮಾರು 40-45 ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಅದ್ರಲ್ಲಿ, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪಿಕ್ ನಿಕ್ ಗೆ ಹೊರಟಿದ್ದರು..! ಇಂದು ಮಳಗಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರಾಕ್ಟರ್ ಮೂಲಕ ಪಿಕ್ ನಿಕ್ ಗೆ ಅಂತಾ ಮಳಗಿಯಿಂದ ಕೊಳಗಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಿಕ್ ನಿಕ್ ಮುಗಿಸಿಕೊಂಡು ವಾಪಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ ಎನ್ನಲಾಗಿದೆ....

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಮುಂಡಗೋಡ ಸಮೀಪದ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಬಳಿ ಬೈಕ್ ಅಪಘಾತವಾಗಿದೆ. ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಡಗೋಡ ಪಟ್ಟಣದ ಸಂಜು ನರಸಪ್ಪ ಕಳಲಕೊಂಡ(32) ಮೃತ ಬೈಕ್ ಸವಾರ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಿಯಂತ್ರಣ ತಪ್ಪಿದ ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಕೂಡ ನುಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು...

Post
ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ

ಬೈಕ್ ಗೆ ಗುದ್ದಿದ ಕಾರ್ 10 ಅಡಿ ದೂರ ಹಾರಿ ಬಿದ್ದ ಮಹಿಳೆ, ಸಿಸಿಟಿವಿಯಲ್ಲಿ ಭಯಾನಕ ದೃಷ್ಯ

ಧಾರವಾಡ: ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಘಟನೆ, ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ದಾಟುವಾಗ ಭಯಾನಕ ದುರ್ಘಟನೆ ನಡೆದಿದೆ.  ರಸ್ತೆ ದಾಟಿ ಹೋಗುತ್ತಿದ್ದ ಬೈಕ್ ಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದ ಬ್ಲಾಕ್ ಕಲರ್ ಕಾರ್ ಗುದ್ದಿದೆ. ಗುದ್ದಿದ ರಭಸಕ್ಕೆ ಬೈಕ್ ಮೇಲಿದ್ದ ಮಹಿಳೆ 10 ಅಡಿ ಹಾರಿ ಹೋಗಿ ಬಿದ್ದಿದ್ದಾಳೆ. ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಮುಂಡಗೋಡ ತಾಲೂಕಿನ ಇಂದೂರು ಬಳಿಯ ಷರೀಫ ದೇವಸ್ಥಾನದ ಬಳಿ ಅಪಘಾತವಾಗಿದೆ. ಟ್ರಾಕ್ಟರ್ ಹಾಗೂ ಬೈಕ್‌ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ದಂಪತಿಗೆ ಗಾಯವಾಗಿದೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾದ ಆಕಾಶ್ ವಾಸಪ್ಪ ಲಮಾಣಿ (22) ಸಂಗೀತಾ ಆಕಾಶ್ ಲಮಾಣಿ (20) ಗಾಯಗೊಂಡವರಾಗಿದ್ದಾರೆ. ಇಂದೂರು ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಮುಂಡಗೋಡ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ನಡುವೆ ಡಿಕ್ಕಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ನಂದೀಪುರ ಬಳಿ ಭೀಕರ ಅಪಘಾತವಾಗಿದೆ. ರಾಂಗ್ ಸೈಡ್ ಬಂದ ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಯೂ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಕಾರು, ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಹಾವೇರಿ ಮೂಲದ ಓರ್ವ ಮಹಿಳೆ ಹಾಗೂ ಪುರುಷನಿಗೆ ಗಂಭೀರ ಗಾಯವಾಗಿದೆ. ಹಾಗೆಯೇ ಮತ್ತೊಂದು ಬೈಕಿನಲ್ಲಿದ್ದ ವ್ಯಕ್ತಿಗೂ ಗಾಯವಾಗಿದೆ. ಎಣ್ಣೆ ಏಟಲ್ಲಿ..?...

Post
ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಇಂದಿರಾನಗರದ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಓರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡಿನಿಂದ ಕಲಘಟಗಿ ಕಡೆಗೆ ಹೋಗುತ್ತಿರುವಾಗ, ಇಂದಿರಾ ನಗರ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬೈಕ್ ನಲ್ಲಿದ್ದ ಕುಂದಗೋಳ ತಾಲೂಕಿ‌ನ ಸುರೇಶ ಶಿವಪ್ಪ ಗುಡಿಯಾಳ್(33) ಎಂಬುವವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಮತ್ತೊರ್ವನಿಗೆ ಯಾವುದೇ ಗಾಯವಾಗದೆ ಸುರಕ್ಷಿತವಾಗಿದ್ದಾನೆ. ಇನ್ನು ಅಪಘಾತ ನಡೆದ ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ...

Post
ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!

ಬೈಕ್ ಅಪಘಾತ ಕರ್ತವ್ಯದಲ್ಲಿದ್ದ ಶಿಗ್ಗಾವಿಯ ಪೊಲೀಸ್ ಪೇದೆ ದಾರುಣ ಸಾವು..!

ಶಿಗ್ಗಾವಿ: ಬೈಕ್ ಅಪಘಾತದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯೋರ್ವರು ದಾರುಣ ಸಾವು ಕಂಡ ಘಟನೆ ಶಿಗ್ಗಾವಿ ನಡೆದಿದೆ‌. ಶಿಗ್ಗಾವಿಯಲ್ಲಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಚನ್ನಪ್ಪ ದೊಡ್ಡಪ್ಪ ಸಂಶಿ(54) ಎಂಬುವವರೇ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಪೇದೆಯಾಗಿದ್ದಾರೆ. ಇಂದು ಮದ್ಯಾಹ್ನ ಶಿಗ್ಗಾವಿ ತಾಲೂಕಿನ ಹನುಮರಳ್ಳಿ ಗ್ರಾಮದ ಬಳಿ ಬೈಕ್ ಅಪಘಾತವಾಗಿದೆ. ಸಮನ್ಸ್ ಜಾರಿ ಕುರಿತು ಕರ್ತವ್ಯ ನಿಮಿತ್ತ ಹೊರಟಾಗ ಶಿಗ್ಗಾವಿ ತಾಲ್ಲೂಕಿನ ಹನಮರಹಳ್ಳಿ ಗ್ರಾಮದ ಹತ್ತಿರ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾರೆ. ಮೂಲತಃ ಶಿಗ್ಗಾವಿ ತಾಲೂಕಿನ...

Post
ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!

ಹುಬ್ಬಳ್ಳಿಯ ವರೂರು ಬಳಿ ಭೀಕರ ಕಾರು ಅಪಘಾತ ಮೂವರು ಸಾವು, ಓರ್ವ ಗಂಭೀರ..!

ಹುಬ್ಬಳ್ಳಿ: ವರೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ‌. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಗಣೇಶ ಹೋಟೆಲ್ ಬಳಿ ಘಟನೆ ನಡೆದಿದೆ. ವೇಗವಾಗಿ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಾರು ಪಲ್ಟಿಯಾದ ಪರಿಣಾಮ ಚಾಲಕ, ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ದಾರೆ. ದಾವಣಗೆರೆ ಮೂಲದ ಚಾಲಕ ಶಾರೂಖ್ (27), ಸೊಹೇಲ್ (26), ಚಿಕ್ಕಮಗಳೂರು ಜಿಲ್ಲೆ ಆಲದೂರಿನ ಎಚ್.ಕೆ. ಸುಶೀಲಾ (35) ಮೃತಪಟ್ಟವರು. ಘಟನೆಯಲ್ಲಿ...

error: Content is protected !!