ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮದಲ್ಲಿ ಶನಿವಾರ (ಮೇ 11) ಸಿಡಿಲು ಬಡಿದು ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ. ಜಮೀನಿನಲ್ಲಿ ಮೇವು ತೆಗೆದುಕೊಂಡು ವಾಪಸ್ ಬರುವಾಗ ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಗಂಗವ್ವ ಜೀರಗಿವಾಡ ಮತ್ತು ಕಲಾವತಿ ಜೀರಗಿವಾಡ ಎಂದು ಗುರುತಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Top Stories
ಕಾರವಾರದಲ್ಲಿ ವೈಮಾನಿಕ ದಾಳಿ, ಸಾವಿರಾರು ಮಂದಿಯ ರಕ್ಷಣೆ..! ಬಾಂಬ್ ದಾಳಿ, 37 ಜನ ಬಚಾವ್..!!
ತೀವ್ರ ಅಪೌಷ್ಠಿಕತೆಯಿಂದ ಕೂಡಿದ ಮಕ್ಕಳನ್ನು ಸೂಕ್ತ ಚಿಕಿತ್ಸೆಗೆ ಒಳಪಡಿಸಿ : ಜಿಲ್ಲಾಧಿಕಾರಿ
ಪ್ರಸಕ್ತ ವರ್ಷದ “ಮಾನ್ಸೂನ್” ನಿಗದಿತ ಸಮಯಕ್ಕಿಂತಲೂ ಮುಂಚೇಯೇ ಆಗಮನ ಸಾಧ್ಯತೆ..!
ಕರ್ನಾಟಕದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂದಿನಿಂದ ಗುಡುಗು ಸಹಿತ ಗಾಳಿ ಮಳೆ ; ಮುನ್ಸೂಚನೆ
ಕಾಮೆಡಿ ಕಿಲಾಡಿಯ ಹಾಸ್ಯ ಕಲಾವಿದ, ರಾಕೇಶ್ ಪೂಜಾರಿ ಇನ್ನಿಲ್ಲ..!
ಸಿಡಿಲು ಬಡಿದು ಇಬ್ಬರು ರೈತ ಮಹಿಳೆಯರು ದಾರುಣ ಸಾವು..!
ಪಾಕಿಸ್ತಾನದ 700 ಡ್ರೋನ್, ಕೆಲವು ಜೆಟ್ ಗಳು ಧ್ವಂಸ ; ಭಾರತದ ಎಲ್ಲ ಪೈಲಟ್ ಗಳು ಸುರಕ್ಷಿತ : ಡಿಜಿಎಂಒ
ಈ ಬಾರಿ “ಹಾವಿನ ತಲೆಗಳನ್ನು ಕೊಲ್ಲಲು ನಿರ್ಧರಿಸಿದೆ, ಕಾಲುಗಳನ್ನಲ್ಲ” ಭಾರತದ ಸ್ಪಷ್ಟ ಮಾತು..!
ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ
ಪಾಪಿಗಳ ರಕ್ತ ಹರಿಸದೇ ಕದನವಿರಾಮ ಆಗಿದ್ದನ್ನು ನಾವು ಒಪ್ಪುವುದಿಲ್ಲ: ಪ್ರಮೋದ್ ಮುತಾಲಿಕ್..!
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮಳೆಗಾಲದಲ್ಲಿ ಅವಘಡಗಳಾಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ಖಡಕ್ ಸೂಚನೆ..!
ಸಿಂಗನಳ್ಳಿಯಲ್ಲಿ ಅಡಿಕೆ ತೋಟ ನಾಶ ಪಡಿಸಿದ ದುರುಳರು, 240 ಅಡಿಕೆ ಗಿಡಗಳನ್ನು ಕಡಿದು ಹಾಕಿದ ದುಷ್ಟರು..!
ಯುದ್ಧದ ಸಂದರ್ಭದಲ್ಲಿ ನಾಗರೀಕರ ರಕ್ಷಣೆಗೆ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಜಿ ಆಹ್ವಾನ..!
ಸಿಎಂ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಆರೋಪ, ಸಿಪಿಐ ಅಲ್ತಾಪ್ ಹುಸೇನ್ ಮುಲ್ಲಾ ಅಮಾನತ್ತು..!
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
“ಅಪರೇಶನ್ ಸಿಂಧೂರ” ಕಾರ್ಯಾಚರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ..!
ಉತ್ತರ ಕನ್ನಡದಲ್ಲಿ “ಅಭ್ಯಾಸ್” ಮಾಕ್ ಡ್ರಿಲ್ ಸ್ಥಳ ಪರಿಶೀಲನೆ ನಡೆಸಿದ ಎಸ್ಪಿ..!
Category: ಅಪಘಾತ
ಮುಂಡಗೋಡ ಬಳಿ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಬೈಕ್ ಗೆ ಗುದ್ದಿದ ಅಪರಿಚಿತ ಟಾಟಾ ಎಸ್, ಬೈಕ್ ಸವಾರ ಗಂಭೀರ..!
ಮುಂಡಗೋಡ ಹೊರ ವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಅಪಘಾತವಾಗಿದೆ. ಟಾಟಾ ಎಸ್ ವಾಹನ ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆದ್ರೆ, ಗಾಯಗೊಂಡ ಬೈಕ್ ಸವಾರ ಯಾರು, ಎಲ್ಲಿಯವನು ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈಗಷ್ಟೇ ಕೆಲವೇ ನಿಮಿಷಗಳ ಹಿಂದೆ ನಡೆದಿರೋ ಘಟನೆ ಇದಾಗಿದ್ದು, ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಬಿದ್ದು ಹೊರಳಾಡುತ್ತಿದ್ದರೂ, ಅಪಘಾತ ಪಡಿಸಿದ ಟಾಟಾ ಎಸ್ ವಾಹನದ ಚಾಲಕ, ಪರಾರಿಯಾಗಿದ್ದಾನೆ. ದಾರಿಹೋಕರು, ಗಾಯಗೊಂಡ...
ಬೈಕ್, ಕ್ಯಾಂಟರ್ ನಡುವೆ ಭೀಕರ ಅಪಘಾತ: ಮೂರು ಬಾಲಕರ ದುರ್ಮರಣ..!
ಬಾಗಲಕೋಟೆ:ಬೈಕ್ ನಡುವೆ ಕ್ಯಾಂಟರ್ ಭೀಕರ ಅಪಘಾತವಾಗಿ ಬೈಕ್‌ನಲ್ಲಿದ್ದ ಮೂವರು ಬಾಲಕರು ಸ್ಥಳದಲ್ಲೇ ದುರ್ಮರಣವಾದ ಘಟನೆ ಬಾಗಲಕೋಟೆ ತಾಲ್ಲೂಕಿನ ಸೀಮಿಕೇರಿ ಬೈಪಾಸ್ ನಲ್ಲಿ ನಡೆದಿದೆ. ಗದ್ದನಕೇರಿ ಕ್ರಾಸ್ ನಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಟಿದ್ದ ಬೈಕ್ ಇದಾಗಿತ್ತು. ಸ್ಥಳಕ್ಕೆ ಕಲಾದಗಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೃತರು ಬಾಗಲಕೋಟೆ ತಾಲ್ಲೂಕಿನ ಮುರನಾಳ ಗ್ರಾಮದವ್ರು. ಸಿದ್ದು ರಾಜು ಗಣಿ (16), ಸಂತೋಷ ಕೂಡಗಿ (16), ಕಾಮಣ್ಣ ಕುಪಲಿ (16) ಮೃತರು ಎಂದು ಗುರುತಿಸಲಾಗಿದೆ. ಹನುಮ ಜಯಂತಿ ಹಿನ್ನಲೆ ಗ್ರಾಮದಲ್ಲಿ ಡಿಜೆ...
ಹಾವೇರಿ ಮೊಟೇಬೆನ್ನೂರು ಬಳಿ ಭೀಕರ ಅಪಘಾತ, ಸ್ಥಳದಲ್ಲೇ 6 ಜನರ ಸಾವು, ಓರ್ವ ಗಂಭೀರ..!
ಹಾವೇರಿ: ಬ್ಯಾಡಗಿ ತಾಲೂಕಿನ ಮೊಟೆಬೆನ್ನೂರು ಬಳಿ ಭೀಕರ ರಸ್ತೆ ಅಪಘಾತವಾಗಿದೆ. ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ನೊಟೆಬೆನ್ನೂರು ಬಳಿಯ ರಾ.ಹೆದ್ದಾರಿ 48 ರಲ್ಲಿ ಘಟನೆ ನಡೆದಿದ್ದು, ಹರಿಯಾಣ ಮೂಲದ ಆಡಿ A-6 ಕಾರು ಅಪಘಾತವಾಗಿದೆ. ಬ್ಯಾಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಾಳು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕಾರ್ ಹಾಗೂ ಲಾರಿ ನಡುವೆ ಮುಖಾಮುಕಿ ಡಿಕ್ಕಿ, ಕಾರಲ್ಲಿದ್ದ ,ಐವರು ಸ್ಥಳದಲ್ಲೇ ಸಾವು..!
ಬೆಳ್ಳಂ ಬೆಳ್ಳಿಗ್ಗೆ ಹುಬ್ಬಳ್ಳಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ, ಕಾರು-ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ 5 ಜನ ಸ್ಥಳದಲ್ಲೇ ಕಂಡಿದ್ದಾರೆ. ಮೃತರೆಲ್ಲರೂ ಶಿವಮೊಗ್ಗ ಜಿಲ್ಲೆಯ ಸಾಗರದವರು ಎನ್ನಲಾಗಿದೆ. ಶ್ವೇತ (29), ಅಂಜಲಿ(26), ಸಂದೀಪ್ (26) ವಿಠಲ್ (55) ಶಶಿಕಲಾ (40) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇವ್ರು, ಹೋಟೆಲ್ ವ್ಯಾಪಾರಕ್ಕೆಂದು ಬಾಗಲಕೋಟೆಗೆ ಹೋಗಿದ್ದರು ಎನ್ನಲಾಗಿದೆ. ವಿಜಯಪುರ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದಾಗ, ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ....
ಅತ್ತಿವೇರಿ ಡ್ಯಾಂ ನಲ್ಲಿ ಆಕಸ್ಮಿಕವಾಗಿ ಬಿದ್ದು ಸಾವು ಕಂಡ ಹುನಗುಂದದ ಮಾನಸಿಕ ಅಸ್ವಸ್ಥ..!
ಮುಂಡಗೋಡ ತಾಲೂಕಿನ ಅತ್ತಿವೇರಿ ಜಲಾಶಯದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಆಕಸ್ಮಿಕವಾಗಿ ಬಿದ್ದು ಸಾವು ಕಂಡಿರೋ ಘಟನೆ ನಡೆದಿದೆ. ಹುನಗುಂದ ಗ್ರಾಮದ ಅಂದಾನಯ್ಯ ಗದಗಯ್ಯ ಚಿಕ್ಕಮಠ(45) ಎಂಬುವವನೇ ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿರೋ ವ್ಯಕ್ತಿಯಾಗಿದ್ದಾನೆ. ಶನಿವಾರ ಬೆಳಿಗ್ಗೆ ಮನೆಯಿಂದ ಹೋಗಿದ್ದ ಮೃತ ವ್ಯಕ್ತಿ, ಸಂಜೆಯಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಹುಡುಕಾಡಿದ್ದರು. ಆದ್ರೆ, ರವಿವಾರ ಸಂಜೆ ವೇಳೆಗೆ ಅತ್ತಿವೇರಿ ಡ್ಯಾಂ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈತ ನೀರು ಕುಡಿಯಲು ಹೋಗಿ ಜಲಾಶಯದಲ್ಲಿ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರಬಹುದು ಅಂತಾ ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು...
ಕೃಷಿ ಹೊಂಡಕ್ಕೆ ಬಿದ್ದು ಮೂವರು ಮಕ್ಕಳ ದಾರುಣ ಸಾವು..!
ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಬಿದ್ದು ಮೂವರು ಬಾಲಕರು ಸಾವನ್ನಪ್ಪಿದ ದಾರುಣ ಘಟನೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಸ್ನೇಹಿತರು ಸೇರಿಕೊಂಡು ಸುತ್ತಾಡಲು ಹೋದಾಗ ಕೃಷಿ ಹೊಂಡದಲ್ಲಿ ಮೂವರು ಬಾಲಕರು ಬಿದ್ದಿದ್ದಾರೆ. ಇಂಗಳಿ ಗ್ರಾಮದ ಪ್ರಥಮೇಶ ಕೆರಬಾ(13), ಅಥರ್ವ ಸೌಂದಲಗೆ (15), ಸಮರ್ಥ ಚೌಗಲೆ (13)ಮೃತಪಟ್ಟ ಬಾಲಕರಾಗಿದ್ದಾರೆ. ಇನ್ನು ತಿರುಗಾಡಲು ಹೊರಗೆ ಹೋದ ಬಾಲಕರು ಮನೆಗೆ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಆ ವೇಳೆ, ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿರೋ...
ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನಲ್ಲಿ ಕೆಲಸದ ಸಮಯದಲ್ಲಿ ಬೃಹತ್ ಗಾತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸಾವು
ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಪೇಪರ ಮಿಲ್ ನ ಬೃಹತ್ ಗಾತ್ರದ ಯಂತ್ರದ ಪ್ಯಾನಲ್ ಬಿದ್ದು ಗುತ್ತಿಗೆ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಹಳೇ ದಾಂಡೇಲಿ ನಿವಾಸಿ ಅಬ್ದುಲ್ ಸಲೀಂ ಖಲಾಸಿ (55) ಸಾವನ್ನಪಿದ್ದ ವ್ಯಕ್ತಿ. ಮೃತ ವ್ಯಕ್ತಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು ನಗರದ ಪೊಲೀಸ ಠಾಣೆಯ ಪಿಎಸ್‌ಐ ಅಮೀನಸಾಬ ಅತ್ತಾರ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗುತ್ತಿಗೆದಾರ ಸಾಜಿದ್ ಪಠಾಣ್ ಹಾಗೂ ಮೇಲ್ವಿಚಾರಕ ಅಬ್ದುಲ್ ಖಾದರ ಪಠಾಣ ಇವರ...
ಮೈನಳ್ಳಿಯಲ್ಲಿ ಸಿಡಿಲಾಘಾತ, ಐವರಿಗೆ ಸಿಡಿಲು ಬಡಿದು ಗಾಯ, ಆಸ್ಪತ್ರೆಗೆ ದಾಖಲು..!
ಮುಂಡಗೋಡ: ತಾಲೂಕಿನ ಮೈನಳ್ಳಿಯ ಗ್ರಾಮ ದೇವಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಬಂದಿದ್ದ ಐವರಿಗೆ ಸಿಡಿಲು ಬಡಿದು ಗಾಯಗೊಂಡ ಘಟನೆ ನಡೆದಿದೆ. ನಾಗರತ್ನ ಜೋಲೆ, ಲಕ್ಷ್ಮೀ ಕೊಕರೆ, ಗಂಗಾರಾಮ ಮುಕ್ಕೊ ಕೊಕರೆ, ಶಾಂತಾಬಾಯಿ ಸಳಕೆ ಹಾಗೂ ಭರತ್ ಸಳಕೆ ಎಂಬಾತರೇ ಸಿಡಿಲಿನ ಶಾಖದಿಂದ ಗಾಯಗೊಂಡಿದ್ದಾರೆ. ತಾಲೂಕಿನಾದ್ಯಂತ ಶನಿವಾರ ಮತ್ತು ರವಿವಾರ ರಾತ್ರಿ ಸಿಡಿಲು ಸಹಿತ ರಭಸದ ಗಾಳಿ ಮಳೆ ಸುರಿದಿತ್ತು. ಬಾಳೆಹಳ್ಳಿ ಹಾಗೂ ಕಳಕೀಕೆರಿ ಗ್ರಾಮದವರು ಮೈನಳ್ಳಿ ಗ್ರಾಮದೇವಿ ಜಾತ್ರೆಗೆ ಬಂದು ದೇವಿ ದರ್ಶನ ಪಡೆದು ನಂತರ ಸಿಡಿಲು...
ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರು ಸಮುದ್ರ ಪಾಲು, ಮತ್ತಿಬ್ಬರು ಬಚಾವ್..!
ಗೋಕರ್ಣ: ಪ್ರವಾಸಕ್ಕೆಂದು ಬಂದಿದ್ದ ಇಬ್ಬರು ಯುವತಿಯರು ಜಟಾಯು ತೀರ್ಥದ ಹತ್ತಿರ ಕಾಲು ಜಾರಿ ಸಮುದ್ರಕ್ಕೆ ಬಿದ್ದು ದಾರುಣ ಸಾವು ಕಂಡಿದ್ದಾರೆ. ತಮಿಳನಾಡು ತಿರುಚಿಯ ವೈದ್ಯಕೀಯ ಮಹಾವಿದ್ಯಾಲಯದ ಕೊನೆಯ ವರ್ಷದ ಪರೀಕ್ಷೆ ಮುಗಿಸಿ, ಚಾರಣಕ್ಕೆ ಬಂದಿದ್ದ ಒಟ್ಟು 23ಜನರ ತಂಡದಲ್ಲಿದ್ದ, ಸಿಂದುಜಾ ಮತ್ತು ಕನ್ನಿಮೊಳಿ ಎಂಬ ಹೆಸರಿನ ಇಬ್ಬರು ಯುವತಿಯರು ಸಮುದ್ರದ ಪಾಲಾಗಿದ್ದಾರೆ. ನಾಲ್ವರು ಯುವತಿಯರು ಸಮುದ್ರ ಅಂಚಿನ ಬಂಡೆ ಮೇಲೆ ಕುಳಿತಿ ಸಮುದ್ರದ ಸುಂದರತೆಯನ್ನು ಕಣ್ತುಂಬಿಕೊಳ್ತಿದ್ದರು. ಇದೇ ವೇಳೆ ರಭಸದ ಅಲೆ ಬಡಿದು ಇಬ್ಬರು ಸಮುದ್ರಕ್ಕೆ ಬಿದ್ದಿದ್ದಾರಡ....