ಮುಂಡಗೋಡ: ತಾಲೂಕಿನ ಹುನಗುಂದದಲ್ಲಿ ಮತ್ತೆ ಕೊರೊನಾ ಎಂಟ್ರಿ ಕೊಟ್ಟಿದೆ. ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಹೋಗುತ್ತಿದ್ದ ಹುನಗುಂದದ ಮಹಿಳೆಯೊಬ್ಬಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಅಂತಾ ಗ್ರಾಮ ಪಂಚಾಯತಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಮಹಿಳೆ ಪ್ರತಿನಿತ್ಯ ಟಿಬೇಟಿಯನ್ ಕಾಲೋನಿಗೆ ಮನೆಕೆಲಸಕ್ಕೆ ಅಂತಾ ಅಡುಗೆ ಮಾಡಲು ಹೋಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ, ಟಿಬೇಟಿಯನ್ ಕಾಲೋನಿಯಲ್ಲಿ ಕೋವಿಡ್ ಟೆಸ್ಟ್ ಮಾಡಿದ್ದರು. ನಂತರ ಆ ವರದಿಯಲ್ಲಿ ಮಹಿಳೆಗೆ ಕೊರೋನಾ ದೃಢ ಪಟ್ಟಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯರುಗಳು, ಸಿಬ್ಬಂದಿಗಳು ಸೋಂಕಿತೆಯ ಮನೆಗೆ ಭೇಟಿ ನೀಡಿ...
Top Stories
ಮುಂಡಗೋಡಲ್ಲಿ ಶಿರಸಿ DySp ನೇತೃತ್ವದಲ್ಲಿ ಕಾರ್ಯಾಚರಣೆ| ಮೀಟರ್ ಬಡ್ಡಿ ಕುಳಗಳು, ರೌಡಿ ಶೀಟರಗಳ ಮನೆ ಸರ್ಚಿಂಗ್..! ಅಸಲು ಏನಾಗಿದೆ ಮುಂಡಗೋಡಿಗೆ..?
ಮಳಗಿ ಹೊಸ ಬಸ್ ನಿಲ್ದಾಣದ ಬಳಿ, KSRTC ಬಸ್ ನಿಂದ ಬಿದ್ದು ವಿದ್ಯಾರ್ಥಿನಿಯ ಕೈಗೆ ಗಂಭೀರ ಗಾಯ..!
ಮುಂಡಗೋಡಿನಲ್ಲಿ ಮತ್ತೊಂದು ಲೋಕಾ ದಾಳಿ, ಲಂಚ ಪಡೆಯುತ್ತಿದ್ದ ಕಂದಾಯ ನಿರೀಕ್ಷಕ (RI)ಲೋಕಾ ಬಲೆಗೆ..!
ಮುಂಡಗೋಡ ಹೆಸ್ಕಾಂ AEE ಧರ್ಮರಾಜ್ ಬೆಡಸಗಾಂವ್ ಲೋಕಾಯುಕ್ತ ಬಲೆಗೆ..! 65 ಸಾವಿರ ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕ ಅಧಿಕಾರಿ..!!
ವಿದ್ಯಾರ್ಥಿಗಳಿಗೆ ಭಾರೀ ಶುಭಸುದ್ದಿ ನೀಡಿದ ನೂತನ ಸಿಎಂ ಡಿಕೆಶಿ..! ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪ್ರೀ..!
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!
ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್
ಪಿಐ ರಂಗನಾಥ್ ನೀಲಮ್ಮನವರ್ ಟ್ರಾನ್ಸಫರ್, ರಮೇಶ್ ಹನಾಪುರ ಮುಂಡಗೋಡಿನ ನೂತನ ಪಿಐ..!
ಹುನಗುಂದದಲ್ಲಿ ಮಳೆಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿಗಳು..! ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು..!
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!
NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ ಸಂಖ್ಯೆ..!
ಮುಂಡಗೋಡಿನ ಯರೈಬೈಲ್ DyRFO, ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್, FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?
ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?
ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!
ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!
ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!
Category: ಕೋವಿಡ್ ಅಪಡೇಟ್ಸ್
ಉತ್ತರ ಕನ್ನಡ ಜಿಲ್ಲೆಗೆ ಮತ್ತೆ ಕೊರೋನಾ ಕಂಟಕ; ಹೊಸ ಮಾರ್ಗಸೂಚಿ ಹೊರಡಿಸಿದ ಡಿಸಿ..!
ಕಾರವಾರ; ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆತಂಕ ಶುರುವಾಗಿದೆ. ಹೀಗಾಗಿ, ಜಿಲ್ಲಾಡಳಿತದಿಂದ ನೂತನ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಜಿಲ್ಲಾಧ್ಯಂತ ಕಟ್ಟು ನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಏನದು ಮಾರ್ಗಸೂಚಿ..? ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಳವಾಗುತ್ತಿರೋ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಇನ್ನು ಮುಂದೆ ದೇವಾಲಯಗಳಲ್ಲಿ ಸೇವೆಗೆ ಅವಕಾಶವಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಮದುವೆಗೆ 50 ಜನರಷ್ಟೇ..! ಇನ್ನು, ಮದುವೆಗಳಿಗೆ ಕೇವಲ 50 ಜನರಿಗೆ...
ಇದು ಮುಂಡಗೋಡ ತಾಲೂಕಿನ ಇಂದಿನ ಕೊರೋನಾ ರಿಪೋರ್ಟ್..!
ಮುಂಡಗೋಡ: ತಾಲೂಕಿನಲ್ಲಿ ಇಂದು 1 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ತಾಲೂಕಿನಲ್ಲಿ ಒಟ್ಟೂ 23 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಗುಣಮುಖರಾಗಿಲ್ಲ . ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲೂ ಯಾವುದೇ ಸೋಂಕಿತರು ದಾಖಲಾಗಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.
ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!
ಮುಂಡಗೋಡ: ತಾಲೂಕಿನಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸದ್ಯ ತಾಲೂಕಿನಲ್ಲಿ ಒಟ್ಟೂ 88 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಯಾವುದೇ ಸೋಂಕಿತರು ಇಂದು ಗುಣಮುಖರಾಗಿಲ್ಲ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ
ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!
ಮುಂಡಗೋಡ: ತಾಲೂಕಿನಲ್ಲಿ ಇಂದು 5 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 19 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ ಒಟ್ಟೂ 84 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 43 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 13 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ಇಂದು ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ತಾಲೂಕಿನ ತಟ್ಟಿಹಳ್ಳಿಯ 65 ವರ್ಷದ ಓರ್ವ ಪುರುಷ ವ್ಯಕ್ತಿ, ಹಾಗೂ...
ತಾಲೂಕಿನಲ್ಲಿಂದು ಕೊರೋನಾ ಖೇಲ್ ಖತಂ..! ಶೂನ್ಯವಾಯ್ತು ಸೋಂಕಿತರ ಸಂಖ್ಯೆ..!
ಮುಂಡಗೋಡ:ತಾಲೂಕಿನ ಮಟ್ಟಿಗೆ ಇದು ಸಂತಸದ ಸುದ್ದಿ. ತಾಲೂಕಿನಲ್ಲಿ ಇಂದು ಹೊಸತಾಗಿ ಯಾವುದೇ ಕೊರೋನಾ ಪಾಸಿಟಿವ್ ಸೋಂಕಿತರು ಪತ್ತೆಯಾಗಿಲ್ಲ. ಸದ್ಯ ತಾಲೂಕಿನಲ್ಲಿ ಒಟ್ಟೂ 105 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 41 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 64 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 21 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ದುರಂತದ ಸಂಗತಿಯೆಂದ್ರೆ, ಇಂದು ತಾಲೂಕಿನಲ್ಲಿ ಒಟ್ಟು 2 ಜನ ಸೋಂಕಿತರು ಮೃತ ಪಟ್ಟಿದ್ದಾರೆ. ಟಿಬೇಟಿಯನ್...
ಅಬ್ಬಾ..! ತಾಲೂಕಿನಲ್ಲಿ ಇಂದು ಕೇವಲ 09 ಪಾಸಿಟಿವ್..! 26 ಸೋಂಕಿತರು ಗುಣಮುಖ, ಮಹಾಮಾರಿ ಇಳಿಮುಖ..!
ಮುಂಡಗೋಡ- ಸದ್ಯ ಮುಂಡಗೋಡಿಗರು ನಿಟ್ಟುಸಿರು ಬಿಡುವ ಸುದ್ದಿ ಹೊರಬಿದ್ದಿದೆ. ತಾಲೂಕಿನಲ್ಲಿ ಇಂದು ಕೇವಲ 9 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ಬಹುಬೇಗ ಕೊರೋನಾ ಮುಕ್ತ ತಾಲೂಕು ಅಂತಾ ಘೋಷಣೆಯಾಗೊ ದಿನ ದೂರವಿಲ್ಲವೆನೋ..! ಅಂದಹಾಗೆ, ಇಂದು ತಾಲೂಕಿನಲ್ಲಿ ಹೊಸತಾಗಿ ದೃಢ ಪಟ್ಟ 09 ಪಾಸಿಟಿವ್ ಪ್ರಕರಣಗಳು ಸೇರಿ, ತಾಲೂಕಿನಲ್ಲಿ ಒಟ್ಟೂ 116 ಸಕ್ರೀಯ ಪ್ರಕರಣಗಳು ಉಳಿದಂತಾಗಿದೆ. ಇನ್ನು ಇದ್ರಲ್ಲಿ 29 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 87 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಬಹುಮುಖ್ಯ ಅಂದ್ರೆ...
ಮುಂಡಗೋಡ ತಾಲೂಕಿನಲ್ಲಿ ಇಂದು 14 ಜನ್ರಿಗೆ ಕೊರೋನಾ ಸೋಂಕು ದೃಢ..!
ಮುಂಡಗೋಡ:ತಾಲೂಕಿನಲ್ಲಿ ಇಂದು 14 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ ಅಂತಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಮಾಹಿತಿ ನೀಡಿದ್ದಾರೆ. ಪಟ್ಟಣದ ಗಾಂಧಿನಗರ- 1, ಹೊಸ ಓಣಿ-1, ತಹಶೀಲ್ದಾರ್ ಕ್ವಾಟರ್ಸ್ ನಲ್ಲಿ -2, ನೆಹರು ನಗರ-1, ಇಂದೂರು-1, ಜನಗೇರಿ-1, ಕವಲಗಿ-1, ಕೊಳಗಿ- 3 ಹಾಗೂ ಚೌಡಳ್ಳಿ ಗ್ರಾಮದಲ್ಲಿ 4 ಪಾಸಿಟಿವ್ ಪ್ರಕರಣಗಳು ದೃಢ ಪಟ್ಟಿವೆ.
ಮುಂಡಗೋಡ: ತಾಲೂಕಿನಲ್ಲಿಂದು 21 ಪಾಸಿಟಿವ್ ದೃಢ, 206 ಸಕ್ರೀಯ ಕೇಸ್..!
ಮುಂಡಗೋಡ-ತಾಲೂಕಿನಲ್ಲಿ ಇಂದು 21 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು ತಾಲೂಕಿನಲ್ಲಿ ಒಟ್ಟೂ 206 ಸಕ್ರೀಯ ಪ್ರಕರಣಗಳಾಂದಂತಾಗಿದೆ. ಇನ್ನು 62 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 164 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇಂದು ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ********************** ಪಬ್ಲಿಕ್ ಫಸ್ಟ್ ನ್ಯೂಸ್ ಇಂದಿನ ಪ್ರಮುಖ ಸುದ್ದಿ ನೋಡಲು ಇಲ್ಲಿ ಕ್ಲಿಕ್ ಮಾಡಿ..
ಮುಂಡಗೋಡ: ತಾಲೂಕಿನಲ್ಲಿಂದು19 ಪಾಸಿಟಿವ್ ದೃಢ, 57 ಗುಣಮುಖ, ಒಂದು ಸಾವು..!
ಮುಂಡಗೋಡ-ತಾಲೂಕಿನಲ್ಲಿ ಇಂದು 19 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಸಾವನ್ನಿಪ್ಪಿದ್ದಾನೆ. ಇನ್ನು 57 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ತಾಲೂಕಿನಲ್ಲಿ ಒಟ್ಟೂ 291 ಸಕ್ರೀಯ ಪ್ರಕರಣಗಳಿದ್ದು, 62 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 204 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 25 ಜನ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ. ಇನ್ನು ಪಟ್ಟಣದ ಗಾಂಧಿನಗರದ 76 ವರ್ಷದ ವೃದ್ದ ಕೊರೋನಾಗೆ ಇಂದು ಬಲಿಯಾಗಿದ್ದು, ಇದುವರೆಗೂ ತಾಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 65 ಕ್ಕೆ...




