Home Rain news

Tag: Rain news

Post
ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯ ಮುನ್ಸೂಚನೆ..!

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಕರಾವಳಿ (Coastal Karnataka) ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 16ರವರೆಗೂ ಭಾರಿ ಮಳೆಯಾಗುವ (Heay Rain) ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್‌ ಜಾರಿ ಮಾಡಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ....

Post
ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ‌ ಮಿಸ್ಟರ್ ಚೀಫ್ ಆಫೀಸರ್ರೇ.!

ಮುಂಡಗೋಡಿನಲ್ಲಿ ಮತ್ತೇ ಭಾರೀ ಮಳೆ, ಬಂಕಾಪುರ ರಸ್ತೆ ನಿವಾಸಿಗಳಿಗೆ ಮತ್ತದೇ ಗೋಳು, ಇನ್ನಾದ್ರೂ ಎಚ್ಚೆತ್ತುಕೊಳ್ಳಿ‌ ಮಿಸ್ಟರ್ ಚೀಫ್ ಆಫೀಸರ್ರೇ.!

 ಮುಂಡಗೋಡಿನಲ್ಲಿ ಮತ್ತೆ ಭಾರೀ ಮಳೆಯಾಗಿದೆ. ಬಂಕಾಪುರ ರಸ್ತೆಯಲ್ಲಿ ಮತ್ತದೇ ಗೋಳು ಎದುರಾಗಿದೆ. ಶನಿವಾರದಂತೆ ಇವತ್ತೂ ಕೂಡ ಇಲ್ಲಿ‌ನ ನಿವಾಸಿಗಳು “ಶಿವ”ರಾತ್ರಿ ಜಾಗರಣೆ ಮಾಡುವಂತಾಗಿದೆ. ಹೀಗೆ ಭಜನೆ‌ ಮಾಡಿದ ಮೇಲಾದ್ರೂ “ಜನಪ್ರತಿನಿಧಿ” ಸಾಹೇಬ್ರುಗಳು ಈ ನಿವಾಸಿಗಳ ಗೋಳು ಕೇಳ್ತಾರಾ ಅನ್ನೋದೊಂದೇ ಸದ್ಯದ ಪ್ರಶ್ನೆಯಾಗಿದೆ. ಶನಿವಾರದಂತೆ..! ಅಸಲು, ಶನಿವಾರ ಇಂತದ್ದೇ ಮಳೆ ಧುತ್ತನೇ ಸುರಿದು ಹೋದಾಗ, ಪಾಪ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರಾತ್ರೋ ರಾತ್ರಿ ಎದ್ನೊ ಬಿದ್ನೊ ಅಂತಾ ಬಂದಿದ್ರಂತೆ. ಪಾಪ ಅದೇಲ್ಲಿ ಬೆಚ್ಚಗೆ ಮಲಗಿದ್ರೋ ಏನೋ ಮಾದ್ಯಮಗಳು...

Post
ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಮುಂದುವರೆದ ಮಳೆಯ ಅರ್ಭಟ ಹಿನ್ನೆಲೆ, ನಾಳೆ ಬುಧವಾರವೂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಬುಧವಾರ ಹಾಗೂ ಗುರವಾರ ಭಾರೀ ಮಳೆಯ ಸೂಚನೆ‌ ನೀಡಲಾಗಿದೆ. ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ, ನಾಳೆ ಬುಧವಾರವೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಭಾರೀ‌ಮಳೆ ಸುರಿಯೋ ಮುನ್ಸೂಚನೆ ನೀಡಲಾಗಿದ್ದು, ಎಚ್ಚರಿಕೆ ವಹಿಸುವಂತೆ ತಾಲೂಕಾಡಳಿತಗಳಿಗೆ ಸಂದೇಶ ರವಾನಿಸಲಾಗಿದೆ.

Post
ನಾಳೆ, ನಾಡಿದ್ದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ..!

ನಾಳೆ, ನಾಡಿದ್ದು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ, ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ..!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ರವಿವಾರ ದಿನಾಂಕ 19ರ ಬೆಳಿಗ್ಗೆ, 8.30 ಗಂಟೆಯಿಂದ, ಜೂನ್ 20 ರ ಸೋಮವಾರ ಬೆಳಿಗ್ಗೆ 8.30 ಗಂಟೆಯವರೆಗೆ ಹವಾಮಾನ ಇಲಾಖೆ, ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಹೀಗಾಗಿ, ಜಿಲ್ಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಇನ್ನು ಮಳೆ ಗಾಳಿ ಬೀಸುವ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ವಿದ್ಯುತ್ ಕಂಬಗಳು, ಹಳೆಯ ಕಟ್ಟಡಗಳು, ಮರಗಳ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ...

Post
ಮುಂದಿನ 4 ದಿನಗಳ ಕಾಲ ಬಾರೀ ಮಳೆ‌ ಮುನ್ಸೂಚನೆ..!

ಮುಂದಿನ 4 ದಿನಗಳ ಕಾಲ ಬಾರೀ ಮಳೆ‌ ಮುನ್ಸೂಚನೆ..!

ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಹೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 7ರಿಂದ 9ರವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 9ರವವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಬೆಂಗಳೂರು, ರಾಮನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗದಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

Post
ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಇಂದು ಮತ್ತೆ ಭಾರೀ ಮಳೆಯಾಗುವ ಸಂಭವ, ಎಲ್ಲೇಲ್ಲಿ ಮಳೆಯಾಗತ್ತೆ ಗೊತ್ತಾ..?

ಬೆಂಗಳೂರು: ತಮಿಳುನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಇ‌‌ದು ರಾಜ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದ್ರಂತೆ ದಾವಣಗೇರೆಯಲ್ಲಿ ಹೆಚ್ಚು ಮಳೆ ಬೀಳುವ ಎಚ್ಚರಿಕೆ ನೀಡಲಾಗಿದೆ. ಕೊಡಗು,ಹಾಸನ, ಚಿಕ್ಕಮಗಳೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಅಂತಾ ಮುನ್ಸೂಚನೆ ನೀಡಲಾಗಿದೆ.

Post
ಮುಂಡಗೋಡ ತಾಲೂಕಿ‌ನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!

ಮುಂಡಗೋಡ ತಾಲೂಕಿ‌ನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!

ಮುಂಡಗೋಡ: ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಮಳೆಯ ದೃಷ್ಯ ಕ್ಯಾಮೆರಾ ಕಣ್ಣಲ್ಲಿ.. ಅಲಿಕಲ್ಲು ಮಳೆ..! ಅಂದಹಾಗೆ, ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ನಂತರ ಧಾರಾಕಾರ ಆಲಿಕಲ್ಲು ಬಿದ್ದಿವೆ. ಪರಿಣಾಮ ತಾಲೂಕಿನ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾದಂತೆ...

error: Content is protected !!