ಅತ್ತ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದ್ದಂತೆ ಮಂಗಳೂರಿನ ವಿಶ್ವ ಹಿಂದು ಪರಿಷತ್ ಕಚೇರಿಯಲ್ಲಿ ಸಂಭ್ರಮದ ಕಳೆ ಎದ್ದಿದೆ. ಕಳೆದ ಅನೇಕ ವರ್ಷಗಳಿಂದ ಎದುರುನೋಡುತ್ತಿದ್ದ ಸಂಭ್ರಮದ ಕ್ಷಣ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು. 1992ರ ಅಯೋಧ್ಯೆ ಕರಸೇವೆಯಲ್ಲಿ ಕರಾವಳಿಯ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಪೈಕಿ ಅನೇಕ ಮಂದಿ ಇಂದು ಸಂಭ್ರಮ ಪಟ್ಟಿದ್ದಾರೆ. ಮಂಗಳೂರಿನ ವಿಹಿಂಪ ಕಚೇರಿಯಲ್ಲಿ ರಾಮಚಂದ್ರನಿಗೆ ಪೂಜೆ ಅರ್ಪಿಸಿ ನಮಿಸಿದ ಕಾರ್ಯಕರ್ತರು, ಅಯೋಧ್ಯೆಯಿಂದ ಶಿಲಾನ್ಯಾಸ ಕಾರ್ಯಕ್ರಮವನ್ನು ನೇರ ಪ್ರಸಾರ ವ್ಯವಸ್ಥೆಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಬಳಿಕ ಹೊರಭಾಗದಲ್ಲಿ ಚೆಂಡೆ, ತಮಟೆ ಬಾರಿಸುವ ಮೂಲಕ ಕುಣಿದಾಡಿದರು. ಸೆಕ್ಷನ್ 144 ಜಾರಿಯಲ್ಲಿದ್ದ ಕಾರಣ ಸಂಭ್ರಮಾಚರಣೆಯನ್ನು ಕಚೇರಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು.
Top Stories
Police News:ರಾಜ್ಯದ ಪ್ರಭಾರ ಡಿಜಿ-ಐಜಿಪಿಯಾಗಿ ಡಾ.ಎಂ.ಎ. ಸಲೀಂ ನೇಮಕ..!
Naxalar Encounter News:ನಕ್ಸಲ್ ಕಮಾಂಡರ್ ಸೇರಿದಂತೆ 26 ಮಂದಿ ನಕ್ಸಲರನ್ನು ಎನ್ಕೌಂಟರಿನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು..!
ED Raid News:ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ‘ಸಿದ್ದಾರ್ಥ ಶಿಕ್ಷಣ ಸಂಸ್ಥೆ’ ಮೇಲೆ ಇಡಿ ದಾಳಿ..!
Business News :2024ರಲ್ಲಿ ಸತ್ಯ ನಾಡೆಲ್ಲಾ, ಪಿಚೈ ಹಿಂದಿಕ್ಕಿ ದಾಖಲೆಯ 1,157 ಕೋಟಿ ರೂ. ಪಡೆದ ಭಾರತೀಯ ಮೂಲದ ಟೆಸ್ಲಾ ಕಾರ್ಯನಿರ್ವಾಹಕ ಅಧಿಕಾರಿ..!
Achievement News: ಕನ್ನಡದ ಲೇಖಕಿ ಬಾನು ಮುಷ್ತಾಕ್ಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಘೋಷಣೆ..!
Police Death News:ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್ ; ಪೊಲೀಸ್ ಅಧಿಕಾರಿ ಸಾವು..!
ಛತ್ರಿ ಹಿಡಿದು ಸ್ಕೂಟಿ ಚಲಾಯಿಸುತ್ತಿದ್ದ ವಿದ್ಯಾರ್ಥಿ ಲಾರಿಗೆ ಡಿಕ್ಕಿ, ದುರ್ಮರಣ
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Achievement News:ಟೈಮ್ 100 ಲೋಕೋಪಕಾರಿ 2025 ಜಾಗತಿಕ ಪಟ್ಟಿ ; ಭಾರತದ ಅಂಬಾನಿ ದಂಪತಿ, ಅಜೀಂ ಪ್ರೇಮಜಿ, ನಿಖಿಲ್ ಕಾಮತಗೆ ಸ್ಥಾನ..!
Road Problem News:ಕಳಪೆ ರಸ್ತೆಗಳಿಂದ ‘ಯಾತನೆʼ ; ಬಿಬಿಎಂಪಿಗೆ ಬೆಂಗಳೂರು ವ್ಯಕ್ತಿಯಿಂದ ನೋಟಿಸ್ : 50 ಲಕ್ಷ ರೂ. ಪರಿಹಾರಕ್ಕೆ ಆಗ್ರಹ..!
ಜಿಲ್ಲೆಯಲ್ಲಿ ಕುಡಿಯುವ ನೀರು ಕಾಮಗಾರಿಗಳನ್ನು ಶೀಘ್ರ ಮುಕ್ತಾಯಗೊಳಿಸಿ : ZP Ceo ಈಶ್ವರ ಕಾಂದೂ
ವಿಕಸಿತ ಭಾರತದ ಮೂಲಕ ದೇಶದ ಅಭಿವೃದ್ದಿ: ಕಾರವಾರದಲ್ಲಿ ಕೇಂದ್ರ ಸಚಿವ ಶೇಖಾವತ್
ಚಿನ್ನದ ಬೆಲೆ ಒಂದೇ ದಿನ ₹2400 ಏರಿಕೆ, ಬೆಳ್ಳಿ ₹3000 ಜಿಗಿತ; ಆಭರಣ ಖರೀದಿದಾರರಿಗೆ ಬಿಗ್ ಶಾಕ್..!
ಮುಂಡಗೋಡ-ಶಿರಸಿ ರಸ್ತೆಯ ನಂದಿಪುರ ಬಳಿ, KSRTC ಬಸ್, ಖಾಸಗಿ ಬಸ್ ನಡುವೆ ಮುಖಾಮುಕಿ ಡಿಕ್ಕಿ, ಕೆಲವ್ರಿಗೆ ಗಾಯ..!
ಭಾರೀ ಮಳೆ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ, ರಸ್ತೆ ಮೇಲೆ ಬಿದ್ದ ಮಣ್ಣು, ಕಲ್ಲು: ಸಂಚಾರಕ್ಕೆ ಅಡಚಣೆ..!
ಉತ್ತರ ಕನ್ನಡ ಸೇರಿ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ, 4 ಜಿಲ್ಲೆಗಳಿಗೆ ರೆಡ್ ಅಲರ್ಟ್, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್..!
ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿಗಳಿಗೆ ರಜೆ ಘೋಷಣೆ..!
Car Fire News: ತಾರಿಹಾಳ ಟೋಲ್ ಬಳಿ ಧಗಧಗಿಸಿದ ಕಾರು; ಪ್ರಾಣಾಪಾಯದಿಂದ ಪಾರಾದ ಕುಟುಂಬ..!
ಮಳೆಗಾಲದ ವಿಪತ್ತು ಎದುರಿಸಲು ಸಜ್ಜುಗೊಂಡ ಹೆಸ್ಕಾಂ..!
ಅಯೋಧ್ಯೆಯಲ್ಲಿ ಇಙದು ಶಿಲಾನ್ಯಾಸ- ಹೆಬ್ಬಾರ್ ಸಂತಸ
ಅಯೋಧ್ಯೆಯಲ್ಲಿ ಸರ್ವಭೂತಹಿತ, ಮರ್ಯಾದಾ ಪುರಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣದ ಭೂಮಿ ಪೂಜೆ ಅನ್ನು ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಇಂದು ನೆರವೇರಿಸಲಿದ್ದಾರೆ. ಈ ಐತಿಹಾಸಿಕ ಪುಣ್ಯ ಕ್ಷಣಕ್ಕೆ ವಿವಿಧ ಮಠದ ಮಠಾಧೀಶರು, ಸಾಧು ಸಂತರು, ಶ್ರೀರಾಮ ಭಕ್ತರು ಸಾಕ್ಷಿಯಾಗುತ್ತಿದ್ದಾರೆ,ಮಂದಿರ ನಿರ್ಮಾಣಕ್ಕಾಗಿ ಹೋರಾಡಿದ ರಾಮ ಭಕ್ತರ ಪರಿಶ್ರಮ,ಬಲಿದಾನವನ್ನು ಸ್ಮರಿಸುತ್ತಾ,ಈ ಶುಭ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸೋಣ,ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸೋಣ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ..
ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ
ವಿಜಯಪುರ: ಹಿರಿಯರ ವಿರೋಧದಿಂದ ಹೆದರಿ ಪರಸ್ಪರ ಪ್ರೀತಿಸುತ್ತಿದ್ದ ಯುವ ಪ್ರೇಮಿಗಳು ರಕ್ಷಣೆ ಕೋರಿ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ಮೊರೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದ ಯಲ್ಲಪ್ಪ ಚೂರಿ ಹಾಗೂ ಅದೇ ಗ್ರಾಮದ ಯುವತಿ ಕೊಂತವ್ವ ಮಾನಕರ ಪರಸ್ಪರ ಕಳೆದ ನಾಲ್ಕು ವರ್ಷದಿಂದ ಪ್ರೀತಿಸುತ್ತಿ ದ್ದಾರೆ. ಆದರೆ ಈ ಪ್ರೀತಿಗೆ ಯುವತಿಯ ಕುಟುಂಬದವರು ವಿರೋಧ ವ್ಯಕ್ತಪಡಿಸಿ ದ್ದಾರೆ. ಆಕೆಗೆ ಬೇರೆ ಕಡೆ ಮದುವೆ ಸಹ ನಿಶ್ಚಯ ಮಾಡಿದ್ದಾರೆ. ಇದರಿಂದ ಬೇಸತ್ತು ಯುವ ಪ್ರೇಮಿಗಳು ಓಡಿ ಹೋಗಿದ್ದರು. ಆದರೆ ಯುವತಿ ಕುಟುಂಬ ದವರು ಸಾಯುವ ಬೆದರಿಕೆ ಹಾಕಿದ್ದ ಕಾರಣ ವಾಪಸ್ ಮನೆಗೆ ಬಂದಿದ್ದಾರೆ. ಯುವಕ ಖಾಸಗಿ ಯಾಗಿ ಉದ್ಯೋಗ ಮಾಡಿಕೊಂಡಿದ್ದಾನೆ. ಇತನ ಬೆಳವಣಿಗೆ ಸಹಿಸದ ಕೆಲ ಗ್ರಾಮಸ್ಥರು ಈ ರೀತಿ ತಮ್ಮ ಪ್ರೀತಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಯುವಕ ಯಲ್ಲಪ್ಪ ಚೂರಿ ಆರೋಪಿಸಿ ದ್ದಾನೆ. ಇದರ ಜತೆ ಇವರಿಬ್ಬರ ಪ್ರೀತಿಗೆ ಅಡ್ಡವಾಗಿರುವ ಯುವತಿಯ ಕುಟುಂಬ ದವರು ಆಕೆಗೆ...
ಮನೆಯಲ್ಲಿ ಶ್ರೀ ರಾಮ ನಾಮ ಜಪ ಮಾಡಿದ ಸಚಿವ ಸಿಸಿ ಪಾಟೀಲ್….
ಗದಗ ಆ್ಯಂಕರ್ : ಅಯ್ಯೋಧ್ಯಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪ್ರಭು ಶ್ರೀ ರಾಮಚಂದ್ರರ ಭವ್ಯ ಮಂದಿರ ನಿಮಾ೯ಣದ ಶೀಲಾನ್ಯಾಸ ಕಾಯ೯ದ ಪ್ರಯುಕ್ತ ಸಚಿವ ಸಿಸಿ ಪಾಟೀಲ್ ತಮ್ಮ ನಿವಾಸದಲ್ಲಿ ಶ್ರೀ ರಾಮ ನಾಮ ಜಪ ಮಾಡಿದರು. ಪತ್ನಿ ಮಕ್ಕಳು ಮತ್ತು ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಸಲ್ಲಿಸಿ ಶ್ರೀರಾಮ ನಾಮ ಜಪಿಸಿದರು. ನರಗುಂದ ಪಟ್ಟಣದಲ್ಲಿ ಇರುವ ಮನೆಯಲ್ಲಿ ರಾಮನಾಮ ಜಪಿಸಿ ಸಂಭ್ರಮಿಸಿದರು
ಖತರ್ನಾಕ ಕಳ್ಳಿಯರ ಗ್ಯಾಂಗ್ ಎಂಟ್ರಿ: ಹಾಡಹಗಲೇ ದರೋಡೆ, ಫಿನಾಯಿಲ್ ಮಾರುವ ನೆಪದಲ್ಲಿ ಕಳ್ಳತನ
ವಿಜಯಪುರ; ಕೊರೋನಾ ಸಂಕಷ್ಟದ ಮದ್ಯೆಯೂ ವಿಜಯಪುರದಲ್ಲಿ ಖತರ್ನಾಕ್ ಸುಂದರಿಯರ ರಾಬರೀ ಗ್ಯಾಂಗ್ ಫಿಲ್ಡಿಗಿಳಿದಿದೆಯಾ ಅನ್ನೋ ಅನುಮಾನ ಶುರುವಾಗಿದೆ.. ಯಾಕಂದ್ರೆ ವಿಜಯಪುರದ ಶಾಂತಿನಗರ ಏರಿಯಾದಲ್ಲಿ ನಡೆದಿರೊ ಈ ಒಂದು ಘಟನೆ ಇಲ್ಲಿನ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ.. ಹೀಗಾಗಿ ಇಲ್ಲಿನ ಜನ ಆತಂಕಗೊಂಡಿದ್ದಾರೆ.. ಹೌದು ವಿಜಯಪುರದ ಶಾಂತಿ ನಗರದಲ್ಲಿ ಹಾಡಹಗಲೇ ಆತಂಕಕಾರಿ ಘಟನೆಯೊಂದು ನಡೆದಿದೆ.. ಮಟ ಮಟ ಮದ್ಯಾಹ್ನವೇ ಫಿನಾಯಿಲ್ ಮಾರುವ ವೇಷದಲ್ಲಿ ಬಂದಿದ್ದ ತಂಡವೊಂದು ಮನೆಮಂದಿಗೇಲ್ಲ ಮತ್ತು ಬರಿಸಿ ಚಿನ್ನ ಬೆಳ್ಳಿ ದೋಚಿಕೊಂಡು ಹೋಗಿದೆ.. ದುರಂತ ಅಂದ್ರೆ ಮನೆ ಕಾವಲಿಗಿದ್ದ ಪ್ರೀತಿಯ ಸಾಕು ನಾಯಿ ದುರುಳರ ವಿಷಪ್ರಾಶನಕ್ಕೆ ಜೀವ ಬಿಟ್ಟಿದೆ.. ಹೌದು, ವಿಜಯಪುರ ಶಾಂತಿನಗರದಲ್ಲಿ ವಾಸವಿರೋ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.. ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಕಳ್ಳತನದ ಸ್ಕೆಚ್ ಹಾಕಿದ್ದಾಳೆ.. ಮನೆಯ ಹೊರಗಡೆ ಕರೆದಾಗ ಬಂದ ಯುವಕನಿಗೆ ಮತ್ತು ಬರೋ ವಾಸನೆ ತೋರಿಸಿದ ಪ್ರಜ್ಞೆ ತಪ್ಪಿಸಿದ್ದಾಳೆ.. ಆ ನಂತ್ರ...