ವಿಜಯಪುರ; ಕೊರೋನಾ ಸಂಕಷ್ಟದ ಮದ್ಯೆಯೂ ವಿಜಯಪುರದಲ್ಲಿ ಖತರ್ನಾಕ್ ಸುಂದರಿಯರ ರಾಬರೀ ಗ್ಯಾಂಗ್ ಫಿಲ್ಡಿಗಿಳಿದಿದೆಯಾ ಅನ್ನೋ ಅನುಮಾನ ಶುರುವಾಗಿದೆ.. ಯಾಕಂದ್ರೆ ವಿಜಯಪುರದ ಶಾಂತಿನಗರ ಏರಿಯಾದಲ್ಲಿ ನಡೆದಿರೊ ಈ ಒಂದು ಘಟನೆ ಇಲ್ಲಿನ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ.. ಹೀಗಾಗಿ ಇಲ್ಲಿನ ಜನ ಆತಂಕಗೊಂಡಿದ್ದಾರೆ..
ಹೌದು ವಿಜಯಪುರದ ಶಾಂತಿ ನಗರದಲ್ಲಿ ಹಾಡಹಗಲೇ ಆತಂಕಕಾರಿ ಘಟನೆಯೊಂದು ನಡೆದಿದೆ.. ಮಟ ಮಟ ಮದ್ಯಾಹ್ನವೇ ಫಿನಾಯಿಲ್ ಮಾರುವ ವೇಷದಲ್ಲಿ ಬಂದಿದ್ದ ತಂಡವೊಂದು ಮನೆಮಂದಿಗೇಲ್ಲ ಮತ್ತು ಬರಿಸಿ ಚಿನ್ನ ಬೆಳ್ಳಿ ದೋಚಿಕೊಂಡು ಹೋಗಿದೆ.. ದುರಂತ ಅಂದ್ರೆ ಮನೆ ಕಾವಲಿಗಿದ್ದ ಪ್ರೀತಿಯ ಸಾಕು ನಾಯಿ ದುರುಳರ ವಿಷಪ್ರಾಶನಕ್ಕೆ ಜೀವ ಬಿಟ್ಟಿದೆ..
ಹೌದು, ವಿಜಯಪುರ ಶಾಂತಿನಗರದಲ್ಲಿ ವಾಸವಿರೋ, ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ..
ಮನೆ ಮನೆಗೆ ಫಿನಾಯಿಲ್ ಮಾರಾಟ ಮಾಡಲು ಬಂದಿದ್ದ ಯುವತಿ ಕಳ್ಳತನದ ಸ್ಕೆಚ್ ಹಾಕಿದ್ದಾಳೆ.. ಮನೆಯ ಹೊರಗಡೆ ಕರೆದಾಗ ಬಂದ ಯುವಕನಿಗೆ ಮತ್ತು ಬರೋ ವಾಸನೆ ತೋರಿಸಿದ ಪ್ರಜ್ಞೆ ತಪ್ಪಿಸಿದ್ದಾಳೆ.. ಆ ನಂತ್ರ ಮನೆಯೊಳಗೆ ನುಗ್ಗಿದ್ದ ಯುವತಿ, ಮನೆಯಲ್ಲಿ ಆಗಷ್ಟೆ ಮದ್ಯಾಹ್ನದ ಊಟ ಮಾಡಿ ಮಲಗಿದ್ದ ಸುನಂದಾ ತೋಳಬಂದಿ, ಪತಿ ವಾಸುದೇವ ತೋಳಬಂದಿಯವರಿಗೆ ಮತ್ತು ಬರಿಸೋ ಔಷಧಿ ಸ್ಪ್ರೇ ಮಾಡಿ ಪ್ರಜ್ಣೆ ತಪ್ಪಿಸಿದ್ದಾರೆ.. ನಂತ್ರ ಮನೆಯಲ್ಲಿರೋ ಚಿನ್ನ ಬೆಳ್ಳಿ ದೋಚಿದ್ದಾರೆ..
ಸಧ್ಯ ಘಟನೆಯಲ್ಲಿ ಮನೆಯ ತಿಜೋರಿಯಲ್ಲಿದ್ದ ಸುಮಾರು 2.20 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂ ಚಿನ್ನಾಭರಣ, 220 ಗ್ರಾಂ ಬೆಳ್ಳಿಯ ಆಭರಣ, 2ಮೊಬೈಲ್ ದೋಚಿದ್ದಾರೆ.. ಈ ಕುರಿತು ವಿಜಯಪುರದ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಕೊರೋನಾ ಆತಂಕದ ನಡುವೆಯೂ ವಿಜಯಪುರದ ಶಾಂತಿನಗರದ ಜನತೆಗೆ ಈ ಘಟನೆ ಮತ್ತಷ್ಟು ಆತಂಕಕ್ಕೆ ದೂಡಿದೆ..
ಅಂದಹಾಗೆ ಈ ಏರಿಯಾಗಳಲ್ಲಿ ಹಾಡಹಗಲೇ ಇಂತಹದ್ದೊಂದು ರಾಬರಿಗೆ ಇಳಿದಿರೋ ಸುಂದರಿಯರ ಗ್ಯಾಂಗ್ ಒಂದು ಆಕ್ಟಿವ್ ಆಗಿರೋ ಅನುಮಾನ ಶುರುವಾಗಿದೆ.. ವಿವಿಧ ವಸ್ತುಗಳನ್ನ ಮಾರಾಟ ಮಾಡೋ ನೆಪದಲ್ಲಿ ಫಿಲ್ಡಿಗಿಳಿದಿರೋ ಈ ವಂಚಕರ ಗ್ಯಾಂಗ್ ವಿಜಯಪುರದ ಗಲ್ಲಿ ಗಲ್ಲಿಗಳಲ್ಲೂ ಪ್ಲ್ಯಾನ್ ಮೂಲಕ ದಾಳಿ ಮಾಡ್ತಿವೆ.. ನಿಜ ಅಂದ್ರೆ ಈ ಗ್ಯಾಂಗ್ ನಡೆಸೋ ರಾಬರಿ ತುಂಬಾ ಭಯಾನಕವಾಗಿರತ್ತೆ.. ಮೊನ್ನೆ ನಡೆದಿರೋ ಘಟನೆ ಇದಕ್ಕೆ ಸಾಕ್ಷಿಯಾಗಿದೆ..
ಇನ್ನು ಇಂತಹದ್ದೊಂದು ಖತರ್ನಾಕ ಗ್ಯಾಂಗ್ ಆ್ಯಕ್ಟಿವ್ ಆಗಿರೋ ಬಗ್ಗೆ ಇಲ್ಲಿನ ನಿವಾಸಿಗಳೇ ಆತಂಕದಿಂದ ಹೇಳುತ್ತಿದ್ದಾರೆ.. ಅಸಲು, ಈ ಖತರ್ನಾಕ ಗ್ಯಾಂಗ್ ಇಡೀ ಜಿಲ್ಲೆಯಲ್ಲಿಯೇ ಆಕ್ಟಿವ್ ಆಗಿರೋ ಆತಂಕವೂ ಇದೆ.. ಹೀಗಾಗಿ ಪೊಲೀಸ್ ಇಲಾಖೆ ತಕ್ಷಣವೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ