ಮುಂಡಗೋಡ: ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಸುರಿಯುತ್ತಿದೆ, ಭಾರೀ ಮಳೆಯ ಕಾರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಬುಧವಾರ (ಜುಲೈ 8, 2026) ತಾಲೂಕಿನ ಆಯ್ದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ (BEO) ಈ ನಿರ್ಧಾರ ಪ್ರಕಟಿಸಿದ್ದಾರೆ. ತಹಶೀಲ್ದಾರರ ಸೂಚನೆಯ ಮೇರೆಗೆ ಈ ರಜೆಯನ್ನು ಘೋಷಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಜೆ ಘೋಷಿಸಲಾದ ಶಾಲೆಗಳ ಪಟ್ಟಿ ಇಂತಿದೆ:
ಸ. ಹಿ. ಪ್ರಾ. ಶಾಲೆ ಓಣೀಕೇರಿ,
ಸ. ಕಿ. ಪ್ರಾ. ಶಾಲೆ ರಾಮಾಪುರ ಪ್ಲಾಟ್,
ಸ. ಕಿ. ಪ್ರಾ. ಶಾಲೆ ಜೋಡಿಕಟ್ಟ,
ಸ. ಹಿ. ಪ್ರಾ. ಶಾಲೆ ಚಿಪಗೇರಿ,
ಸ. ಉ. ಹಿ. ಪ್ರಾ. ಶಾಲೆ ಓಣೀಕೇರಿ,
ವಿಸ್ಡಮ್ ಇಂಟರ್ನ್ಯಾಷನಲ್ ಕಾನ್ವೆಂಟ್, ಭದ್ರಾಪೂರ (Wisdom International Convent, Bhadrapur),
ಸ. ಕಿ. ಪ್ರಾ. ಶಾಲೆ ಬಾಳೆಕೊಪ್ಪ,
ಸ. ಹಿ. ಪ್ರಾ. ಶಾಲೆ ಬೆಕ್ಕೋಡ, ಹಾಗೂ ಈ ಗ್ರಾಮಗಳ ಅಂಗನವಾಡಿಗಳಿಗೂ ರಜೆ ನೀಡಲಾಗಿದೆ.
ಸದ್ಯಕ್ಕೆ ಈ ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದ್ದು, ಮಳೆಯ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
