ಮುಂಡಗೋಡ ತಾಲೂಕಿನ ಹಿರಿಯ ಸಹಕಾರಿ ಧುರೀಣ, ಹಿರಿಯ ರಾಜಕೀಯ ಮುಖಂಡ ಚೌಡಳ್ಳಿಯ ವೈ.ಪಿ.ಪಾಟೀಲ್ (72) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಕಳೆದ ಬುಧವಾರ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವ್ರು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವಿಧಿವಶರಾಗಿದ್ದಾರೆ. ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ, ಶಿವಾಜಿ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್, ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ವೈ.ಪಿ.ಪಾಟೀಲ್ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಮುಂಡಗೋಡ ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಜನಸಂಪರ್ಕ ಸಭೆ ಏರ್ಪಡಿಸಲಾಗಿದೆ. ಉತ್ತರ ಕನ್ನಡ ಖಡಕ್ ಎಸ್ಪಿ ಎಂ. ನಾರಾಯಣ್ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ತಮ್ಮ ಸಂಕಷ್ಟಗಳನ್ನು, ದುಃಖ ದುಮ್ಮಾನಗಳನ್ನು ಹೇಳಿಕೊಳ್ಳಬಹುದಾಗಿದೆ. ಇತ್ತಿಚೆಗೆ ಪಟ್ಟಣದಲ್ಲಿ ನಡೆದ ಕೆಲ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ, ಆತಂಕದಲ್ಲಿದ್ದ ಮುಂಡಗೋಡಿಗರಿಗೆ “ನಿಮ್ಮೊಂದಿಗೆ ನಾವಿದ್ದೇವೆ” ಎನ್ನುವ ಅಭಯದ ಸಂದೇಶ ನೀಡುವಲ್ಲಿ ಎಸ್ಪಿ ನಾರಾಯಣ್ ಮಹತ್ತರ ಹೆಜ್ಜೆ ಇರಿಸಿದ್ದಾರೆ ಎನ್ನಲಾಗ್ತಿದೆ. ಅಸಲು, ಎಸ್ಪಿ ಸಾಹೇಬರ ನಿರ್ಧಾರ ಮುಂಡಗೋಡಿನ ಹಿರಿಯ ನಾಗರಿಕರು, ಪ್ರಜ್ಞಾವಂತರ ಮೆಚ್ಚುಗೆಗೆ ಕಾರಣವಾಗಿದೆ.
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೇ ಗುಂಡಿನ ಸದ್ದು ಕೇಳಿಸಿದೆ. ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಸಿಸಿಬಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ, ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಖತರ್ನಾಕ ಖದೀಮರ ಕಾಲಿಗೆ ಗುಂಡು ಹಾರಿಸಲಾಗಿದೆ. ಪರಿಣಾಮ ಇಬ್ಬರು ಆಸ್ಪತ್ರೆ ಪಾಲಾಗಿದ್ದಾರೆ. ಅಂದಹಾಗೆ, ಮಂಗಳೂರು ಮೂಲದ ಕುರ್ತಾ ಅಲಿಯಾಸ್ ಭರತ್ ಕುಮಾರ್ ಹಾಗೂ ಫಾರೂಕ್ ಅಲಿಯಾಸ್ ಟೊಮೆಟೊ ಫಾರೂಕ್ ಕಾಲಿಗೆ ಗುಂಡೇಟು ತಗುಲಿದೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೋಡಲಾಗ್ತಿದೆ. ಅಂದಹಾಗೆ, ಮಂಗಳೂರು ಮೂಲದ ಭರತ್, ಫಾರುಕ್ ಕಾರು ಅಡ್ಡಗಟ್ಟಿ ದರೋಡೆ ಮಾಡುವುದನ್ನೇ ದಂಧೆ ಮಾಡಿಕೊಂಡಿದ್ದರು. ಇವರ ಗ್ಯಾಂಗ್ನಲ್ಲಿ 15 ಜನರಿದ್ದಾರೆ. ಹೀಗಾಗಿ, ಮಹಾರಾಷ್ಟ್ರ ಸಾಂಗ್ಲಿ ಮೂಲದ ರಾಹುಲ್ ಸುರ್ವೆ ಕಾರು ಅಡ್ಡಗಟ್ಟಿ ಖದೀಮರು ದರೋಡೆ ಮಾಡಿದ್ದರು. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರ ದರೋಡೆ ನಡೆದಿತ್ತು. ಕಾರು ಚಾಲಕನಿಗೆ ಬೆದರಿಕೆ ಹಾಕಿ ಫಾರೂಕ್ ಹಾಗೂ ಭರತ್ ಗ್ಯಾಂಗ್ ದರೋಡೆ ಮಾಡಿದ್ದರು. ನವೆಂಬರ್ 8 ರಂದು ದರೋಡೆ ನಡೆದಿತ್ತು. ಈ...
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮುಂಡಗೋಡಿನಲ್ಲಿ ಅದ್ಯಾಕೋ ಏನೋ ನಡೆಯಬಾರದ ಘಟನೆಗಳು ನಡೆದು ಹೋಗ್ತಿವೆ. ಹಾಡಹಗಲೇ ಜನನೀ ಬೀಡ ಪ್ರದೇಶಗಳಲ್ಲಿ ಭಯಾನಕ ವೆಂಬಂತ ಘಟನೆಗಳೂ ಜಾರಿಯಲ್ಲಿವೆ. ಇಲ್ಲಿ, ಯಾವ ಹೊತ್ತಿನಲ್ಲಿ ಯಾರ ಮಾಂಗಲ್ಯ ಸರ ಅದ್ಯಾರ ಕಿತ್ತುಕೊಳ್ತಾರೋ ಯಾರಿಗೂ ಅರ್ಥವಾಗದ ಹಾಗಾಗಿದೆ. ನಿಜ ಅಂದ್ರೆ ಒಡವೆಗಳನ್ನು ಹಾಕೊಂಡು ಹೊರಗಡೆ ತಿರುಗಾಡಲೂ ಮಹಿಳೆಯರು ಹೆದರುವಂತಾಗಿದೆ. ಕಳ್ಳಕಾಕರಿಗೆ ಸೇಫಿಯಸ್ಟ್ ಜಾಗ..? ಸರಗಳ್ಳತನ, ಬೈಕ್ ಕಳ್ಳತನ, ಮನೆಗಳ್ಳತನಗಳು ನಿತ್ಯದ ಭಯವಾಗಿದೆ. ಇದೇಲ್ಲ ಯಾಕೆ ಆಗ್ತಿದೆಯೋ ಯಾರಿಗೂ ಗೊತ್ತಿಲ್ಲ. ಘಟನೆ ನಡೆದು ಎರಡು ದಿನ ಚರ್ಚೆ ಆಗತ್ತೆ ಬಿಟ್ರೆ, ಮೂರನೇ ದಿನ ಖತಂ ಆಗಿರತ್ತೆ. ಹೀಗಾಗಿ, ಮುಂಡಗೋಡ ಸದ್ಯ ಕಳ್ಳಕಾಕರಿಗೆ, ಸರಗಳ್ಳರಿಗೆ, ಮನೆಗಳ್ಳರಿಗೆ, ಅದೇನೋ ಅಂತಾರಲ್ಲ ಹಾಗಾಗಿದೆ ಅನ್ನೋದು ಜನರ ಆರೋಪ.. ನಿಜ ಅಂದ್ರೆ, ಇಲ್ಲಿ ನಡೆದ ಕಳ್ಳತನ, ಸರಗಳ್ಳತನ ಕೇಸುಗಳು “ಬೇಧ”ವಾಗಿದ್ದೇ ಅಪರೂಪ..! ಹೀಗಾಗಿ, ಈ ಬಗ್ಗೆ ಜನರಲ್ಲಿ ನಂಬಿಕೆನೇ ಹೊರಟು ಹೋದಂತಾಗಿದೆ. ಭಯಾನಕ ಅಲ್ವಾ..? ಆದ್ರೆ ಇದರ ನಡುವೆ, ಶನಿವಾರ ಮತ್ತೊಂದು ಭಯಾನಕ ಘಟನೆ ನಡೆದು ಹೋಗಿದೆ. ಮಂಗಳ...
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮುರುಡೇಶ್ವರ: ರಾಜ್ಯದಲ್ಲಿ ಮೀನುಗಾರರಿಗೆ ನೀಡಲಾಗುತ್ತಿರುವ ಸಂಕಷ್ಟ ಪರಿಹಾರ ನಿಧಿ ಮೊತ್ತವನ್ನು 8 ಲಕ್ಷದಿಂದ 10 ಲಕ್ಷ ಕ್ಕೆ ಏರಿಕೆ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಅವರು ಗುರುವಾರ ಮುರುಡೇಶ್ವರ ದ ಆರ್.ಎನ್. ಎಸ್. ಗಾಲ್ಫ್ ಕ್ಲಬ್ ಮೈದಾನದಲ್ಲಿ ನಡೆದ ವಿಶ್ವ ಮೀನುಗಾರಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಕ್ಕೆ ಮೀನುಗಾರರ ಬದುಕು ಹಸನು ಮಾಡುವ ಆಸೆ ಇದೆ. ಮೀನುಗಾರರ ಮಕ್ಕಳು ಉದ್ಯೋಗ ಅರಸಿ ಹೊರ ಜಿಲ್ಲೆ , ರಾಜ್ಯಗಳಿಗೆ ಹೋಗುತ್ತಿದ್ದಾರೆ..ಕರಾವಳಿ ಪ್ರದೇಶದಲ್ಲಿ ಕೋಮು ವಾತಾವರಣ ಕ್ಕೆ ಅವಕಾಶ ನೀಡಬಾರದು. ಇಲ್ಲಿನ ಯುವಕರಿಗೆ ಉತ್ತಮ ಭವಿಷ್ಯ ಸೃಷ್ಟಿ ಮಾಡಿಕೊಳ್ಳಲು ಕರಾವಳಿ ಪ್ರದೇಶದಲ್ಲಿ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಅವಕಾಶ ನೀಡಲಾಗುವುದು. ಈ ಭಾಗದ. ಯುವಕರಿಗೆ ದೊಡ್ಡ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದರು. .ಮೀನುಗಾರರ ಬದುಕಿನಲ್ಲಿ ಸ್ವಾವಲಂಬನೆ ತರಲು ನಮ್ಮ ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಶೇ.99% ಮೀನುಗಾರರು ಹಿಂದುಳಿದಿದ್ದಾರೆ ಎಂಬ ಅಂದಾಜಿದೆ. ಬಯಲು ಸೀಮೆಯ ರೈತರ ಅಭಿವೃದ್ಧಿ ಗೆ ನೀಡುವ...
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವರನ್ನು ಹೆಡೆಮುರಿ ಕಟ್ಟಿದ್ದಾರೆ. ತಾಲೂಕಿನ ಇಂದೂರು ಸಮೀಪದ 6 ನಂಬರ್ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ನಡೆದ ಕಾರ್ಯಾಚರಣೆಯಲ್ಲಿ ಒಂದು ಪುಟ್ಟ ಕರು ಸೇರಿದಂತೆ, ನಾಲ್ಕು ಜಾನುವಾರುಗಳನ್ನು ರಕ್ಷಿಸಲಾಗಿದೆ. ಇಂದೂರಿನಿಂದ ಕಲಘಟಗಿಗೆ ಸಾಗಿಸಲಾಗುತ್ತಿತ್ತು ಎನ್ನಲಾದ ಜಾನುವಾರುಗಳನ್ನು ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಸಧ್ಯ ಆರೋಪಿ ಹಾಗೂ ಜಾನುವಾರು ಸಮೇತ ವಾಹನ ಮುಂಡಗೋಡ ಪೊಲೀಸ್ ಠಾಣೆಯ ಎದುರು ನಿಲ್ಲಿಸಲಾಗಿದ್ದು, ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. https://publicfirstnewz.com/?p=34359
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಯಲ್ಲಾಪುರ ಠಾಣೆಯ ದಕ್ಷ ಕ್ರೈಂ ಟೀಂ ಭರ್ಜರಿ ಕಾರ್ಯ ಮಾಡಿದೆ. ಯಲ್ಲಾಪುರ ಶಿರಸಿ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಲ್ಲಿ, ನಡೆದಿದ್ದ ಖತರ್ನಾಕ ದರೋಡೆ ಕೇಸನ್ನು ಕೆಲವೇ ಅಂದ್ರೆ ಕೆಲವೇ ಗಂಟೆಗಳಲ್ಲಿ ಬೇಧಿಸಿ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ. ಯಲ್ಲಾಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಘಟನೆ ಏನು..? ಅದು ಮೊನ್ನೆ ಮಂಗಳವಾರ ದಿನಾಂಕ 19ರ ಮುಸ್ಸಂಜೆಲಿ ನಡೆದಿದ್ದ ಘಟನೆ.. ಅವತ್ತು, ಶಿರಸಿಯ ಕಟ್ಟಿಗೆ ವ್ಯಾಪಾರಿಯೊಬ್ಬ ತನ್ನ ವ್ಯಾಪಾರದ ಸಲುವಾಗಿ ಯಲ್ಲಾಪುರಕ್ಕೆ ಬಂದಿದ್ದ. ಆತನ ಹೆಸ್ರು ಅಖ್ತರ್ ಗಂಗೊಳ್ಳಿ. ಸ್ಕೂಟಿಯ ಮೇಲೆ ಸವಾರಿ ಬಂದಿದ್ದ ಈತ ತನ್ನೇಲ್ಲ ಕೆಲಸ ಮುಗಿಸಿಕೊಂಡು ಮಂಗಳವಾರದ ಸಂಜೆ ಹೊತ್ತಲ್ಲಿ ಶಿರಸಿ ಕಡೆಗೆ ಹೊರಡಲು ಅಣಿಯಾಗಿರ್ತಾನೆ. ಹೀಗಾಗಿ, ಯಲ್ಲಾಪುರ ಬಸ್ ನಿಲ್ದಾಣದ ಪಕ್ಕದಲ್ಲಿದ್ದ ಪಾನ್ ಶಾಪಿನಲ್ಲಿ “ಬತ್ತಿ” ಹೊಡೆದು, ಹಾಗೆ ತನ್ನ ಜೇಬಿನಲ್ಲಿದ್ದ ಹಣದ ಕಟ್ಟನ್ನು ತೆಗೆದು ಅದ್ರಿಂದ 5 ನೂರು ರೂಪಾಯಿ ಅಂಗಡಿಯವನಿಗೆ ಕೊಟ್ಟಿದ್ದ. ಅದೇ ಹೊತ್ತಲ್ಲಿ ಅಲ್ಲಿದ್ದ ಕೆಲ ಖತರ್ನಾಕ ಕಿಲಾಡಿಗಳ ಕಣ್ಣು ಈತನ...
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಹಾನಗಲ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ಮನೋಹರ್ ತಹಶೀಲ್ದಾರ್(78) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವ್ರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿರೋ ಶಂಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2015ರಲ್ಲಿ ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ಅಬಕಾರಿ ಸಚಿವರಾಗಿದ್ದ ಮನೋಹರ್ ತಹಶಿಲ್ದಾರ್, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದರು.
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಶಿಗ್ಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಯಾಸಿರ್ ಖಾನ್ ಪಠಾಣ ಮೇಲೆ ಯಾವದೇ ರೌಡಿ ಶೀಟ್ ಇಲ್ಲ ಎಂದು ಹಾವೇರಿ ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ತೀವ್ರ ಕುತೂಹಲ ಮೂಡಿಸಿರುವ ಶಿಗ್ಗಾವಿ ಸವಣೂರು ಉಪ ಚುನಾವಣೆಗೆ ಬುಧವಾರ ಮತದಾನ ನಡೆಯಲಿದ್ದು, ಮತದಾನಕ್ಕೆ 24 ಘಂಟೆ ಬಾಕಿ ಉಳಿಯುತ್ತಿದ್ದಂತೆ ಯಾಸಿರ್ ಖಾನ್ ಪಠಾಣ ಮೇಲೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ, ರೌಡಿ ಶೀಟ್ ಇರುವ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದ್ದರು. ಇದೀಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಚೇರಿಯ ಧಾಖಲಾತಿ ಪರಿಶೀಲಿಸಲಾಗಿ ಯಾಸಿರ್ ಖಾನ್ ಪಠಾಣ ಮೇಲೆ ಯಾವದೇ ರೌಡಿ ಶೀಟ್ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಹಳಿಯಾಳ; ಇಲ್ಲಿನ ತಹಶೀಲ್ದಾರ್ ರವರ ಕಚೇರಿಯ ಸಭಾ ಭವನದಲ್ಲಿ ನ.9 ರಂದು ನಡೆದ ಈ ವರ್ಷದ ಕಬ್ಬು ಅರೆಯುವ ಹಂಗಾಮು ಪ್ರಾರಂಭ ಮಾಡುವುದಕ್ಕೆ ಸಂಬಂಧಿಸಿದಂತೆ ಬೆಲೆ ನಿರ್ಧರಣೆ ಮಾಡುವ ಬಗ್ಗೆ EID Parry ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರ ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಸಭೆಯಲ್ಲಿ ಈ ಮುಂದಿನಂತೆ ತೀರ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಸರ್ಕಾರವು ನಿಗಧಿ ಪಡಿಸಿದ ಎಫ್.ಆರ್.ಪಿ ದರವು ಪ್ರತಿ ಟನ್ ಕಬ್ಬಿಗೆ 3678/- ರೂ.ಗಳಿದ್ದು ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಟಾವು ಮತ್ತು ಸಾಗಾಣಿಕೆ ವೆಚ್ಚವನ್ನು ಕಳೆದು 2826/- ರೂ.ಗಳನ್ನು ರೈತರಿಗೆ ಪಾವತಿಸುತ್ತಿದ್ದರು. ಈ ವರ್ಷಕ್ಕೆ ದರ ನಿಗಧಿ ಮಾಡುವ ಬಗ್ಗೆ ರೈತರು ಮನವಿ ಮಾಡಿರುವಂತೆ ,ಅಕ್ಟೊಬರ್ 30 ನಡೆದ ಪ್ರಾಥಮಿಕ ಹಂತದ ಸಭೆ ನಡೆಸಿದ್ದು,ನಂತರ , ನ. 9 ರಂದು : ಹಳಿಯಾಳದಲ್ಲಿ ರೈತರು ಮತ್ತು ಪ್ಯಾರಿ ಕಾರ್ಖಾನೆಯವರೊಂದಿಗೆ ಅಂತಿಮ ಸಭೆ ನಡೆಸಿ ಸತತವಾಗಿ ಚರ್ಚೆ ನಡೆಸಿದ ಫಲವಾಗಿ ಈ ವರ್ಷಕ್ಕೆ...