ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿ ಗಂಭೀರಗೊಂಡಿದ್ದ ನಾಲ್ಕು ವರ್ಷದ ಬಾಲಕಿ ಬದುಕಿ ಉಳಿಯಲೇ ಇಲ್ಲ. ಮುಂಡಗೋಡ ತಾಲೂಕಾಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದ್ದ ಬಾಲಕಿ ಮೃತಪಟ್ಟಿದ್ದಾಳೆ ಅಂತಾ ಕಿಮ್ಸ್ ವೈದ್ಯರು ದೃಢಪಡಿಸಿದ್ದಾರೆ. ಅಂದಹಾಗೆ, ಮುಂಡಗೋಡಿನ ಹಳೂರು ಬಳಿಯ ಮಾರಿಕಾಂಬಾ ನಗರದ ಅಂಗನವಾಡಿಗೆ ಬಂದಿದ್ದ, ಅಂಗನವಾಡಿ ಹೊರಗೆ ಮೂತ್ರ ವಿಸರ್ಜನೆಗೆ ತೆರಳಿದ್ದ, ನಾಲ್ಕು ವರ್ಷದ ಪುಟ್ಟ ಕಂದಮ್ಮ ಮಯೂರಿ ಸುರೇಶ್ ಕುಂಬ್ಳೆಪ್ಪನವರ(4) ಎಂಬುವ ಬಾಲಕಿಗೆ ಹಾವು ಕಚ್ಚಿತ್ತು. ಆದ್ರೆ ಯಾವ ಹಾವು ಏನು ಅಂತಾ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ, ತಕ್ಷಣವೇ ಮಗುವನ್ನು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಹಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಮಾರ್ಗಮದ್ಯದಲ್ಲೇ ಬಾಲಕಿ ಸಾವನ್ನಪ್ಪಿದ್ದಳು. ಕಿಮ್ಸ್ ಗೆ ರವಾನಿಸಿದ ನಂತರ ವೈದ್ಯರು ಬಾಲಕಿ ಮೃತ ಪಟ್ಟಿರೋದನ್ನು ದೃಢಪಡಿಸಿದ್ದಾರೆ. ಪೊಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಈ ನಡುವೆ ಈ ಘಟನೆ ನೋಡಿದಾಗ ನಮ್ಮ ಮುಂಡಗೋಡ ತಾಲೂಕಿನ ಅಂಗನವಾಡಿಗಳು ಅದೇಷ್ಟು ಸುರಕ್ಷಿತ..? ಅನ್ನೋ ಪ್ರಶ್ನೆ ಮೂಡಿದೆ..!
Top Stories
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!
ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್, ಹಲವು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!
ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!
ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!
ಚಿಗಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋಸಾವಿ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆ, ಅಷ್ಟಕ್ಕೂ, ಆ ತಾಯಿ ಗೋಳೋ ಅಂತ ಕಣ್ಣೀರು ಹಾಕಿದ್ಯಾಕೆ..?
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಮುಂಡಗೋಡಿನ ಅಂಗನವಾಡಿಯೊಂದರಲ್ಲಿ ಭಾರಿ ಅನಾಹುತ ಸಂಭವಿಸಿದೆ. ಅಂಗನವಾಡಿಯ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದ, ನಾಲ್ಕು ವರ್ಷದ ಪುಟ್ಟ ಕಂದಮ್ಮನಿಗೆ ಹಾವು ಕಚ್ಚಿದೆ. ಪರಿಣಾಮ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಮಾರಿಕಾಂಬಾ ನಗರದ ಅಂಗನವಾಡಿಯಲ್ಲಿ ಘಟನೆ ನಡೆದಿದ್ದು, ಮಯೂರಿ ಸುರೇಶ್ ಕುಂಬ್ಳೆಪ್ಪನವರ(4) ಎಂಬುವ ಪುಟ್ಟ ಬಾಲಕಿಗೆ ಹಾವು ಕಚ್ಚಿದೆ ಎನ್ನಲಾಗಿದೆ. ಮೂತ್ರ ವಿಸರ್ಜನೆಗೆ ಅಂತಾ ಹೋಗಿದ್ದ ಬಾಲಕಿಯ ಕಾಲಿನಲ್ಲಿ ರಕ್ತಸ್ರಾವ ಕಂಡ ಅಂಗನವಾಡಿ ಸಿಬ್ಬಂದಿಗಳು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಹುಬ್ಬಳ್ಳಿ: ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿದ ಘಟನೆ ಹಳೇಹುಬ್ಬಳ್ಳಿ ಆನಂದ ನಗರದಲ್ಲಿ ಸಂಭವಿಸಿದ್ದು, ಗಾಯಾಳುಗಳನ್ನ ಕಿಮ್ಸ್‌ಗೆ ರವಾನೆ ಮಾಡಿದ್ದಾರೆ. ಆನಂದ ನಗರದ ಘೋಡಕೆ ಪ್ಲಾಟ್ ನಲ್ಲಿ ಘಟನೆ ಸಂಭವಿಸಿದ್ದು, ಸಮೀರ್ ಶೇಖ್ (18) ಹಾಗೂ ಚಿಕ್ಕಪ್ಪ ಜಾವೀದ್ ಶೇಖ್ (32)ಗೆ ಇರಿದು ಪರಾರಿಯಾಗಿದ್ದಾರೆ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮಾಹಿತಿ ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಮುಂಡಗೋಡ ತಾಲೂಕಿನ ಇಂದೂರು ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ತಾಲೂಕಿನಲ್ಲೇ ಭಾರೀ ಸದ್ದು ಮಾಡಿದ್ದ, ಜಿದ್ದಾಜಿದ್ದಿಗೆ ಕಾರಣವಾಗಿದ್ದ ಈ ಚುನಾವಣೆ, ನಿಜಕ್ಕೂ ಯಾರೂ ನಿರೀಕ್ಷಿಸದ ಅಚ್ಚರಿ ಫಲಿತಾಂಶ ನೀಡಿದೆ. ಕಾಂಗ್ರೆಸ್ ನ ಪ್ರಭಾವಿ ಮುಖಂಡ, ಶಿವರಾಮ್ ಹೆಬ್ಬಾರರ ಪರಮಾಪ್ತ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರ ಸೋಲಿನೊಂದಿಗೆ ಭಾರೀ ಅಚ್ಚರಿಗೆ ಕಾರಣವಾಗಿದೆ. ಅಸಲು, ತೀವ್ರ ತುರುಸು ಪಡೆದಿದ್ದ ಇಂದೂರು ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ “ಮಹಾದಂಡನಾಯಕ” ರವಿಗೌಡ ಪಾಟೀಲ್ ಸೋಲು ಕಂಡಿದ್ದರೂ, ಇನ್ನುಳಿದ ಬಹುತೇಕ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಭರ್ಜರಿ ಜಯ ದಾಖಲಿಸಿದ್ದಾರೆ. ರೈತ ಹಿತರಕ್ಷಣಾ ಒಕ್ಕೂಟ ಕೇವಲ 3 ಸ್ಥಾನ ಪಡೆಯುವಲ್ಲಿ ಏದುಸಿರು ಬಿಟ್ಟಿದೆ. ಆದ್ರೆ, ಇದ್ರಲ್ಲಿ ಪಾಟೀಲರ ಎದುರು ಸೆಡ್ಡು ಹೊಡೆದು ಗೆದ್ದಿ ಬಂದಿರೋ ದೇವು ಕೆಂಚಗೊಣ್ಣವರ ಗೆಲುವಿನ ಸಂಭ್ರಮ ಕಾಂಗ್ರೆಸ್ ಸಂಭ್ರಮವನ್ನೂ ಮೀರಿಸಿದೆ. ಒಂದರ್ಥದಲ್ಲಿ ದೇವು ಕೆಂಚಗೊಣ್ಣವರ್ ಸದ್ಯ ತಾಲೂಕಿನ ರಾಜಕೀಯ ಪಡಸಾಲೆಯ ಬಹು ಚರ್ಚಿತ ವ್ಯಕ್ತಿಯಾಗಿದ್ದಾರೆ. ಅಂದಹಾಗೆ, ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ನಡೆದ...
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಭಾರೀ ಕುತೂಹಲ ಕೆರಳಿಸಿದ್ದ ಇಂದೂರು ಹಾಗೂ ಚಿಗಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಶಿವರಾಮ್ ಹೆಬ್ಬಾರರ ಪರಮಾಪ್ತ ರವಿಗೌಡ ಪಾಟೀಲರು ಹಾಗೂ ಮತ್ತೋರ್ವ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಲ್.ಟಿ. ಪಾಟೀಲ್ ಸ್ಪರ್ಧಿಸಿದ್ದ ಈ ಎರಡೂ ಕ್ಷೇತ್ರಗಳು ಎಲ್ಲರ ಗಮನ ಸೆಳೆದಿತ್ತು. ಆದ್ರೆ, ಅಚ್ಚರಿಯೆಂಬಂತೆ ಇಂದೂರು ಸೊಸೈಟಿಯಲ್ಲಿ ರವಿಗೌಡ ಪಾಟೀಲರು ಸೋಲು ಕಂಡಿದ್ದಾರೆ. ಚಿಗಳ್ಳಿಯಲ್ಲಿ ಎಲ್ಟಿ ಪಾಟೀಲರು ಜಯಭೇರಿ ಬಾರಿಸಿದ್ದಾರೆ. ಅಂದಹಾಗೆ, ಇಂದೂರು ಸೊಸೈಟಿಯಲ್ಲಿ ಸ್ಪರ್ಧಿಸಿದ್ದ ರವಿಗೌಡ ಪಾಟೀಲರು ಎದುರಾಳಿ ದೇವು ಕೆಂಚಗೊಣ್ಣವರ್ ಎದುರು 54 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 414 ಮತಗಳನ್ನು ದೇವು ಕೆಂಚಗೊಣ್ಣವರ್ ಪಡೆದ್ರೆ, ಕೇವಲ 360 ಮತಗಳನ್ನು ಪಡೆದು ರವಿಗೌಡ ಪಾಟೀಲ್ ಸೋಲು ಒಪ್ಪಿಕೊಂಡಿದ್ದಾರೆ. ಇನ್ನಷ್ಟು ಮಾಹಿತಿ ನೀಡಲಾಗುವುದು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ ತಾಲೂಕಿನ ಚವಡಳ್ಳಿ ಸೊಸೈಟಿ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ತೀವ್ರ ತುರುಸು ಪಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಭರ್ಜರಿ ಜಯ ದಾಖಲಿಸಿದ್ದಾರೆ. ಬಿಜೆಪಿ ಕೇವಲ ಒಂದೇ ಒಂದು ಸ್ಥಾನ ಪಡೆಯುವಲ್ಲಿ ಹರ ಸಾಹಸ ಪಟ್ಟಿದೆ. ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಂಕರ್ ಓಣಿಕೇರಿ, ತಾಜುದ್ದೀನ್ ದುಂಢಸಿ, ಮಹಾದೇವಿ ಹಳೆಬಂಕಾಪುರ, ನಿರ್ಮಲ ಮಡ್ಲಿ, ಪರಶುರಾಮ್ ತಹಶೀಲ್ದಾರ್, ಚಿದಾನಂದ ಪಾಟೀಲ್, ದ್ಯಾಮಣ್ಣ ಹೊನ್ನಳ್ಳಿ, ಬಸವರಾಜ್ ಉಗ್ನಿಕೇರಿ, ರಾಮಣ್ಣ ವಾಲ್ಮೀಕಿ, N.V. ವರ್ಗೀಸ್, ಕುಮಾರ್ ರಾಠೋಡ್ “ಕೈ” ಪಡೆಯ ಬೆಂಬಲದೊಂದಿಗೆ ನಿರ್ದೇಶಕರಾಗಿ ಚುನಾಯಿತರಾಗಿದ್ದಾರೆ. ಇನ್ನು, ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಅರ್ಜುನ್ ಜ್ಯೋತೆಪ್ಪನವರ್ ಗೆಲುವು ಸಾಧಿಸಿ ಬಿಜೆಪಿ ಬಾವುಟ ಗಟ್ಟಿಗೊಳಿಸಿದ್ದಾರೆ. ಇದ್ರೊಂದಿಗೆ ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚವಡಳ್ಳಿ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಕ್ರಮ ಮೆರೆದಿದೆ.
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಮುಂಡಗೋಡ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (LSMP)ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಆಯ್ಕೆಗೊಂಡಿದ್ದಾರೆ. ಇದ್ರೊಂದಿಗೆ ತೀವ್ರ ಜಿದ್ದಾ ಜಿದ್ದಿನ ಕಣವಾಗಿದ್ದ ಸೊಸೈಟಿ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಪಾರುಪತ್ಯವಾದಂತಾಗಿದೆ. ಅಂದಹಾಗೆ, ಒಟ್ಟೂ12 ನಿರ್ದೇಶಕರ ಸ್ಥಾನಗಳಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಈ ಮೊದಲೇ ಇಬ್ಬರು ಅವಿರೋಧ ಆಯ್ಕೆಯಾಗಿದ್ದರು. ಹೀಗಾಗಿ, ಇನ್ನುಳಿದ 10 ನಿರ್ದೇಶಕರ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆದಿತ್ತು. ಒಟ್ಟ 12ಸ್ಥಾನದ ನಿರ್ದೇಶಕರ ಸ್ಥಾನದಲ್ಲಿ 9 ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾದರೆ, ಬಿಜೆಪಿ ಬೆಂಬಲಿತ 3 ಸದಸ್ಯರು ಆಯ್ಕೆಯಾಗಿದ್ದಾರೆ. ಭಾರಿ ಕೂತುಹಲಕ್ಕೆ ಕಾರಣವಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದಂತಾಗಿದೆ. ಆಯ್ಕೆಯಾದ ನಿರ್ದೇಶಕರು..! ಪಕ್ಕೀರಪ್ಪ ಗೌಳಿ, ಮಂಜುನಾಥ ವೆರ್ಣೆಕರ್, ಬಸವಣ್ಣೆಪ್ಪಾ ಹೊತಗಣ್ಣನವರ, ಸುರೇಶ ಕುರಬರ, ಬಾಬುರಾವ್ ತಳವಾರ, ಮೌಲಾಲಿ ಶೇಖ್, ಶಿವಲಿಂಗಪ್ಪ ಗೌಳಿ, ವಿದ್ಯಾ ಉಪ್ಪಾರ, ಯಲ್ಲವ್ವಾ ಕುಂಬಾರ, ಸಂಪತ್ತಕುಮಾರ ಕ್ಯಾಮಣಕೇರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಸೋಮಲಪ್ಪ ಲಮಾಣಿ ಹಾಗೂ ಪ್ರಭು ಅರಶೀಣಗೇರಿ ಇಬ್ಬರು ಅವಿರೋಧ...
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಹುಬ್ಬಳ್ಳಿ: ಸಿಲಿಂಡರ್ ಸ್ಫೋಟಗೊಂಡು ತೀರ್ವವಾಗಿ ಗಾಯಗೊಂಡು ಕಿಮ್ಸ್‌ಗೆ ದಾಖಲಾಗಿದ್ದ ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟಿದ್ದಾರೆ. ರಾಜು ಮೂಗೇರಿ (16) ಮೃತ ದುರ್ದೈವಿ. ಇದ್ರೊಂದಿಗೆ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಡಿಸೆಂಬರ್ 22ರಂದು ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಫೋಟಗೊಂಡು 9 ಜನ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು. ಈ ವರೆಗೆ ಮೂವರು ಮೃತಪಟ್ಟಿದ್ದು, ಆರು ಜನರಿಗೆ ಚಿಕಿತ್ಸೆ ಮುಂದುವರೆದಿದೆ. ಹುಬ್ಬಳ್ಳಿಯ ಉಣಕಲ್ ಸಮೀಪ ಇರುವ ಅಚ್ಚವ್ಚನ ಕಾಲೋನಿಯಲ್ಲಿ ಡಿಸೆಂಬರ್ 22 ರಂದು ಬೆಳಗಿನ ಜಾವ ಸಿಲಿಂಡರ್ ಸ್ಪೋಟಗೊಂಡು 9 ಜನ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಜನರಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗತಿತ್ತು. ಬೆಂಗಳೂರಿನಿಂದ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಗುರುವಾರ (ಡಿ.26) ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದರು. ಇಂದು (ಡಿ.27) ಮತ್ತೊಬ್ಬ ಅಯ್ಯಪ್ಪ ಮಾಲಧಾರಿ ಸಾವಿಗೀಡಾಗಿದ್ದಾರೆ. 8 ವರ್ಷದ ನಿಜಲಿಂಗಪ್ಪ ಬೇಪುರಿ, 18 ವರ್ಷದ ಸಂಜಯ್ ಸವದತ್ತಿ, 16 ವರ್ಷದ ರಾಜು ಮೂಗೇರಿ...
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯಾಧ್ಯಂತ ಇಂದು ಶುಕ್ರವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ, ಶುಕ್ರವಾರ ರಾಜ್ಯದ ಶಾಲಾ ಕಾಲೇಜುಗಳು ಸೇರಿ ಸರ್ಕಾರಿ ಕಚೇರಿಗಳು ತೆರೆದಿರುವುದಿಲ್ಲ ಅಂತಾ ಸರ್ಕಾರ ಆದೇಶ ಹೊರಡಿಸಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್(92) ವಿಧಿವಶರಾಗಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿರೋ ಅವ್ರು ಭಾರತದ 13 ನೇಯ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಂಜಾಬಿನ ಗಾಹ್ ನಲ್ಲಿ ಜನಿಸಿದ್ದ ಮನಮೋಹನ್ ಸಿಂಗ್, 2004 ರಿಂದ 2014 ರವರೆಗೆ ಹತ್ತು ವರ್ಷಗಳ ಕಾಲ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬೆಳಗಾವಿ ನಾಳಿನ ಕಾರ್ಯಕ್ರಮ ರದ್ದು..! ಇನ್ನು ಬೆಳಗಾವಿಯಲ್ಲಿ ನಾಳೆ ನಡೆಯಬೇಕಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ರದ್ದು ಮಾಡಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಇನ್ನು, ಬೆಳಗಾವಿಯಲ್ಲಿರೋ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಮುಖಂಡರು ದೆಹಲಿಯತ್ತ ಪ್ರಯಾಣ ಬೆಳಸಿದ್ದಾರೆ.