Crime News; ಟ್ರಾಕ್ಟರ್ ರೂಟರ್ ನಲ್ಲಿ ಕಾಲು ಸಿಲುಕಿ ಇಡೀ ಕಾಲೇ ಕಟ್ ಆಗಿರೋ ಭೀಕರ ಘಟನೆ ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ ಸಮೀಪದ ಗದ್ದೆಯಲ್ಲಿ ನಡೆದಿದೆ. ಮುಂಡಗೋಡ ತಹಶೀಲ್ದಾರ ಕಚೇರಿಯ ನೆಮ್ಮದಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂಲತಃ ಮಲವಳ್ಳಿ ಗ್ರಾಮದ ತುಕಾರಾಂ ಹನ್ಮಂತಪ್ಪ ಪಾಟೀಲ್(38) ಎಂಬುವವರೇ ಭೀಕರ ಘಟನೆಯಲ್ಲಿ ತಮ್ಮ ಬಲಗಾಲು ಕಳೆದುಕೊಂಡಿದ್ದಾರೆ. ಇಂದು ತಮ್ಮ ಗದ್ದೆಯಲ್ಲಿ ಟ್ರಾಕ್ಟರ್ ರೂಟರ್ ನಿಂದ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ, ಆಕಸ್ಮಿಕವಾಗಿ ಕಾಲು ರೂಟರ್ ನಲ್ಲಿ...
Top Stories
ಮುಂಡಗೋಡ ಪೊಲೀಸ್ರ ಕಾರ್ಯಾಚರಣೆ, ಬ್ಲೂಹಿಲ್ ಹೊಟೇಲ್ ಬಳಿ ಗಾಂಜಾ ದಂಧೆ ಮಾಡುತ್ತಿದ್ದ ವ್ಯಕ್ತಿಯ ಬಂಧನ..!
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ..!
ಅಳ್ವೇಕೋಡಿ ಕಡಲ ತೀರದಲ್ಲಿ ಭೀಕರ ದುರಂತ: ಚಿಪ್ಪೆಕಲ್ಲು ತರಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ಬಲಿ, ಮೂವರು ನಾಪತ್ತೆ
ವಡಗಟ್ಟಾ ಗಾವಠಾಣ ಒತ್ತುವರಿ ತೆರವು ಕಾರ್ಯ ಶುರು..! ಬೇಕಾಬಿಟ್ಟಿ ಜಾಗ ಒತ್ತುವರಿ ಮಾಡಿಕೊಂಡಿದ್ದವರಿಗೆ ಶಾಕ್
ಪಿಐ ರಂಗನಾಥ್ ನೀಲಮ್ಮನವರ್ ಟ್ರಾನ್ಸಫರ್, ರಮೇಶ್ ಹನಾಪುರ ಮುಂಡಗೋಡಿನ ನೂತನ ಪಿಐ..!
ಹುನಗುಂದದಲ್ಲಿ ಮಳೆಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿಗಳು..! ಧರೆಗುರುಳಿದ ಮರಗಳು, ವಿದ್ಯುತ್ ಕಂಬಗಳು..!
ಧರ್ಮಾ ಜಲಾಶಯದ ಕಾಲುವೆಯಲ್ಲಿ ಇಬ್ಬರು ಸಹೋದರ ಬಾಲಕರು ನೀರುಪಾಲು..! ರಜೆಗೆ ಬಂದಿದ್ದವರು ಹೆಣವಾದರು..!
NMD ಹತ್ಯೆ ಕೇಸ್| ಯುಪಿಗೆ ಹೋಗಿ ಪಿಸ್ತೂಲ್ ತಂದಿದ್ದ ಆರೋಪಿಗಳ ಮನೆಗಳ ಮೇಲೆ ಪೊಲೀಸ್ರ ದಾಳಿ..! 7 ತಂಡಗಳಲ್ಲಿ ಪೊಲೀಸ್ರ ಖಡಕ್ ಸರ್ಚಿಂಗ್..!
NMD ಜಮೀರ್ ಹತ್ಯೆ ಕೇಸ್, ಮತ್ತೆ ನಾಲ್ವರು ಆರೋಪಿಗಳು ಅಂದರ್..! 11 ಕ್ಕೆ ಏರಿದ ಆರೋಪಿಗಳ ಸಂಖ್ಯೆ..!
ಮುಂಡಗೋಡಿನ ಯರೈಬೈಲ್ DyRFO, ಉಗ್ನಿಕೇರಿ ಬೀಟ್ ಫಾರೇಸ್ಟ್ ಗಾರ್ಡ್ ವಿರುದ್ಧ ಲೋಕಾಯುಕ್ತ ಕೇಸ್, FIR ದಾಖಲು..! ಅನ್ನದಾತನ ಹತ್ರ ಲಂಚ ಕೇಳಿದ್ನಾ ಆ ಅರಣ್ಯ ಅಧಿಕಾರಿ..?
ಟಿಬೇಟಿಗ ಲಾಮಾನ ಹತ್ಯೆ ಕೇಸ್, ಮೂವರು ಆರೋಪಿಗಳು ಅಂದರ್..! ಕಬ್ಬು ಕಟಾವ್ ಮಾಡೋ ಗ್ಯಾಂಗ್ ಈ ಹತ್ಯೆ ಮಾಡಿದ್ದು ಯಾಕೆ..?
ಕೇರಳಂ ಹಾಗೂ ರಾಜ್ಯದ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಹಿನ್ನೆಲೆ..! ಮುಂಡಗೋಡ ಕೈ ಕಾರ್ಯಕರ್ತರ ಸಂಭ್ರಮ..!
ಪಂಚರಾಜ್ಯ ಚುನಾವಣೆ; 3 ರಾಜ್ಯಗಳಲ್ಲಿ ಬಿಜೆಪಿ ಗೆಲುವು, ಮುಂಡಗೋಡಿನಲ್ಲಿ ಸಂಭ್ರಮಾಚರಣೆ..!
ಹುನಗುಂದದ ಮಹಿಳೆ ಹರಿಹರದಲ್ಲಿ ನಾಪತ್ತೆ, ಇವ್ರು ಕಂಡಲ್ಲಿ ಮಾಹಿತಿ ನೀಡಲು ಮನವಿ..!
ಧಾರವಾಡದಲ್ಲಿ ಮುಂಡಗೋಡ ಟಿಬೇಟಿಗ ಲಾಮಾನ ಭೀಕರ ಹತ್ಯೆ..? ಕಾಲು ಕಟ್ಟಿ ಭೀಕರವಾಗಿ ಕೊಂದು ಬೀಸಾಕಿದ್ರಾ ಹಂತಕರು..?
ಮುಂಡಗೋಡಿನಲ್ಲಿ ಸಿಲಿಂಡರಿಗಾಗಿ ಪ್ರತಿಭಟನೆ, ಬೆಳ್ಳಂ ಬೆಳಿಗ್ಗೆ HP ಗ್ಯಾಸ್ ಗೋಡೌನ ಎದುರು ಸಾರ್ವಜನಿಕರ ಆಕ್ರೋಶ..!
ಕುಡಿಯುವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಜಿಪಂ ಸಿಇಓ ಡಾ.ದಿಲೀಷ್ ಶಶಿ
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, NMD ಜಮೀರ್ ದರ್ಗಾವಾಲೆ ಭೀಕರ ಹತ್ಯೆ ಕೇಸ್, ಐವರು ಆರೋಪಿಗಳ ಬಂಧನ..!
ಮುಂಡಗೋಡಿನಲ್ಲಿ NMD ಜಮೀರನ ಭೀಕರ ಹತ್ಯೆ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವದ ದೃಷ್ಯಗಳಿವು
Tag: Police news
ಮುಂಡಗೋಡ ಪೊಲೀಸರ ನೇತೃತ್ವದಲ್ಲಿ ಏಕತಾ ವಾಕ್ ಥಾನ್..! ಸರ್ದಾರ್ ಪಟೇಲರ ಜನ್ಮದಿನದಂದು ಏಕತಾ ದಿವಸ್ ಆಚರಣೆ..!
Unity Walk Thon; ಮುಂಡಗೋಡ ಪೊಲೀಸ್ ಠಾಣಾ ವತಿಯಿಂದ ಸರ್ದಾರ ವಲ್ಲಭಾಯಿ ಪಟೇಲ್ ರವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸ ನಿಮಿತ್ತ ಏಕತಾ ವಾಕ್ ಥಾನ್ ಆಚರಿಸಲಾಯಿತು. ಮುಂಡಗೋಡ ಪೊಲೀಸ್ ಠಾಣೆಯ ಪಿಐ ರಂಗನಾಥ್ ನೀಲಮ್ಮನವರ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಭಾಗವಹಿಸಿದ್ದರು. ರನ್ನ ಫಾರ್ ಯುನಿಟಿ ಎಂಬ ಘೋಷ ವಾಕ್ಯದಡಿ ಠಾಣೆಯಿಂದ ಬಂಕಾಪುರ ರಸ್ತೆ- ಕಂಬಾರಗಟ್ಟಿ ಪ್ಲಾಟ್- ಟಿ,ಡಿ,ಬಿ ರೋಡ-ಹುಬ್ಬಳ್ಳಿ ರಸ್ತೆ-ಬಸವನಬೀದಿ- ಬನ್ನಿಕಟ್ಟಾ-ಶಿವಾಜಿ ಸರ್ಕಲ್ ಮುಖಾಂತರ ಪೊಲೀಸ್ ಠಾಣೆಗೆ...
ಹುಬ್ಬಳ್ಳಿಯಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ: ಹಳೇ ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಅಟ್ಯಾಕ್..!
Crime News; ಹುಬ್ಬಳ್ಳಿ: ಕಳೆದ ಮೂರು ದಿನಗಳ ಹಿಂದೆಯಷ್ಟೆ ಪುಡಿ ರೌಡಿಗಳ ಅಟ್ಟಹಾಸದಿಂದ ಓರ್ವ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದ ಪ್ರಕರಣ ನಡೆದ ಬೆನ್ನಲ್ಲೇ ಇನ್ನೊಂದು ಚಾಕು ಇರಿತ ಪ್ರಕರಣ ತಡ ರಾತ್ರಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದ್ದು ನಗರದ ಯಲ್ಲಾಪುರ ಓಣಿಯ ಅಫ್ತಾಬ್ ಎಂಬ ಯುವಕನಿಗೆ ನಾಲೈದು ಜನರ ಗುಂಪೊಂದು ಚಾಕು ಇರಿದು ಪರಾರಿಯಾಗಿದ್ದಾರೆ. ಯಲ್ಲಾಪುರ ಓಣಿಯ ಬುಡ್ಡು ಪಾನ್...
ಇಂದೂರು ಕೊಪ್ಪದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣು..!
Crime News; ಮುಂಡಗೋಡ ತಾಲೂಕಿನ ಕೊಪ್ಪ (ಇಂದೂರು) ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪ ಗ್ರಾಮದ ರವಿ ಯಲ್ಲಪ್ಪ ಎಗೇನವರ (34) ಎಂಬುವವನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿಯಾಗಿದ್ದಾನೆ. ಇಂದು ಬೆಳಿಗ್ಗೆ ಪಕ್ಕದ ಮನೇಲಿ ಇದ್ದ ತಾಯಿ ಬಾಗಿಲು ತೆಗೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬೆಳಕಿಗೆ ಬಂದಿದೆ. ಆದ್ರೆ, ನೇಣಿಗೆ ಶರಣಾಗಿದ್ದು ಯಾವಾಗ ಅನ್ನೋದು ಖಚಿತವಾಗಿಲ್ಲ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಳೂರು- ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೋ ನಡುವೆ ಅಪಘಾತ, ಐವರಿಗೆ ಸಣ್ಣಪುಟ್ಟ ಗಾಯ..!
Accident News; ಮುಂಡಗೋಡ ತಾಲೂಕಿನ ಹಳೂರು ಹಾಗೂ ಕ್ಯಾಸನಕೇರಿ ರಸ್ತೆಯಲ್ಲಿ ಟಾಟಾ ಎಸ್ ಹಾಗೂ ಆಟೊಇ ನಡುವೆ ಅಪಘಾತವಾಗಿದೆ. ಪರಿಣಾಮ ಐವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹಳೂರಿನಿಂದ ಕ್ಯಾಸನಕೇರಿಗೆ ಹೋಗುವ ಮಾರ್ಗದಲ್ಲಿ ಓವರ್ ಟೇಕ್ ಮಾಡಲು ಹೋಗಿ ಇಂತಹದ್ದೊಂದು ಅಪಘಾತವಾಗಿದೆ ಅಂತಾ ತಿಳಿದು ಬಂದಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಿರಸಿ ಬಳಿ ಹೋಂ ಸ್ಟೇಯಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಬಂಧನ, ಬಂಧಿತರು ಯಾರ್ಯಾರು ಗೊತ್ತಾ..? ವಿವರ ಇಲ್ಲಿದೆ ನೋಡಿ..!
Police Raid; ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಭೈರುಂಬೆ ಗ್ರಾಮ ಪಂಚಾಯತನ ಅಗಸಾಲ ಗ್ರಾಮದ ವಿ.ಆರ್.ಆರ್ ಹೋಂ ಸ್ಟೇ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಂದರ್ ಬಾಹರ್ ಆಟ ಆಡುತ್ತಿದ್ದವರನ್ನು ಬಂಧಿಸಿದ್ದಾರೆ. ಬಂಧಿತರೇಲ್ಲರೂ ಬಹುತೇಕ ಹಾವೇರಿ, ದಾವಣಗೇರೆ, ಶಿವಮೊಗ್ಗ ಜಿಲ್ಲೆಯವರಾಗಿದ್ದು, ಹಾವೇರಿ ಮೂಲದ ವೈದ್ಯರೊಬ್ಬರ ಮಾಲೀಕತ್ವದ ಹೋಂ ಸ್ಟೇ ಹೆಸರಲ್ಲಿ ಇಂತಹದ್ದೊಂದು ಅಕ್ರಮ ದಂಧೆ ನಡೀತಿತ್ತು ಎನ್ನಲಾಗಿದೆ. ಇವ್ರೇ ಬಂಧಿತರಾದ ಆರೋಪಿಗಳು.! 1.ದಾವಣಗೇರೆ ಜಿಲ್ಲೆಯ ಹರಿಹರ ತಾಲೂಕಿನ ಅನೀಲಕುಮಾರ ಜಿ.ಆರ್. ರುದ್ರಪ್ಪ ರೆಡ್ಡಿ(30), 2. ಹಾವೇರಿ...
ಕೃಷಿ ಹೊಂಡದಲ್ಲಿ ಬಿದ್ದ ತಂದೆ ಹಾಗು ಇಬ್ಬರು ಮಕ್ಕಳು, ಓರ್ವ ಬಚಾವ್, ತಂದೆ-ಮಗ ಸಾವು..!
Father And Son Death; ಸವದತ್ತಿ; ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಸಾವು ಕಂಡ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ನಡೆದಿದೆ. ತಂದೆ ಬಸವರಾಜ್ ಕೆಂಗೇರಿ (40), ಮಗ ಧರೆಪ್ಪ ಕೆಂಗೇರಿ (14) ಮೃತ ದುರ್ದೈವಿಗಳಾಗಿದ್ದಾರೆ. ಬಸವರಾಜ್ ಕೆಂಗೇರಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ನಿವಾಸಿ. ಹೆಂಡತಿ ಊರಲ್ಲಿರುವ ಜಮೀನಿಗೆ ಕೀಟನಾಶಕ ಹೊಡೆಯಲು ಹೋಗಿದ್ದ ಬಸವರಾಜ್, ಈ ವೇಳೆ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ಕಾಲು ಜಾರಿ ಬಿದ್ದ ಮಗ...
ಮುಂಡಗೋಡಿನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ..! ಟ್ಯಾಕ್ಸಿ ಚಾಲಕರಿಗೆ ಪಾಠ ಮಾಡಿದ ಡಿವೈಎಸ್ಪಿ ಮೇಡಂ..!
Police News : ಮುಂಡಗೋಡ ಪಟ್ಟಣದಲ್ಲಿ ಪೊಲೀಸರು ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ, ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ ರವರ ನೇತೃತ್ವದಲ್ಲಿ, ಆಟೋ ಮತ್ತು ಟ್ಯಾಕ್ಸಿ ಚಾಲಕರ ರ್ಯಾಲಿಯನ್ನು ಕೈಗೊಂಡು ಮಾದಕ ದ್ರವ್ಯದ ದುಷ್ಪರಿಣಾಮಗಳು & ರಸ್ತೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ರು. ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಮೇಡಮ್ಮು, ಮಾದಕ ದ್ರವ್ಯಗಳ ಬಳಕೆಯಿಂದ ಸಂಭವಿಸಬಹುದಾದ ದುರಂತಗಳ ಬಗ್ಗೆ, ಟ್ಯಾಕ್ಸಿ ಚಾಲಕರಿಗೆ ತಿಳುವಳಿಕೆ ನೀಡಿದ್ರು. ಈ ವೇಳೆ ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್,...
ಇಬ್ಬರ ಸಾವಿಗೆ ಕಾರಣವಾಗಿದ್ದವನ ಹೆಡೆಮುರಿ ಕಟ್ಟಿದ ಯಲ್ಲಾಪುರ ಪೊಲೀಸ್ರು..!
Yallapur Crime News; ಯಲ್ಲಾಪುರ ತಾಲೂಕಿನ ಚಿಕ್ಕಮಾವಳ್ಳಿಯ ಇಂಡಿಯಾ ಗೇಟ್ ಹೋಟೆಲ ಎದುರು ಬೈಕಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸಾವು ಕಂಡಿದ್ದ ಘಟನೆಯಲ್ಲಿ, ಡಿಕ್ಕಿ ಹೊಡೆದು ಪರಾರಿಯಾಗಿ ತಲೆಮರೆಸಿಕೊಂಡಿದ್ದ ವಾಹನ ಚಾಲಕನನ್ನು ಯಲ್ಲಾಪುರ ಪೊಲೀಸ್ರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಮಿರ್ಜಾಪುರಿನ ಶೀತಲಾಪ್ರಸಾದ ಅಲಗೂ ಬಿಂದ್ (49) ಎಂಬುವ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಅಪಘಾತದಲ್ಲಿ ಧಾರವಾಡ ಜಿಲ್ಲೆ ಕಲಘಟಗಿಯ ಬೈಕ್ ಸವಾರ, ರಾಮು ಮಾರುತಿ ಗುಜಲೂರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿಯ ಸವಾರ ವಿಷ್ಣು...
Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ವೈಜಿ ಗುಡ್ಡ ಜಲಾಶಯದ ಹಿನ್ನೀರಿನಲ್ಲಿ ಮೂವರು ಯುವತಿಯರು ಮುಳುಗಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅವರ ಜತೆಗಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜಲಾಶಯದ ಹಿನೀರಿನಲ್ಲಿ ಮುಳುಗಿದವರನ್ನು ಬೆಂಗಳೂರು ಮೂಲದ ಭಾರ್ಗವಿ (22) ಮಧು (25) ಹಾಗೂ ರಮ್ಯಾ (20) ಎಂದು ಗುರುತಿಸಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ವೈ.ಜಿ. ಗುಡ್ಡ ಗ್ರಾಮದ ಸಂಬಂಧಿಕರ ಮನೆಗೆ ಯುವತಿಯರು ಬಂದಿದ್ದು, ಮಧ್ಯಾಹ್ನ ಮನೆಯಿಂದ ಏಳು ಮಂದಿ ಸಮೀಪದ ಜಲಾಶಯಕ್ಕೆ ಭೇಟಿ ನೀಡಿದ್ದರು. ಹಿನ್ನೀರಿಗೆ ಇಳಿದು...








