ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರ: ಅಖಾಡಕ್ಕಿಳಿದ ಮುಂಡಗೋಡ ಮೂಲದ ಸಂತೋಷ್ ಎಂ. ವೆರ್ಣೇಕರ್

ಕಾರವಾರ: ಗದಗ, ಧಾರವಾಡ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವ ‘ಕರ್ನಾಟಕ ಪಶ್ಚಿಮ ಪದವೀಧರರ ವಿಧಾನ ಪರಿಷತ್ ಕ್ಷೇತ್ರ’ದ ಚುನಾವಣೆಗೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪದ ವಕೀಲರಾದ ಸಂತೋಷ್ ಮನೋಹರ ವರ್ಣೇಕರ್ ಅವರು ಸ್ಪರ್ಧಿಸುತ್ತಿದ್ದಾರೆ. ಮುಂಬರುವ 2026ರ ಅಕ್ಟೋಬರ್ 23 ರಂದು ಈ ಕ್ಷೇತ್ರದ ಮತದಾನ ನಡೆಯಲಿದ್ದು, ಅವರು ಸ್ಪರ್ಧೆಯಿಳಿದು ತಮ್ಮ ಪ್ರಣಾಳಿಕೆ ಮತ್ತು ಧ್ವನಿ/ಗುರಿಗಳನ್ನು ಹಂಚಿಕೊಂಡಿದ್ದಾರೆ.

​ಸ್ಪರ್ಧೆಯ ಉದ್ದೇಶ:
​ಪದವಿ ಮುಗಿಸಿದ ನಂತರ ಯುವಕರು ಎದುರಿಸುತ್ತಿರುವ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿಯ ಕೊರತೆ, ಉದ್ಯೋಗಾವಕಾಶಗಳ ಕೊರತೆ ಮತ್ತು ಸಾಮಾಜಿಕ ಗೌರವದ ಕೊರತೆಗಳನ್ನು ನೀಗಿಸಿ, ಅರ್ಹ ಪದವೀಧರರಿಗೆ ಸೂಕ್ತ ಸ್ಥಾನಮಾನ ಹಾಗೂ ಗೌರವ ತಂದುಕೊಡುವ ನಿಟ್ಟಿನಲ್ಲಿ ತಾವು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಸಂತೋಷ್ ವರ್ಣೇಕರ್ ತಿಳಿಸಿದ್ದಾರೆ.

​ಮುಖ್ಯ ಧೈಯ ಮತ್ತು ಗುರಿಗಳು (ಪ್ರಣಾಳಿಕೆ):
​ಕೌಶಲ್ಯ ಅಭಿವೃದ್ಧಿ ಹಾಗೂ ಉದ್ಯೋಗ ಭದ್ರತೆ: ನಿರುದ್ಯೋಗಿ ಪದವೀಧರರಿಗೆ ಸ್ವಯಂ ಉದ್ಯೋಗಕ್ಕಾಗಿ ಕೌಶಲ್ಯಾಭಿವೃದ್ಧಿ ತರಬೇತಿ (AI ಸೇರಿದಂತೆ) ನೀಡುವುದು, ಸರ್ಕಾರಿ ಸೌಲಭ್ಯಗಳಲ್ಲಿ ಆದ್ಯತೆ ನೀಡುವುದು ಹಾಗೂ ಸೇವಾ ಭದ್ರತೆಗೆ ಸರ್ಕಾರವನ್ನು ಒತ್ತಾಯಿಸುವುದು.

​ಬಡ್ಡಿ ರಹಿತ ಸಾಲ: ಸ್ವಯಂ ಉದ್ಯೋಗಕ್ಕಾಗಿ ಪದವೀಧರರಿಗೆ ಬಡ್ಡಿ ರಹಿತ ಸಾಲ ಯೋಜನೆ ಒದಗಿಸಲು ಹೋರಾಟ ನಡೆಸುವುದು.
​ಉದ್ಯೋಗ ಮೇಳಗಳು: ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಪ್ರತಿ ವರ್ಷವೂ ಉದ್ಯೋಗ ಮೇಳಗಳನ್ನು ಆಯೋಜಿಸುವುದು.

​ಕೃಷಿ ತರಬೇತಿ ಹಾಗೂ ಸಾಲ ಸೌಲಭ್ಯ ಪದವೀಧರ ರೈತರಿಗೆ ಸಾವಯವ ಹಾಗೂ ಸಮಗ್ರ ಕೃಷಿ, ಹೈನುಗಾರಿಕೆ, ಕುರಿ/ಕೋಳಿ ಸಾಕಾಣಿಕೆ, ರೇಷ್ಮೆ, ಅಣಬೆ, ಮೀನುಗಾರಿಕೆ ಮತ್ತು ಮುತ್ತಿನ ಕೃಷಿ ತರಬೇತಿಯನ್ನು ಉಚಿತವಾಗಿ ನೀಡುವುದು. ಜೊತೆಗೆ ಪದವೀಧರ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಸಬ್ಸಿಡಿ ಸಹಿತ ಬಡ್ಡಿರಹಿತ ಸಾಲ ಒದಗಿಸುವುದು.

​ಸ್ಟೈಪೆಂಡ್/ಸಹಾಯಧನ: ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಶಿಕ್ಷಕ ವೃತ್ತಿ ಶಿಕ್ಷಣ ಪಡೆದ ಪದವೀಧರರಿಗೆ ಪದವಿ ನಂತರ ಕನಿಷ್ಠ 2 ವರ್ಷಗಳ ಕಾಲ ತಿಂಗಳಿಗೆ ₹10,000/- ನೆರವು/ಸಹಾಯಧನ ನೀಡಲು ಪ್ರಯತ್ನಿಸುವುದು.

​ಸರ್ಕಾರಿ ನೌಕರರ ಬೇಡಿಕೆಗಳು: ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ, KAMS ನಲ್ಲಿ ಮಾರ್ಪಾಡು ಹಾಗೂ ಕಾಲ-ಕಾಲಕ್ಕೆ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸುವುದು.

​ಪಶ್ಚಿಮ ಪದವೀಧರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಪದವೀಧರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪದವೀಧರ ಮತದಾರರು ತಮಗೆ ಮೊದಲ (1) ಆದ್ಯತೆಯ ಮತ ನೀಡಿ ಗೆಲ್ಲಿಸಬೇಕಾಗಿ ಅವರು ವಿನಂತಿಸಿಕೊಂಡಿದ್ದಾರೆ.