ಮುಂಡಗೋಡ- ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಯೊಬ್ರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ..

ಅಂಬ್ಯಲೆನ್ಸ್ ನಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದಳು

ಮುಂಡಗೋಡ ತಾಲೂಕಿನ ಅಗಡಿ ಗ್ರಾಮದ
22 ವರ್ಷ ವಯಸ್ಸಿನ ಲಕ್ಷ್ಮೀ ಸುನಿಲ್ ಲಮಾಣಿ ಎಂಬುವರಿಗೆ ಇವತ್ತು ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ 108 ಅಂಬುಲೆನ್ಸ್ ಮೂಲಕ ಮುಂಡಗೋಡ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮದ್ಯೆ ಹುನಗುಂದ ಕ್ರಾಸ್ ಬಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ..
ಇದು ಇವ್ರಿಗೆ ಎರಡನೇಯ ಹೆರಿಗೆಯಾಗಿದ್ದು ಮಗು ಆರೋಗ್ಯವಾಗಿದೆ..

ಈ ವೇಳೆ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸೂಕ್ತ ಚಿಕಿತ್ಸೆ ನೀಡಿ ಹೆರಿಗೆ ಮಾಡಿಸಿಕೊಂಡರು.. ಚಾಲಕ ಭೀಮಪ್ಪ ಬಾರಕೇರ್, ಆಶಾ ಕಾರ್ಯಕರ್ತೆ ನೀಲವ್ವ ಲಮಾಣಿ ಇದ್ದರು.

 

 

error: Content is protected !!