ಇಂದಿನಿಂದ SSLC ಪರೀಕ್ಷೆ : ಬೆಳಗಾವಿ ವಿಭಾಗದಿಂದ 2,52,262 ವಿದ್ಯಾರ್ಥಿಗಳು, ಶಿರಸಿ-10172, ಕಾರವಾರ 9706 ವಿದ್ಯಾರ್ಥಿಗಳು..!

ಕಾರವಾರ; ಇಂದಿನಿಂದ ಏಪ್ರಿಲ್ 2 ರ ವರೆಗೆ ನಡೆಯುವ ಪ್ರಸಕ್ತ ಸಾಲಿನ SSLC ಪರೀಕ್ಷೆಗಾಗಿ, ಬೆಳಗಾವಿ ವಿಭಾಗದ 9 ಶೈಕ್ಷಣಿಕ ಜಿಲ್ಲೆಗಳ, 792 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2,52,262 ವಿದ್ಯಾರ್ಥಿಗಳು ಹಾಜರಾಗಲಿದ್ದು, ಇದಕ್ಕಾಗಿ ವ್ಯಾಪಕ ಮತ್ತು ಅಗತ್ಯ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ಆಯಾ ಜಿಲ್ಲೆಗಳಲ್ಲಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವಲ್ಲಿ ಉಪನಿರ್ದೇಶಕರು(ಆಡಳಿತ)ರವರು ಪರೀಕ್ಷೆಯ ಪಾವಿತ್ರ‍್ಯತೆಯನ್ನು ಕಾಪಾಡಿಕೊಂಡು ಯಾವುದೇ ರೀತಿಯ ಪರೀಕ್ಷಾ ಅವ್ಯವಹಾರ ಹಾಗೂ ಇನ್ನಿತರೆ ಅಹಿತಕರ ಘಟನೆಗಳು ನಡೆಯದಂತೆ ಸಕಲ ಸಿದ್ದತೆಗಳನ್ನು ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳು, ಪರೀಕ್ಷಾ ಕೊಠಡಿಗಳಿಗೆ ವಿದ್ಯಾರ್ಥಿಗಳು, ಸಿಬ್ಬಂದಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಸಿಬ್ಬಂದಿ ಹೊರತುಪಡಿಸಿ ಅನ್ಯ ಅಭ್ಯರ್ಥಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಪ್ರತಿಬಂಧಕಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿಗೊಳಿಸಿರುತ್ತಾರೆ. ಪರೀಕ್ಷಾ ಸಮಯದಲ್ಲಿ ಅಕ್ರಮ ಎಸಗುವರಿಗೆ ಕಠಿಣ ಕ್ರಮ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಅಕ್ರಮ ಎಸಗುವರಿಗೆ ಕಠಿಣ ಕ್ರಮ ಹಾಗೂ ಕ್ರಿಮಿನಲ್ ಕೇಸ್ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.

ಪರೀಕ್ಷಾ ಕೇಂದ್ರಗಳಲ್ಲಿ ವೆಬ್ಕಾಸ್ಟಿಂಗನ್ನು ಕಡ್ಡಾಯಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳಲ್ಲಿ ಸಿಸಿಟಿವಿಯನ್ನು ಅಳವಡಿಸಲಾಗಿದ್ದು, ಆಯಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು/ ಮುಖ್ಯ ಕಾರ್ಯನಿರ್ವಹನಾಧಿಕಾರಿಗಳ ಕಚೇರಿಯಲ್ಲಿ ಪ್ರತಿ ಕೇಂದ್ರದ ವೀಕ್ಷಣೆ ನಡೆಯುತ್ತದೆ.
ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಮೊಬೈಲ್ ಫೋನ್ ಸ್ವಾಧಿನಾಧಿಕಾರಿಯನ್ನು ನೇಮಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಅಭ್ಯರ್ಥಿಯ ಮೊಬೈಲ್ ನಿಂದ ವಾಟ್ಸಪ್ ಅಥವಾ ಇತರೆ ಯಾವುದೇ ಸಾಮಾಜಿಕ ಜಾಣತಾಣಗಳ ಮುಖಾಂತರ ಪ್ರಶ್ನೆಪತ್ರಿಕೆ ಬಹಿರಂಗಗೊAಡಲ್ಲಿ ಸಂಬಂಧಿಸಿದ ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು ಜವಾಬ್ದಾರನ್ನಾಗಿ ಮಾಡಲಾಗುವುದು.

ಪರೀಕ್ಷಾ ಕೇಂದ್ರಗಳಿಗೆ ಬರುವ ವಿದ್ಯಾರ್ಥಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆಯು ಪ್ರಯಾಣದಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರಶ್ನೆ ಪತ್ರಿಕೆಗಳ ವಿತರಣೆ, ಪ್ರತಿ ಕೊಠಡಿಯಲ್ಲಿ ಸಿಸಿಟಿವಿ ವೀಕ್ಷಣೆ ಹಾಗೂ ಜಿಲ್ಲಾ, ರಾಜ್ಯ ಹಂತದಿಂದ ಪ್ರತಿ ಕೇಂದ್ರದ ಮೇಲೆ ಕಣ್ಣಗಾವಲು ಇರುತ್ತದೆ.
ಈ ಬಾರಿ ಪರೀಕ್ಷೆಗೆ ಇಲಾಖೆ ಹಾಗೂ ವಿದ್ಯಾರ್ಥಿಗಳು ಸಂಪೂರ್ಣ ಸಿದ್ದರಾಗಿದ್ದು, ಪರೀಕ್ಷಾ ಮಂಡಳಿಯು ಬಿಡುಗಡೆ ಮಾಡಿದ ನೀಲ ನಕ್ಷೆಯ ಪ್ರಕಾರ ಪ್ರಶ್ನೆಗಳು, 4 ಮಾದರಿ ಪ್ರಶ್ನೆ ಪತ್ರಿಕೆಗಳು, ಪ್ರತಿ ಪಾಠದ ಎಲ್ಲಾ ಸಂಭವನೀಯ ಪ್ರಶ್ನೆಗಳ ಕೋಠಿ (ಐಃಂ) ಕುರಿತು ವಿದ್ಯಾರ್ಥಿಗಳಿಗೆ ಸಿದ್ದತೆ ಮಾಡಲಾಗಿದೆ. 3 ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗಿದೆ. ಮಿಷನ್ 40+ನ್ನು ಜಾರಿಗೊಳಿಸಲಾಗಿದೆ.

ಇಲಾಖೆಯ ಈ ಬಾರಿ ಪರೀಕ್ಷೆಯ ಪೂರ್ವ ತಯಾರಿಯಲ್ಲಿ ವಿದ್ಯಾರ್ಥಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪರೀಕ್ಷಾ ಭಯಬೇಡ , ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ, ಪರೀಕ್ಷಾ ಅಕ್ರಮ ಹಾಗೂ ಸುಳ್ಳು ಸುದ್ದಿಗಳ ಬಗ್ಗೆ ಎಚ್ಚರದಿಂದಿರಿ, ಒತ್ತಡ ಮುಕ್ತರಾಗಿ, ಪರೀಕ್ಷೆಯನ್ನು ಸಂಭ್ರಮಿಸಿ, ಎಂದು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದೆ ಎಂದು ತಿಳಿಸಿದ್ದಾರೆ.

ನೋಂದಣಿಯಾದ ವಿದ್ಯಾರ್ಥಿಗಳ ಸಂಖ್ಯೆ
1 ಬಾಗಲಕೋಟ 34578
2 ಬೆಳಗಾವಿ 34565
3 ಚಿಕ್ಕೋಡಿ 48059
4 ಧಾರವಾಡ 27993
5 ಗದಗ 17188
6 ಹಾವೇರಿ 23348
7 ಶಿರಸಿ 10172
8 ಕಾರವಾರ 9706
9 ವಿಜಯಪುರ 46653