ಮುಂಡಗೋಡಿನಲ್ಲಿ ಬಡವರ ರಕ್ತ ಹೀರುವ, ಬಡವರ ಜೀವದ ಜೊತೆ ಚೆಲ್ಲಾಟವಾಡುವ ನಕಲಿ ಡಾಕ್ಟರುಗಳ ನಕಲಿ ಕ್ಲಿನಿಕ್ ಗಳ ಮೇಲೆ ಆರೋಗ್ಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪರಿಣಾಮ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ “ಮೂಲವ್ಯಾಧಿ” ಡಾಕ್ಟರ್ ನ ನಕಲಿ ಕ್ಲಿನಿಕ್ ಗೆ ಬೀಗ ಜಡೆದಿದೆ. ಲೋಕನಾಥನ ನಕಲಿ ಲೋಕವನ್ನು ಬಂದ್ ಮಾಡಲಾಗಿದೆ. ಆದ್ರೇ ಇದು ಇವತ್ತಿಗೆ ಮಾತ್ರ ಅನ್ನೋದು ಬೇರೆ ಮಾತು..! ಯಾಕಂದ್ರೆ, ಇದೇಲ್ಲ ನಾಮಕೆ ವಾಸ್ತೆ ಸರ್..!

ಇನ್ನು, ಬಂಕಾಪುರ ರಸ್ತೆಯಲ್ಲಿ ತನ್ನ ಹೆಂಡತಿಯ ಲೈಸೆನ್ಸ್ ನೊಂದಿಗೆ ದೊಡ್ಡದೊಂದು ಕ್ಲಿನಿಕ್ ತೆರೆದುಕೊಂಡು, ಉದ್ದುದ್ದ ಇಂಜೆಕ್ಷನ್ ಕೊಟ್ಟು ಪ್ಯಾರಾಲಿಸಿಸ್ ಕಾಯಿಲೆಯನ್ನೇ ಬಂಡವಾಳ ಮಾಡಿಕೊಂಡು ಬಡರೋಗಿಗಳಿಗೆ ಉಂಡೆ ತಿನ್ನಿಸುತ್ತಿರೋ ನಕಲಿ ಡಾಕ್ಟರ್ ನ ಬಂಡವಾಳ ಬಯಲು ಮಾಡಲು ಹೋಗಿದ್ದ ವೈದ್ಯಾಧಿಕಾರಿಗಳು ಬರಿಗೈಯಲ್ಲಿ ವಾಪಸ್ ಬಂದಿದ್ದಾರೆ. ಅದ್ಯಾವ “ನಾಲಾಯಕ” ಆ ಫೇಕು ಡಾಕ್ಟರನಿಗೆ ಮೊದಲೇ ಬಾತ್ಮಿ ಕೊಟ್ಟಿದ್ದನೋ ಗೊತ್ತಿಲ್ಲ. ದಾಳಿ ನಡೀತಿದೆ ಅಂತ ಮೊದಲೇ ತಿಳಿದುಕೊಂಡ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ, ಅಲ್ಲಿಯೂ ಕೂಡ ಆ ಫೇಕು ಡಾಕ್ಟರನಿಗೆ ನೋಟೀಸು ನೀಡಿ ಬಂದಿದ್ದಾರೆ ಅಧಿಕಾರಿಗಳು. ಆದ್ರೆ, ಇದೂ ಕೂಡ ಇವತ್ತಿನ ದೇಕರೇಕಿ ಸಲುವಾಗಿ ಅಷ್ಟೇನಾ ಅನ್ನೋ ಅನುಮಾನವಿದೆ. ಯಾಕಂದ್ರೆ ನಾಳೆ ಬೆಳಿಗ್ಗೆ ಮತ್ತದೇ ಫೇಕು ಡಾಕ್ಟರ್ ಬಡ ರೋಗಿಗಳ ರಕ್ತ ಹೀರಲು ರೆಡಿಯಾಗಿ ಕೂತಿರ್ತಾನೆ. ಅಷ್ಟೆ.
ತಾಲೂಕಿನಲ್ಲಿ ಹೆಜ್ಜೆ ಹೆಜ್ಜೆಗೂ ನಕಲಿಗಳು..!
ಅಸಲು, ಮುಂಡಗೋಡ ತಾಲೂಕಿನ ಹಳ್ಳಿಗಳ ಪ್ರತೀ ಗಲ್ಲಿಗಳಲ್ಲೂ ನಾಯಿ ಕೊಡೆಗಳಂತೆ, ನಕಲಿ ಡಾಕ್ಟರುಗಳು ನಕಲಿ ಅಡ್ಡೆಗಳನ್ನು ತೆರೆದುಕೊಂಡು ಕೂತಿದ್ದಾರೆ. ನಿಜ ಅಂದ್ರೆ, ಇವ್ರೇಲ್ಲ ಇಲ್ಲಿನ, ಆರೋಗ್ಯ ಅಧಿಕಾರಿಗಳ ಕಣ್ಣಿಗೆ ಬೀಳೋದೇ ಇಲ್ಲವಾ..? ಅಥವಾ ಕಣ್ಣಿದ್ದು ನಮಗ್ಯಾಕೆ ಬೇಕು ಇದೇಲ್ಲ ಅಂತಾ ಬೆಪ್ಪಗಿದ್ದಾರಾ..? ಅಥವಾ ಆಂತಹ ನಕಲಿ ಡಾಕ್ಟರುಗಳೇಲ್ಲ ನಮ್ಮ ಜಿಲ್ಲೆಯ ಆರೋಗ್ಯ ಅಧಿಕಾರಿಗಳಿಗೆ ATM ಆಗಿದ್ದಾರಾ..? ಒಂದೂ ಅರ್ಥ ಆಗ್ತಿಲ್ಲ.
ಯಾಕಂದ್ರೆ, ನಮ್ಮ ಮುಂಡಗೋಡ ತಾಲೂಕಿನಲ್ಲಿ ಏಳನೇ ತರಗತಿ ಫೇಲ್ ಆದವನೂ ಕೂಡ ಡಾಕ್ಟರ್ ಆಗಿ ಇಂಜೆಕ್ಷನ್ ಮಾಡ್ತಿದಾನೆ. ಕ್ಲಿನಿಕ್ ಇಟ್ಕೊಂಡು ಬಡ ಜೀವಗಳ ಜೊತೆ ಚೆಲ್ಲಾಟ ಆಡ್ತಿದಾನೆ. ಮುಂಡಗೋಡಿನ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಗೇಟ್ ಕೀಪರ್ ಆಗಿ ಕೆಲಸ ಮಾಡಿದ್ದವರು ಇವಾಗ ಸ್ಟೆತೆಸ್ಕೋಪ್ ಕೊರಳಲ್ಲಿ ಹಾಕ್ಕೊಂಡು ಡಾಕ್ಟರ್ ಎಂಬ ಫೋಸು ಕೊಡ್ತಿದಾರೆ. ಆದ್ರೆ ಇದೇಲ್ಲ, ಪಾಪ ಇಲ್ಲಿನ ಆರೋಗ್ಯ ಅಧಿಕಾರಿಗಳಿಗೆ ಕಾಣುತ್ತಲೇ ಇಲ್ಲ. ಹೀಗಾಗಿ, ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಈ ಆರೋಗ್ಯ ಅಧಿಕಾರಿಗಳ ಮೇಲೆ ಜನ ನಂಬಿಕೆನೇ ಕಳೆದುಕೊಂಡಿದ್ದಾರೆ. ಅನುಮಾನದಿಂದ ನೋಡ್ತಿದಾರೆ.
ದೂರು ಕೊಟ್ಟಾಗ ಮಾತ್ರ ನೆಪಕ್ಕೆ..!
ದೂರು ಕೊಟ್ಟಾಗ ಒಂದಿಷ್ಟು ದಾಳಿ ಅಂತಾ ಫೋಸು ಕೊಡೋದು ಬಿಟ್ರೆ ಬೇರೆ ಏನೂ ಮಾಡುತ್ತಿಲ್ಲ. ಇದೇಲ್ಲ ಇವರ ನೆರಳಲ್ಲೇ ನಡೀತಿದೆ ಅನ್ನೊದು ಸಾರ್ವಜನಿಕರ ಆಕ್ರೋಶ. ತಾಲೂಕಿನ ಪ್ರತೀ ನಕಲೀ ಕ್ಲಿನಿಕ್ ಗಳು ಹಾಗೂ ಅಲ್ಲಿ ಫೇಕು ಡಾಕ್ಟರುಗಳ ಎಲ್ಲ ಅಸಲೀತನಗಳೂ ಈ “ದಾಳಿ” ಕೋರ ಅಧಿಕಾರಿಗಳಿಗೆ ಗೊತ್ತಿದೆ. ಪಿನ್ ಟೂ ಪಿನ್ ಮಾಹಿತಿ ಇದೆ. ಆದ್ರೆ ಯಾವಾಗಾದರೊಮ್ಮೆ ಇಂತಹ “ದಾಳಿ” ಮಾಡಿ ಕೈತೊಳೆದುಕೊಳ್ತಾರೆ. ಅಷ್ಟೆ. ಇಲ್ಲಿ, ನಕಲಿ ಡಾಕ್ಟರುಗಳ ನಕಲೀತನಗಳಿಗೆ ಬಲಿಯಾಗ್ತಿರೋರು ಮಾತ್ರ ಬಡರೋಗಿಗಳೇ ಹೊರತು “ದಾಳಿ”ಕೋರ ಅಧಿಕಾರಿಗಳು ಅಲ್ಲವಲ್ಲ..? ಹೀಗಾಗಿ ನಮ್ಮ ಮುಂಡಗೋಡಿನ ಆರೋಗ್ಯ ವ್ಯವಸ್ಥೆ ಅನ್ನೋದು ಹಡಾಲೆದ್ದು ಹೋಗಿದೆ ಅಂತಿದಾರೆ ಜನ. ಎಲ್ಲವೂ ATM ಗಳ ಮಹಿಮೆ ಕಣ್ರಿ.!
