ಪಾಳಾ ಬಳಿ ಬೈಕ್ ಹಾಗೂ ಭಾರತ್ ಬೇಂಜ್ ನಡುವೆ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!


ಮುಂಡಗೋಡ ತಾಲೂಕಿನ ಪಾಳಾ ಸಮೀಪದ ಖಬರಸ್ಥಾ‌ನ ಬಳಿ ಭೀಕರ ಅಪಘಾತವಾಗಿದೆ‌. ಬೈಕ್ ಹಾಗೂ ಭಾರತ್ ಬೆಂಜ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಸವಾರ ಗಂಭೀರ ಗಾಯಗೊಂಡಿದ್ದಾನೆ.

ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದ
ಯಲ್ಲಪ್ಪ ಕೋಡದ್ (65) ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಇನ್ನು, ವಿಠ್ಠಲ್ ಎಂಬುವವನು ಗಂಭೀರ ಗಾಯಗೊಂಡವ ವ್ಯಕ್ತಿಯಾಗಿದ್ದಾನೆ. ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.