ಮುಂಡಗೋಡ: ಟೇಲರಿಂಗ್ ಉದ್ಯೋಗವನ್ನು ಆರ್ಥಿಕ ಚಟುವಟಿಕೆಯನ್ನಾಗಿ ಮಾಡಿಕೊಳ್ಳುವಂತೆ CBDRCT ಸಂಸ್ಥೆ ನಿರ್ದೇಶಕ, ಪ್ರಶಾಂತ ಬಡ್ಡಿ ಟೇಲರಿಂಗ್ ಶಿಬಿರಾರ್ಥಿಗಳಿಗೆ ಕರೆ ನೀಡಿದ್ರು.

ಅವ್ರು ತಾಲೂಕಿನ ಹುನಗುಂದದ ವಿರಕ್ತಮಠದಲ್ಲಿ ದೇಶಪಾಂಡೆ ಆರ್ ಶೆಟಿ ಸಂಸ್ಥೆಯ ನೇತೃತ್ವದಲ್ಲಿ ಆಯೋಜಿಸಿದ್ದ, ಒಂದು ತಿಂಗಳಿನ ಟೇಲರಿಂಗ್ ತರಬೇತಿ ಶಿಬಿರದ, ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಹೊಲಿಗೆ ತರಬೇತಿ ಪಡೆದ ಮಹಿಳೆಯರು, ಯುವತಿಯರು, ಹೊಸ ಹೊಸ ಕೌಶಲ್ಯಗಳನ್ನು ಅಳವಡಿಸಿಕೊಂಡು, ಸ್ವಂತ ಉದ್ಯೋಗದ ರೂಪದಲ್ಲೇ ಹೊಲಿಗೆ ಕೆಲಸ ಮಾಡಿ ಸಬಲರಾಗಬೇಕು. ನಿಮ್ಮ ಜೊತೆ ಸಂಸ್ಥೆ ಯಾವಾಗಲೂ ಜೊತೆಯಾಗಿದ್ದು, ಬೇಕಾದ ಸವಲತ್ತು ಹಾಗೂ ಮಾರ್ಗದರ್ಶನ ನೀಡುತ್ತದೆ ಅಂತಾ ಇದೇ ವೇಳೆ ಪ್ರಶಾಂತ್ ಬಡ್ಡಿ ಭರವಸೆ ನೀಡಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಅಮರಯ್ಯ ಸ್ವಾಮಿ ಇಲ್ಲಾಳಮಠ, ಮಹಿಳೆಯರು ಅಬಲೆಯರಲ್ಲ ಅನ್ನೋದನ್ನು ಇಂತಹ ತರಬೇತಿ ಪಡೆದು, ಉದ್ಯೋಗ ಮಾಡಿ, ಸಬಲರಾಗುವ ಮೂಲಕ ಸಾಬೀತು ಪಡಿಸುತ್ತಿದ್ದಾರೆ ಅಂತಾ ಹೇಳಿದ್ರು.
ಇನ್ನು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ, ಬಸವರಾಜ್ ಆಸ್ತಕಟ್ಟಿ ಮಾತನಾಡಿ, ದೇಶಪಾಂಡೆಯವರ ಕನಸಿನ ಕೂಸಾದ ರೂಡಸೆಟಿಯಿಂದ ಇಂತಹ ಮಹತ್ಕಾರ್ಯಗಳು ನಡೆಯುತ್ತಿರೋದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಭಾಗದಲ್ಲಿ ಯಾರೂ ನಿರುದ್ಯೋಗಿ ಆಗಿರಬಾರದು ಅನ್ನೊ ಉದ್ದೇಶದಿಂದ ಇಂತಹ ತರಬೇತಿಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ, ಯುವತಿಯರು, ಮಹಿಳೆಯರು ಇದರ ಸದುಪಯೋಗಿ ಪಡೆದುಕೊಳ್ಳುವಂತೆ ಸಲಹೆ ನೀಡಿದ್ರು.

ತರಬೇತಿ ಪಡೆದ ಮಹಿಳೆಯರು ಹಾಗೂ ಯುವತಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ CBDRCT ಸಂಸ್ಥೆಯ ಬಾಹುಬಲಿ, ಈರಯ್ಯ ಚಿಕ್ಕಮಠ, ಸಂಪನ್ಮೂಲ ವ್ಯಕ್ತಿಯಾಗಿ ಹೊಲಿಗೆ ತರಬೇತಿ ನೀಡಿದ ನಾಗಮ್ಮ, ಪತ್ರಕರ್ತ ಸಂತೋಷ ಶೆಟ್ಟೆಪ್ಪನವರ್ ಭಾಗಿಯಾಗಿದ್ದರು. ಕು.ದೀಪಾ ಅಂಗಡಿ ಸ್ವಾಗತಿಸಿದ್ರು, ಕು.ವಿದ್ಯಾವತಿ ಗಲಬಿ ವಂದಿಸಿದ್ರು, ಕು. ಸನ್ಮತಿ ಶೆಟ್ಟೆಪ್ಪನವರ್ ಕಾರ್ಯಕ್ರಮ ನಿರೂಪಿಸಿದ್ರು.
