ಪ್ರಿಯ ಓದುಗ ದೊರೆಗಳೇ, ಕೊಳಗಿ ಕಾಡಲ್ಲಿ ಸಿಕ್ಕಿದ್ದ ರುಂಡವಿಲ್ಲದ ಬೆತ್ತಲೆ ಶವದ ಕೇಸನ್ನು ಬಯಲು ಮಾಡಿದ್ದಾರೆ ಪೊಲೀಸ್ರು, ಬರೋಬ್ಬರಿ 12 ದಿನಗಳ ನಂತ್ರ ರಾಕ್ಷಸೀ ಹಂತಕನ ಸುಳಿವು ಸಿಕ್ಕಿದೆ. ಹೀಗಾಗಿ, ಬೆನ್ನು ಬಿದ್ದಿರೋ ಖಾಕಿಗಳ ಖಡಕ್ ಏಟಿನಲ್ಲಿ ಇಡೀ ಕೇಸಿನ ರೋಚಕ, ಅಷ್ಟೇ ಭಯಾನಕ ಕೃತ್ಯದ ಅಸಲೀ ರೂಪ ಬಯಲಾಗಿದೆ. ಅಂದಹಾಗೆ, ಭಯಾನಕ ಹತ್ಯೆ ಕತೆಯ ಮುಂದುವರಿದ ಭಾಗ ಇದು..!

ಅಷ್ಟಕ್ಕೂ ಏನದು ಸುಳಿವಿನ “ಮಾತು”..?
ಅಸಲು, ಕೊಳಗಿಯಲ್ಲಿ ಮಹಿಳೆಯ ಮರ್ಡರ್ ಕೇಸಿನಲ್ಲಿ ಸಣ್ಣದೊಂದು ಸುಳಿವೂ ಸಿಕ್ಕದೇ, ಇಡೀ ಪೊಲೀಸ್ ಟೀಂ ಹಗಲೂ ರಾತ್ರಿ ಶೋಧ ಕಾರ್ಯದಲ್ಲಿತ್ತು. ಆದ್ರೆ, ಅದೇಷ್ಟೇ ಗುದುಮುರುಗಿ ಹಾಕಿದ್ರೂ ಸಿಗದ ಕ್ಲೂ ಪಾಳಾ ಕ್ರಾಸ್ ನಲ್ಲಿ ಸಿಕ್ಕ ಅದೊಂದು ಮಾತು, ಇಡೀ ಕೇಸಿನ ದಿಕ್ಕನ್ನೇ ಬದಲಾಯಿಸಿತ್ತು. ಅವತ್ತು ಅದೊಂದು “ಬೈಕ್ ನಲ್ಲಿ ಆಯಮ್ಮ ಅದ್ಯಾವನೋ ದಡೀಯನ ಜೊತೆ ಪಾಳಾ ಕಡೆ ಹೋದ್ರು” ಅಂತಾ ನೋಡಿದ್ದವರೊಬ್ಬರು ಪೊಲೀಸ್ರಿಗೆ ಹೇಳ್ತಾರೆ. ಫಿನಿಷ್..! ಮುಂಡಗೋಡ ಪೊಲೀಸ್ರು ಆ ಮಾತಿನಗುಂಟ ಹೆಜ್ಜೆ ಹಾಕ್ತಾರೆ. ಕೊನೆಗೆ ಹಾನಗಲ್ ತಾಲೂಕಿನಲ್ಲಿ ಹಂತಕನ ಜಾಡು ಹಿಡಿದೇ ಬಿಡ್ತಾರೆ.

ಸಿಕ್ಕ CCTV ಗಳಲ್ಲೇ ಟ್ವಿಸ್ಟ್..!
ಯಸ್, ಪಾಳಾ ಕ್ರಾಸ ಮೂಲಕ ಸುಳಿವು ಪಡೆದ ಪೊಲೀಸ್ರು, ಆ ಭಾಗದಲ್ಲಿ ಸಿಕ್ಕ CCTV ಪೂಟೇಜ್ ಗಳನ್ನ ಹೆಕ್ಕಿ ತೆಗೆಯಲು ಶುರು ಮಾಡ್ತಾರೆ. ಆದ್ರೆ, ಅಲ್ಲಿ ಸಿಕ್ಕ CCTV ಪೂಟೇಜ್ ಗಳಲ್ಲೇ ಸಾಕಷ್ಟು ಟ್ವಿಸ್ಟ್ ಗಳು ಸಿಗತ್ತೆ. ಯಾಕಂದ್ರೆ, CCTV ದೃಷ್ಯದಲ್ಲಿ HF ಡೀಲಕ್ಸ್ ಬೈಕ್ ಮೇಲೆನೆ ಶಿವಕ್ಕನನ್ನು ಕರೆದುಕೊಂಡು ಹೋಗಿದ್ದಾನೆ ಅನ್ನೋದು ಕನ್ಪರ್ಮ್ ಆಗತ್ತೆ. ಹೀಗಾಗಿ, KA 27 ES…… ನೋಂದಣಿ ಸಂಖ್ಯೆಯ HF ಡೀಲಕ್ಸ್ ಬೈಕ್ ನ ಮಾಲೀಕರು ಯಾರು ಅಂತಾ ಶೋಧಕ್ಕಿಳಿದ ಪೊಲೀಸರಿಗೆ ಅದು ಯಾರದ್ದು ಅಂತಾ ಗೊತ್ತಾಗತ್ತೆ. ಇಲ್ಲಿ ಟ್ವಿಸ್ಟ್ ಏನಂದ್ರೆ, ಆ ವ್ಯಕ್ತಿ ಆ ಬೈಕನ್ನು ಕೇವಲ 2 ಸಾವಿರ ಹಣಕ್ಕೆ ಬೆರೋಬ್ಬನಿಗೆ ಅಡ ಇಟ್ಟಿರ್ತಾನೆ. ಹೀಗಾಗಿ, ಆ ಬೈಕನ್ನ 2 ಸಾವಿರ ಹಣಕ್ಕೆ ಒತ್ತೆ ಇಟ್ಟುಕೊಂಡಿದ್ದವನೇ ಈ ನರಹಂತಕ ಕ್ರಿಮಿ ಅನ್ನೋದು ಪೊಲೀಸರಿಗೆ ಅರ್ಥವಾಗತ್ತೆ.
ಅವನು ಮಳಗಿಯ ಅಳಿಯ..!
ಯಾವಾಗ, ಬೈಕ್ ಅಡ ಇಟ್ಟುಕೊಂಡವನು ಈತನೇ ಅನ್ನೋದು ಪೊಲೀಸ್ರಿಗೆ ಖಚಿತವಾಗತ್ತೋ, ಆಗಲೇ ಆತನಿಗೆ ಬಲೆ ಬೀಸಲಾಗತ್ತೆ. ಹೀಗಾಗಿ, ಆತನ ಬೆನ್ನತ್ತಿದ ಪೊಲೀಸ್ರು ನೇರವಾಗಿ ಬಂದು ನಿಂತದ್ದು ಮತ್ತದೇ ಮಳಗಿಗೆ.. ಅಸಲು, ಆತನ ಮನೆ ಇರೋದು ಭೀಕರವಾಗಿ ಹತ್ಯೆಗೀಡಾದ ಮಹಿಳೆ ಶಿವಕ್ಕಳ ಮನೆ ಮುಂದೆನೇ. ಬುಟ್ಟಿ ಹೆಣೆಯುವ ಮೂಲಕಸುಬಿನ ಆತನ ಮೈದಡವಿದ ಪೊಲೀಸ್ರಿಗೆ ಮೈ ಬೆವರಾಗತ್ತೆ. ಯಾಕಂದ್ರೆ ಆತನ ಇತಿಹಾಸವೇ ಭಯಾನಕವಾಗಿರತ್ತೆ.

ಸುಫಾರಿ ಕೊಟ್ಟ ಕತೆ ಕಟ್ಟಿದ.!
ಮುಂಡಗೋಡಿನ ಯುವ ಕ್ರೈಂನ ಟೀಂ ಮಳಗಿಯ ಅದೊಂದು ಮನೆ ಕದ ತಟ್ಟಿದಾಗ ಎದುರು ಬಂದು ನಿಂತಿದ್ದವನೇ ಆ ಹಂತಕ ಆಗಿರ್ತಾನೆ. ಅಸಲು, ಮೊದ ಮೊದಲು ಹತ್ಯೆಯ ಸೀಕ್ರೆಟ್ ಬಿಚ್ಚಿಡಲು ನಖರಾ ಮಾಡಿದ್ದ ಆತ, ನಂತರ ನಾನೇ ಮಾಡಿದ್ದು ಹೌದು, ಆದ್ರೆ ನಂಗೆ ಅವಳ ಹಿರಿಯ ಮಗಳೇ ಸುಫಾರಿ ಕೊಟ್ಟಿದ್ಲು ಅಂತಾ ಕತೆ ಕಟ್ತಾನೆ. ಆದ್ರೆ, ಮುಂಡಗೋಡಿನ ಚಾಣಾಕ್ಷ ಪೊಲೀಸ್ರು ಆ ಬಗ್ಗೆಯೂ ತನಿಖೆ ಮಾಡಿ ಅವನು ಹೇಳಿದ್ದು ಅಪ್ಪಟ ಸುಳ್ಳು ಕತೆ ಅಂತಾ ಅರ್ಥೈಸಿಕೊಳ್ತಾರೆ. ಹೀಗಾಗಿ, ಪೊಲೀಸ್ ಭಾಷೆಯಲ್ಲೇ ಆರೋಪಿಗೆ ಪ್ರಶ್ನಿಸಿದಾಗ, ಇದ್ದದ್ದನ್ನ ಇದ್ದ ಹಾಗೆ ಕಕ್ಕಿ ಬಿಡ್ತಾನೆ..!
ಈತನದ್ದು ಇದು ಎರಡನೇ ಮರ್ಡರ್..!
ಪೊಲೀಸ್ರ ತನಿಖೆ ವೇಳೆ ಆರೋಪಿ ಹಂತಕ ಕಕ್ಕಿರುವಂತೆ, ಆತನ ಖುದ್ದು ಊರು ಶಿವಮೊಗ್ಗ ಜಿಲ್ಲೆಯ ಸೊರಬ. ಅಸಲು, ಅಲ್ಲಿ ಕಳೆದ ಮೂರು ವರ್ಷದ ಹಿಂದೆ ತನ್ನ ಸಂಬಂಧಿಕರೊಬ್ಬರನ್ನ ಹತ್ಯೆ ಮಾಡಿ ಜೈಲು ಸೇರಿದ್ದವ ಈತ. ನಂತರ ಬೇಲು ಪಡೆದು ತನ್ನ ಗ್ರಾಮಕ್ಕೆ ಹೋದಾಗ ಊರಿನವರೇಲ್ಲ ಸೇರಿ ಉಗಿದು ಉಪ್ಪಿನಕಾಯಿ ಹಾಕ್ತಾರೆ. ಹೀಗಾಗಿ, ಮಳಗಿಗೆ ಬಂದು ಸೇರಿಕೊಂಡ ಈತ, ತನ್ನ ಹೆಂಡತಿಯ ಮನೆಯಲ್ಲೇ ಖಾಯಂ ರಹವಾಸಿಯಾಗಿರ್ತಾನೆ. ಬಿದಿರಿನ ಬುಟ್ಟಿ ಹೆಣೆಯುವ ಕೆಲಸ ಮಾಡ್ತಾ ಸಾದಾ ಸಂಪನ್ನನ ವೇಷ ಹಾಕೊಂಡು ಇರ್ತಾನೆ. ಹೀಗಿರೊವಾಗ, ನಿತ್ಯವೂ ಗುಟಕಾ, ಪಾನ ಮಸಲಾ ತರೋಕೆ ಅಂತ ಕೊಲೆಯಾದ ಶಿವಕ್ಕಳ ಗೂಡಂಗಡಿಗೆ ಬರ್ತಾ ಇರ್ತಾನೆ. ಆ ವೇಳೆಯೇ ಈತ ಶಿವಕ್ಕಳಿಗೆ ಕೊಂಚ ಪರಿಚಯವಾಗ್ತಾನೆ.

ಮುದುಕಿಯ ಚಿನ್ನದ ಮೇಲೆ ಕಣ್ಣಾಕಿದ..!
ನಿಮಗೆ ನೆನಪಿರಲಿ, ಮಳಗಿಯಲ್ಲಿ ಗೂಡಂಗಡಿ ಇಟ್ಟುಕೊಂಡು ಒಂಟಿ ಜೀವನ ಸಾಗಿಸ್ತಿರೋ ಶಿವಕ್ಕಳಿಗೆ ಮೂವರು ಮಕ್ಕಳು. ಅದರಲ್ಲಿ ಓರ್ವ ಗಂಡುಮಗ ಸದ್ಯ ಯಲ್ಲಾಪುರದಲ್ಲಿ ವಾಸವಾಗಿದ್ದಾರೆ. ಇನ್ನೋರ್ವಳು ಶಿರಸಿಯಲ್ಲಿ ವಾಸವಾಗಿದ್ದಾಳೆ. ಹಾಗೆ ಹಿರಿಯ ಮಗಳು ಈಕೆಯ ಮನೆಯ ಹಿಂದೆಯೇ ವಾಸವಾಗಿದ್ದು, ತಾಯಿ ಮಗಳು ನಿತ್ಯವೂ ಒಂದಿಲ್ಲೊಂದು ಕಾರಣಕ್ಕೆ ಜಗಳ ಮಾಡ್ತಾ ಇರ್ತಾರೆ. ಈ ತಾಯಿ ಮಗಳ ಜಗಳ ಅನ್ನೋದು ಇವರ ಮನೆ ಅಕ್ಕಪಕ್ಕದವರಿಗೆ ನಿತ್ಯದ ಗೋಳಾಗಿರತ್ತೆ. ಇಲ್ಲಿ ಹಂತಕನೂ ಕೂಡ ಮನೆ ಎದುರೇ ವಾಸವಾಗಿರೋ ಕಾರಣಕ್ಕೆ, ಶಿವಕ್ಕಳ ಅಂಗಡಿಗೆ ಹೋದಾಗಲೆಲ್ಲ ತಾಯಿಮಗಳ ಜಗಳದ ಬಗ್ಗೆನೇ ಮಾತಾಡಿ, ನಿವೇನೂ ಹೆದರಬೇಡಿ ನಾನು ನಿಮ್ಮಸಹಾಯಕ್ಕೆ ಯಾವಾಗ್ಲೂ ಇರ್ತಿನಿ ಅಂತಾ ಶಿವಕ್ಕಳ ನಂಬಿಕೆ ಗಳಿಸಿಕೊಳ್ತಾನೆ. ಆದ್ರೆ, ಇದನ್ನೇ ಎನಕ್ಯಾಶ್ ಮಾಡಿಕೊಂಡು ಏನಾದ್ರೂ ದೋಚಬೇಕು ಅಂತಾ ಪ್ಲಾನ್ ಹಾಕಿಕೊಂಡಿದ್ದ ಹಂತಕ, ಶಿವಕ್ಕಳ ನಾಲ್ಕೈದು ತೊಲೆ ಬಂಗಾರದ ಮೇಲೆ ಕಣ್ಣು ಹಾಕ್ತಾನೆ. ಅದಕ್ಕೆ ಬೇಕಾದ ಪ್ಲ್ಯಾನ್ ಮಾಡಿಕೊಳ್ತಾನೆ.
ಆಸ್ಪತ್ರೆಗೆ ಅಂತಾ ಬೈಕ್ ಮೇಲೆ..!
ಬಹುಶಃ, ಶವ ಸಿಕ್ಕ ಎರಡು ದಿನದ ಮುಂಚಿನ ಕತೆಯಿದು. ಪಾಪ, ಶಿವಕ್ಕ ಹಂತಕನನ್ನು ಬಹುತೇಕ ತನ್ನ ಮಗನಂತೆ ನಂಬಿದ್ಲೆನೋ. ಹೀಗಾಗಿನೇ ಆಸ್ಪತ್ರೆಗೆ ಅಂತಾ ಅವನದ್ದೆ ಬೈಕ್‌ಮೇಲೆ ಹೊರಡ್ತಾಳೆ. ಮಳಗಿಯ ಬಸ್ ಸ್ಟಾಂಡ್ ನಿಂದ ಹಂತಕ ಆರೋಪಿಯ ಬೈಕ್ ಏರಿ ಹೊರಟವಳಿಗೆ ಬಹುಶಃ ತಾನು ಅಷ್ಟೊಂದು ಭೀಕರವಾಗಿ ಕೊಲೆಯಾಗ್ತಿನಿ ಅನ್ನೋ ಸಣ್ಣದೊಂದು ಸುಳಿವೂ ಇರಲಿಲ್ಲವೆನೊ..? ಹೀಗಾಗಿ, ಬೆಳಿಗ್ಗೆ 10 ಗಂಟೆಯಷ್ಟೊತ್ತಿಗೆ HF ಡೀಲಕ್ಸ್ ಬೈಕ್ ಮೇಲೆ ಶಿವಕ್ಕಳನ್ನು ಕೂರಿಸಿಕೊಂಡು ಪಾಳಾ ಮಾರ್ಗವಾಗಿ ಹಾನಗಲ್ ಕಡೆಗೆ ಹಂತಕನ ಪಯಣ ಶುರುವಾಗಿರತ್ತೆ. ಅಸಲು, ಹಂತಕ ಶಿವಕ್ಕಳನ್ನು ಆಸ್ಪತ್ರೆಗೆ ಅಂತಾ ಕರೆದೊಯ್ಯುತ್ತಿರಲಿಲ್ಲ. ಬದಲಾಗಿ, ಆಕೆಯನ್ನ ಹೇಗೆ ಮುಗಿಸೋದು..? ಆಕೆಯ ಮೈಮೇಲಿದ್ದ ಬಂಗಾರವನ್ನು ದೋಚೋದು ಹೇಗೆ ಅಂತಾ ಕೃತ್ಯ ನಡೆಸಲು ಜಾಗ ಹುಡುಕುತ್ತಿದ್ದ.
ಮದ್ಯಾಹ್ನದವರೆಗೂ..!
ನಿಜ ಅಂದ್ರೆ ಬೆಳಿಗ್ಗೆ, 10 ಗಂಟೆಗೆ ಮಳಗಿಯಿಂದ ಹೊರಟಿದ್ದ ಅವ್ರು, ಪಾಳಾ, ಕೊಪ್ಪರಿಸಿಕೊಪ್ಪ ಮೂಲಕ ಹಾನಗಲ್ ಪಟ್ಟಣಕ್ಕೆ ಹೋಗಿದ್ದರು. ಹಾನಗಲ್ ನಲ್ಲಿ ಕುಮಾರೇಶ್ವರ ಮಠಕ್ಕೆ ಹೋಗಿ ದರ್ಶನ ಮಾಡಿಕೊಂಡಿದ್ದರು. ಆದ್ರೆ, ಆ ಮದ್ಯೆ ಆಕೆಯನ್ನ ಮುಗಿಸಿ ಬಿಡಲು ಯಾವ ಜಾಗವೂ ಆತನಿಗೆ ಸೂಟ್ ಆಗಲೇ ಇಲ್ಲವಂತೆ. ಹೀಗಾಗಿ, ಆನಂತ್ರ ವಾಪಸ್ಸು ಕಕ್ಕೇರಿ, ಆರೆಕೊಪ್ಪ, ಗೋಟಗೋಡಿಕೊಪ್ಪದ ಮೂಖಾಂತರ ಕೊಳಗಿಗೆ ಬರ್ತಾರೆ. ಕೊಳಗಿಯ ಕಾಡೇ ಈ ಹತ್ಯೆಗೆ ಹೇಳಿಮಾಡಿಸಿದ ಜಾಗ ಅಂತಾ ತೀರ್ಮಾನಿಸಿದ ಆರೋಪಿ, ಆ ಕ್ಷಣವೇ ಬೈಕ್ ಕಾಡಿನೊಳಗಡೆ ತಿರುಗಿಸಿಬಿಡ್ತಾನೆ. ಆಗ ಶಿವಕ್ಕ ಯಾಕಪ್ಪ ಕಾಡಿನೊಳಗೆ ಹೋಗ್ತಿದಿಯಾ ಅಂತಾ ಪ್ರಶ್ನಿಸಿದಾಳೆ. ಮೂತ್ರ ಮಾಡಲು ಹೋಗಬೇಕು ಅಂತಾ ಹೇಳಿ ಕಾಡಿನಲ್ಲಿ ಬೈಕ್ ನಿಲ್ಲಿಸಿದ್ದಾನೆ. ಆಗ ಮದ್ಯಾನ 12 ರ ಆಸುಪಾಸು ಆಗಿರತ್ತೆ. ಮಟಮಟ ಮದ್ಯಾನದಲ್ಲೇ ಶಿವಕ್ಕಳನ್ನು ಹತ್ಯೆ ಮಾಡಲು ರೆಡಿಯಾಗಿ ಬಿಡ್ತಾನೆ ಹಂತಕ.

ಕುರಿ ಕುಯ್ದ ಹಾಗೆ ಕುಯ್ದ..!
ಅಸಲು, ಮಟಮಟ ಮದ್ಯಾನ ಕಾಡಿನೊಳಕ್ಕೆ ಹೋದ ಹಂತಕ, ಮೂತ್ರ ವಿಸರ್ಜನೆಗೆಂದು ಹೋಗುವ ನಾಟಕ ಮಾಡ್ತಾನೆ. ಆ ಹೊತ್ತಲ್ಲಿ ಪಾಪ ಏನೂ ಅರಿಯದ ಮುಗ್ದ ಶಿವಕ್ಕ ಕಾಡಿನೆಡೆ ನೋಡುತ್ತ ನಿಂತಿರ್ತಾಳೆ. ಹೀಗಾಗಿ ಹಿಂದಿನಿಂದ ಬಂದ ಹಂತಕ ವೃದ್ದೆಗೆ ಹೊಡೆದು ಬಿಡ್ತಾನೆ. ಅಷ್ಟಕ್ಕೆ ಆ ಹಿರಿಯ ಜೀವ ನೆಲಕ್ಕೊರಗಿ ಬಿಡತ್ತೆ. ಅಷ್ಟೊತ್ತಿಗಾಗಲೇ ಚೂರಿ ಹೊರಗೆ ತೆಗೆದ ಹಂತಕ ಕುರಿ ಕೋಳಿಗಳನ್ನು ವಧೆ ಮಾಡುವಾಗ ಹಲಾಲ್ ಕಟ್ ಮಾಡ್ತಾರಲ್ಲ..? ಹಾಗೆ ಗಂಟಲನ್ನ ಕುಯ್ದು ಬಿಡ್ತಾನೆ. ಅಷ್ಟಕ್ಕೆ ರಕ್ತ ಚಿಮ್ಮಿ ವಿಲ ವಿಲ ಒದ್ದಾಡ್ತಾಳೆ ಶಿವಕ್ಕ. ಆ ಹೊತ್ತಲ್ಲೇ ಆಕೆಯ ಮೈಮೇಲಿನ ಬಂಗಾರವನ್ನೇಲ್ಲ ತೆಗೆದುಕೊಂಡು ತನ್ನ ಜಾಕೇಟ್ ನಲ್ಲಿ ಹಾಕಿ ಅದೇ ಕಾಡಲ್ಲೇ ಬಚ್ಚಿಡ್ತಾನೆ. ಆ ಶವವನ್ನು ಅಲ್ಲೇ ಬಿಟ್ಟು ತಣ್ಣಗೆ ಮತ್ತೆ ವಾಪಸ್ ಬೈಕ್ ಏರಿ ಹೊರಗೆ ಬರ್ತಾನೆ.. ಇಷ್ಟೇಲ್ಲ ಮುಗಿಯವಷ್ಟರಲ್ಲಿ ಸರಿಸುಮಾರು ಮೂರು ಗಂಟೆಯಾಗಿರತ್ತೆ.
ಮತ್ತೆ ಬಂದು ರುಂಡ ಕಡಿದ ರಾಕ್ಷಸ..!
ಹಾಗೆ, ಮಟ ಮಟ ಮದ್ಯಾಹ್ನವೇ ಶಿವಕ್ಕಳನ್ನು ಕೊಂದು ಮುಗಿಸಿದ್ದ ಹಂತಕ, ಆ ಶವ ಅಲ್ಲೆ ಬಿಟ್ಟು ಬಂದಿದ್ದವನು, ಸಂಜೆಯಾಗುತ್ತಲೇ ಮತ್ತೆ ಕಾಡಿನಲ್ಲಿ ಸತ್ತು ಬಿದ್ದಿದ್ದ ಶಿವಕ್ಕಳ ಹತ್ರ ವಾಪಸ್ ಬರ್ತಾನೆ. ಅಷ್ಟೊತ್ತಿಗಾಗಲೇ ಕತ್ತಲು ಆಗತ್ತ ಬಂದಂತೆ, ಹತ್ಯೆಯ ಸಣ್ಣದೊಂದು ಸುಳಿವೂ ಸಿಗದಂತೆ ಸಾಕ್ಷ ನಾಶಮಾಡಲು, ಶವದಿಂದ ಕಂದಿಲು ಮೂಲಕ ರುಂಡ ಬೇರ್ಪಡಿಸ್ತಾನೆ. ಅಲ್ದೆ, ಆಕೆಯ ಬಟ್ಟೆಯನ್ನೇಲ್ಲ ತೆಗೆದು, ಶವದ ಮೇಲೆ ಕಸ ಕಡ್ಡಿಗಳನ್ನೇಲ್ಲ ಹಾಕ್ತಾನೆ. ಹಾಗೆ, ತನ್ನ ರಕ್ತಸಿಕ್ತ ಜರ್ಕೀನು ಹಾಗೂ ಆಕೆ ಬಟ್ಟೆಗಳೊಂದಿಗೆ ರುಂಡ ಕಟ್ಟಿಕೊಂಡು, ಮತ್ತೆ ಹಾನಗಲ್ ಕಡೆ ಬೈಕ್ ತಿರುಗಿಸ್ತಾನೆ.
ಕೊನೆಗೆ..!
ಹಾನಗಲ್ ತಾಲೂಕಿನ ಕಡೆ ರುಂಡದೊಂದಿಗೆ ಹೊರಟ ಹಂತಕ, ಅಲ್ಲೇ ಅವುಗಳನ್ನು ನಾಶ ಮಾಡಿರ್ತಾನೆ. ನಂತ್ರ ಹಾಗೆ ನೇರವಾಗಿ ಶಿವಕ್ಕಳ ಚಿನ್ನದೊಂದಿಗೆ ಮಳಗಿಯ ತನ್ನ ಹೆಂಡತಿ ಮನೆಗೆ ಬಂದು ನಿರಾತಂಕವಾಗಿ ಇರ್ತಾನೆ. ಬಹುತೇಕ ಯಾವುದೇ ಸಣ್ಣದೊಂದು ಸುಳಿವನ್ನೂ ಬಿಟ್ಟುಕೊಡದ ಹಂತಕ, ನನ್ನನ್ನ ಮುಟ್ಟಲು ಯಾರಿಗೂ ಸಾಧ್ಯವಿಲ್ಲ ಅನ್ನೋ ಗುಂಗಲ್ಲೇ ಇರ್ತಾನೆ. ಆದ್ರೆ, ಆತ ಚಾಪೆ ಕೆಳಗೆ ನುಗ್ಗಿದ್ದನ್ನ, ಮುಂಡಗೋಡಿನ ಚಾಣಾಕ್ಷ ಪೊಲೀಸ್ರು ರಂಗೋಲಿ ಕೆಳಗೆ ನುಗ್ಗಿ ಹಂತಕನ ಬೆನ್ನು ಬಿದ್ದಿದ್ದಾರೆ. ಬಹುಶಃ ಎಲ್ಲವೂ ಅಂದುಕೊಂಡಂಗೆ ಆದ್ರೆ ನಾಳೆ ಬೆಳಗಿನವರೆಗೆ ಹಂತಕನ ಹೆಡೆಮುರಿಕಟ್ಟೋದು ಪಕ್ಕಾ..!
ಒಟ್ನಲ್ಲಿ, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಭಯಾನಕ ಮರ್ಡರ್ ಕೇಸನ್ನು ಮುಂಡಗೋಡ ಪೊಲೀಸರು ಬೇಧಿಸಿದ್ದಾರೆ. ಕ್ರಿಮಿನಲ್ಸ್ ಗಳು ಅದೇನೇ ತಿಪ್ಪರಲಾಗ ಹಾಕಿದ್ರೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳೊಕೆ ಛಾನ್ಸೇ ಇಲ್ಲ ಅನ್ನೋದು ಈ ಮೂಲಕ ಮತ್ತೆ ಸಾಭೀತಾಗಿದೆ.
* ಸಂತೋಷ ಶೆಟ್ಟೆಪ್ಪನವರ್
**********†**************
ಇದನ್ನೂ ಓದಿ: ಕೊನೆಗೂ ಸಿಕ್ತು ಕೊಳಗಿ ಮರ್ಡರ್ ಕೇಸ್ ಹಂತಕನ ಸುಳಿವು..! ರುಂಡವಿಲ್ಲದ ಬೆತ್ತಲೆ ಶವದ ಭಯಾನಕ ಹತ್ಯೆಯ ಅಸಲೀ ಕಹಾನಿ ಏನ್ ಗೊತ್ತಾ..?
