ಮಳಗಿ ಸಮೀಪದ ಕೊಳಗಿ ಕಾಡಲ್ಲಿ ಸಿಕ್ಕ ಶಿವಕ್ಕಳ ಭಯಾನಕ ಮರ್ಡರ್ ಕೇಸ್ ಬಹುತೇಕ ಖುಲ್ಲಂ ಖುಲ್ಲಾ ಆಗಿದೆ. ನರರೂಪದ ರಾಕ್ಷಸನೊಬ್ಬನ ರಾಕ್ಷಸೀಕೃತ್ಯವನ್ನ ಮುಂಡಗೋಡಿನ ಚಾಣಾಕ್ಷ ಪೊಲೀಸರ ಟೀಂ ಅಕ್ಷರಶಃ ಬಯಲು ಮಾಡಿದೆ. ಅಸಲು, ಈ ಮರ್ಡರ್ ಕೇಸ್ ಬೆನ್ನತ್ತಿ ಹೋದ ಪೊಲೀಸರೇ ಬೆಕ್ಕಸ ಬೆರಗಾಗಿ ಬೆವರಿದ್ದಾರೆ.. ಯಾಕಂದ್ರೆ, ಈಗ ಮಳಗಿಯ ಶಿವಕ್ಕಳನ್ನು ಕೊಂದ ರಾಕ್ಷಸನ ಹಿಸ್ಟರಿಯೇ ಹಾಗಿದೆ. ಭೀಕರ ಹತ್ಯೆ ಮಾಡಿ ಏನೂ ನಡದೇ ಇಲ್ಲವೆಂಬಂತೆ ಓಡಾಡಿಕೊಂಡಿದ್ದ ಫ್ರೋಪೆಶನಲ್ ಕಿಲ್ಲರ್ ಆಗಿದ್ದ ಆತನ ಹಿಸ್ಟರಿಯೇ ಭಯಾನಕವಂತೆ.. ನಿಜ ಮುಂಡಗೋಡಿನ ಪಿಐ ರಂಗನಾಥ್ ನೀಲಮ್ಮನವರ್ ಟೀಂ ಇಲ್ಲಿ ಭರ್ಜರಿ ಕಾರ್ಯ ಮಾಡಿದೆ.

ಅಂದಹಾಗೆ,ಅವಳ ಹೆಸರು ಶಿವಕ್ಕ..!
ಅದು ಫೆ.20 ನೇ ತಾರೀಖು ಶುಕ್ರವಾರ ಸಂಜೆ ಮಳಗಿ ಸಮೀಪದ ಕೊಳಗಿ ಕಾಡಲ್ಲಿ, ರುಂಡವಿಲ್ಲದ ಮಹಿಳೆಯ ಬೆತ್ತಲೆ ಶವ ಪತ್ತೆಯಾಗಿತ್ತು. ಆ ಹೊತ್ತಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಮುಂಡಗೋಡ ಪೊಲೀಸ್ರು, ಅದೊಂದು “ಭಯಾನಕ ಮರ್ಡರ್” ಅಂತಲೇ ಕೇಸು ದಾಖಲಿಸಿಕೊಂಡು, ತನಿಖೆಗಿಳಿದಿದ್ರು. ಅವತ್ತು ಪೊಲೀಸ್ರಿಗೆ ಕೊಲೆಗಾರನ ಪತ್ತೆ ಹಚ್ಚೋದಕ್ಕೂ ಮುಂಚೆ, ಶವದ ಗುರುತು ಪತ್ತೆ ಹಚ್ಚೋದೇ ಸವಾಲಾಗಿತ್ತು.. ಆ ಹೊತ್ತಲ್ಲಿ ಪೊಲೀಸ್ರಿಗೆ ಶವದ ಮೇಲೆ ಸಿಕ್ಕಿದ್ದ ಗುಂಡಗಡಿಗೆ ಹಾಗೂ ಕೀಲಿಕೈ ಶವ ಮಳಗಿಯ ಶಿವಕ್ಕಳದು ಅನ್ನೋದನ್ನ, ಶವ ಸಿಕ್ಕನಾಲ್ಕು ದಿನಗಳ ನಂತ್ರ ಕನ್ಪರ್ಮ ಮಾಡಿತ್ತು.

ಮಗ ಹವಾಲ್ದಾರ್ ಆಗಿದ್ರೂ ಏಕಾಂಗಿ..!
ಅಸಲು, ಹಾಗೆ ರುಂಡವಿಲ್ಲದ ಶವ ಮಳಗಿಯ ಶಿವಕ್ಕಳದು ಅಂದಕೂಡಲೇ ಪೊಲೀಸರ ತನಿಖೆ ಚುರುಕು ಪಡೆದಿತ್ತು. ಹಾಗೆ ನೋಡಿದ್ರೆ, ಮೂವರು ಮಕ್ಕಳಿದ್ರೂ ಏಕಾಂಗಿಯಾಗಿ ಗೂಡಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿದ್ದ ಶಿವಕ್ಕ ಹಾಗೇ ಭಯಾನಕವಾಗಿ ಮರ್ಡರ್ ಆಗಿದ್ದಾದ್ರೂ ಯಾಕೆ ಅನ್ನೋದನ್ನ ಪತ್ತೆ ಹಚ್ಚೋದೇ ಪೊಲೀಸರಿಗೆ ಅಕ್ಷರಶಃ ಸವಾಲಾಗಿತ್ತು. ಅಲ್ದೇ ಆಕೆಯ ಮಗ ಯಲ್ಲಾಪುರದ ಠಾಣೆಯಲ್ಲಿ ಹವಾಲ್ದಾರ್ ಆಗಿದ್ದಾರೆ. ಹೀಗಾಗಿ, ಇಲ್ಲಿನ ಪೊಲೀಸ್ರಿಗೆ ಈ ಕೇಸು ಬಹುದೊಡ್ಡ ಸವಾಲು ಜೊತೆಗೆ ಪ್ರತಿಷ್ಟೆಯ ಪ್ರಶ್ನೆಯಾಗಿತ್ತು.

ಆ 12 ದಿನಗಳು..!
ನಿಜ ಅಂದ್ರೆ, ಶಿವಕ್ಕಳ ಶವ ಕೊಳಗಿ ಕಾಡಲ್ಲಿ ಸಿಕ್ಕ ಗಳಿಗೆಯಿಂದಲೂ, ಈ ಕೇಸನ್ನು ಬೇಧಿಸಲು ಪಣತೊಟ್ಟು ನಿಂತಿದ್ದ ಮುಂಡಗೋಡ ಪೊಲೀಸ್ರಿಗೆ ಹಂತಕ ಸಣ್ಣದೊಂದು ಸುಳಿವೂ ಸಿಗದಂತೆ
ಪಕ್ಕಾ ಪ್ರೀ ಪ್ಲ್ಯಾನ್ಡ್ ಆಗಿಯೇ ಕೊಂದು ಮುಗಿಸಿದ್ದ. ಅದೇಷ್ಟೇ ಗುದುಮುರುಗಿ ಹಾಕಿದ್ರೂ ಹಂತಕನ ಹೆಜ್ಜೆ ಗುರುತು ಪತ್ತೆ ಹಚ್ಚೋದೇ ಕಷ್ಟವಾಗಿತ್ತು ಪೊಲೀಸ್ರಿಗೆ. ಆದ್ರೆ, ಬರೋಬ್ಬರಿ 10 ದಿನಗಳ ನಂತ್ರ ಸಿಕ್ಕ ಅದೊಂದು “ಮಾತು” ಇಡೀ ಹತ್ಯೆಯ ಇಂಚಿಂಚು ಕ್ರೌರ್ಯವನ್ನೂ ಬಿಚ್ಚಿಟ್ಟಿದೆ.
ಅದ್ರೊಂದಿಗೆ, ಬರೋಬ್ಬರಿ 12 ದಿನಗಳ ನಂತ್ರ ರಾಕ್ಷಸೀ ಹಂತಕನ ಸುಳಿವು ಸಿಕ್ಕಿದೆ. ಹೀಗಾಗಿ, ಬೆನ್ನು ಬಿದ್ದಿರೋ ಖಾಕಿಗಳ ಖಡಕ್ ಏಟಿನಲ್ಲಿ ಇಡೀ ಕೇಸಿನ ರೋಚಕ, ಅಷ್ಟೇ ಭಯಾನಕ ಕೃತ್ಯದ ಅಸಲೀ ರೂಪ ಬಯಲಾಗಿದೆ.

ಅಸಲಿಗೆ, ಪಾಳಾ ಕ್ರಾಸಲ್ಲಿ ಸಿಕ್ಕ ಸುಳಿವಿನ “ಮಾತು” ಏನದು..? ಪೊಲೀಸ್ರಿಗೆ ಹಂತಕನ ಬಗ್ಗೆ ಸಿಕ್ಕ ಆ ಸಣ್ಣ ಸುಳಿವಾದ್ರೂ ಏನು..? ಆ ಸುಳಿವಿನ ಬೆನ್ನತ್ತಿ ಹೋದಾಗ ಸಿಕ್ಕ ಹಂತಕನ ಅಸಲೀ ಕಹಾನಿಯಾದ್ರೂ ಏನು..? ಅಷ್ಟಕ್ಕೂ ಆ ವೃದ್ದೆಯನ್ನು ಹತ್ಯೆ ಮಾಡಿದ್ದಾದ್ರೂ ಯಾಕೆ..?
ಇದೇಲ್ಲ ಮುಂದಿನ ಭಾಗದಲ್ಲಿ ಕೆಲವೇ ಹೊತ್ತಲ್ಲಿ ತಮ್ಮ ಮುಂದಿಡ್ತಿನಿ ಅಲ್ಲಿವರೆಗೂ ನಮಸ್ಕಾರ, ಬೈ ಬೈ..!
*ಸಂತೋಷ ಶೆಟ್ಟೆಪ್ಪನವರ್
***********************
