ಮುಂಡಗೋಡ ಡಿಗ್ರಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ, “ವೃಕ್ಷ ಬಂಧನ” ಕಾರ್ಯಕ್ರಮ..!

ಮುಂಡಗೋಡ: ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವೃಕ್ಷ ಬಂಧನ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮೂಲಕ ಸಸಿಯನ್ನು ದತ್ತು ನೀಡುವ ಮತ್ತು ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ವೃಕ್ಷ ಬಂಧನ ಕಾರ್ಯಕ್ರಮದ ಮೂಲಕ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಗಿಡಗಳನ್ನು ದತ್ತು ನೀಡುವ ಮೂಲಕ ಅವರಿಗೆ ಆ ಗಿಡದ ಜವಾಬ್ದಾರಿಯನ್ನು ನೀಡಲಾಯಿತು. ಈ ಕಾರ್ಯವನ್ನು ಅತ್ಯಂತ ವಿಶಿಷ್ಟವಾಗಿ ಪ್ರತಿ ವರ್ಷದಂತೆ ತೊಟ್ಟಿಲು ಶಾಸ್ತ್ರ ವಿಧಾನದಂತೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗಣ್ಯರು ಪ್ರತಿ ವಿದ್ಯಾರ್ಥಿಗಳಿಗೆ ಮಗುವನ್ನು ತೊಟ್ಟಿನಲ್ಲಿ ತೂಗುವಂತೆ ಸಸಿಯನ್ನು ತೊಟ್ಟಿಲಲ್ಲಿಟ್ಟು ತೂಗಿ ಅದನ್ನು ವಿದ್ಯಾರ್ಥಿಗಳಿಗೆ ದತ್ತು ನೀಡಿದರು. ಅಂತಿಮ ವರ್ಷ ಮುಗಿಯುವವರೆಗೆ ಆ ವಿದ್ಯಾರ್ಥಿಗಳು ಆ ಗಿಡದ ಜವಾಬ್ದಾರಿಯನ್ನು ವಹಿಸಬೇಕು ಎಂದು ಎಲ್ಲಾ ಗಣ್ಯರು ವಿದ್ಯಾರ್ಥಿಗಳಿಗೆ ಸೂಚಿಸಿದ್ರು.

ಇದನ್ನೂ ಓದಿ👉 RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ, ಸಿದ್ದಾಪುರದ ಮಹಿಳೆಯೂ ಬಲಿ..!

ಮುಖ್ಯ ಅತಿಥಿಗಳಾಗಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ ವೈ ದಾಸನಕೊಪ್ಪ, ತೋಟಗಾರಿಕಾ ಇಲಾಖೆ ರಮೇಶ್, ಪಟ್ಟಣ ಪಂಚಾಯತ್ ಅಧಿಕಾರಿ ಕುಮಾರ ನಾಯಕ್, ಪಿಎಸ್ಐ ಪರಶುರಾಮ್ ಮಿರ್ಜಗಿ ಮತ್ತು ಅರಣ್ಯ ಇಲಾಖೆ ACF ಹುಲಕೋಟಿ, RFO ವಾಗಿಶ್, ಅಜ್ಜಪ್ಪ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ,👉 RCB ತಂಡದಿಂದ ಐಪಿಎಲ್​ 2025 ಟ್ರೋಫಿ ಹಿಂಪಡೆದ BCCI..! ಯಾಕೆ ಗೊತ್ತಾ..?

ಮಹಾವಿದ್ಯಾಲಯದ ಘಟಕಗಳಾದ ರಾಷ್ಟ್ರೀಯ ಸೇವಾ ಯೋಜನೆ, ಮತ್ತು ರೋವರ್ಸ್ ರೆಂಜರ್ಸ್ ಘಟಕಗಳು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಜೊತೆ ಸೇರಿ ಮಹಾವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

error: Content is protected !!