ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

ಮುಂಡಗೋಡ ಹೊರವಲಯದ ಖಬರಸ್ಥಾನ ಬಳಿ ಭಯಾನಕ ಕಾರ್ ಪಲ್ಟಿ..! ಚಾಲಕ ಬದುಕಿದ್ದೇ ಪವಾಡ..!!

 Car Accident; ಮುಂಡಗೋಡ ಹೊರವಲಯದ ಕಲಘಟಗಿ ರಸ್ತೆಯ ಖಬರಸ್ಥಾನ ಬಳಿ ಭಯಾನಕ ಕಾರ್ ಅಪಘಾತವಾಗಿದೆ. ಪವಾಡಸದೃಷ ರೀತಿಯಲ್ಲಿ ಕಾರ್ ಚಾಲಕ ಬಚಾವ್ ಆಗಿದ್ದಾನೆ. ಕಲಘಟಗಿ ಕಡೆಯಿಂದ ಬರುತ್ತಿದ್ದ ಬ್ರಿಜಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾಗಿದೆ. ಏನಿಲ್ಲವೆಂದರೂ 30 ಮೀಟರ್ ದೂರದವರೆಗೂ ರಸ್ತೆ ಬದಿಯಲ್ಲಿ ಪಲ್ಟಿ ಹೊಡೆಯುತ್ತಾ ಹೋಗಿರೋ ಕಾರ್ ತೋಟದ ಬೇಲಿಯ ಬಳಿ ಪಲ್ಟಿ ಹೊಡೆದು ನಿಂತಿದೆ. ಇನ್ನು ಚಾಲಕ ಮುಂಡಗೋಡಿನ ಸಂದೇಶ ಕೋಕರೆ ಎಂಬುವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.  

ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ

ಭಾರೀ ಮಳೆ ಮುನ್ಸೂಚನೆ ಉತ್ತರ ಕನ್ನಡದಲ್ಲಿ ಆರೆಂಜ್ ಅಲರ್ಟ್, ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕರೆ

Heavy rain forecast; ಕಾರವಾರ; ಆಗ್ನೇಯ ಅರಬ್ಬಿ ಸಮುದ್ರದ ಮೇಲೆ ವಾಯುಭಾರ ಕುಸಿತವಾಗಿದ್ದು , ನಿಧಾನವಾಗಿ ಈಶಾನ್ಯ ದಿಕ್ಕಿಗೆ ಚಲಿಸುತ್ತಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ , ಉತ್ತರ ಕನ್ನಡ ಜಿಲ್ಲೆಗೆ ಅಕ್ಟೋಬರ್ 23 ರಿಂದ ಅಕ್ಟೋಬರ್ 25 ರ ಬೆಳಗ್ಗೆ 8.30 ರ ವರೆಗೆ ಆರೆಂಜ್ ಅಲರ್ಟ್ ಇರುವ ಬಗ್ಗೆ ಮುನ್ಸೂಚನೆ ನೀಡಲಾಗಿರುವುದರಿಂದ ಈ ಅವಧಿಯಲ್ಲಿ ಸಾರ್ವಜನಿಕರು ಈ ಮುಂದಿನ ಸೂಚನೆಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ ತಿಳಿಸಿದ್ದಾರೆ. ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ರವರ ಮುನ್ಸೂಚನೆಯಂತೆ, 45 ರಿಂದ 55 ಕೀಮೀ ವೇಗದಲ್ಲಿ ಸಮುದ್ರ ತೀರದಲ್ಲಿ ಗಾಳಿ ಬೀಸುವ ಸಾದ್ಯತೆಯ ಹಿನ್ನೆಲೆಯಲ್ಲಿ , ಮಳೆಯ ಜೊತೆಗೆ ಗಾಳಿ ಕೂಡಾ 45-55 ಕಿ.ಮೀ ವೇಗದಿಂದ ಬೀಸುವ ಸಾಧ್ಯತೆಯಿರುವುದರಿಂದ ಅಪಾಯಕಾರಿ ಮರಗಳಿರುವ ಮನೆಗಳಲ್ಲಿಯ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು ಮತ್ತು ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಶಿಥಿಲವಾದ ಕಟ್ಟಡದಲ್ಲಿ ವಾಸಿಸುತ್ತಿರುವವರು ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವುದು. ಸಣ್ಣ...

ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!

ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಉತ್ತರ ಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!

Heavy rain forecast; ಬೆಂಗಳೂರು; ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಚಂಡಮಾರುತದಂತಹ ವ್ಯವಸ್ಥೆ ರೂಪುಗೊಂಡಿದ್ದು, ಇದರ ಪರಿಣಾಮ ಗುಡುಗು ಹಾಗೂ ಗಾಳಿ ಸಹಿತ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಮುಂದಿನ ಒಂದು ವಾರ ಕಾಲ ಚಂಡಮಾರುತದ ಪರಿಚಲನೆಯ ಪರಿಣಾಮ ಇರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮುಂದಿನ ಎರಡ್ಮೂರು ದಿನ ಇದರ ಪ್ರಭಾವ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಇದರಿಂದಾಗಿ ವಾರವಿಡೀ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಹಾಸನ, ಮೈಸೂರು, ತುಮಕೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಜಿಲ್ಲೆಗಳಿಗೆ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ಅಲ್ಲದೇ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳಿಗೂ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ...

ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!

ಸನವಳ್ಳಿ ಬಳಿ ಕಾರ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ..!

Accident News; ಮುಂಡಗೋಡ ತಾಲೂಕಿನ ಸನವಳ್ಳಿ ಪ್ಲಾಟ್ ಹತ್ತಿರ ಕಾರ್ ಹಾಗೂ ಬೈಕ್ ನಡುವೆ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಯಾರು ಅನ್ನೋದು ಇನ್ನೂ ಗುರುತು ಸಿಕ್ಕಿಲ್ಲ. ಸದ್ಯ ಗಾಯಗೊಂಡವರನ್ನು ಮುಂಡಗೋಡ ತಾಲೂಕಾಸ್ಪತ್ರೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!

ಕಲಿಯುಗದ ಕುಡುಕ ಖ್ಯಾತಿಯ ಹಾಸ್ಯನಟ ರಾಜು ತಾಳಿಕೋಟಿ ವಿಧಿವಶ..!

ಖ್ಯಾತ ಹಾಸ್ಯನಟ, ಕಲಿಯುಗದ ಕುಡುಕ ಖ್ಯಾತಿಯ, ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ರಾಜು ತಾಳಿಕೋಟೆ ನಿಧನರಾಗಿದ್ದಾರೆ. ವೃತ್ತಿ ರಂಗಭೂಮಿ, ಚಲನಚಿತ್ರ ಹಾಗೂ ಬಿಗ್ ಬಾಸ್ ಸೇರಿದಂತೆ ಸಾಕಷ್ಟು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನೆ ಮಾತಾಗಿದ್ದ ಕಲಿಯುಗದ ಕುಡುಕ ಎಂದೇ ಪ್ರಖ್ಯಾತರಾಗಿರುವ ರಾಜು ತಾಳಿಕೋಟೆಯವರು ಇಂದು ಮಣಿಪಾಲದಲ್ಲಿ ಸಂಜೆ ನಾಲ್ಕು ಗಂಟೆಗೆ ನಿಧನರಾಗಿದ್ದಾರೆ. ಶೂಟಿಂಗ್ ಗೆ ಬಂದಿದ್ದ ಸಮಯದಲ್ಲಿ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡೊತ್ತು, ಹೀಗಾಗಿ ತಕ್ಷಣವೇ ಅವರನ್ನು ಹತ್ತಿರದ ಮಣಿಪಾಲಿಗೆ ಕರೆದುಕೊಂಡು ಹೋಗಿ, ಆಸ್ಪತ್ರೆಗೆ ಧಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ತಾಳಿಕೋಟಿ ನಿಧನರಾಗಿದ್ದಾರೆ.

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಮತ್ತೊಮ್ಮೆ ರವಿಗೌಡ ಪಾಟೀಲರೇ ಕಿಂಗ್..!

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬುರಾವ್ ಲಾಡನವರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರವಿಗೌಡ್ರಿಗೆ “ಅನಾಯಾಸ” ಪಟ್ಟ..! ಅಸಲು, ಮುಂಡಗೋಡಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ಬೆಂಬಲಿತರು, ಬಿಜೆಪಿಯನ್ನು ಧೂಳಿಪಟ ಮಾಡಿದ್ದರು. ಹೀಗಾಗಿ, ಬಹುತೇಕ ಅಧ್ಯಕ್ಷರಾಗಿ ಹಿರಿಯ ದುರೀಣ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರವಿಗೌಡ ಪಾಟೀಲರಿಗೆ ಅಧ್ಯಕ್ಷ ಪಟ್ಟ ಬಹುತೇಕ ಫಿಕ್ಸ್ ಆದಂತಾಗಿತ್ತು. ಅಲ್ದೆ, ಅವರ ಅಧ್ಯಕ್ಷ ಗಾದಿಯ ಹಾದಿ ಬಹುತೇಕ ಸುಗಮವಾಗಿತ್ತು. ಹೀಗಾಗಿನೇ ಮಾಜಿ ಶಾಸಕ ವಿ.ಎಸ್.ಪಾಟೀಲ್ ಹಾಗೂ ವಿವೇಕ್ ಹೆಬ್ಬಾರ್ ನೆತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯ ಖಚಿತತೆ ಸಿಕ್ಕಂತಾಗಿತ್ತು. ಅದಕ್ಕಾಗಿಯೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬೊಬ್ಬರಷ್ಟೇ ನಾಮಪತ್ರ ಸಲ್ಲಿಸಿ ಅವಿರೋಧ ಆಯ್ಕೆಯ ಹಾದಿ ಸುಗಮಗೊಳಿಸಿಕೊಂಡಿದ್ದರು. ಉಪಾಧ್ಯಕ್ಷರದ್ದು “ನಸೀಬಿ”ನ ಆಟ..! ಅಂದಹಾಗೆ, ಮಾರ್ಕೆಟಿಂಗ್ ಸೊಸೈಟಿಗೆ ಉಪಾಧ್ಯಕ್ಷರ ಆಯ್ಕೆ ನಿಜಕ್ಕೂ ಯಾರೂ ಉಹಿಸದ ಹಾಗೆ...

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಗೆ ಅಧ್ಯಕ್ಷರಾಗಿ ರವಿಗೌಡ ಪಾಟೀಲ್ ಅವಿರೋಧ ಆಯ್ಕೆ..? ಎರಡನೇ ಬಾರಿಗೆ ಪಟ್ಟಕ್ಕೇರ್ತಾರಾ ಗೌಡ್ರು..?

Marketing Society: ಮುಂಡಗೋಡ ತಾಲೂಕಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಗೆ ನೂತನ ಅಧ್ಯಕ್ಷರಾಗಿ ಎರಡನೇ ಬಾರಿಗೆ ಹಿರಿಯ ಮುಖಂಡ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬಣ್ಣ ಲಾಡನವರ್ ಅವಿರೋಧವಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾದಂತಾಗಿದೆ. ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ ನೇತೃತ್ವದಲ್ಲಿ ಸೇರಿದ್ದ ನೂತನ ಸದಸ್ಯರ ಸಭೆಯಲ್ಲಿ, ಅಧ್ಯಕ್ಷರನ್ನಾಗಿ ರವಿಗೌಡ ಪಾಟೀಲ್ ಹಾಗೂ ಉಪಾಧ್ಯಕ್ಷರನ್ನಾಗಿ ಬಾಬಣ್ಣ ಲಾಡನವರ್ ರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ನಂತರ ಇಬ್ಬರೂ ತಮ್ಮ‌ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ಗದ್ದೆಯಲ್ಲಿ ಅಣ್ಣತಮ್ಮರ ಮೇಲೆ ಚಿರತೆಯ ಭಯಾನಕ ದಾಳಿ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!

ಗದ್ದೆಯಲ್ಲಿ ಅಣ್ಣತಮ್ಮರ ಮೇಲೆ ಚಿರತೆಯ ಭಯಾನಕ ದಾಳಿ; ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ..!

ಹಾವೇರಿ: ಗೋವಿನಜೋಳಕ್ಕೆ ನೀರು ಹಾಯಿಸಲು ಹೋಗಿದ್ದ ರೈತ ಸಹೋದರರ ಮೇಲೆ ಚಿರತೆಯ ಭಯಾನಕ‌ ದಾಳಿಯಿಂದ ಓರ್ವ ರೈತ ಸಾವನ್ನಪ್ಪಿ ಇನ್ನೋರ್ವ ನಿಗೆ ಗಂಭೀರ ಗಾಯವಾಗಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಚಿರತೆದಾಳಿಯಿಂದ‌ ಸಾವನ್ನಪ್ಪಿರುವ ರೈತನನ್ನು ಬೀರೆಶ ಬಳಗಾವಿ(28)ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರೈತನನ್ನು ಗಣೇಶ ಬಳಗಾವಿ ಎಂದು ತಿಳಿದುಬರುತ್ತದೆ. ಇತನನ್ನು‌ಚಿಕಿತ್ಸೆಗೆ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಕ್ಕೆಜೋಳಕ್ಕೆ ನೀರು ಹಾಯಿಸಲು ಹೋದಾಗ ಅ‌19 ರ ರಾತ್ರಿ 11 ಗಂಟೆಯ ಸುಮಾರಿಗೆ ಚಿರತೆ ಸಹೋದರರ ಮೇಲೆ ದಾಳಿ‌ ಮಾಡಿತ್ತು. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆನಡೆಸಿದರು. ರಟ್ಟಿಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”

ಮುಂಡಗೋಡಿನಲ್ಲಿ ಅರ್ಥಪೂರ್ಣ “ವಾಲ್ಮೀಕಿ ಜಯಂತಿ”

Valmiki Jayanti News: ಮುಂಡಗೋಡ:ಮಹಾಪುರುಷರ ಜಯಂತಿಗಳನ್ನು ಎಲ್ಲಾ ಸಮುದಾಯದವರು ಸೇರಿ ಒಟ್ಟಾಗಿ ಆಚರಣೆ ಮಾಡಬೇಕು ಬಹುತೇಕ ಎಲ್ಲ ಸಮುದಾಯದ ಜನಾಂಗಗಳಲ್ಲಿ ಮಹಾತ್ಮರು ಹುಟ್ಟಿ ಸಮಾಜ ಸುಧಾರಣೆಗಾಗಿ ತಮ್ಮ ಜೀವನ ಮುಡಿಪಾಗಿ ಇಟ್ಟಿದ್ದಾರೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು. ಪಟ್ಟಣದ ಟೌನ್‌ ಹಾಲ್ ನಲ್ಲಿ ಮಂಗಳವಾರ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಜೀವನದಲ್ಲಿ ಸಾಧನೆ ಮುಖ್ಯ. ಅನೇಕ ಮಹಾಪುರುಷರು ಬಡತನದಲ್ಲಿ ಹುಟ್ಟಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಸಾಧನೆ ಮಾಡಿದ್ದಾರೆ. ವಾಲ್ಮೀಕಿಯವರು ಬೇಟೆಯಾಡಿ ಜೀವನ ನಡೆಸುತ್ತಿದ್ದರು. ನಂತರ ತಪಸ್ಸು ಮಾಡಿ ರಾಮಾಯಣ ಗ್ರಂಥ ಬರೆದರು. ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು. ಉಪನ್ಯಾಸಕರ ಮಾತು..! ಅಣ್ಣಪ್ಪ ತಳವಾರ ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ರಾಮಾಯಣದ ಬಗ್ಗೆ ಸಮುದಾಯದ ಎಷ್ಟೋ ಬಂಧುಗಳಿಗೆ ಗೊತ್ತಿಲ್ಲ. ರಾಮನ ಆಯಣ ಅಥವಾ ಚರಿತ್ರೆಯೇ ರಾಮಾಯಣ. ಜಗತ್ತಿನಲ್ಲಿಯೇ ಅತೀ ಶ್ರೇಷ್ಟ ಗ್ರಂಥಗಳಲ್ಲಿ ಒಂದು. 24 ಸಾವಿರ ಶ್ಲೋಕಗಳನ್ನು ಒಳಗೊಂಡಿದೆ. ರಾಮಾಯಣದ ಶ್ಲೋಕಗಳು...

ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ

ಬೋಧಕೇತರ ನೌಕರರು ಸಂಘಟಿತರಾಗಿರುವುದು ಖುಷಿ ತಂದಿದೆ”- ಡಿಡಿಪಿಐ ಎಂ ಎನ್ ದಂಡಿನ ಶ್ಲಾಘನೆ

Education Department; ಹಾವೇರಿ; ಬೋಧಕೇತರರ ನೌಕರರು ತಮ್ಮ ಸೇವೆಯನ್ನು ಇಲಾಖೆಗೆ ಸಲ್ಲಿಸುತ್ತಿದ್ದು ಅವರ ಮೂಲಕ ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಪ್ರತಿಯೊಬ್ಬ ಬೋಧಕೇತರ ನೌಕರನು ಇಲಾಖೆಯ ಎಲ್ಲ ಯೋಜನೆಗಳ ಮಾಹಿತಿ ಮತ್ತು ಕಾನೂನಿನ ನಿಯಮಗಳನ್ನು ಮನದಟ್ಟು ಮಾಡಿಕೊಂಡು ನಿಯಮಾನುಸಾರ ಕಾರ್ಯ ನಿರ್ವಹಿಸಿಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ ಎನ್ ದಂಡಿನ ಹೇಳಿದ್ರು. ಅವರು ರವಿವಾರ ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆ ಲಿಪಿಕ ನೌಕರರ ವಾಹನ ಚಾಲಕರ ಮತ್ತು ಡಿ ಗ್ರೂಪ್ ನೌಕರರ ಸಂಘ ಹಾವೇರಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೋಧಕೇತರ ನೌಕರರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಹಾವೇರಿ ಜಿಲ್ಲಾ ಡಯಟ್ ಪ್ರಾಂಶುಪಾಲ ಝಡ್ ಎಂ ಖಾಜಿ ಸರ್ಕಾರದ ಯೋಜನೆಗಳು ಸಾರ್ವಜನಿಕರನ್ನು ತಲುಪಿಸುವಲ್ಲಿ ಬೋಧಕೇತರ ನೌಕರರದೆ ಪ್ರಮುಖಪಾತ್ರವಾಗಿದ್ದು. ಇಲಾಖೆಯ ಯಶಸ್ಸಿನಲ್ಲಿ ಹೆಚ್ಚಿನ ಪಾತ್ರ ಅವರದೇ ಆಗಿದೆ ಎಂದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಬೊಂಗಾಳೆಯವರ ಅಧ್ಯಕ್ಷತೆಯಲ್ಲಿ ನಡೆದ...

error: Content is protected !!